Horoscope Today 17 April 2023: ಜ್ಯೋತಿಷ್ಯದ ಪ್ರಕಾರ, 17 ಏಪ್ರಿಲ್ 2023, ಸೋಮವಾರ ಒಂದು ಪ್ರಮುಖ ದಿನವಾಗಿದೆ. ಧನು ರಾಶಿ ಜನರು ಭವಿಷ್ಯದಲ್ಲಿ ಯಾವುದೇ ತೊಂದರೆಯಾಗದಂತೆ ಹಣವನ್ನು ಹೇಗೆ ಉಳಿಸಬೇಕೆಂದು ಿಂದು ಅರಿಯುತ್ತಾರೆ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮೇಷ ರಾಶಿಯಿಂದ ಮೀನ ರಾಶಿಯವರಿಗೆ ಸೋಮವಾರ ಹೇಗಿರುತ್ತದೆ ಎಂದು ಇಲ್ಲಿ ತಿಳಿಯೋಣ.
ಮೇಷ ರಾಶಿ: ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಸಿಗಲಿದೆ. ನಿಮ್ಮ ಕೆಲಸದಿಂದ ಬಾಸ್ ತುಂಬಾ ಸಂತೋಷಪಡುತ್ತಾರೆ. ವ್ಯಾಪಾರಸ್ಥರು ವ್ಯಾಪಾರದಲ್ಲಿ ಏರಿಳಿತಗಳನ್ನು ಕಾಣುತ್ತಾರೆ, ಇದರಿಂದಾಗಿ ನೀವು ಸ್ವಲ್ಪ ಒತ್ತಡದಲ್ಲಿ ಇರುವಿರಿ. ಕುಟುಂಬದ ಬೆಂಬಲ ಸಿಗಲಿದೆ.
ವೃಷಭ ರಾಶಿ: ಉದ್ಯೋಗದಲ್ಲಿ ಬಡ್ತಿಯತ್ತ ಸಾಗುವಿರಿ. ವಿದ್ಯಾರ್ಥಿಗಳಿಗೂ ಒಳ್ಳೆಯ ದಿನ. ಆಸ್ತಿ ವ್ಯವಹಾರದ ಕೆಲಸವನ್ನು ಮಾಡುವವರು ಬಹಳ ಎಚ್ಚರಿಕೆಯಿಂದ ಕೆಲಸಕ್ಕೆ ಕೈ ಹಾಕಿ. ಹಿರಿಯ ಸದಸ್ಯರ ಪಾದ ಮುಟ್ಟಿ ಆಶೀರ್ವಾದ ಪಡೆಯಿರಿ, ಇದರಿಂದ ಶುಭವಾಗುವುದು.
ಮಿಥುನ ರಾಶಿ: ಕುಟುಂಬದ ಬೆಂಬಲ ಸಿಗಲಿದೆ. ಕೆಲಸ ಮಾಡುವವರಿಗೆ ಉದ್ಯೋಗದಲ್ಲಿ ಬಡ್ತಿಯ ಅವಕಾಶ ಸಿಗುತ್ತದೆ. ಅಧಿಕಾರಿಗಳ ಸಹಕಾರ ದೊರೆಯಲಿದೆ. ವೈವಾಹಿಕ ಜೀವನದ ದೃಷ್ಟಿಯಿಂದಲೂ ದಿನವು ತುಂಬಾ ಅನುಕೂಲಕರವಾಗಿರುತ್ತದೆ. ನಿರುದ್ಯೋಗಿಗಳು ಉದ್ಯೋಗಕ್ಕಾಗಿ ಪರಿಚಯಸ್ಥರ ಸಹಾಯವನ್ನು ತೆಗೆದುಕೊಳ್ಳಬೇಕಾಗುತ್ತದೆ.
ಕರ್ಕಾಟಕ ರಾಶಿ: ನಿಮ್ಮ ಸ್ಥಗಿತಗೊಂಡ ಕೆಲಸಗಳು ಸಹ ಸಮಯಕ್ಕೆ ಪೂರ್ಣಗೊಳ್ಳುತ್ತವೆ. ಸರ್ಕಾರಿ ಕ್ಷೇತ್ರಗಳಿಂದಲೂ ಲಾಭ ಪಡೆಯುವ ಸಾಧ್ಯತೆಗಳಿವೆ. ನಿಮ್ಮ ಆರೋಗ್ಯದ ಬಗ್ಗೆ ಎಚ್ಚರವಿರಲಿ. ವಾಹನ ಸಂತಸ ಹೆಚ್ಚಾಗಲಿದೆ. ಮನಸ್ಸಿನ ಬಯಕೆಯು ಈಡೇರುತ್ತದೆ. ನಿಮ್ಮ ಖರ್ಚುಗಳು ಬಜೆಟ್ ಅನ್ನು ಹಾಳುಮಾಡಬಹುದು.
ಸಿಂಹ ರಾಶಿ: ವ್ಯಾಪಾರಸ್ಥರು ಯಾವುದೇ ಹೊಸ ಯೋಜನೆಯಿಂದ ಪ್ರಯೋಜನ ಪಡೆಯುತ್ತಾರೆ. ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಬಹುದು. ಪ್ರಯಾಣದ ಸಮಯದಲ್ಲಿ ಹೊಸ ಜನರ ಸಂಪರ್ಕವನ್ನು ಮಾಡಲಾಗುತ್ತದೆ. ವೃತ್ತಿಜೀವನದ ವಿಷಯದಲ್ಲಿ ನೀವು ಕೆಲವು ವಿಶೇಷ ಬದಲಾವಣೆಗಳನ್ನು ಮಾಡಬಹುದು.
ಇದನ್ನೂ ಓದಿ : 12 ವರ್ಷಗಳ ಬಳಿಕ ಸೂರ್ಯ, ಗುರು ಹಾಗೂ ರಾಹುಗಳ ಮೈತ್ರಿ, ಈ ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭ!
ಕನ್ಯಾ ರಾಶಿ: ಉದ್ಯೋಗದಲ್ಲಿನ ಯಶಸ್ಸಿನಿಂದ ನೀವು ಸಂತೋಷವಾಗಿರುತ್ತೀರಿ. ಹೊಸ ವಾಹನದ ಖುಷಿಯೂ ಸಿಗಲಿದೆ. ಮಕ್ಕಳ ಸಂಪೂರ್ಣ ಬೆಂಬಲ ಇರುತ್ತದೆ. ನಿಮ್ಮ ಜೀವನ ಸಂಗಾತಿಯೊಂದಿಗೆ, ನೀವು ಕುಟುಂಬದ ಕಲ್ಯಾಣಕ್ಕಾಗಿ ಕೆಲಸ ಮಾಡುವಿರಿ. ಮಾನಸಿಕ ನೆಮ್ಮದಿ ಇರುತ್ತದೆ.
ತುಲಾ ರಾಶಿ: ಇಂದು ಆತ್ಮವಿಶ್ವಾಸದಿಂದ ತುಂಬಿರುತ್ತೀರಿ. ಉನ್ನತ ಅಧಿಕಾರಿಗಳೊಂದಿಗೆ ಬಹಳ ಮಿತವಾಗಿ ಮಾತನಾಡುವುದು ಉತ್ತಮ. ಆರೋಗ್ಯದ ಬಗ್ಗೆ ಗಮನ ಕೊಡಿ. ಉದ್ಯೋಗದಲ್ಲಿ ಬದಲಾವಣೆ ಆಗಬಹುದು. ಜೀವನ ಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ.
ವೃಶ್ಚಿಕ ರಾಶಿ: ಐಟಿ ಮತ್ತು ಬ್ಯಾಂಕಿಂಗ್ ಉದ್ಯೋಗಗಳಿಗೆ ಶುಭ ದಿನ. ತಾಳ್ಮೆಯ ಕೊರತೆ ಇರುತ್ತದೆ. ಕೆಲಸ ಜಾಸ್ತಿ ಇರುತ್ತದೆ. ಸಂಭಾಷಣೆಯಲ್ಲಿ ಸಮತೋಲನದಿಂದಿರಿ. ಹಿರಿಯರೊಂದಿಗೆ ಮಾತನಾಡುವಾಗ ಮಾತಿನ ಮಾಧುರ್ಯವನ್ನು ಕಾಪಾಡಿಕೊಳ್ಳಿ. ಮಕ್ಕಳೊಂದಿಗೆ ಸ್ವಲ್ಪ ಸಮಯವನ್ನು ಕಳೆಯುವಿರಿ.
ಧನು ರಾಶಿ: ಹಣವೂ ಹೆಚ್ಚು ಖರ್ಚಾಗುತ್ತದೆ. ವ್ಯಾಪಾರದಲ್ಲಿ ಹೊಸ ಒಪ್ಪಂದಗಳಿಂದ ಪ್ರಗತಿಯ ಲಕ್ಷಣಗಳು ಕಂಡುಬರುತ್ತವೆ. ಕುಟುಂಬದ ಬೆಂಬಲ ಸಿಗಲಿದೆ. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಹೆಚ್ಚಿನ ಕುಟುಂಬದ ಜವಾಬ್ದಾರಿಗಳು ನಿಮ್ಮ ಮೇಲೆ ಬೀಳುತ್ತವೆ.
ಇದನ್ನೂ ಓದಿ : Shani Dev: ಇನ್ನು 3 ವರ್ಷ ಈ ರಾಶಿಗಳಿಗೆ ಜಾಕ್ಪಾಟ್.. ಶನಿ ನೀಡಲಿದ್ದಾನೆ ಸೌಭಾಗ್ಯ, ನಿರಂತರ ಲಕ್ಷ್ಮೀ ಕಟಾಕ್ಷ!
ಮಕರ ರಾಶಿ: ವ್ಯಾಪಾರ ಮಾಡುವವರು ವ್ಯಾಪಾರದಲ್ಲಿ ಬಯಸಿದ ಲಾಭವನ್ನು ಪಡೆಯುತ್ತಾರೆ. ಆರ್ಥಿಕ ಸ್ಥಿತಿ ಸದೃಢವಾಗಲಿದೆ. ವೈವಾಹಿಕ ಜೀವನದಲ್ಲಿ ಅತ್ಯಂತ ಸಂತೃಪ್ತಿಯ ದಿನವಾಗಿರುತ್ತದೆ. ಸ್ನೇಹಿತರಿಂದ ಕೆಲವು ಆದಾಯದ ಮೂಲಗಳು ಸಿಗಲಿವೆ. ಲಾಭ ಗಳಿಸುವಲ್ಲಿ ಯಶಸ್ವಿಯಾಗುತ್ತೀರಿ. ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗ ದೊರೆಯುವ ಲಕ್ಷಣಗಳಿವೆ.
ಕುಂಭ ರಾಶಿ: ದುಡಿಯುವ ಜನರು ತಮ್ಮ ಉದ್ಯೋಗದಲ್ಲಿ ಪ್ರಗತಿಗೆ ಅವಕಾಶಗಳನ್ನು ಪಡೆಯುತ್ತಾರೆ. ಆದಾಯ ಹೆಚ್ಚಲಿದೆ. ಯೋಜಿತವಲ್ಲದ ಖರ್ಚುಗಳು ಹೆಚ್ಚಾಗಬಹುದು. ಆತ್ಮವಿಶ್ವಾಸದಿಂದ ತುಂಬಿರುತ್ತದೆ. ವೈವಾಹಿಕ ಜೀವನದಲ್ಲಿ ಸಂಘರ್ಷದ ವಾತಾವರಣವಿರಬಹುದು. ನಿಮ್ಮ ಸಂಗಾತಿಯೊಂದಿಗೆ ಗೌರವಯುತವಾಗಿ ವರ್ತಿಸಿ.
ಮೀನ ರಾಶಿ: ಆರೋಗ್ಯ ಸುಧಾರಿಸಲಿದೆ. ಕುಟುಂಬದಲ್ಲಿ ಗೌರವ ಹೆಚ್ಚಾಗುವುದು. ವಯಸ್ಸಾದ ವ್ಯಕ್ತಿಯಿಂದ ಹಣವನ್ನು ಪಡೆಯಬಹುದು. ವ್ಯಾಪಾರದಲ್ಲಿ ಹೆಚ್ಚಳ ಕಂಡುಬರಲಿದೆ. ವ್ಯಾಪಾರಕ್ಕೆ ಸಂಬಂಧಿಸಿದ ದೊಡ್ಡ ವ್ಯಕ್ತಿಯನ್ನು ನೀವು ಭೇಟಿ ಮಾಡಬಹುದು. ಸಮಾಜದ ಒಳಿತಿಗಾಗಿ ದುಡಿಯುವವರಿಗೆ ಗೌರವ ಹೆಚ್ಚುತ್ತದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ವಲ್ಪ ಸಮಯ ಕಳೆಯುವಿರಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.