ಬೆಂಗಳೂರು : ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಇತ್ತೀಚೆಗೆ ಅನೇಕ ಹೊಸ ಹೊಸ ಯೋಜನೆಗಳನ್ನು ಪರಿಚಯಿಸಿದೆ. ಬಿಎಸ್ಎನ್ಎಲ್ ನೀಡುತ್ತಿರುವ ಅಗ್ಗದ ಯೋಜನೆಗಳ ಪರಿಣಾಮವಾಗಿ, ಅನೇಕ ಜನರು ಬಿಎಸ್ಎನ್ಎಲ್ ನತ್ತ ಮುಖ ಮಾಡುತ್ತಿದ್ದಾರೆ. ಬಿಎಸ್ಎನ್ಎಲ್ ತನ್ನ ಬಳಕೆದಾರರಿಗೆ ಇಡೀ ತಿಂಗಳು ದೈನಂದಿನ 3GB ಡೇಟಾದೊಂದಿಗೆ ಪ್ರಿಪೇಯ್ಡ್ ಯೋಜನೆಯನ್ನು ನೀಡುತ್ತಿದೆ.
3GB ದೈನಂದಿನ ಡೇಟಾದೊಂದಿಗೆ BSNL ಪ್ರಿಪೇಯ್ಡ್ ಯೋಜನೆ :
BSNL ನ ಪ್ರಿಪೇಯ್ಡ್ ಯೋಜನೆಯು 299 ರೂ. ಗೆ ಬರುತ್ತದೆ. ಈ ಯೋಜನೆಗೆ 30 ದಿನಗಳ ಮಾನ್ಯತೆ ಇರಲಿದೆ. ಅಲ್ಪಾವಧಿಯ ಪ್ಲಾನ್ ಗಳನ್ನು ತೆಗೆದುಕೊಳ್ಳುವ ಬಳಕೆದಾರರಿಗೆ ಈ ಯೋಜನೆ ಅತ್ಯುತ್ತಮವಾಗಿದೆ. ಇದಲ್ಲದೆ, ಬಳಕೆದಾರರು ಇದರಲ್ಲಿ ದೈನಂದಿನ 3GB ಡೇಟಾವನ್ನು ಪಡೆಯುತ್ತಾರೆ.
ಇದನ್ನೂ ಓದಿ : ಮಾರುಕಟ್ಟೆಗೆ ಬಂತು 8 ಸಾವಿರ ರೂಪಾಯಿ ಬೆಲೆಯ 32 ಇಂಚಿನ ಟಿವಿ.!
ಡೇಟಾ ಪ್ರಯೋಜನದ ಜೊತೆಗೆ, ಬಳಕೆದಾರರು 30 ದಿನಗಳವರೆಗೆ ಅನಿಯಮಿತ ಧ್ವನಿ ಕರೆ ಮತ್ತು ದಿನಕ್ಕೆ 100 SMS ಪಡೆಯುತ್ತಾರೆ. ಖಾಸಗಿ ಟೆಲಿಕಾಂ ಕಂಪನಿಗಳು ಅದೇ ಬೆಲೆಗೆ ನೀಡುತ್ತಿರುವುದನ್ನು ಹೋಲಿಸಿದರೆ ಇದು ಉತ್ತಮ ಪ್ರಿಪೇಯ್ಡ್ ಯೋಜನೆಯಾಗಿದೆ.
ಈ ಬೆಲೆಯಲ್ಲಿ ಏರ್ಟೆಲ್ ಮತ್ತು ವಿಐ ನೀಡುವ ಪ್ರಯೋಜನಗಳೇನು ?
ವೊಡಾಫೋನ್ ಐಡಿಯಾ ಮತ್ತು ಏರ್ ಟೆಲ್ 299 ರೂ ಪ್ರಿಪೇಯ್ಡ್ ಯೋಜನೆಗಳಲ್ಲಿ 1.5GB ದೈನಂದಿನ ಡೇಟಾದೊಂದಿಗೆ ನೀಡುತ್ತವೆ. ಅಂದರೆ BSNL ನೀಡುವ ಅರ್ಧದಷ್ಟು ಡೇಟಾ. ಅಲ್ಲದೆ, ಉಲ್ಲೇಖಿಸಲಾದ ಖಾಸಗಿ ಟೆಲಿಕಾಂಗಳ 299 ರೂ ಯೋಜನೆಯು ಕೇವಲ 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ.
ಇದನ್ನೂ ಓದಿ : ಸ್ಯಾಮ್ಸಂಗ್ ತರುತ್ತಿದೆ 200MP ಕ್ಯಾಮೆರಾ ಹೊಂದಿರುವ ಸ್ಮಾರ್ಟ್ಫೋನ್ ..! ಹೊಸ ಫೋನ್ ವಿಡಿಯೋ ಇಲ್ಲಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.