ಬೆಂಗಳೂರು : ಸಾಕಷ್ಟು ವಿವಾದಕ್ಕೆ ಕಾರಣವಾದ ಶಿವಾನಂದ ಸರ್ಕಲ್ ನ ಸ್ಟೀಲ್ ಬ್ರೀಡ್ಜ್, ಇದೀಗ ಕೆಲವೇ ದಿನಗಳಲ್ಲಿ ಓಪನ್ ಆಗಲಿದೆ. ಇದಕ್ಕೆ ಮೂಹೂರ್ತ ಕೂಡಿ ಬಂದಿದ್ದು ಇದೇ ತಿಂಗಳ 30ಕ್ಕೆ ಎರಡೂ ಕಡೆಯ ಸಂಚಾರ ಪ್ರಾರಂಭವಾಗಲಿದೆ. ಕಳೆದ 5 ವರ್ಷಗಳಿಂದ ನೆನೆಗುದಿಗೆ ಬಿದ್ದಿದ ಫ್ಲೈ ಓವರ್ ಅಗಸ್ಟ್ 15 ರಂದು ಒನ್ ಸೈಡ್ ಓಪನ್ ಮಾಡಲಾಗಿದೆ. ಬಾಕಿಉಳಿದಿದ್ದ ಒಂದು ಪಥವೂ ಈ ತಿಂಗಳ ಅಂತ್ಯದೊಳಗೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಪಾಲಿಕೆ ತಿಳಿಸಿದೆ.
ಕಳೆದ 5 ವರ್ಷಗಳಿಂದ ನಗರದ ಶಿವಾನಂದ ಸರ್ಕಲ್ ಬಳಿ ಇರುವ ಸ್ಟೀಲ್ ಬ್ರೀಡ್ಜ್ ಕಾಮಗಾರಿ ಹಲವು ಕಾರಣಗಳಿಂದ ಸ್ಥಗಿತಗೊಂಡಿತ್ತು, ಮೂರು ಸಿಎಂಗಳು ಬಂದು ಹೋದರೂ. ಬ್ರಿಡ್ಜ್ ಮತ್ರ ಓಪನ್ ಅಗಿರಲ್ಲಿಲ್ಲ, ಕೆಲ ಕಾನೂನತ್ಮಕ ತೊಡಕಿನಿಂದ ಕಾಮಗಾರಿ ಕಳೆದ 5 ವರ್ಷಗಳಿಂದ ಆರಂಭವಾಗಿ ಅರ್ಧಕ್ಕೆ ನಿಂತಿತ್ತು. ಆದರೆ ಈಗ ನ್ಯಾಯಲಯದ ಅದೇಶದಂತೆ ಬ್ರೀಡ್ಜ್ ಗೆ ಮುಕ್ತಗೊಳಿಸಲಾಗಿದೆ. ಕಳೆದ ಸೋಮವಾರ ಒಂದು ಕಡೆ ಸಂಚಾರಕ್ಕೆ ಮೂಕ್ತಿ ನೀಡಲಾಗಿದೆ.
ಇದನ್ನೂ ಓದಿ : Karnataka: ಬಾಡಿಗೆ ಮನೆ ಸಿಗದೆ ದಯಾಮರಣಕ್ಕೆ ಮುಂದಾದ ತೃತೀಯಲಿಂಗಿ..!
ನಗರದ ನೆಹರು ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಹರೆಕೃಷ್ಣ ರಸ್ತೆಯನ್ನು ಬಿಬಿಎಂಪಿ ವತಿಯಿಂದ 2017ರ ಜೂನ್‌ನಲ್ಲಿ ಉಕ್ಕಿನ ಮೇಲ್ಸೇತುವೆ ಕಾಮಗಾರಿ ಆರಂಭಿಸಲಾಯಿತು. 9 ತಿಂಗಳಲ್ಲಿ ಪೂರ್ಣಗೊಳ್ಳಬೇಕಾದ ಕಾಮಗಾರಿ ವಿವಿಧ ಅಡತಡೆಗಳಿಂದಾಗಿ 5 ವರ್ಷಗಳಾದರೂ ಪೂರ್ಣಗೊಂಡಿರಲಿಲ್ಲ. ಹೈ ಕೋರ್ಟ್ ಕಾಮಗಾರಿಗೆ ಗ್ರೀನ್ ಸಿಗ್ನಲ್ ನೀಡಿದ ನಂತರ ಬಿಬಿಎಂಪಿ ಸಿಬ್ಬಂದಿಗಳು ಕಳೆದ ಒಂದು ತಿಂಗಳಿನಿಂದ ರಾತ್ರಿ ಹಗಲು ಲೆಕ್ಕಿಸದೆ ಕಾಮಗಾರಿ ಪೂರ್ಣ ಗೋಳಿಸಲು ಯತ್ನಿಸಿದರು. ಈ ತಿಂಗಳ 15 ಕ್ಕೆ ಡೆಡ್ ಲೈನ್ ಫಿಕ್ಸ್ ಮಾಡಿಕೊಳ್ಳಲಾಗಿತ್ತು. ಅದರೆ ಸೇತುವೇಯ ಅಂಡರ್ ಪಾಸ್ ಕೆಳಗಡೆ ರಾಜಕಾಲುವೇ ಕಾಮಗಾರಿ ಪ್ರಗತಿಯಲ್ಲಿ ಇರುವುದರಿಂದ ಶೇಷಾದ್ರಿಪುರಂ ಕಡೆಯಿಂದ ರೇಸ್ ಕೋರ್ಸ ಕಡೆ ಮಾತ್ರ ಸಂಚಾರಕ್ಕೆ ಮುಕ್ತ ಗೊಳಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಅಭಿಯಂತರ ಲೋಕೇಶ್ ತಿಳಿಸಿದ್ದಾರೆ ಹೇಳಿದ್ದಾರೆ.
ಡೌನ್ ರಾಂಪ್ ಕಾರ್ಯ ಪೂರ್ಣ
ಉಕ್ಕಿನ ಮೇಲ್ಸೇತುವೆಯ ರೈಲ್ವೆ ಅಂಡರ್ ಪಾಸ್ ಬದಿಯಲ್ಲಿ ಡೌನ್ ರಾಂಪ್ ಕಾರ್ಯ ಮುಗಿದಿದೆ, ಕೆಲವರು ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಾಲಯ, ವೈಜ್ಞಾನಿಕ ವರದಿ ನೀಡುವಂತೆ ಭಾರತೀಯ ವಿಜ್ಞಾನ ಸಂಸ್ಥೆಗೆ ಸೂಚಿಸಿತ್ತು. ಐಐಎಸ್‌ಸಿ ನೀಡಿದ ವರದಿಯಲ್ಲಿ ಪಾಲಿಕೆಯು ಮರು ಯೋಜಿಸಿದ ಡೌನ್ ರಾಂಪ್ ನಿರ್ಮಾಣ ಯೋಗ್ಯವಾಗಿದೆ ಎಂದು ತಿಳಿಸಲಾಗಿತ್ತು. ಹೀಗಾಗಿ, ಮೇಲ್ವೇತುವೆ ಕಾಮಗಾರಿ ಮುಂದುವರಿಸಲು ಹೈಕೋರ್ಟ್ ವಿಭಾಗೀಯ ಪೀಠ ಒಪ್ಪಿಗೆ ನೀಡಿತ್ತು ಎಂದು ಮಾಹಿತಿ ನೀಡಿದ್ದಾರೆ.
ಶೇ 90 ರಷ್ಟು ಫ್ಲೈ ಓವರ್ ನಿರ್ಮಾಣ ಕಾರ್ಯ ಪೂರ್ಣ
ಫ್ಲೈ ಓವರ್ ನಿರ್ಮಾಣ ಕಾರ್ಯ ಶೇ 90 ರಷ್ಟು ಪೂರ್ಣಗೊಂಡಿದೆ. ಶೇಷಾದ್ರಿಪುರ ಕಡೆಗೆ ಸಂಪರ್ಕಿಸುವ ಡೌನ್ ರಾಂಪ್ ಬಳಿ ಕಾಲುವೆ ಅಭಿವೃದ್ಧಿ ಮತ್ತು ಇಳಿಜಾರು ರಸ್ತೆ ನಿರ್ಮಿಸಿ ಡಾಂಬರೀಕರಣ ಮಾಡುವುದು ಮಾತ್ರ ಬಾಕಿಯಿದೆ. ಕಾಮಗಾರಿ ಪೂರ್ಣಗೊಳಿಸಲು ಅಂದಾಜು 10 ದಿನಗಳು ಬೇಕಾಗುತ್ತದೆ. ಇದೇ ಆಗಸ್ಟ್ 30 ರಂದು ಎರಡು ಬದಿಯ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಪಾಲಿಕೆ ಅಧಿಕಾರಿ ಲೋಕೇಶ್ ತಿಳಿಸಿದ್ದಾರೆ.
ಇದನ್ನೂ ಓದಿ : Bangalore Murder : ಸಿನಿಮಾ ಸ್ಟೈಲ್‌ನಲ್ಲಿ ಪತ್ನಿ ಕೊಂದು ಪೊಲೀಸರ ಅತಿಥಿಯಾದ ಪತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.