ಈ ಆಹಾರ ಸೇವನೆ ಮೂಲಕ ನೀಗಿಸಬಹುದು ವಿಟಮಿನ್ ಡಿ ಕೊರತೆ

ವಿಟಮಿನ್ ಡಿ ಇಲ್ಲದೆ, ನಾವು ಸಾಮಾನ್ಯ ಜೀವನವನ್ನು ನಡೆಸುವುದು ಕಷ್ಟಕರವಾಗಿರುತ್ತದೆ. ಸೂರ್ಯನ ಬೆಳಕಿನಿಂದ ಈ ಪೋಷಕಾಂಶವನ್ನು ಪಡೆಯಬಹುದು. ಅದರ ಹೊರತಾಗಿ ಕೆಲವು ಆಹಾರಗಳನ್ನು ಸೇವಿಸಿ, ಕೂಡಾ ಈ ಕೊರತೆಯನ್ನು ನೀಗಿಸಬಹುದು.  

Written by - Ranjitha R K | Last Updated : Jun 24, 2022, 02:59 PM IST
  • ನಮ್ಮ ದೇಹಕ್ಕೆ ಬಹಳ ಮುಖ್ಯವಾದ ಪೋಷಕಾಂಶ ವಿಟಮಿನ್ ಡಿ
  • ಇದರ ಕೊರತೆಯು ಆರೋಗ್ಯಕ್ಕೆ ಅನೇಕ ಹಾನಿಯನ್ನು ಉಂಟು ಮಾಡುತ್ತದೆ.
  • ವಿಟಮಿನ್ ಡಿ ಕೊರತೆಯ ಅಪಾಯಗಳು
ಈ ಆಹಾರ ಸೇವನೆ ಮೂಲಕ ನೀಗಿಸಬಹುದು ವಿಟಮಿನ್ ಡಿ ಕೊರತೆ  title=
Vitamion d food (file photo)

ಬೆಂಗಳೂರು  : ದೇಹದಲ್ಲಿ ವಿಟಮಿನ್ ಡಿ ಕೊರತೆ ಎದುರಾದರೆ,  ಬಿಸಿಲಿನಲ್ಲಿ ನಿಂತು ಅಗತ್ಯವಾದ  ವಿಟಮಿನ್ ಡಿ  ಪಡೆಯುವಂತೆ ಸೂಚಿಸಲಾಗುತ್ತದೆ.  ಆದರೆ ಕೆಲವು ಆಹಾರಗಳನ್ನು ತಿನ್ನುವ ಮೂಲಕವೂ ಈ ಪೋಷಕಾಂಶವನ್ನು ಪಡೆಯಬಹುದು. ಇದು ನಮ್ಮ ದೇಹಕ್ಕೆ ಬಹಳ ಮುಖ್ಯವಾದ ಪೋಷಕಾಂಶವಾಗಿದೆ. ಇದರ ಕೊರತೆಯು ನಮ್ಮ ಆರೋಗ್ಯಕ್ಕೆ ಅನೇಕ ಹಾನಿಯನ್ನು ಉಂಟು ಮಾಡುತ್ತದೆ. 

ವಿಟಮಿನ್ ಡಿ ಕೊರತೆಯ ಅಪಾಯಗಳು :
1. ಅಧಿಕ ರಕ್ತದೊತ್ತಡ : 
ವಿಟಮಿನ್ ಡಿ ನಮ್ಮ ಹೃದಯದ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.  ಅಧಿಕ ರಕ್ತದೊತ್ತಡದಿಂದ ಹೃದಯಾಘಾತವು ಉಂಟಾಗುತ್ತದೆ. ಹಾಗಾಗಿ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ವಿಟಮಿನ್ ಡಿ ಅಗತ್ಯ. 

2. ದೌರ್ಬಲ್ಯ : 
ದೇಹಕ್ಕೆ ಅಗತ್ಯ ವಿಟಮಿನ್ ಡಿ ಸಿಗದೇ ಹೋದರೆ ಸ್ನಾಯುಗಳು ದುರ್ಬಲವಾಗುತ್ತವೆ. ಹೀಗಾದಾಗ ಭಾರವಾದ ವಸ್ತುಗಳನ್ನು ಎತ್ತುವ ಕೆಲಸಗಳನ್ನು ಮಾಡುವುದು ಕಷ್ಟವಾಗುತ್ತದೆ.

ಇದನ್ನೂ ಓದಿ : ಪುರುಷರೇ, ನಿಮ್ಮ ಸಂತಾನೋತ್ಪತ್ತಿ ಆರೋಗ್ಯಕ್ಕಾಗಿ ಯೋಗಾಭ್ಯಾಸ ಮಾಡಿ

3. ಹಗಲಿನಲ್ಲಿ ಆಯಾಸ ಮತ್ತು ನಿದ್ರೆ :
ಕೆಲವರಿಗೆ ಹಗಲಿನಲ್ಲಿಯೂ ನಿದ್ದೆಗೆ ಜಾರುತ್ತಾರೆ. ಏನೂ ಕೆಲಸ ಮಾಡದೇ ಹೋದರೂ ಸುಸ್ತಾಗುತ್ತಿರುತ್ತದೆ.  ಇದು  ವಿಟಮಿನ್ ಡಿ ಕೊರತೆಯಿಂದ ಉಂಟಾಗುತ್ತದೆ.

4 .  ಸಣ್ಣ ಸಣ್ಣ ವಿಷಯಗಳಿಗೂ ಕಿರಿ ಕಿರಿ :
ತಮ್ಮ ದೇಹದಲ್ಲಿ ಸಾಕಷ್ಟು ವಿಟಮಿನ್ ಡಿ ಇರದೇ ಹೋದರೆ ಸಣ್ಣ ಸಣ್ಣ ವಿಷಯಗಳಿಗೂ ಇರಿಸು ಮುರಿಸಾಗುವುದು, ತಾಳ್ಮೆ ಕಳೆದುಕೊಳ್ಳುವುದು ಇಂಥಹ ಸಮಸ್ಯೆಯನ್ನು ಎದುರಿಸುತ್ತಾರೆ.  

5. ಮೂಡ್ ಸರಿಯಿಲ್ಲದೇ ಇರುವುದು : 
ಯವಾಗಾಲೂ ಮನಸ್ಥಿತಿ ಸಾಮಾನ್ಯವಾಗಿರದಿದ್ದರೆ, ವಿಟಮಿನ್ ಡಿ ಕೊರತೆ ಇದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಈ ಪೋಷಕಾಂಶಗಳನ್ನು ಒಳಗೊಂಡಿರುವ ಕೆಲವು ಆಹಾರಗಳನ್ನು ತಿನ್ನುವುದು ಮುಖ್ಯ.

ಇದನ್ನೂ ಓದಿ :  Toothache Problem: ಹಲ್ಲು ನೋವಿನಿಂದ ಕ್ಷಣಾರ್ಧದಲ್ಲಿ ಪರಿಹಾರ ಪಡೆಯಲು ಮನೆಮದ್ದು

 ಇವುಗಳನ್ನು ತಿನ್ನುವುದರಿಂದ ದೇಹಕ್ಕೆ ವಿಟಮಿನ್ ಡಿ ಸಿಗುತ್ತದೆ : 

-ಮೀನು
-ಮೀನಿನ ಮೊಟ್ಟೆಗಳು
-ಅಣಬೆಗಳು
-ಹಾಲು
-ಧಾನ್ಯಗಳು -
-ಕೋಳಿ ಮೊಟ್ಟೆಗಳು
-ಚೀಸ್

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News