ʼಪುನೀತ್ ಉಪಗ್ರಹ ವರ್ಕ್ ಸ್ಟೇಷನ್‌ʼಗೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ

ತಂತ್ರಜ್ಞಾನಾಧಾರಿತ ಕಲಿಕೆ ಮತ್ತು ಸಾಂಪ್ರದಾಯಿಕ ಬೋಧನೆ ಎರಡೂ ಇರುವ 'ಮಲ್ಲೇಶ್ವರಂ ಸ್ಕೂಲ್ ಮಾಡೆಲ್' (ಎಂಎಸ್‌ಎಂ) ಅತ್ಯುತ್ತಮವಾಗಿದ್ದು ಅದನ್ನು ರಾಜ್ಯದ ಸರ್ಕಾರಿ ಪಬ್ಲಿಕ್‌ ಶಾಲೆಗಳಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Written by - Prashobh Devanahalli | Edited by - Krishna N K | Last Updated : Oct 29, 2022, 03:16 PM IST
  • 'ಪುನೀತ್' ಉಪಗ್ರಹದ ವರ್ಕ್ ಸ್ಟೇಶನ್,ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ
  • 3.50 ಕೋಟಿ ರೂ. ವೆಚ್ಚದ ಸಭಾಂಗಣಕ್ಕೂ ಶಂಕುಸ್ಥಾಪನೆ
  • ಮಲ್ಲೇಶ್ವರಂ 18ನೇ ಅಡ್ಡರಸ್ತೆಯಲ್ಲಿರುವ ಸರ್ಕಾರಿ ಶಾಲೆ
 ʼಪುನೀತ್ ಉಪಗ್ರಹ ವರ್ಕ್ ಸ್ಟೇಷನ್‌ʼಗೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ title=

ಬೆಂಗಳೂರು : ತಂತ್ರಜ್ಞಾನಾಧಾರಿತ ಕಲಿಕೆ ಮತ್ತು ಸಾಂಪ್ರದಾಯಿಕ ಬೋಧನೆ ಎರಡೂ ಇರುವ 'ಮಲ್ಲೇಶ್ವರಂ ಸ್ಕೂಲ್ ಮಾಡೆಲ್' (ಎಂಎಸ್‌ಎಂ) ಅತ್ಯುತ್ತಮವಾಗಿದ್ದು ಅದನ್ನು ರಾಜ್ಯದ ಸರ್ಕಾರಿ ಪಬ್ಲಿಕ್‌ ಶಾಲೆಗಳಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮಲ್ಲೇಶ್ವರಂ 18ನೇ ಅಡ್ಡರಸ್ತೆಯಲ್ಲಿರುವ ಸರಕಾರಿ ಶಾಲೆಯಲ್ಲಿ ಅವರು 'ಪುನೀತ್' ಉಪಗ್ರಹದ ವರ್ಕ್ ಸ್ಟೇಶನ್, ಮಾನಿಟರಿಂಗ್ ವ್ಯವಸ್ಥೆ, ಮಿನಿ ವಿಜ್ಞಾನ ಸಂಪನ್ಮೂಲ ಕೇಂದ್ರಗಳಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ  3.50 ಕೋಟಿ ರೂ. ವೆಚ್ಚದ ಸಭಾಂಗಣಕ್ಕೂ ಶಂಕುಸ್ಥಾಪನೆ ನೆರವೇರಿಸಿದರು. ಕ್ಷೇತ್ರದ ಶಾಸಕ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಜತೆಯಲ್ಲಿದ್ದರು.

ಇದನ್ನೂ ಓದಿ: ಬಿಜೆಪಿ ಸರ್ಕಾರದ ಬಂದ್ಮೇಲೆ ದ್ವೇಷ ಹೆಚ್ಚಿದೆ, RSS ಕಾನೂನು ಕೈಗೆತ್ತಿಕೊಂಡಿದೆ

ಬಳಿಕ ಮಾತನಾಡಿದ ಅವರು, ʼಎಲ್ಲ ಮಕ್ಕಳನ್ನೂ ತಮ್ಮ ಮಕ್ಕಳೆಂದು ಭಾವಿಸಿ ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸುತ್ತಿರುವ ಅಶ್ವತ್ಥನಾರಾಯಣ ಅವರ ಈ ಕೆಲಸವು ಅಂತಃಕರಣದಿಂದ ಆಗುವಂಥದ್ದು. ಕಟ್ಟಡಗಳನ್ನು ಕಟ್ಟುವುದಕ್ಕಿಂತ ಕಲಿಕಾ ವ್ಯವಸ್ಥೆಯ ಸುಧಾರಣೆ, ಆಧುನೀಕರಣ, ಡಿಜಿಟಲೀಕರಣ, ವೈಫೈ, ಬ್ರಾಡ್‌ಬ್ಯಾಂಡ್‌, ಲ್ಯಾಪ್‌ಟಾಪ್‌ ಮತ್ತು ಕೆವೈಸಿ (ನೋ ಯುವರ್ ಚೈಲ್ಡ್) ವಿಧಾನಗಳ ಅಳವಡಿಕೆಗೆ ಗಮನ ಕೊಟ್ಟಿರುವ ಮಲ್ಲೇಶ್ವರಂ ಶಾಲಾ ಮಾದರಿ ಅನುಕರಣ ಯೋಗ್ಯವಾಗಿದೆ' ಎಂದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದೇಶದಲ್ಲಿ ಅಭಿವೃದ್ಧಿಪಡಿಸುತ್ತಿರುವ 75 ಉಪಗ್ರಹಗಳಲ್ಲಿ ಮಲ್ಲೇಶ್ವರಂ ಸರಕಾರಿ ಶಾಲೆಯ ಮಕ್ಕಳು ನಿರ್ಮಿಸುತ್ತಿರುವ ಪುನೀತ್ ಉಪಗ್ರಹವೂ ಒಂದಾಗಿದೆ. ಈ ಮಕ್ಕಳು ದೊಡ್ಡ ಮತ್ತು ಬಹೂಪಯೋಗಿ ಉಪಗ್ರಹ ಅಭಿವೃದ್ಧಿಗೆ ಮುಂದಾದರೆ ಸಂಪೂರ್ಣ ವೆಚ್ಚವನ್ನು ರಾಜ್ಯ ಸರಕಾರವೇ ಭರಿಸಲಿದೆ. ಸಮಾಜಮುಖಿಯಾಗಿದ್ದ ನಟ ಪುನೀತ್ ಅವರಿಗೆ ಇದು ಅವರ ಪ್ರಥಮ ಪುಣ್ಯತಿಥಿಯಂದು ಸಲ್ಲಿಸುತ್ತಿರುವ ಸೂಕ್ತ ಗೌರವವಾಗಿದೆ ಎಂದು ಅವರು ಬಣ್ಣಿಸಿದರು. 

ಇದನ್ನೂ ಓದಿ: ಬಿಜೆಪಿ ಸರ್ಕಾರವು ಕರ್ನಾಟಕ ಪೊಲೀಸ್ ವ್ಯವಸ್ಥೆಯ ನೈತಿಕ ಸ್ಥೈರ್ಯ ಕುಗ್ಗಿಸಿದೆ: ಎಚ್‌ಡಿಕೆ ಆಕ್ರೋಶ

ಡಾ.ಸಿ ಎನ್ ಅಶ್ವತ್ಥನಾರಾಯಣ ಮಾತನಾಡಿ, 'ಮಲ್ಲೇಶ್ವರಂ ಶಾಲಾ ಮಾದರಿಯನ್ನು ಮೂಲಸೌಕರ್ಯ, ವಿದ್ಯಾರ್ಥಿಗಳ ಯೋಗಕ್ಷೇಮ, ಸಮರ್ಥ ಶಿಕ್ಷಕರು, ಕೆವೈಸಿ (ನೋ ಯುವರ್ ಚೈಲ್ಡ್), ಡಿಜಿಟಲ್ ಕಲಿಕಾ ವ್ಯವಸ್ಥೆ ಮತ್ತು ಪಠ್ಯೇತರ ಚಟುವಟಿಕೆಗಳು ಎಂಬ ಆರು ಅಂಶಗಳ ಮೇಲೆ ವೈಜ್ಞಾನಿಕವಾಗಿ ರೂಪಿಸಲಾಗಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೂಡ ಇಂತಹ ವೈಜ್ಞಾನಿಕ ವಿಧಾನಕ್ಕೆ ಒತ್ತು ಕೊಡಲಾಗಿದೆ ಎಂದರು. 

ಎಲ್ಲಾ ಸರಕಾರಿ ಶಾಲೆಗಳಿಗೂ ಹೈಟೆಕ್ ಪ್ರಯೋಗಾಲಯ, ಆಟದ ಮೈದಾನ, ಗ್ರಂಥಾಲಯ ಮತ್ತು ಶೌಚಾಲಯ ಸೌಲಭ್ಯಗಳನ್ನು ಒದಗಿಸಲಾಗುವುದು.  ವೈದ್ಯರಿಂದ ಆರೋಗ್ಯ ತಪಾಸಣೆ ಮತ್ತು ಆಪ್ತ ಸಮಾಲೋಚನೆ, ಕೆವೈಸಿಯಲ್ಲಿ ಕಲಿಕೆಗೆ ಮಾಹಿತಿ ತಂತ್ರಜ್ಞಾನದ ಬಳಕೆಯ ಜತೆಗೆ ಮಗುವಿನ ಆಸಕ್ತಿ, ಕಲಿಕೆಯ ವೇಗ ಮತ್ತು ಅಗತ್ಯ ಮಾಹಿತಿಗಳ ಸಂಗ್ರಹಣೆ ನಡೆಯಲಿದೆ ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News