ಬೆಂಗಳೂರು: 'ನ್ಯಾಷನಲ್ ಹೆರಾಲ್ಡ್' ಬಿಜೆಪಿಯ ದ್ವೇಷ ರಾಜಕಾರಣದ ಫಲವೇ ಹೊರತು ಅದರಲ್ಲಿ ಸತ್ಯವಿಲ್ಲ ಎಂದು ಅದು ಬಿಜೆಪಿ ವಿರುದ್ಧ ಕಿಡಿ ಕಾರಿದೆ.
ಈ ಕುರಿತಾಗಿ ಕಾಂಗ್ರೆಸ್ ಪಕ್ಷವು ಸರಣಿ ಪ್ರಶ್ನೆಗಳನ್ನು ಬಿಜೆಪಿ ಎದುರು ಇಟ್ಟಿದೆ.
ಅವ್ಯವಹಾರವೇ ನಡೆಯದೆ ಇರುವ ನ್ಯಾಷನಲ್ ಹೆರಾಲ್ಡ್ ಪ್ರಕರಣದ ಬಗ್ಗೆ ಸುಳ್ಳನ್ನು ಹಂಚುತ್ತಿರುವ ಬಿಜೆಪಿ ಇದಕ್ಕೆ ಉತ್ತರಿಸುವುದೇ:
ಇದನ್ನೂ ಓದಿ: ‘ನಾವು ವಿವೇಕಾನಂದರ ವಂಶಸ್ಥರೇ ವಿನಃ ಮೊಘಲರ ವಂಶಸ್ಥರಲ್ಲ’
🔹 ಡಿಮಾನಿಟೈಸೇಷನ್ ಸಮಯದಲ್ಲಿ ಅಮಿತ್ ಶಾ ಅಧ್ಯಕ್ಷತೆಯ ಅಹಮದಾಬಾದ್ ಕೋ ಆಪರೇಟಿವ್ ಬ್ಯಾಂಕ್ನಲ್ಲಿ 745 ಕೋಟಿ ರೂ ಗಳ ವ್ಯವಹಾರ ನಡೆಯುತ್ತದೆ.ಡಿಮಾನಿಟೈಸೇಷನ್ ಸಮಯದಲ್ಲಿ ಅಷ್ಟೊಂದು ಮೊತ್ತದ ಹಣ ಎಲ್ಲಿಂದ ಬಂತು? ಅಮಿತ್ ಶಾ ಪ್ರಕರಣದ ಇಡಿ ತನಿಖೆ ಯಾವಾಗ ಶುರುವಾಗುತ್ತದೆ?
ಇದನ್ನೂ ಓದಿ: ಕದ್ದುಮುಚ್ಚಿ ಥಿಯೇಟರ್ಗೆ ಬಂದು ‘ಕೆಜಿಎಫ್-2’ ನೋಡಿದ್ರಾ ನಟಿ ಸಾಯಿ ಪಲ್ಲವಿ..?
🔹ವಿರೋಧಪಕ್ಷದಲ್ಲಿದ್ದಾಗ ಇಡಿ ಹೆಸರಲ್ಲಿ ನಿತ್ಯಕಿರುಕುಳ ಅನುಭವಿಸುತ್ತಿದ್ದ ನಾರಾಯಣ ರಾಣೆ,ಮುಕುಲ್ ರಾಯ್ ಅಂಥವರು ಬಿಜೆಪಿ ಸೇರಿದೊಡನೆ ಪರಮಪಾವನರಾಗುತ್ತಾರೆ.ಅವರ ವಿರುದ್ಧದ ಇಡಿ ಪ್ರಕರಣಗಳೆಲ್ಲ ಧೂಳು ಹಿಡಿಯುತ್ತವೆ
ಇದು ಬಿಜೆಪಿಯ ಅಸಲಿ ಮನಸ್ಥಿತಿ. 'ನ್ಯಾಷನಲ್ ಹೆರಾಲ್ಡ್' ಬಿಜೆಪಿಯ ದ್ವೇಷ ರಾಜಕಾರಣದ ಫಲವೇ ಹೊರತು ಅದರಲ್ಲಿ ಸತ್ಯವಿಲ್ಲ
3/3— Karnataka Congress (@INCKarnataka) June 16, 2022
🔹 ಹಿಮಂತ್ ಬಿಸ್ವಾಸ್ ಶರ್ಮಾ ಅವರ ಮೇಲೆ ದಿನಂಪ್ರತಿ ಆರೋಪ ಮಾಡುತ್ತಿದ್ದವರು ಅವರು ಬಿಜೆಪಿ ಸೇರಿದೊಡನೆ ವಾಷಿಂಗ್ ಮಷಿನ್ ಅಲ್ಲಿ ತೊಳೆದು ಶುಚಿರ್ಭೂತವಾಗಿ ನಿಲ್ಲಿಸಿದ್ದಾರೆ.ಅವರ ವಿರುದ್ಧದ ಇಡಿ ಪ್ರಕರಣ ಏನಾಗಿದೆ? ಅವರ ವಿರುದ್ಧ ಯಾಕೆ ವಿಚಾರಣೆ ನಡೆಯುತ್ತಿಲ್ಲ ಎಂದು ಹೇಳಬಲ್ಲರೇ?
ಕೇಂದ್ರ ಸರ್ಕಾರದ ಸಂವಿಧಾನ ವಿರೋಧಿ, ಸರ್ವಾಧಿಕಾರಿ ನಡೆ ಖಂಡಿಸಿ ಹೋರಾಟ ಮಾಡುತ್ತಿದ್ದೇವೆ.
ನಮ್ಮ ನಾಯಕರಾದ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಬಂಧಿಸಲು ಯತ್ನಿಸುತ್ತಿದ್ದಾರೆ.
ಕಾಂಗ್ರೆಸ್ ಹಮ್ಮಿಕೊಂಡಿರುವ 'ಭಾರತ ಜೋಡೋ' ಆಂದೋಲನಕ್ಕೆ ಹೆದರಿ ಇಂತಹ ಕೆಲಸಕ್ಕೆ ಕೈ ಹಾಕಿದ್ದಾರೆ.
- @DKShivakumar pic.twitter.com/oxnWRFAwRW— Karnataka Congress (@INCKarnataka) June 16, 2022
🔹 ವಿರೋಧಪಕ್ಷದಲ್ಲಿದ್ದಾಗ ಇಡಿ ಹೆಸರಲ್ಲಿ ನಿತ್ಯಕಿರುಕುಳ ಅನುಭವಿಸುತ್ತಿದ್ದ ನಾರಾಯಣ ರಾಣೆ,ಮುಕುಲ್ ರಾಯ್ ಅಂಥವರು ಬಿಜೆಪಿ ಸೇರಿದೊಡನೆ ಪರಮಪಾವನರಾಗುತ್ತಾರೆ. ಅವರ ವಿರುದ್ಧದ ಇಡಿ ಪ್ರಕರಣಗಳೆಲ್ಲ ಧೂಳು ಹಿಡಿಯುತ್ತವೆ.
ಇದು ಬಿಜೆಪಿಯ ಅಸಲಿ ಮನಸ್ಥಿತಿ. 'ನ್ಯಾಷನಲ್ ಹೆರಾಲ್ಡ್' ಬಿಜೆಪಿಯ ದ್ವೇಷ ರಾಜಕಾರಣದ ಫಲವೇ ಹೊರತು ಅದರಲ್ಲಿ ಸತ್ಯವಿಲ್ಲ ಎಂದು ಕಾಂಗ್ರೆಸ್ ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.