ದಿನಭವಿಷ್ಯ 24-07-2024: ಸಂಕಷ್ಟಹರ ಚತುರ್ಥಿಯಂದು ಗಣೇಶನ ಮಹಿಮೆಯಿಂದ ಈ ರಾಶಿಯವರಿಗೆ ಕಷ್ಟಗಳಿಂದ ಪರಿಹಾರ!

Today Horoscope 24th July 2024: ಬುಧವಾರದ ಈ ದಿನ ಸಂಕಷ್ಟಹರ ಚತುರ್ಥಿಯಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Jul 24, 2024, 07:48 AM IST
  • ಮಿಥುನ ರಾಶಿಯವರಿಗೆ ನ್ಯಾಯಾಂಗ ಸಂಬಂಧಿತ ವ್ಯವಹಾರಗಳು ಇಂದು ಒತ್ತಡಕ್ಕೆ ಕಾರಣವಾಗಬಹುದು.
  • ಸಿಂಹ ರಾಶಿಯ ವ್ಯಾಪಾರಸ್ಥರಿಗೆ ದಿನವು ವಿಶೇಷ ಲಾಭವನ್ನು ತರಲಿದೆ
  • ಮಕರ ರಾಶಿಯವರು ಇಂದು ಬಂಪರ್ ಧನ ಲಾಭವನ್ನು ಪಡೆಯಬಹುದು.
ದಿನಭವಿಷ್ಯ 24-07-2024:  ಸಂಕಷ್ಟಹರ ಚತುರ್ಥಿಯಂದು ಗಣೇಶನ ಮಹಿಮೆಯಿಂದ ಈ ರಾಶಿಯವರಿಗೆ ಕಷ್ಟಗಳಿಂದ ಪರಿಹಾರ!  title=

Budhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946,  ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿ ಇರಲಿದ್ದು ಇಂದು ಸಂಕಷ್ಟಹರ ಚತುರ್ಥಿಯನ್ನು ಆಚರಿಸಲಾಗುತ್ತಿದೆ. ಈ ದಿನ ಯಾವ ರಾಶಿಯವರಿಗೆ ವಿಘ್ನ ನಿವಾರಕನ ಕೃಪೆ ಇರಲಿದೆ ತಿಳಿಯಿರಿ. 

ಮೇಷ ರಾಶಿಯವರ ಭವಿಷ್ಯ (Aries Horoscope):  
ಈ ರಾಶಿಯ ಜನರಿಗೆ ಇಂದು ವ್ಯಾಪಾರದಿಂದ ಬಂಪರ್ ಲಾಭ ಸಾಧ್ಯತೆ. ಸಾಮಾಜಿಕ-ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ಪಡೆಯುವಿರಿ. ಇದಕ್ಕಾಗಿ ಹಣವೂ ವ್ಯಯವಾಗಲಿದೆ. ಸಂಜೆ ವೇಳೆಗೆ ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಬಾಧಿಸಬಹುದು.  

ವೃಷಭ ರಾಶಿಯವರ ಭವಿಷ್ಯ (Taurus Horoscope): 
ಈ ರಾಶಿಯ ಜನರು ಇಂದು ಪ್ರಮುಖ ಕೆಲಸಗಳಿಗಾಗಿ ಮನೆಯಿಂದ ಹೊರಹೋಗುವಾಗ ನಿಮ್ಮ ಹಿರಿಯರ ಆಶೀರ್ವಾದವನ್ನು ಪಡೆದು ಬಳಿಗೆ ಹೊರಡಿ. ಇದರಿಂದ ಕೆಲಸದಲ್ಲಿ ಖಂಡಿತವಾಗಿಯೂ ಯಶಸ್ಸನ್ನು ಸಾಧಿಸುವಿರಿ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು, ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ನಿಮ್ಮ ಮಕ್ಕಳ ನಡವಳಿಕೆಯನ್ನು ನಿಯಂತ್ರಿಸಿ.  

ಮಿಥುನ ರಾಶಿಯವರ ಭವಿಷ್ಯ (Gemini Horoscope):  
ನ್ಯಾಯಾಂಗ ಸಂಬಂಧಿತ ವ್ಯವಹಾರಗಳು ಇಂದು ಒತ್ತಡಕ್ಕೆ ಕಾರಣವಾಗಬಹುದು. ಕೆಲಸದಲ್ಲಿ ಅಡೆತಡೆಗಳು ನಿಮ್ಮ ಮನಸ್ಸಿನ ನೆಮ್ಮದಿಯನ್ನು ಕೆಡಿಸಬಹುದು. ಆದಾಗ್ಯೂ, ಮಧ್ಯಾಹ್ನದ ವೇಳೆಗೆ ಪರಿಸ್ಥಿತಿ ಸುಧಾರಿಸಲಿದ್ದು, ಮೇಲಾಧಿಕಾರಿಗಳ ಬೆಂಬಲವನ್ನು ಪಡೆಯುವಿರಿ. ವಿದ್ಯಾರ್ಥಿಗಳು ಹೆಚ್ಚಿನ ಶ್ರಮವಹಿಸಿ ವಿದ್ಯಾಭ್ಯಾಸವನ್ನು ಮಾಡಬೇಕು.  

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಈ ರಾಶಿಯ ಜನರಿಗೆ ಇಂದು ನೀವು ಕೈ ಹಾಕಿದ ಕೆಲಸಗಳಲ್ಲಿ ಭಾರೀ ಯಶಸ್ಸನ್ನು ಕಾಣುವಿರಿ. ದೀರ್ಘ ಸಮಯದಿಂದ ಬಾಕಿ ಉಳಿದಿರುವ ವೇಗವನ್ನು ಪಡೆಯಲಿವೆ. ವ್ಯಾಪಾರಸ್ಥರು  ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳುತ್ತಾರೆ. ಇಂದು ನಿಮ್ಮ ಆರೋಗ್ಯವು ಕಾಳಜಿಯ ವಿಷಯವಾಗಿದ್ದು, ಹೊರಗಿನ ಆಹಾರಗಳನ್ನು ಸೇವಿಸದೆ ಇರುವುದು ಉತ್ತಮ.    

ಇದನ್ನೂ ಓದಿ- ಸೂರ್ಯನ ರಾಶಿಚಕ್ರ ಚಿಹ್ನೆಯಲ್ಲಿ ಶುಭಕರ ಲಕ್ಷ್ಮೀ ನಾರಾಯಣ ಯೋಗ, 3 ರಾಶಿಯವರಿಗೆ ರಾಜವೈಭೋಗ

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಈ ರಾಶಿಯ ವ್ಯಾಪಾರಸ್ಥರಿಗೆ ದಿನವು ವಿಶೇಷ ಲಾಭವನ್ನು ತರಲಿದೆ. ಉದ್ಯೋಗಸ್ಥರು ನಿಮ್ಮ ವೃತ್ತಿ ಬದುಕಿನಲ್ಲಿ ಪ್ರಗತಿಯನ್ನು ಸಾಧಿಸಲು ಹಲವು ಅವಕಾಶಗಳನ್ನು ಪಡೆಯಬಹುದು. ಸ್ಪರ್ಧಾತ್ಮಕ ಕ್ಷೇತ್ರಗಳಲ್ಲಿ ತಮ್ಮ ಅದೃಷ್ಟವನ್ನು ಪ್ರಯತ್ನಿಸುತ್ತಿರುವವರು ಇಂದು ಹೆಚ್ಚಿನ ಶ್ರಮವಹಿಸಬೇಕು. ಕುಟುಂಬದಲ್ಲಿ ಸಂತಸದ ವಾತಾವರಣವನ್ನು ಅನುಭವಿಸುವಿರಿ.  

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಈ ರಾಶಿಯ ವ್ಯಾಪಾರ ಮಾಡುವ ಜನರು ಇಂದು ಬಹಳ ಜಾಗರೂಕರಾಗಿರಬೇಕು. ವ್ಯವಹಾರ ಸಂಬಂಧಿತ ಪ್ರಯಾಣವು ಫಲಪ್ರಧವಾಗಿರುತ್ತದೆ. ಬಹಳ ದಿನಗಳಿಂದ ಕಾಯುತ್ತಿದ್ದ ವಿಶೇಷ ಒಪ್ಪಂದಗಳು ಇಂದು ಪೂರ್ಣಗೊಳ್ಳಲಿವೆ. ಸಂಜೆ ನೀವು ನಿಮ್ಮ ಕುಟುಂಬ ಸದಸ್ಯರೊಂದಿಗೆ ಸಣ್ಣದೊಂದು ಪ್ರವಾಸಕ್ಕೆ ಯೋಚಿಸಬಹುದು. 

ತುಲಾ ರಾಶಿಯವರ ಭವಿಷ್ಯ (Libra Horoscope): 
ಈ ರಾಶಿಯ ವ್ಯಾಪಾರಿಗಳಿಗೆ ಇಂದು ಬಹಳ ಮುಖ್ಯವಾದ ದಿನವಾಗಿದೆ. ನೀವು ಚಿಂತನಶೀಲ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಸಮಸ್ಯೆಗಳು ಬಗೆಹರಿಯಲಿವೆ. ಸರ್ಕಾರಿ ಉದ್ಯೋಗಸ್ಥರು ಯಾವುದೇ ಅಪಾಯಕಾರಿ ಕೆಲಸವನ್ನು ಮಾಡಬೇಡಿ.  ನೀವು ಇಂದು ಆಸ್ತಿಯನ್ನು ಖರೀದಿಸಲು ಯೋಚಿಸುತ್ತಿದ್ದರೆ ಅದರ ಸಾಧಕ-ಬಾಧಕಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಈ ರಾಶಿಯವರು ಇಂದು ಹಿತಶತ್ರುಗಳ ಬಗ್ಗೆ ತುಂಬಾ ಎಚ್ಚರದಿಂದಿರಬೇಕು. ಆದಾಗ್ಯೂ, ನೀವು ತುಂಬಾ ಧೈರ್ಯಶಾಲಿಯಾಗಿ ಮುಂದುವರೆಯುವುದರಿಂದ ನಿಮ್ಮ ಉದ್ದೇಶಗಳಲ್ಲಿ ನೀವು ಯಶಸ್ವಿಯಾಗುತ್ತೀರಿ. ಮಕ್ಕಳ ಮೇಲಿನ ನಿಮ್ಮ ಪ್ರೀತಿ ಇಂದು ಹೆಚ್ಚಾಗುತ್ತದೆ. ಉದ್ಯೋಗಿಗಳು ಇಂದು ಕಚೇರಿಯಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುವಿರಿ.  

ಇದನ್ನೂ ಓದಿ- 100 ವರ್ಷಗಳ ನಂತರ ಒಟ್ಟೊಟ್ಟಿಗೆ ಎರಡು ರಾಜಯೋಗಗಳ ನಿರ್ಮಾಣ: ಆರು ರಾಶಿಯವರಿಗೆ ಸಕಲ ಸುಖ-ಸಂಪತ್ತು ಪ್ರಾಪ್ತಿ!

ಧನು ರಾಶಿಯವರ ಭವಿಷ್ಯ (Sagittarius Horoscope):  
ಈ ರಾಶಿಯವರು ಇಂದು ಹಿತಕರವಾದ ದಿನವನ್ನು ಅನುಭವಿಸುವಿರಿ. ನಿಮ್ಮಲ್ಲಿರುವ  ಜ್ಞಾನವನ್ನು ಸದುಪಯೋಗ ಪಡಿಸಿಕೊಂಡು ಹೊಸದನ್ನು ಮಾಡಲು ಪ್ರಯತ್ನಿಸಿ. ಇದರಿಂದ ನಿಮ್ಮ ವ್ಯಾಪಾರದಲ್ಲಿ ಪ್ರಗತಿಯನ್ನು ಕಾಣಬಹುದು. ಕೆಲವು ಕೆಲಸದಲ್ಲಿ ಅಡೆತಡೆಗಳು ಎದುರಾಗಬಹುದಾದರೂ ಕೊಂಚ ತಾಳ್ಮೆಯಿಂದ ಮುಂದುವರೆದರೆ ಎಲ್ಲವೂ ಒಳ್ಳೆಯದೇ ಆಗಲಿದೆ.  

ಮಕರ ರಾಶಿಯವರ ಭವಿಷ್ಯ (Capricorn Horoscope):  
ಈ ರಾಶಿಯವರು ಇಂದು ಬಂಪರ್ ಧನ ಲಾಭವನ್ನು ಪಡೆಯಬಹುದು. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಪಾಲುದಾರಿಕೆಯಲ್ಲಿ ಮಾಡಿದ ವ್ಯವಹಾರದಿಂದ ಇಂದು ನೀವು ಸಾಕಷ್ಟು ಲಾಭವನ್ನು ಪಡೆಯುತ್ತೀರಿ. ಆದಾಗ್ಯೂ, ಕೆಲವು ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದನ್ನು ಪರಿಗಣಿಸಿ. ಇಲ್ಲವೇ ಭವಿಷ್ಯದಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಗಬಹುದು.  

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಈ ರಾಶಿಯ ಜನರು ಇಂದು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಈ ಬಗ್ಗೆ ತುಂಬಾ ಎಚ್ಚರಿಕೆಯಿಂದ ಯೋಚಿಸಬೇಕು. ತಾಳ್ಮೆಯಿಂದ ತೆಗೆದುಕೊಂಡ  ನಿರ್ಧಾರಗಳು ನಿಮಗೆ ಪ್ರಯೋಜನವನ್ನು ತರುತ್ತವೆ. ಇಂದು ನೀವು ದೈನಂದಿನ ಅಗತ್ಯಗಳಿಗಾಗಿ ಸ್ವಲ್ಪ ಹಣವನ್ನು ಖರ್ಚು ಮಾಡಬಹುದು.  ಹೊಸ ವ್ಯವಹಾರದಲ್ಲಿ ಹೂಡಿಕೆ ಮಾಡಲು ಬಯಸಿದರೆ ದಿನವು ಉತ್ತಮವಾಗಿದೆ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಈ ರಾಶಿಯ ಜನರು ಇಂದು ತಮ್ಮ ಜೀವನದಲ್ಲಿ ನಡೆಯುತ್ತಿರುವ ತೊಂದರೆಗಳಿಂದ ಸ್ವಲ್ಪ ಪರಿಹಾರವನ್ನು ಪಡೆಯುತ್ತಾರೆ. ವ್ಯಾಪಾರಕ್ಕೆ ಸಂಬಂಧಿಸಿದ ಹೊಸ ಯೋಜನೆಗಳು ಯಶಸ್ವಿಯಾಗಲಿವೆ. ನಿಮ್ಮ ವ್ಯವಹಾರವನ್ನು ವಿಸ್ತರಿಸುವ ಉದ್ದೇಶದಿಂದ ಬ್ಯಾಂಕಿನಿಂದ ಸಾಲವನ್ನು ತೆಗೆದುಕೊಳ್ಳುವ ಆಲೋಚನೆಯಲ್ಲಿದ್ದರೆ, ಇಂದು ನಿಮ್ಮ ಆಸೆ ಈಡೇರಲಿದೆ. ಪ್ರತಿ ಹೆಜ್ಜೆಯಲ್ಲೂ ನಿಮ್ಮ ಸಂಗಾತಿ ಬೆಂಬಲವನ್ನು ನೀಡುತ್ತಾರೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News