ನವದೆಹಲಿ: ಭಾರತೀಯ ಗ್ರಾಹಕರು ಕೈಗೆಟುಕುವ ಪ್ರಿಪೇಯ್ಡ್ ಮೊಬೈಲ್ ಸೇವೆಗಳನ್ನು ಒದಗಿಸಲು ಹೆಸರುವಾಸಿ ಆಗಿರುವ ರಿಲಯನ್ಸ್ ಜಿಯೋ ಮತ್ತು ಬಿಎಸ್ಎನ್ಎಲ್ ಇದೀಗ ತಮ್ಮ ಗ್ರಾಹಕರಿಗೆ ಗ್ರಾಹಕರಿಗೆ 1GB ದೈನಂದಿನ ಡೇಟಾ ಪ್ರಯೋಜನದೊಂದಿಗೆ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿವೆ. ಈ ಯೋಜನೆಗಳು ಧ್ವನಿ ಕರೆ ಮತ್ತು ಹೆಚ್ಚಿನ ಇತರ ಪ್ರಯೋಜನಗಳನ್ನು ಸಹ ಒಳಗೊಂಡಿವೆ.
ಆಶ್ಚರ್ಯಕರ ವಿಷಯವೆಂದರೆ ಜಿಯೋ ಮತ್ತು ಬಿಎಸ್ಎನ್ಎಲ್ ನ ಈ ಯೋಜನೆಗಳ ಬೆಲೆಯಲ್ಲಿ ಅಂತಹ ದೊಡ್ಡ ವ್ಯತ್ಯಾಸವಿಲ್ಲ. ಎರಡೂ ಕಂಪನಿಗಳ ಯೋಜನೆಗಳು 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಬಿಎಸ್ಎನ್ಎಲ್ ನೀಡುವ ಹಲವು ಪ್ರಿಪೇಯ್ಡ್ ಯೋಜನೆಗಳು ಬಳಕೆದಾರರಿಗೆ 1ಜಿಬಿ ದೈನಂದಿನ ಡೇಟಾವನ್ನು ಒದಗಿಸುತ್ತವೆ. ಆದರೆ, ನಾವು ಜಿಯೋಗೆ ಹೋಲುವ ಮತ್ತು ಕೈಗೆಟುಕುವ ದರದಲ್ಲಿ ಲಭ್ಯವಿರುವ ಬಿಎಸ್ಎನ್ಎಲ್ನ ಯೋಜನೆ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಇದನ್ನೂ ಓದಿ- ಚೈನೀಸ್ ಸ್ಮಾರ್ಟ್ಫೋನ್ಗಳಿಗೆ ಟಕ್ಕರ್ ನೀಡಿದ ಮೇಡ್ ಇನ್ ಇಂಡಿಯಾ ಸ್ಮಾರ್ಟ್ಫೋನ್, ಬೆಲೆಯೂ ಕಡಿಮೆ
Jio vs BSNL: 1ಜಿಬಿ ದೈನಂದಿನ ಡೇಟಾ ಯೋಜನೆ:
ಜಿಯೋದ 209 ರೂ. ಪ್ಯಾಕ್ 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದರಲ್ಲಿ ಬಳಕೆದಾರರು ದಿನಕ್ಕೆ 1ಜಿಬಿ ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 ಉಚಿತ ಎಸ್ಎಂಎಸ್ ಸೌಲಭ್ಯವನ್ನು ಪಡೆಯುತ್ತಾರೆ. ಇದರಲ್ಲಿ, ನೀವು ಜಿಯೋದ ಎಲ್ಲಾ ಅಪ್ಲಿಕೇಶನ್ಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದೆ. ದೈನಂದಿನ ಡಾಟಾ ಮಿತಿ 1ಜಿಬಿ ಖಾಲಿಯಾದ ನಂತರ ಇಂಟರ್ನೆಟ್ ವೇಗ 64 Kbps ಆಗಿರುತ್ತದೆ.
ಮತ್ತೊಂದೆಡೆ, ಬಿಎಸ್ಎನ್ಎಲ್ 184 ರೂ.ಗಳ ಯೋಜನೆಯನ್ನು ನೀಡುತ್ತದೆ, ಅದರ ಮಾನ್ಯತೆ 28 ದಿನಗಳು. ಇದರಲ್ಲಿ ಬಳಕೆದಾರರು ಪ್ರತಿದಿನ 1ಜಿಬಿ ಡೇಟಾವನ್ನು ಪಡೆಯುತ್ತಾರೆ. ಇದಲ್ಲದೆ, ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್ಎಂಎಸ್ ಲಭ್ಯವಿದೆ. ಬಿಎಸ್ಎನ್ಎಲ್ ಟ್ಯೂನ್ಸ್ ಅನ್ನು ಸಹ ಯೋಜನೆಯಲ್ಲಿ ಸೇರಿಸಲಾಗಿದೆ. ದೈನಂದಿನ 1ಜಿಬಿ ಡಾಟಾ ಮುಗಿದ ನಂತರ ಇಂಟರ್ನೆಟ್ ವೇಗ 84 Kbps ಗೆ ಇಳಿಯಲಿದೆ.
ಇದನ್ನೂ ಓದಿ- Apple: ಐಫೋನ್ 14 ಬಿಡುಗಡೆಯ ಬೆನ್ನಲ್ಲೇ ಗ್ರಾಹಕರಿಗೆ ದೊಡ್ಡ ಶಾಕ್ ನೀಡಿದ ಆ್ಯಪಲ್!
ಇವೆರಡರ ಬೆಲೆ ವ್ಯತ್ಯಾಸ ಕೇವಲ 25 ರೂ. ಆದರೆ ಜಿಯೋ ಯೋಜನೆಗಳೊಂದಿಗೆ, 4G ನೆಟ್ವರ್ಕ್ ಇರುವ ಕಾರಣ ನೀವು ಖಂಡಿತವಾಗಿಯೂ ಉತ್ತಮ ಡೇಟಾ ವೇಗವನ್ನು ಪಡೆಯುತ್ತೀರಿ. ಹೆಚ್ಚುವರಿಯಾಗಿ, ಜಿಯೋ ಅಪ್ಲಿಕೇಶನ್ಗಳು ಬಳಕೆದಾರರಿಗೆ ನೇರವಾಗಿ ತಮ್ಮ ಸ್ಮಾರ್ಟ್ಫೋನ್ಗಳಲ್ಲಿ ಲೈವ್ ಟಿವಿ ಪ್ರವೇಶಿಸಲು, ಕ್ಲೌಡ್ನಲ್ಲಿ ಫೋಟೋಗಳು ಮತ್ತು ಫೈಲ್ಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ಮತ್ತು ಹೆಚ್ಚಿನ ಸೇವೆಯನ್ನು ಅನುಮತಿಸುತ್ತದೆ.
ಬೆಲೆಗೆ ಹೋಲಿಸಿದರೆ ಜಿಯೋ ಮತ್ತು ಬಿಎಸ್ಎನ್ಎಲ್ ಎರಡರ ನಡುವೆ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ಆದರೆ, ಉತ್ತಮ ಡಾಟಾ ಸೇವೆಗಾಗಿ ಜಿಯೋ ಒಳ್ಳೆಯ ಆಯ್ಕೆಯಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.