ಬೆಂಗಳೂರು : ದೇಶದ ಎರಡನೇ ಅತಿ ದೊಡ್ಡ ಟೆಲಿಕಾಂ ಆಪರೇಟರ್ ಏರ್ಟೆಲ್ ಅನೇಕ ಅದ್ಬುತ ಯೋಜನೆಗಳನ್ನು ಹೊಂದಿದೆ. ಈ ರಿಚಾರ್ಜ್ ಪ್ಲಾನ್ ಗಳ ಮೂಲಕ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ಏರ್ಟೆಲ್ ಯಾವ ಬೆಲೆಗೆ ಎರಡು ರಿಚಾರ್ಜ್ ಪ್ಲಾನ್ ಗಳನ್ನು ನೀಡುತ್ತದೆಯೋ ಅದೇ ಬೆಲೆಯಲ್ಲಿ ಜಿಯೋ ಮತ್ತು ವೊಡಾಫೋನ್ ಐಡಿಯಾವನ್ನು ಕೂಡಾ ಹೊಂದಿದೆ. ಆದರೆ ಏರ್ಟೆಲ್ನ ಪ್ಲಾನ್ ಮಾತ್ರ ಈ ಎರಡು ಕಂಪನಿಗಳ ಪ್ಲಾನ್ ಗಿಂತ ಭಿನ್ನವಾಗಿದೆ.
ಏರ್ಟೆಲ್ 699 ರೂ. ಪ್ರಿಪೇಯ್ಡ್ ಪ್ಲಾನ್ :
ಏರ್ಟೆಲ್ ನೀಡುವ 699 ರೂ ಪ್ಲಾನ್ ನಲ್ಲಿ ಬಳಕೆದಾರರು 56 ದಿನಗಳವರೆಗೆ ಪ್ರತಿದಿನ 3GB ಡೇಟಾವನ್ನು ಪಡೆಯುತ್ತಾರೆ. ಈ ಯೋಜನೆಯಲ್ಲಿ ಒಳಗೊಂಡಿರುವ ಇತರ ಉಚಿತ ವೈಶಿಷ್ಟ್ಯಗಳೆಂದರೆ ಅನ್ಲಿಮಿಟೆಡ್ ವಾಯ್ಸ್ ಕಾಲ್ ಮತ್ತು ದಿನಕ್ಕೆ 100 SMS.
ಇದನ್ನೂ ಓದಿ : Reliance jio: ಅಗ್ಗದ ದರದಲ್ಲಿ ನಿತ್ಯ 1GB ಡೇಟಾ, ಅನಿಯಮಿತ ಕರೆ ಜೊತೆಗೆ ಸಿಗುತ್ತೆ ಹಲವು ಪ್ರಯೋಜನ
ಏರ್ಟೆಲ್ 999 ರೂ ಪ್ರಿಪೇಯ್ಡ್ ಯೋಜನೆ :
ಏರ್ಟೆಲ್ನ 999 ರೂ ಪ್ರಿಪೇಯ್ಡ್ ಯೋಜನೆಯಲ್ಲಿ, ಬಳಕೆದಾರರು ದಿನಕ್ಕೆ 2.5GB ಡೇಟಾ, ದಿನಕ್ಕೆ 100 SMS, ಮತ್ತು ಅನಿಯಮಿತ ಧ್ವನಿ ಕರೆಯನ್ನು ಪಡೆಯುತ್ತಾರೆ. ಈ ಯೋಜನೆಯ ಮಾನ್ಯತೆ 84 ದಿನಗಳು. ಎರಡೂ ಯೋಜನೆಗಳು ನೀಡುವ ವಿಶಿಷ್ಟ ಪ್ರಯೋಜನಗಳೆಂದರೆ 999 ಮತ್ತು 699 ರೂ ಪ್ರಿಪೇಯ್ಡ್ ಯೋಜನೆಗಳೊಂದಿಗೆ, ಏರ್ಟೆಲ್ ಉಚಿತ Amazon Prime ಚಂದಾದಾರಿಕೆಯನ್ನು ನೀಡುತ್ತದೆ. ಈ ಎರಡು ಯೋಜನೆಗಳು ಕ್ರಮವಾಗಿ 56 ದಿನಗಳು ಮತ್ತು 84 ದಿನಗಳ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನೀಡುತ್ತವೆ.
ಇದು ಮಾತ್ರವಲ್ಲದೆ, ಬಳಕೆದಾರರು ಏರ್ಟೆಲ್ ಎಕ್ಸ್ಸ್ಟ್ರೀಮ್ ಮೊಬೈಲ್ ಪ್ಯಾಕ್, ಅಪೊಲೊ 24|7 ಸರ್ಕಲ್, ಉಚಿತ ಹಲೋಟ್ಯೂನ್ಸ್ ಮತ್ತು ವಿಂಕ್ ಮ್ಯೂಸಿಕ್ ನಂತಹ ಇತರ ಪ್ರಯೋಜನಗಳನ್ನು ಕೂಡಾ ಪಡೆಯುತ್ತಾರೆ.
ಇದನ್ನೂ ಓದಿ : Mobile Addiction: ಸೆಲ್ ಫೋನ್-ವೈಫೈಗಳ ಕಾರಣ ಯೌವನಾವಸ್ಥೆಯಲ್ಲಿಯೇ ಜನರು ಇದಕ್ಕೆ ಗುರಿಯಾಗುತ್ತಿದ್ದಾರೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.