ರಾಮನವಮಿಯಂದೇ ರೂಪುಗೊಂಡಿದೆ 8 ಮಹಾಯೋಗಗಳು ! ಇಂದಿನಿಂದ ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ !

Ram Navami 2023 :ಗ್ರಹ ಳ ಸ್ಥಾನಗಳು ರಾಮ ನವಮಿಯಾದ ಇಂದು ಮಾಳವ್ಯ ರಾಜಯೋಗ, ಕೇದಾರ ಯೋಗ, ಹಂಸ ಯೋಗ ಮತ್ತು ಮಹಾಭಾಗ್ಯ ಯೋಗವನ್ನು ನಿರ್ಮಾಣ ಮಾಡುತ್ತಿವೆ. ಇದಲ್ಲದೆ ಇಂದು ಸರ್ವಾರ್ಥ ಸಿದ್ಧಿ ಯೋಗ, ಅಮೃತ ಸಿದ್ಧಿ ಯೋಗ, ಗುರು ಪುಷ್ಯ ಯೋಗ ಮತ್ತು ರವಿ ಯೋಗವೂ ಕೂಡಿ ಬಂದಿದೆ. ಇದು ಮೂರು ರಾಶಿಯವರ ಜೀವನದ ಅದೃಷ್ಟ ಬೆಳಗುತ್ತದೆ.

Written by - Ranjitha R K | Last Updated : Mar 30, 2023, 09:42 AM IST
  • ದೇಶದಾದ್ಯಂತ ರಾಮ ನವಮಿ ಮಹಾಪರ್ವ
  • ರಾಮನವಮಿಯಂದು ಕೆಲವು ರಾಶಿಯಲ್ಲಿ ಅತ್ಯಂತ ಮಂಗಳಕರ ಯೋಗ
  • ರೂಪುಗೊಳ್ಳುತ್ತಿದೆ ಅರ್ಧ ಡಜನ್‌ಗಿಂತಲೂ ಹೆಚ್ಚು ಶುಭ ಯೋಗ
ರಾಮನವಮಿಯಂದೇ ರೂಪುಗೊಂಡಿದೆ 8 ಮಹಾಯೋಗಗಳು !  ಇಂದಿನಿಂದ ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ !

ಬೆಂಗಳೂರು : ಭಗವಾನ್ ರಾಮನು ಚೈತ್ರ ಶುಕ್ಲದ ಒಂಭತ್ತನೇ ದಿನದಂದು ಜನಿಸಿದನು. ಆದ್ದರಿಂದ ಇದನ್ನು ರಾಮ ನವಮಿ ಎಂದು ಕರೆಯಲಾಗುತ್ತದೆ. ಇಂದು, ಗುರುವಾರ, ಮಾರ್ಚ್ 30, 2023 ರಂದು ದೇಶದಾದ್ಯಂತ ರಾಮ ನವಮಿ ಮಹಾಪರ್ವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ಬಾರಿ ರಾಮನವಮಿಯಂದು ಕೆಲವು ರಾಶಿಯಲ್ಲಿ ಅತ್ಯಂತ ಮಂಗಳಕರ  ಯೋಗಗಳು ರೂಪುಗೊಳ್ಳುತ್ತಿವೆ. ಜ್ಯೋತಿಷ್ಯದ ದೃಷ್ಟಿಯಿಂದ ಇದು  ಬಹಳ ವಿಶೇಷವಾಗಿದೆ. 

ರಾಮ ನವಮಿಯಂದು ರೂಪುಗೊಳ್ಳುತ್ತಿದೆ ಅರ್ಧ ಡಜನ್‌ಗಿಂತಲೂ ಹೆಚ್ಚು ಶುಭ ಯೋಗ: 
ಇಂದು, ರಾಮ ನವಮಿಯಂದು, ಅನೇಕ ಮಂಗಳಕರ ಯೋಗಗಳು ನಿರ್ಮಾಣವಾಗುತ್ತಿವೆ. ಇಂದು ಸೂರ್ಯ, ಬುಧ ಮತ್ತು ಗುರು ಮೀನ ರಾಶಿಯಲ್ಲಿದ್ದಾರೆ. ಶನಿಯು ಸ್ವರಾಶಿ ಕುಂಭ ರಾಶಿಯಲ್ಲಿದ್ದಾನೆ. ಇದಲ್ಲದೆ ಶುಕ್ರ ಮತ್ತು ರಾಹು ಮೇಷ ರಾಶಿಯಲ್ಲಿದ್ದಾರೆ. ಈ ಗ್ರಹಗಳ ಸ್ಥಾನಗಳು ರಾಮ ನವಮಿಯಾದ ಇಂದು ಮಾಳವ್ಯ ರಾಜಯೋಗ, ಕೇದಾರ ಯೋಗ, ಹಂಸ ಯೋಗ ಮತ್ತು ಮಹಾಭಾಗ್ಯ ಯೋಗವನ್ನು ನಿರ್ಮಾಣ ಮಾಡುತ್ತಿವೆ. ಇದಲ್ಲದೆ ಇಂದು ಸರ್ವಾರ್ಥ ಸಿದ್ಧಿ ಯೋಗ, ಅಮೃತ ಸಿದ್ಧಿ ಯೋಗ, ಗುರು ಪುಷ್ಯ ಯೋಗ ಮತ್ತು ರವಿ ಯೋಗವೂ ಕೂಡಿ ಬಂದಿದೆ. ಇದು ಎಲ್ಲಾ ಜನರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಆದರೆ ಮೂರು ರಾಶಿಯವರ ಜೀವನದ ಅದೃಷ್ಟ ಬೆಳಗುತ್ತದೆ.

ಇದನ್ನೂ ಓದಿ :  Lunar Eclipse 2023: ಈ ದಿನ ಸಂಭವಿಸಲಿದೆ ವರ್ಷದ ಮೊದಲ ಚಂದ್ರ ಗ್ರಹಣ, ಈ ರಾಶಿಯವರಿಗೆ ಲಾಭದಾಯಕ

ವೃಷಭ ರಾಶಿ :  ರಾಮನವಮಿಯ ಈ ದಿನ ವೃಷಭ ರಾಶಿಯವರಿಗೆ ಅತ್ಯಂತ ಶುಭ ದಿನ. ಜನರ ಸಹಕಾರದಿಂದ ಎಲ್ಲಾ ಕೆಲಸಗಳು ಪೂರ್ಣಗೊಳ್ಳಲಿದೆ. ವ್ಯಾಪಾರದಲ್ಲಿ ಲಾಭ ಇರಲಿದೆ. ಆರ್ಥಿಕ ಲಾಭಗಳನ್ನು ಪಡೆಯುವ ಅವಕಾಶಗಳು ಹೆಚ್ಚಿವೆ. ಹಣಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸವನ್ನು ಪೂರ್ಣಗೊಳಿಸಬಹುದು. ಹೂಡಿಕೆಗೆ ಇದು ಉತ್ತಮ ಸಮಯ. 

ತುಲಾ ರಾಶಿ : ಈ ರಾಮನವಮಿ ತುಲಾ ರಾಶಿಯವರ ಜೀವನದಲ್ಲಿ ಒಳ್ಳೆಯ ದಿನಗಳನ್ನು ತರುತ್ತದೆ. ಆರ್ಥಿಕ ಲಾಭವಾಗುವುದು.  ವೃತ್ತಿಯಲ್ಲಿ ಉನ್ನತ ಮಟ್ಟಕ್ಕೆ ಏರುವುದು ಸಾಧ್ಯವಾಗುತ್ತದೆ.  ಆತ್ಮವಿಶ್ವಾಸ ಹೆಚ್ಚಲಿದೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಇರುತ್ತದೆ. 

ಇದನ್ನೂ ಓದಿ :  Budh Asta 2023: ಬುಧನ ಅಸ್ತದಿಂದ ಈ 4 ರಾಶಿಯವರಿಗೆ ಉದ್ಯೋಗ-ವ್ಯವಹಾರದಲ್ಲಿ ದೊಡ್ಡ ನಷ್ಟ!

ಸಿಂಹ ರಾಶಿ : ರಾಮನವಮಿಯು ಸಿಂಹ ರಾಶಿಯವರಿಗೆ ಅನೇಕ ರೀತಿಯಲ್ಲಿ ಲಾಭವನ್ನು ನೀಡುತ್ತದೆ. ಈ ರಾಶಿಯವರ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಹಳೆಯ ಸಾಲದಿಂದ ಮುಕ್ತಿ ಸಿಗಲಿದೆ. ಆದಾಯ ಹೆಚ್ಚಲಿದೆ. ಹೊಸ ಮೂಲಗಳಿಂದ ಆದಾಯ ಹರಿದು ಬರುತ್ತದೆ.  ಇಲ್ಲಿಯವರೆಗೆ ಜೀವನದಲ್ಲಿ ತಲೆದೋರಿದ್ದ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಅದೃಷ್ಟ ಸದಾ ಬೆನ್ನಿಗಿರುತ್ತದೆ. 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   

More Stories

Trending News