ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಜಾರಿ ನಿರ್ದೇಶನಾಲಯ (ಇ.ಡಿ.) ಎದುರು ವಿಚಾರಣೆಗೆ ಹಾಜರಾಗಿದ್ದಾರೆ. ರಾಹುಲ್ ವಿಚಾರಣೆಯನ್ನು ಖಂಡಿಸಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
#IndiaWithRahulGandhi ಹ್ಯಾಶ್ ಟ್ಯಾಗ್ ಬಳಸಿ ಸೋಮವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಐಟಿ, ಇ.ಡಿ, ಸಿಬಿಐ ಸ್ವಾಯುತ್ತ ಸಂಸ್ಥೆಗಳಾಗಿ ಉಳಿದಿಲ್ಲ, ಅವು ಬಿಜೆಪಿಯ ದ್ವೇಷ ರಾಜಕೀಯಕ್ಕೆ, ಆಪರೇಷನ್ ಕಮಲಕ್ಕೆ ಬಳಸುವ #Toolkit ಅಷ್ಟೇ. ನ್ಯಾಷನಲ್ ಹೆರಾಲ್ಡ್ ಪ್ರಕರಣ ನೈಜವಾದುದಲ್ಲ, ಕಾಂಗ್ರೆಸ್ ಮೇಲೆ ಆರೋಪಗಳನ್ನು ಜೀವಂತವಾಗಿಡುವ ದುರುದ್ದೇಶ ಹಾಗೂ ದ್ವೇಷದ ಪ್ರಯತ್ನ’ವೆಂದು ಆರೋಪಿಸಿದೆ.
ಐಟಿ, ಈಡಿ, ಸಿಬಿಐನಂತಹ ಸ್ವಾಯುತ್ತ ಸಂಸ್ಥೆಗಳಾಗಿ ಉಳಿದಿಲ್ಲ, ಅವು ಬಿಜೆಪಿಯ ದ್ವೇಷ ರಾಜಕೀಯಕ್ಕೆ, ಆಪರೇಷನ್ ಕಮಲಕ್ಕೆ ಬಳಸುವ #Toolkit ಅಷ್ಟೇ.
ನ್ಯಾಷನಲ್ ಹೆರಾಲ್ಡ್ ಪ್ರಕರಣ ನೈಜವಾದುದಲ್ಲ, ಕಾಂಗ್ರೆಸ್ ಮೇಲೆ ಆರೋಪಗಳನ್ನು ಜೀವಂತವಾಗಿಡುವ ದುರುದ್ದೇಶ ಹಾಗೂ ದ್ವೇಷದ ಪ್ರಯತ್ನ.#IndiaWithRahulGandhi
— Karnataka Congress (@INCKarnataka) June 13, 2022
ಜೀಪ್ ಹಗರಣ ಎನ್ನುವುದರಿಂದ ಹಿಡಿದು 2ಜಿ ಹಗರಣ ಎಂಬುದರವರೆಗೂ ಬಿಜೆಪಿಯ ಯಾವ ಆರೋಪಗಳೂ ಸಾಬೀತಾಗಿಲ್ಲ, ಅವುಗಳಲ್ಲಿ ಲೋಪವೂ ಕಂಡುಬಂದಿಲ್ಲ.
ಇವೆಲ್ಲವೂ ಬಿಜೆಪಿಯ ದ್ವೇಷ ರಾಜಕೀಯದ ಬಾಗವಷ್ಟೇ. ಈಗ @RahulGandhi ಸೋನಿಯಾ ಗಾಂಧಿಯವರ ತೇಜೋವಧೆಗೆ ಐಟಿ, ಈಡಿಯನ್ನು ಬಳಸಿಕೊಳ್ಳುತ್ತಿದೆ ಬಿಜೆಪಿ.#IndiaWithRahulGandhi
— Karnataka Congress (@INCKarnataka) June 13, 2022
ಇದನ್ನೂ ಓದಿ: ಜೆಡಿಎಸ್ನ ಮತ್ತೊಂದು ವಿಕೆಟ್ ಪತನ: ಮತ್ತೆ ಕಾಂಗ್ರೆಸ್ ಕದತಟ್ಟಿದ ಮುಖಂಡ!
‘ಜೀಪ್ ಹಗರಣ ಎನ್ನುವುದರಿಂದ ಹಿಡಿದು 2G ಹಗರಣ ಎಂಬುದರವರೆಗೂ ಬಿಜೆಪಿಯ ಯಾವ ಆರೋಪಗಳೂ ಸಾಬೀತಾಗಿಲ್ಲ, ಅವುಗಳಲ್ಲಿ ಲೋಪವೂ ಕಂಡುಬಂದಿಲ್ಲ. ಇವೆಲ್ಲವೂ ಬಿಜೆಪಿಯ ದ್ವೇಷ ರಾಜಕೀಯದ ಬಾಗವಷ್ಟೇ. ಈಗ ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರ ತೇಜೋವಧೆಗೆ ಐಟಿ, ಈಡಿಯನ್ನು ಬಳಸಿಕೊಳ್ಳುತ್ತಿದೆ ಬಿಜೆಪಿ’ ಎಂದು ಕಾಂಗ್ರೆಸ್ ಕಿಡಿಕಾರಿದೆ.
‘"ನ್ಯಾಷನಲ್ ಹೆರಾಲ್ಡ್" ಭಾರತದ ಸ್ವತಂತ್ರ ಚಳವಳಿಯ ಭಾಗವಾಗಿ ಹುಟ್ಟಿಕೊಂಡ ಪತ್ರಿಕೆ, ಭಾರತದ ಪರಂಪರೆಯಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಹೊಂದಿರುವ ಪತ್ರಿಕೆ. ಸ್ವಾತಂತ್ರ್ಯದ ಬೆಲೆ ಅರಿಯದ ಬಿಜೆಪಿ ಇಂದು ದ್ವೇಷಕ್ಕೆ ನ್ಯಾಷನಲ್ ಹೆರಾಲ್ಡ್ನ್ನು ಬಳಸುತ್ತಿದೆ. ಬಿಜೆಪಿಯ ಕೀಳು ರಾಜಕೀಯದ ಆಯಸ್ಸು ಶೀಘ್ರದಲ್ಲಿ ಮುಗಿಯಲಿದೆ. IT, ED, CBI ನಂತಹ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ತನ್ನ ರಾಜಕೀಯ ವಿರೋಧಿಗಳನ್ನು ಹಣಿಯಲು ಹೊರಟಿರುವುದು ಬಿಜೆಪಿಯ ನೀಚತನದ ರಾಜಕಾರಣಕ್ಕೆ ಸಾಕ್ಷಿ. ಐಟಿ, ಇ.ಡಿಯಂತಹ ಸಂಸ್ಥೆಗಳನ್ನು ಬಳಸಿಕೊಂಡು ಕಾಂಗ್ರೆಸ್ ಪಕ್ಷದ ಧ್ವನಿಯನ್ನು ಹತ್ತಿಕುತ್ತೇವೆ ಎಂದುಕೊಂಡಿದ್ದರೆ ಅದು ಬಿಜೆಯ ಮೂರ್ಖತನವಷ್ಟೇ’ ಎಂದು ಕಾಂಗ್ರೆಸ್ ಕುಟುಕಿದೆ.
"ನ್ಯಾಷನಲ್ ಹೆರಾಲ್ಡ್"
ಭಾರತದ ಸ್ವತಂತ್ರ ಚಳವಳಿಯ ಬಾಗವಾಗಿ ಹುಟ್ಟಿಕೊಂಡ ಪತ್ರಿಕೆ, ಭಾರತದ ಪರಂಪರೆಯಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಹೊಂದಿರುವ ಪತ್ರಿಕೆ.ಸ್ವತಂತ್ರದ ಬೆಲೆ ಅರಿಯದ ಬಿಜೆಪಿ ಇಂದು ದ್ವೇಷಕ್ಕೆ ನ್ಯಾಷನಲ್ ಹೆರಾಲ್ಡ್ನ್ನು ಬಳಸುತ್ತಿದೆ.
ಬಿಜೆಪಿಯ ಕೀಳು ರಾಜಕೀಯದ ಆಯಸ್ಸು ಶೀಘ್ರದಲ್ಲಿ ಮುಗಿಯಲಿದೆ.#IndiaWithRahulGandhi— Karnataka Congress (@INCKarnataka) June 13, 2022
IT ED CBI ನಂತಹ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ತನ್ನ ರಾಜಕೀಯ ವಿರೋಧಿಗಳನ್ನು ಹಣಿಯಲು ಹೊರಟಿರುವುದು ಬಿಜೆಪಿಯ ನೀಚತನದ ರಾಜಕಾರಣಕ್ಕೆ ಸಾಕ್ಷಿ.
IT ED ಯಂತಹ ಸಂಸ್ಥೆಗಳನ್ನು ಬಳಸಿಕೊಂಡು ಕಾಂಗ್ರೆಸ್ ಪಕ್ಷದ ಧ್ವನಿಯನ್ನು ಹತ್ತಿಕುತ್ತೇವೆ ಎಂದುಕೊಂಡಿದ್ದರೆ ಅದು @BJP4India ದ ಮೂರ್ಖತನವಷ್ಟೇ#IndiaWithRahulGandhi
— Karnataka Congress (@INCKarnataka) June 13, 2022
ಇದನ್ನೂ ಓದಿ: ರಾಜ್ಯಕ್ಕೆ ಪ್ರಧಾನಿ ಆಗಮನ: ರಸ್ತೆ ಅಭಿವೃದ್ಧಿಗೆ ಮುಂದಾದ ಆಡಳಿತ, ವಾಹನ ಸವಾರರಿಗೆ ಸಂಕಷ್ಟ
ವಿಚಾರಣೆ ಎದುರಿಸಿದ ರಾಹುಲ್ ಗಾಂಧಿ
ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧ ಸುಮಾರು 1 ಗಂಟೆಯ ವಿಚಾರಣೆ ಬಳಿಕ ರಾಹುಲ್ ಗಾಂಧಿ ವಾಪಸಾಗಿದ್ದಾರೆ. ಜಾರಿ ನಿರ್ದೇಶನಾಲಯ ಮುಂದಿನ ವಿಚಾರಣೆಯ ದಿನಾಂಕವನ್ನು ಸೂಚಿಸಿಲ್ಲ. ಆದರೆ ಮತ್ತೆ ವಿಚಾರಣೆಯನ್ನು ಮುಂದುವರೆಸಲಾಗುವುದು ಎಂಬ ಮಾಹಿತಿ ತಿಳಿದುಬಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.