ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯರು ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದು, ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್‌ಗಳಿಗೆ ಗುರುವಾರ ಅದೃಷ್ಟದ ದಿನವಾಗಿ ಮಾರ್ಪಾಡಾಗಿದೆ. ಇನ್ನು ಭಾರತದ ಮೂವರು ಜಾವೆಲಿನ್ ಅಥ್ಲೀಟ್‌ಗಳು ಒರೆಗಾನ್‌ನಲ್ಲಿ ಜುಲೈ 21ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅಂತಿಮ ಸುತ್ತಿಗೆ ಪ್ರವೇಶಿಸಿದ್ದಾರೆ. ಈ ಮೂಲಕ ಪ್ರಥಮ ಬಾರಿಗೆ ಭಾರತ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಪ್ರವೇಶ ಮಾಡುತ್ತಿದೆ.
ಚಾಂಪಿಯನ್‌ಶಿಪ್‌ನ ಪುರುಷರ ಜಾವೆಲಿನ್ ಥ್ರೋ ವಿಭಾಗದಲ್ಲಿ ಅದ್ಭುತ ಆಟ ಪ್ರದರ್ಶಿಸಿದ ನೀರಜ್ ಚೋಪ್ರಾ, ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಕಾಪಾಡಿಕೊಳ್ಳಲು ಬರೋಬ್ಬರಿ 88.39 ಮೀ ದೂರ ಜಾವೆಲಿನ್ ಎಸೆದಿದ್ದಾರೆ. ಈ ಮೂಲಕ ತಮ್ಮ ಚೊಚ್ಚಲ ಸ್ಥಾನವನ್ನುಅಚ್ಚಾಗಿ ಉಳಿಸಿಕೊಂಡಿದ್ದಾರೆ.
ಇದನ್ನೂ ಓದಿ: CBSE ಬೋರ್ಡ್ 12ನೇ ತರಗತಿ ಫಲಿತಾಂಶ: ರಿಸಲ್ಟ್ ಪರಿಶೀಲಿಸಲು ಈ ಮಾರ್ಗ ಅನುಸರಿಸಿ
ಇನ್ನು ಪುರುಷರ ಜಾವೆಲಿನ್ ಎಸೆತದ ಬಿ ಗುಂಪಿನ ಅರ್ಹತಾ ಸುತ್ತಿನಲ್ಲಿ ಇನ್ನೊಬ್ಬ ಭಾರತೀಯ ಆಟಗಾರನಾದ ರೋಹಿತ್ ಯಾದವ್, 80.42 ಮೀ ದೂರಕ್ಕೆ ಜಾವೆಲಿನ್‌ನನ್ನು ಎಸೆದು ಫೈನಲ್ ಪ್ರವೇಶಿಸಿದ್ದಾರೆ. ಎರಡನೇ ಅತ್ಯುತ್ತಮ ಆಟಗಾರರಾಗಿ ಹೊರಹೊಮ್ಮಿದ ಯಾದವ್ ಫೈನಲ್‌ಗೆ ಆಯ್ಕೆಯಾದ ಕೊನೆಯ 12 ಮಂದಿಯಲ್ಲಿ ಒಬ್ಬರಾಗಿದ್ದಾರೆ.
ಇನ್ನೋರ್ವ ಭಾರತೀಯ ಆಟಗಾರ ಎಲ್ದೋಸ್ ಪೌಲ್ ಎಂಬವರು ಟ್ರಿಪಲ್ ಲಾಂಗ್ ಜಂಪ್‌ನ ಅರ್ಹತಾ ಸುತ್ತಿನಲ್ಲಿ 16.68 ಮೀ ಜಿಗಿದು ಇತಿಹಾಸದ ಪುಟ ಸೇರಿದ್ದಾರೆ. ಈ ಮೂವರೂ ಆಟಗಾರರು ತಮ್ಮ ಅಂತಿಮ ಪಂದ್ಯಗಳನ್ನು ಒರೆಗಾನ್‌ನಲ್ಲಿ ಭಾನುವಾರದಂದು ಆಡಲಿದ್ದಾರೆ.
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಇತಿಹಾಸದಲ್ಲಿಯೇ ಭಾರತ ಫೈನಲ್ ಪ್ರವೇಶ ಮಾಡಿರಲಿಲ್ಲ. ಇಬ್ಬರು ಪುರುಷ ಜಾವೆಲಿನ್ ಎಸೆತಗಾರರು ಫೈನಲ್‌ಗೆ ಪ್ರವೇಶಿಸಿದ್ದಾರೆ. ನೀರಜ್ ಮತ್ತು ರೋಹಿತ್ ಈ ಸಾಧನೆ ಮಾಡಿದ ಮೊದಲ ಭಾರತೀಯ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದೀಗ ಚಿನ್ನದ ಪದಕಕ್ಕಾಗಿ ಫೈನಲ್‌ನಲ್ಲಿ ಪೈಪೋಟಿ ನಡೆಯಲಿದೆ. ಒಂದು ಬಾರಿ ಭಾರತ ಕಂಚಿನ ಪದಕಕ್ಕೆ ಮುತ್ತಿಕ್ಕಿತ್ತು. ಆದರೆ ಆ ಬಳಿಕ ಭಾರತಕ್ಕೆ ಪದಕ ಗೆಲ್ಲಲು ಸಾಧ್ಯವಾಗಿರಲಿಲ್ಲ.
India🇮🇳 created history at @WCHoregon22 !
✅ For the 1st time two Indian Javelin throwers reach the Final at World Championships @Neeraj_chopra1 (88.39m)@RohitJavelin (80.42m)
✅️ Eldhose Paul becomes the 1st Indian to reach the Men’s Triple Jump Final (16.68m) pic.twitter.com/DJeGy7GCJg
— Anurag Thakur (@ianuragthakur) July 22, 2022
ಇನ್ನೊಂದೆಡೆ ಎಲ್ದೋಸ್ ಅವರು ಲಾಂಗ್‌ಜಂಪ್‌ನಲ್ಲಿ ಫೈನಲ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಟ್ರಿಪಲ್ ಜಂಪರ್ ಆಗಿದ್ದಾರೆ. ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಇದು ದೊಡ್ಡ ಸಾಧನೆ ಎಂದೇ ಹೇಳಬಹುದು. ಈ ವರ್ಷದ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಆರು ಆಟಗಾರರು ಫೈನಲ್‌ನಲ್ಲಿ ಇದ್ದು, ಪದಕ ಗೆಲ್ಲುವ ನಿರೀಕ್ಷೆ ಇದೆ.
ಇದನ್ನೂ ಓದಿ: ಇಂದೇ ಪ್ರಕಟಗೊಳ್ಳಲಿದೆ ಕೆಸಿಇಟಿ ಫಲಿತಾಂಶ 2022! ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಭೇಟಿ ನೀಡಿ
ಮುರಳಿ ಶ್ರೀಶಂಕರ್ (ಲಾಂಗ್ ಜಂಪ್) ಅವಿನಾಶ್ ಸೇಬಲ್ (3000 ಮೀ ಎಸ್‌ಸಿ) ಅನ್ನು ರಾಣಿ (ಜಾವೆಲಿನ್ ಥ್ರೋ) ನೀರಜ್ ಚೋಪ್ರಾ (ಜಾವೆಲಿನ್ ಥ್ರೋ) ರೋಹಿತ್ ಯಾದವ್ (ಜಾವೆಲಿನ್ ಥ್ರೋ) ಎಲ್ದೋಸ್ ಪಾಲ್ (ಟ್ರಿಪಲ್ ಜಂಪ್)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.