ಬೆಂಗಳೂರು: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಂಗಳ ಗ್ರಹದ ರಾಶಿ ಬದಲಾವಣೆಯು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಮಂಗಳನು ಮುಂದಿನ ತಿಂಗಳು ಮಾರ್ಚ್ 13, 2023 ರಂದು ಮಿಥುನ ರಾಶಿಗೆ ಪ್ರವೇಶಿಸಲಿದ್ದಾನೆ. ಈ ಸಂದರ್ಭದಲ್ಲಿ ಕೆಲವು ರಾಶಿಯವರ ಜೀವನದಲ್ಲಿ ಸುಖ-ಸಂತೋಷಕ್ಕೆ ಪಾರವೇ ಇರುವುದಿಲ್ಲ ಎಂದು ಬಣ್ಣಿಸಲಾಗುತ್ತಿದೆ. ಹೋಳಿ ಬಳಿಕ ಮಂಗಳನ ಕೃಪೆಯಿಂದ ನಾಲ್ಕು ರಾಶಿಯವರ ಜೀವನದಲ್ಲಿ ಸುಖ-ಸಂತೋಷದ ಜೊತೆಗೆ ಹಣದ ಹೊಳೆಯೇ ಹರಿಯಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...
ಹೋಳಿ ಬಳಿಕ ಈ 4 ರಾಶಿಯವರ ಜೀವನದಲ್ಲಿ ಭಾರೀ ಅದೃಷ್ಟ ತರಲಿದ್ದಾನೆ ಮಂಗಳ:
ವೃಷಭ ರಾಶಿ:
ಹೋಳಿ ಬಳಿಕ ಮಂಗಳ ರಾಶಿ ಪರಿವರ್ತನೆಯು ಈ ರಾಶಿಯವರ ಸಂಪತ್ತನ್ನು ಹೆಚ್ಚಿಸಲಿದೆ. ಈ ಸಮಯದಲ್ಲಿ ನೀವು ಭೂಮಿ, ವಾಹನ ಖರೀದಿಸುವ ಯೋಗವೂ ಇದೆ. ಆದರೆ, ವಾಹನ ಚಾಲನೆ ವೇಳೆ ಎಚ್ಚರಿಕೆಯಿಂದ ಇರಿ. ನಿಮ್ಮ ಆರೋಗ್ಯದ ಬಗ್ಗೆಯೂ ಕೊಂಚ ಗಮನಹರಿಸುವುದು ಉತ್ತಮ.
ಇದನ್ನೂ ಓದಿ- ಈ 2 ದಿನ ಯಾವುದೇ ಕಾರಣಕ್ಕೂ ತುಳಸಿ ಗಿಡಕ್ಕೆ ನೀರೆರೆಯಬೇಡಿ
ಸಿಂಹ ರಾಶಿ:
ಹೋಳಿ ಬಳಿಕ ಮಂಗಳನ ರಾಶಿ ಬದಲಾವಣೆಯು ಸಿಂಹ ರಾಶಿಯವರಿ ಬಂಪರ್ ಪ್ರಯೋಜನವನ್ನು ನೀಡಲಿದೆ. ಉದ್ಯೋಗಸ್ಥರಿಗೆ ಪ್ರಮೋಷನ್ ಸಾಧ್ಯತೆ ಇದೆ. ನೀವು ಹಿಂದೆ ಮಾಡಿದ ಹೂಡಿಕೆಗಳಿಂದ ಲಾಭವಾಗಲಿದೆ. ಹೊಸ ವ್ಯಾಪಾರ-ವ್ಯವಹಾರ ಆರಂಭಿಸಲು ಇದು ಸೂಕ್ತ ಸಮಯ.
ಮಕರ ರಾಶಿ:
ಮಂಗಳ ಸಂಚಾರದಿಂದ ಈ ರಾಶಿಯವರಿಗೆ ಆದಾಯ ಹೆಚ್ಚಾಗಲಿದೆ. ವಿದೇಶದಲ್ಲಿ ಉದ್ಯೋಗ ಬಯಸುತ್ತಿರುವವರಿಗೆ ನಿಮ್ಮ ಆಸೆ ಶೀಘ್ರದಲ್ಲೇ ಈಡೇರಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಉತ್ತಮ ಸಮಯ. ನಿಮ್ಮನ್ನು ಬಹುದಿನಗಳಿಂದ ಕಾಡುತ್ತಿದ್ದ ಆರೋಗ್ಯ ಸಮಸ್ಯೆಗಳು ಈ ಸಮಯದಲ್ಲಿ ಬಗೆಹರಿಯಲಿವೆ.
ಇದನ್ನೂ ಓದಿ- Hindu New Year: ಶೀಘ್ರದಲ್ಲಿಯೇ ಹೊಸ ಸಂವತ್ಸರ ಆರಂಭ, 30 ವರ್ಷಗಳ ಬಳಿಕ ಶುಭ ಸಂಯೋಗ, ಈ ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭ
ಮೀನ ರಾಶಿ:
ಮಂಗಳ ರಾಶಿ ಪರಿವರ್ತನೆಯು ಈ ರಾಶಿಯವರಿಗೆ ಪೂರ್ವಿಕರ ಆಸ್ತಿಯಿಂದ ಲಾಭವನ್ನು ತರಲಿದೆ. ವ್ಯಾಪಾರಸ್ಥರಿಗೆ ಉತ್ತಮ ಸಮಯವಾಗಿದೆ. ಉದ್ಯೋಗಸ್ಥರು ವೃತ್ತಿ ಜೀವನದಲ್ಲಿ ಹೊಸ ಉತ್ತುಂಗವನ್ನು ಏರುವ ಸಾಧ್ಯತೆ ಇದೆ. ಈ ರಾಶಿಯವರಿಗೆ ಹೊಸ ವಾಹನ, ಮನೆ ಖರೀದಿ ಯೋಗವೂ ಇದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.