ಅಧಿಕ ರಕ್ತದೊತ್ತಡ ಇರುವವರು ಈ ಆಹಾರಗಳನ್ನು ಸೇವಿಸಬಾರದು

High Blood Pressure Patients Should Not Eat Food: ರಕ್ತದೊತ್ತಡ ರೋಗಿಗಳು ತಮ್ಮ ಆಹಾರದ ಬಗ್ಗೆ ಸಂಪೂರ್ಣ ಕಾಳಜಿ ವಹಿಸಬೇಕು. ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಯು ಕೆಲವಿಒಂದು ಆಹಾರಗಲಿನದ ಸಂಪೂರ್ಣ ಅಂತರ ಕಾಯ್ದುಕೊಳ್ಳಬೇಕು. 

Written by - Ranjitha R K | Last Updated : Jul 1, 2022, 10:41 AM IST
  • ರಕ್ತದೊತ್ತಡ ರೋಗಿಗಳಾಗಿದ್ದರೆ ಆಹಾರದ ಬಗ್ಗೆ ಸಂಪೂರ್ಣ ಕಾಳಜಿ ವಹಿಸಬೇಕು.
  • ಆರೋಗ್ಯವಾಗಿರಬೇಕಾದರೆ ಬಿಪಿಯನ್ನು ನಿಯಂತ್ರಣದಲ್ಲಿಡಲು ಪ್ರಯತ್ನಿಸಬೇಕು
  • ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳು ಈ ಪದಾರ್ಥಗಳನ್ನು ಸೇವಿಸಬಾರದು
ಅಧಿಕ ರಕ್ತದೊತ್ತಡ ಇರುವವರು ಈ ಆಹಾರಗಳನ್ನು ಸೇವಿಸಬಾರದು  title=
High Blood Pressure Patients Should Not Eat Food (file photo)

High Blood Pressure Patients Should Not Eat Food : ರಕ್ತದೊತ್ತಡ ರೋಗಿಗಳಾಗಿದ್ದರೆ ಆಹಾರದ ಬಗ್ಗೆ ಸಂಪೂರ್ಣ ಕಾಳಜಿ ವಹಿಸಬೇಕು. ಏಕೆಂದರೆ  ಆ ಸಂದರ್ಭದಲ್ಲಿ ಏನೇ ತಿಂದರೂ ಅದು ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ. ಅಧಿಕ ರಕ್ತದೊತ್ತಡ ರೋಗಿಗಳು ಆರೋಗ್ಯವಾಗಿರಬೇಕಾದರೆ ಬಿಪಿಯನ್ನು ನಿಯಂತ್ರಣದಲ್ಲಿಡಲು ತಮ್ಮ ಕೈಲಾದಷ್ಟು ಪ್ರಯತ್ನಿಸಬೇಕು. ನಿರಂತರ ಅಧಿಕ ರಕ್ತದೊತ್ತಡದಿಂದಾಗಿ, ಹೃದಯಾಘಾತ ಮತ್ತು ಪಾರ್ಶ್ವವಾಯು ಮುಂತಾದ ರೋಗದ ಅಪಾಯವಿರುತ್ತದೆ.  ಆದ್ದರಿಂದ, ಹೈ ಬಿಪಿಯಿದ್ದರೆ  ಕೆಲವೊಂದು ಆಹಾರ ಪದಾರ್ಥಗಳನ್ನು ಮುಟ್ಟಿಯೂ ನೋಡಬಾರದು. 

ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳು ಈ ಪದಾರ್ಥಗಳನ್ನು ಸೇವಿಸಬಾರದು :  
ಸಕ್ಕರೆ :
ಸಕ್ಕರೆ ಮತ್ತು ಸಕ್ಕರೆಯಿಂದ ತಯಾರಿಸಿದ ಪದಾರ್ಥಗಳನ್ನು ತಿನ್ನುವುದರಿಂದ ರಕ್ತದ ಸಕ್ಕರೆ ಮತ್ತು ರಕ್ತದೊತ್ತಡ ಹೆಚ್ಚಾಗುತ್ತದೆ. ಸಕ್ಕರೆಯು ತೂಕವನ್ನು ಹೆಚ್ಚಿಸುತ್ತದೆ. ಇದು ಇತರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಅಧಿಕ ರಕ್ತದೊತ್ತಡದ ಸಮಸ್ಯೆ ಇದ್ದರೆ, ಸಕ್ಕರೆಯನ್ನು  ಸಾಧ್ಯವಾದಷ್ಟು ಕಡಿಮೆ ಬಳಸಬೇಕು. 

ಇದನ್ನೂ ಓದಿ : Heart Attack Risk:ಇವರನ್ನು ಅತಿಯಾಗಿ ಕಾಡುತ್ತದೆಯಂತೆ ಹೃದಯಾಘಾತದ ಅಪಾಯ ..!

ಉಪ್ಪು : ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಉಪ್ಪು ಮಾರಕವಾಗಿದೆ. ಅಧಿಕ ರಕ್ತದೊತ್ತಡದಲ್ಲಿ, ಸ್ವಲ್ಪ ಪ್ರಮಾಣದ ಉಪ್ಪನ್ನು ಮಾತ್ರ ಸೇವಿಸಲು ವೈದ್ಯರು ಶಿಫಾರಸು ಮಾಡುತ್ತಾರೆ. ಹೈ ಬಿಪಿಯಲ್ಲಿ ಅಧಿಕ ಉಪ್ಪು ಆರೋಗ್ಯಕ್ಕೆ ತುಂಬಾ ಅಪಾಯಕಾರಿಯಾಗಿರುತ್ತದೆ. ಆದ್ದರಿಂದ, ಹೈ ಬಿಪಿ ರೋಗಿಗಳು ಮನೆಯ ಆಹಾರವನ್ನೇ ಸೇವಿಸುವಂತೆ ಶಿಫಾರಸು ಮಾಡಲಾಗುತ್ತದೆ.  ಮನೆಯಲ್ಲಿ ಆಹಾರ ತಯಾರಿಸುವಾಗಲೂ ಅದಕ್ಕೆ ಸ್ವಲ್ಪ ಪ್ರಮಾಣದ ಉಪ್ಪನ್ನು ಸೇರಿಸಬೇಕು. ಈ ಸಮಯದಲ್ಲಿ ಪಿಜ್ಜಾ, ಬರ್ಗರ್ ಇತ್ಯಾದಿಗಳನ್ನು ತಿನ್ನುವುದನ್ನು ತಪ್ಪಿಸಬೇಕು.

ಮಾಂಸ : ಸಂಸ್ಕರಿಸಿದ ಮಾಂಸವನ್ನು ಸೇವಿಸಿದರೆ, ಅದು ರಕ್ತದೊತ್ತಡವನ್ನು ಹೆಚ್ಚಿಸಬಹುದು. ಆದ್ದರಿಂದ ಸಂಸ್ಕರಿಸಿದ ಮಾಂಸವನ್ನು ಯಾವತ್ತೂ ತಿನ್ನಬೇಡಿ. ಇದರ ಹೊರತಾಗಿ ಸ್ಯಾಂಡ್‌ವಿಚ್, ಉಪ್ಪಿನಕಾಯಿ ಮತ್ತು ಇತರ ಖಾರ ಪದಾರ್ಥಗಳನ್ನು ಕೂಡಾ ಸೇವಿಸಬಾರದು. 

ಇದನ್ನೂ ಓದಿ : ಮನೆಯಲ್ಲಿಯೇ ಇರುವ ಈ ವಸ್ತುಗಳನ್ನು ಬಳಸಿ ಪಡೆಯಬಹುದು ಜಿರಳೆ ಕಾಟದಿಂದ ಮುಕ್ತಿ

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News