Weekly Horoscope: ಗುರು-ಶುಕ್ರ ಯುತಿ, ನವಪಂಚಮ ದೃಷ್ಟಿ ಈ ರಾಶಿಯವರಿಗೆ ಬಂಪರ್ ಲಾಭ

Weekly Horoscope September 16th to September 22nd: ಈ ವಾರದ ಮೊದಲ ದಿನವೇ ಗುರು-ಶುಕ್ರರು ಪರಸ್ಪರ ಎದುರುಬದುರಾಗಲಿದ್ದಾರೆ. ಇದರ ಪ್ರಭಾವದಿಂದ ಸೆಪ್ಟೆಂಬರ್ 16ರಿಂದ ಸೆಪ್ಟೆಂಬರ್ 22ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Sep 16, 2024, 07:40 AM IST
  • ಈ ವಾರ ಗುರು-ಶುಕ್ರರ ಮೈತ್ರಿ
  • ಗುರು-ಶುಕ್ರರಿಂದ ನವಪಂಚಮ ದೃಷ್ಟಿ
  • ಈ ವಾರ ನವಪಂಚಮ ದೃಷ್ಟಿಯ ಪ್ರಭಾವ ನಿಮ್ಮ ಮೇಲೆ ಹೇಗಿರಲಿದೆ
Weekly Horoscope: ಗುರು-ಶುಕ್ರ ಯುತಿ, ನವಪಂಚಮ ದೃಷ್ಟಿ  ಈ ರಾಶಿಯವರಿಗೆ ಬಂಪರ್ ಲಾಭ  title=

Varabhavishya in Kannada From September 16th to September 22nd: ಸೆಪ್ಟೆಂಬರ್ 15ರಂದು ದೇವಗುರು ಬೃಹಸ್ಪತಿ ಐಷಾರಾಮಿ ಜೀವನಕಾರಕ ಶುಕ್ರ ಇಬ್ಬರೂ ಎದುರುಬದುರಾಗಲಿದ್ದಾರೆ. ಇದನ್ನು ನವಪಂಚಮ ದೃಷ್ಟಿ ಎಂತಲೂ ಕರೆಯಲಾಗುತ್ತದೆ. ಪ್ರಬಲವಾದ ಗುರು-ಶುಕ್ರರ ಯುತಿಯಿಂದ ಈ ವಾರ ಕೆಲವರಿಗೆ ಶುಕ್ರ ದೆಸೆ ಆರಂಭವಾಗಲಿದೆ. ಮೂರು ರಾಶಿಯವರಿಗೆ ಕೈಹಾಕಿದ ಕೆಲಸಗಳಲ್ಲೆಲ್ಲಾ ಯಶಸ್ಸು, ಕೀರ್ತಿ ಲಭಿಸಿಸುವ ಸುವರ್ಣ ಸಮಯ ಎನ್ನಲಾಗುತ್ತಿದೆ. ಈ ವಾರ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ತಿಳಿಯಿರಿ. 

ಮೇಷ ರಾಶಿಯವರ ವಾರ ಭವಿಷ್ಯ (Aries Weekly Horoscope):  
ಈ ರಾಶಿಯವರಿಗೆ ಇದು ಅದೃಷ್ಟದಿಂದ ಕೂಡಿದ ವಾರ. ಯೋಜಿತ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವುದರಿಂದ ಯಶಸ್ಸು. ವಾರದ ಪೂರ್ವಾರ್ಧದಲ್ಲಿ ಸರ್ಕಾರಿ ಕೆಲಸಗಳಲ್ಲಿ ಯಶಸ್ಸು. ವಾರದ ಮಧ್ಯಭಾಗದ ಬಳಿಕ ಉದ್ಯೋಗಿಗಳಿಗೆ ಹಣಕಾಸಿನ ಮೂಲಗಳು ಹೆಚ್ಚಾಗಲಿದ್ದು ಆರ್ಥಿಕ ಸಮಸ್ಯೆಗಳು ಬಗೆಹರಿಯಲಿವೆ. ಒಟ್ಟಾರೆ ಈ ವಾರ ಎಲ್ಲಾ ಆಯಾಮಗಳಲ್ಲೂ ನಿಮಗೆ ಶುಭಪ್ರದವಾಗಿದೆ. 

ವೃಷಭ ರಾಶಿಯವರ ವಾರ ಭವಿಷ್ಯ (Taurus Weekly Horoscope):  
ವೃಷಭ ರಾಶಿಯವರಿಗೆ ಈ ವಾರ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. ಗುರು-ಶುಕ್ರರ ಮೈತ್ರಿ ನವಪಂಚದ ದೃಷ್ಟಿಯಿಂದ ಈ ರಾಶಿಯವರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿ ಕೈ ಹಿಡಿದ ಕೆಲಸಗಳಲ್ಲಿ ಭಾರೀ ಲಾಭವನ್ನು ಗಳಿಸುವರು. ಉದ್ಯಮಿಗಳು ಎದುರಾಳಿಗಳನ್ನು ಮಟ್ಟ ಹಾಕಿ ಉನ್ನತಿ ಹೊಂದುವರು. ದೀರ್ಘ ಕಾಲದ ನಿಮ್ಮ ಕನಸು ಕೈಗೂಡುವುದರಿಂದ ಸುಖ-ನೆಮ್ಮದಿ. ವ್ಯಾಪಾರ-ವ್ಯವಹಾರದಲ್ಲಿಯೂ ನಿರೀಕ್ಷಿತ ಯಶಸ್ಸು ಗಳಿಸುವಿರಿ. ಕುಟುಂಬದಲ್ಲಿ ಮಂಗಳ ಕಾರ್ಯಗಳು ಜರುಗುವ ಸಾಧ್ಯತೆ ಇದೆ.  

ಮಿಥುನ ರಾಶಿಯವರ ವಾರ ಭವಿಷ್ಯ (Gemini Weekly Horoscope):   
ಮಿಥುನ ರಾಶಿಯ ಜನರು ಈ ವಾರ ಮಿಶ್ರ ಫಲಗಳಿಂದ ಕೂಡಿದ ವಾರ. ವೃತ್ತಿ-ವ್ಯವಹಾರದಲ್ಲಿ ಮೈಯೆಲ್ಲಾ ಕಣ್ಣಾಗಿರಬೇಕು. ಇಲ್ಲವೇ ನಿಮ್ಮವರಿಂದಲೇ ಮೋಸ ಹೋಗುವಿರಿ. ವಾರದ ಆರಂಭದಲ್ಲಿ ಭೌತಿಕ ವಸ್ತುಗಳಿಗಾಗಿ ಹೆಚ್ಚಿನ ಹಣ ಖರ್ಚು ಮಾಡುವಿರಿ. ಆದಾಯಕ್ಕಿಂತ ಖರ್ಚು ಹೆಚ್ಚಾಗುವುದರಿಂದ ಹಣಕಾಸಿನ ಸಮಸ್ಯೆ ನಿಮ್ಮನ್ನು ಬಾಧಿಸಬಹುದು. ಆದಾಗ್ಯೂ, ಕೋಪಕ್ಕೆ ಕಡಿವಾಣ ಹಾಕುವುದರಿಂದ ಹೆಚ್ಚಿನ ಲಾಭವನ್ನು ಪಡೆಯುವಿರಿ. ಉದ್ಯೋಗಸ್ಥರಿಗೆ ಹೆಚ್ಚಿನ ಜವಾಬ್ದಾರಿಗಳು ಹೆಗಲೇರಬಹುದು. 

ಕರ್ಕಾಟಕ ರಾಶಿಯವರ ವಾರ ಭವಿಷ್ಯ (Cancer Weekly Horoscope): 
ಈ ರಾಶಿಯವರ ಜನರಿಗೆ ಹೊಸ ವಾರವು ಅಷ್ಟು ಶುಭಕರವಾಗಿಲ್ಲ. ಯಾವುದೇ ಕೆಲಸಗಳಲ್ಲಿ ಮುಂದುವರೆಯುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು. ವೃತ್ತಿ ಕ್ಷೇತ್ರದಲ್ಲಿ ಅವಮಾನದ ಸಂಭವವಿರಬಹುದು. ಇದನ್ನು ತಪ್ಪಿಸಲು ನಿಮ್ಮ ದುರ್ನಡತೆಗೆ ಕಡಿವಾಣ ಹಾಕಿ. ಯಾವುದೇ ವ್ಯವಹಾರದಲ್ಲಿ ಕಾಗದ ಪತ್ರಗಳನ್ನು ಸರಿಯಾಗಿ ಪರಿಶೀಲಿಸದೆ ಮುಂದುವರೆಯುವ ತಪ್ಪನ್ನು ಎಂದಿಗೂ ಮಾಡಬೇಡಿ. ವಾರದ ಉತ್ತರಾರ್ಧದಲ್ಲಿ ಸಮಸ್ಯೆಗಳು ಉಲ್ಬಣಿಸಬಹುದು. ಹೆಚ್ಚಿನ ಹಣ ಖರ್ಚಾಗುವುದರಿಂದ ಬಜೆಟ್ ಹಾಳಾಗಬಹುದು. 

ಇದನ್ನೂ ಓದಿ- Shani Gochar: ಮುಂದಿನ 196 ದಿನ ಈ ರಾಶಿಯವರಿಗೆ ಶನಿ ದಯೆಯಿಂದ ರಾಜಯೋಗ, ಕೈಯಿಟ್ಟಲ್ಲೆಲ್ಲಾ ಯಶಸ್ಸು ಗ್ಯಾರಂಟಿ 

ಸಿಂಹ ರಾಶಿಯವರ ವಾರ ಭವಿಷ್ಯ (Leo Weekly Horoscope):  
ಸಿಂಹ ರಾಶಿಯ ಜನರು ಈ ವಾರ ವೃತ್ತಿ ಕ್ಷೇತ್ರ ಹಾಗೂ ವೈಯಕ್ತಿಕ ಬದುಕು ಎರಡರಲ್ಲೂ ಒಳ್ಳೊಳ್ಳೆ ಅವಕಾಶಗಳನ್ನು ಪಡೆಯಬಹುದು. ಇದನ್ನು ಸದುಪಯೋಗ ಪಡಿಸಿಕೊಳ್ಳುವುದರಿಂದ ಜೀವನದಲ್ಲಿ ಪ್ರಗತಿಯ ಹೊಸ ಹಾದಿ ತೆರೆಯಲಿದೆ. ಹಣಕಾಸಿನ ಮೂಲಗಳು ಹೆಚ್ಚಾಗುವುದರಿಂದ ಸುಖ. ಈ ವಾರ ಶತ್ರುಗಳ ವಿರುದ್ಧ ಜಯ ಸಾಧಿಸುವುದರಿಂದ ಮನಸ್ಸಿಗೆ ನೆಮ್ಮದಿ. ವಾರದ ಉತ್ತರಾರ್ಧದಲ್ಲಿ ಕುಟುಂಬಸ್ಥರೊಂದಿಗೆ ಹೊರಹೋಗುವುದಕ್ಕೆ ಯೋಜನೆ ರೂಪಿಸುವಿರಿ. ಸಂಬಂಧಗಳ ದೃಷ್ಟಿಯಿಂದ ಈ ವಾರ ಅತ್ಯುತ್ತಮವಾಗಿದೆ. 

ಕನ್ಯಾ ರಾಶಿಯವರ ವಾರ ಭವಿಷ್ಯ (Virgo Weekly Horoscope): 
ಈ ವಾರ ಕನ್ಯಾ ರಾಶಿಯ ಜನರಿಗೆ ಶುಭ. ನಿಮ್ಮ ಜೀವನದಲ್ಲಿ ಎದುರಾಗಿದ್ದ ಸಮಸ್ಯೆಗಳಿಂದ ಮುಕ್ತಿ ದೊರೆತು ಉದ್ಯೋಗದಲ್ಲಿ ಬಡ್ತಿ, ವ್ಯವಹಾರದಲ್ಲಿ ಬಂಪರ್ ಲಾಭವನ್ನು ಕಾಣುವಿರಿ. ದೀರ್ಘ ಸಮಯದಿಂದ ಸ್ಥಗಿತಗೊಂಡಿದ್ದ ಕೆಲಸಗಳಲ್ಲಿ ಭಾರೀ ಯಶಸ್ಸನ್ನು ಗಳಿಸುವಿರಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಯಶಸ್ಸು. ಸಂಬಂಧಿಕರೊಂದಿಗೆ ಮೂಡಿದ್ದ ಭಿನ್ನಾಭಿಪ್ರಾಯಗಳು ಸರಿದು ಸಂತೋಷದ ಹೊಸ ಚಿಲುಮೆ ಹೊರಹೊಮ್ಮಲಿದೆ. 

ತುಲಾ ರಾಶಿಯವರ ವಾರ ಭವಿಷ್ಯ (Libra Weekly Horoscope): 
ಈ ವಾರ ತುಲಾ ರಾಶಿಯವರಿಗೆ ಏರಿಳಿತಗಳಿಂದ ಕೂಡಿದ ವಾರ. ಆದಾಗ್ಯೂ, ನವಪಂಚಮ ದೃಷ್ಟಿಯ ಪ್ರಭಾವದಿಂದ ಮನಸಿನಲ್ಲಿ ಸಕಾರಾತ್ಮಕತೆ ಹೆಚ್ಚಾಗಿ ಎಲ್ಲವೂ ತಹಬದಿಗೆ ಬರಲಿದೆ. ವಾರದ ಪೂರ್ವಾರ್ಧದಲ್ಲಿ ಪ್ರೀತಿಪಾತ್ರರೊಡನೆ ಬಿರುಕು ಹೊಂದುವ ಸಾಧ್ಯತೆಯಿದೆ. ವಿರೋಧಿಗಳು ನಿಮ್ಮ ಕೆಲಸದಲ್ಲಿ ಅಡೆತಡೆಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಾರೆ. ಆದರೆ, ವಾರದ ಮಧ್ಯ ಭಾಗದ ಬಳಿಕ ನಿಮ್ಮೆಲ್ಲಾ ಸಮಸ್ಯೆಗಳು ಮಂಜಿನಂತೆ ಕರಗಿ ಒಳ್ಳೆಯ ಸುಮಧುರ ಕ್ಷಣಗಳನ್ನು ಅನುಭವಿಸುವಿರಿ. ವ್ಯಾಪಾರಸ್ಥರಿಗೆ ಯಾವುದಾದರೂ ದೊಡ್ಡ ಆರ್ಡರ್ ಕೈ ಸೇರುವ ನಿರೀಕ್ಷೆಯಿದೆ. 

ವೃಶ್ಚಿಕ ರಾಶಿಯವರ ವಾರ ಭವಿಷ್ಯ (Scorpio Weekly Horoscope):  
ಈ ರಾಶಿಯವರಿಗೆ ಇದು ಮಧ್ಯಮ ಫಲಪ್ರದವಾದ ವಾರ. ಕೆಲವರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ವೈಯಕ್ತಿಕ ಭಿನ್ನಾಭಿಪ್ರಾಯಗಳಾಗಿ ಬದಲಾಗಬಹುದು. ಇದಕ್ಕೆ ಅವಕಾಶ ನೀಡಬೇಡಿ. ಕುಟುಂಬಸ್ಥರೊಂದಿಗೆ ಅನಾವಶ್ಯಕ ವಾದಗಳನ್ನು ತಪ್ಪಿಸಿ. ವೃತ್ತಿ ಬದುಕಿಗೆ ಸಂಬಂಧಿಸಿದಂತೆ ಹಿತೈಷಿಗಳ ಸಲಹೆಗೆ ಕಿವಿಗೋಡಿ. ಉದ್ಯೋಗದಲ್ಲಿ ಎಲ್ಲವೂ ನೀವು ಅಂದುಕೊಂಡಂತೆ ಆಗದಿರಬಹುದು. ಆದರೆ, ಫಲಾಫಲವನ್ನು ದೇವರಿಗೆ ಬಿಟ್ಟು ನಿಮ್ಮ ಪ್ರಯತ್ನವನ್ನು ಮುಂದುವರೆಸಿ. ವಾರದ ದ್ವಿತೀಯಾರ್ಧದಲ್ಲಿ ಹೆಚ್ಚು ಶುಭ ಫಲಗಳು ನಿಮಗಾಗಿ ಕಾದಿವೆ. 

ಇದನ್ನೂ ಓದಿ- Lizard Falling Meaning: ದೇಹದ ಈ ಭಾಗದಲ್ಲಿ ಹಲ್ಲಿ ಬಿದ್ದರೆ ನಿಮ್ಮ ದಾರಿಯಲ್ಲಿ ಬಹಳಷ್ಟು ಸಂಪತ್ತು ಹರಿಯುತ್ತದೆ

ಧನು ರಾಶಿಯವರ ವಾರ ಭವಿಷ್ಯ (Sagittarius Weekly Horoscope):  
ಈ ವಾರ ಗುರು-ಶುಕ್ರರ ಮೈತ್ರಿಯಿಂದ ಈ ರಾಶಿಯವರಿಗೆ ವೃತ್ತಿ, ವ್ಯವಹಾರ ಮತ್ತು ವೈಯಕ್ತಿಕ ಕೆಲಸಗಳಲ್ಲಿ ಭಾರೀ ಯಶಸ್ಸು ಲಭಿಸಲಿದೆ. ವರಎಡ ಮೊದಲಾರ್ಥದಲ್ಲಿ ಕೆಲವು ಕೆಲಸಗಳು ನಿಮ್ಮಿಚ್ಚೆಯಂತೆ ಆಗದಿರಬಹುದು. ಆದರೆ, ವಾರದ ಮಧ್ಯಭಾಗದಲ್ಲಿ ನೀವು ನಿಮ್ಮ ಗುರಿ ತಲುಪುವಿರಿ.  ಉದ್ಯೋಗಿಗಳಿಗೆ ಹೆಚ್ಚುವರಿ ಆದಾಯದ ಮೂಲಗಳನ್ನು ರಚಿಸಲಾಗುತ್ತದೆ. ಇದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಕೆಲಸದ ಸ್ಥಳದಲ್ಲಿ ಅಧಿಕಾರಿಗಳು ನಿಮ್ಮ ಕೆಲಸದಿಂದ ತೃಪ್ತರಾಗುತ್ತಾರೆ. 

ಮಕರ ರಾಶಿಯವರ ವಾರ ಭವಿಷ್ಯ (Capricorn Weekly Horoscope):  
ಈ ರಾಶಿಯ ಜನರಿಗೆ ಇದು ಅತ್ಯಂತ ಮಂಗಳಕಾರ ವಾರ ಎಂತಲೇ ಹೇಳಬಹುದು. ವಾರದ ಆರಂಭದಿಂದ, ನೀವು ಕೈ ಹಾಕುವ ಪ್ರತಿ ಕೆಲಸದಲ್ಲೂ ನಿಮ್ಮ ಸಂಬಂಧಿಕರು ಮತ್ತು ಹಿತೈಷಿಗಳ ಸಹಕಾರ ದೊರೆಯಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸದ ಸಾಮರ್ಥ್ಯಕ್ಕೆ ಅಧಿಕಾರಿಗಳು ಮನ್ನಣೆ ನೀಡುವರು. ಕೆಲವು ಪ್ರಮುಖ ಜವಾಬ್ದಾರಿಗಳನ್ನು ಪಡೆಯುವ ಮೂಲಕ ನಿಮ್ಮ ಗೌರವ ಹೆಚ್ಚಾಗುತ್ತದೆ. ವಾರದ ಮಧ್ಯದಲ್ಲಿ ಪ್ರಯಾಣವು ಲಾಭದಾಯಕವಾಗಿರುತ್ತದೆ. ಅದೃಷ್ಟದ ಬೆಂಬಲದಿಂದ ಹಣಕಾಸಿನ ಸ್ಥಿತಿ ಸುಧಾರಿಸಲಿದೆ. 

ಕುಂಭ ರಾಶಿಯವರ ವಾರ ಭವಿಷ್ಯ (Aquarius Weekly Horoscope):  
ಕುಂಭ ರಾಶಿಯವರಿಗೆ ಈ ವಾರ ತುಂಬಾ ಶುಭಕರವಾಗಿರಲಿದೆ.  ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ನೀವು ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ಪರಿಸ್ಥಿತಿಗಳು  ನಿಮಗೆ ಅನುಕೂಲಕರವಾಗಿರುತ್ತದೆ.  ನಿಮ್ಮ ವ್ಯವಹಾರವನ್ನು ವಿಸ್ತರಿಸಲು ಯೋಚಿಸುತ್ತಿದ್ದರೆ ಈ ವಾರ ಅದಕ್ಕೆ ಶುಭ. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರಯತ್ನಿಸುತ್ತಿರುವವರಿಗಾಗಿ ಇದು ಅತ್ಯುತ್ತಮ ವಾರ. ಶಾಶ್ವತ ಆಸ್ತಿಯನ್ನು ಖರೀದಿಸುವ ನಿಮ್ಮ ಬಹುದಿನದ ಆಸೆ ಕೈಗೂಡಲಿದೆ. ದೀರ್ಘ ಸಮಯದಿಂದ ಸ್ಥಗಿತಗೊಂಡಿರುವ ಕೆಲಸಗಳು ವೇಗವನ್ನು ಪಡೆಯಲಿವೆ. 

ಮೀನ ರಾಶಿಯವರ ವಾರ ಭವಿಷ್ಯ (Pisces Weekly Horoscope): 
ಮೀನಾ ರಾಶಿಯವರೇ ಈ ವಾರ ನಿಮ್ಮ ಸೋಮಾರಿತನವೆ ನಿಮ್ಮ ಶತ್ರು. ಯಾವುದೇ ಕೆಲಸದಲ್ಲಿ ಸೋಮಾರಿತನ ಅಥವಾ ನಿರ್ಲಕ್ಷ್ಯವು ನಿಮ್ಮ ಜೀವನದಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡಬಹುದು. ವಾರದ ಆರಂಭದಲ್ಲಿ, ನೀವು ಕೆಲಸದ ನಿಮಿತ್ತ ದೂರದೂರಿಗೆ ಪ್ರಯಾಣಿಸಬೇಕಾಗಬಹುದು. ಈ ವೇಳೆ ಋತುಮಾನದ ಕಾಯಿಲೆಗಳ ಬಗ್ಗೆ ಎಚ್ಚರಿಕೆ ವಹಿಸಿ. ಬೇರೆಯವರನ್ನು ಅತಿಯಾಗಿ ನಂಬುವುದನ್ನು ತಪ್ಪಿಸಿ. ಇಲ್ಲವೇ ಮೋಸ ಹೋಗಬಹುದು. ವಾರದ ದ್ವಿತೀಯಾರ್ಧದಲ್ಲಿ ಖರ್ಚುಗಳು ಹೆಚ್ಚಾಗಬಹುದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News