ದಿನಭವಿಷ್ಯ 03-09-2024: ಇಂದು ಪೂರ್ವಾ ನಕ್ಷತ್ರ, ಸಿದ್ಧ ಯೋಗ, ಈ ರಾಶಿಯವರಿಗೆ ಎಚ್ಚರಿಕೆ ಅಗತ್ಯ

Today Horoscope 03rd September 2024: ಮಂಗಳವಾರದ ಈ ದಿನವೂ ಅಮಾವಾಸ್ಯೆ ತಿಥಿ ಇರಲಿದ್ದು ಇಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Sep 3, 2024, 07:20 AM IST
  • ಕರ್ಕಾಟಕ ರಾಶಿಯವರಿಗೆ ಇಂದು ಆದಾಯದ ಮೂಲಗಳು ಹೆಚ್ಚಾಗಲಿದ್ದು ನಿಮಗೆ ಸೌಕರ್ಯಗಳನ್ನು ಹೆಚ್ಚಿಸಲಿದೆ.
  • ಕನ್ಯಾ ರಾಶಿಯವರಿಗೆ ಮಧ್ಯಮ ಫಲಪ್ರದವಾಗಿರಲಿದೆ.
  • ಮಕರ ರಾಶಿಯವರಿಗೆ ಇಂದು ವೃತ್ತಿಯಲ್ಲಿ, ವೈಯಕ್ತಿಕ ಬದುಕಿನಲ್ಲಿ ಕೆಲವು ತೊಂದರೆಗಳು ಎದುರಾಗಬಹುದು
ದಿನಭವಿಷ್ಯ 03-09-2024:  ಇಂದು ಪೂರ್ವಾ ನಕ್ಷತ್ರ, ಸಿದ್ಧ ಯೋಗ, ಈ ರಾಶಿಯವರಿಗೆ ಎಚ್ಚರಿಕೆ ಅಗತ್ಯ  title=

Mangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಮಂಗಳವಾರದ ಈ ದಿನವೂ ಅಮಾವಾಸ್ಯೆ ತಿಥಿ ಇರಲಿದೆ. ಇಂದು ಪೂರ್ವಾ ನಕ್ಷತ್ರ, ಸಿದ್ಧ ಯೋಗವು ನಿಮ್ಮ ರಾಶಿಗೆ ಏನು ಫಲ ನೀಡಲಿದೆ ತಿಳಿಯಿರಿ. 

ಮೇಷ ರಾಶಿಯವರ ಭವಿಷ್ಯ (Aries Horoscope): 
ಈ ರಾಶಿಯವರಿಗೆ ಇಂದು ಅದೃಷ್ಟದ ದಿನ. ಕುಟುಂಬಸ್ಥರೊಂದಿಗೆ ಕೆಲವು ಶುಭ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ ದೊರೆಯಬಹುದು. ಆದಾಗ್ಯೂ, ಕೆಲಸದಲ್ಲಿ ಯಾವುದೇ ಆತುರದ ನಿರ್ಧಾರಗಳನ್ನು ಕೈಗೊಳ್ಳಬೇಡಿ.  ವಿದ್ಯಾರ್ಥಿಗಳು ಅಧ್ಯಯನದತ್ತ ಗಮನಹರಿಸಿ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ಈ ರಾಶಿಯ ಜನರಿಗೆ ಇಂದು  ಮಿಶ್ರ ಫಲಗಳಿಂದ ಕೂಡಿದ ದಿನ.  ಇಂದು ಹಣಕಾಸಿನ ವಿಚಾರದಲ್ಲಿ ಹಿರಿಯರ ಸಲಹೆಯನ್ನು ಅನುಸರಿಸಿ ಮುಂದುವರೆಯುವುದು ಒಳ್ಳೆಯದು. ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹಣವನ್ನು ಹೂಡಿಕೆ ಮಾಡಲು ನೀವು ಯೋಜಿಸುತ್ತೀರಿ. ವ್ಯವಹಾರದಲ್ಲಿ, ತರಾತುರಿಯಲ್ಲಿ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಬೇಕಾಗುತ್ತದೆ. ಇಲ್ಲವೇ ಭಾರೀ ನಷ್ಟ.  

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಇಂದು ನೀವು ಬುದ್ಧಿವಂತಿಕೆ ಮತ್ತು ವಿವೇಚನೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಹೆಚ್ಚಿನ ಲಾಭ ಪಡೆಯುತ್ತೀರಿ. ನಿಗದಿತ ಸಮಯದಲ್ಲಿ ಯೋಜಿತ ಕಾರ್ಯಗಳನ್ನು ಪೂರ್ಣಗೊಳಿಸಲು ನಿಮ್ಮ ಕೆಲಸದ ವೇಗದ ಬಗ್ಗೆ ನೀವು ಸಂಪೂರ್ಣ ಗಮನ ಹರಿಸಬೇಕು. ಬುದ್ದಿವಂತಿಕೆಯಿಂದ ಸರ್ಕಾರದ ಯೋಜನೆಗಳ ಸಂಪೂರ್ಣ ಲಾಭವನ್ನು ನೀವು ಪಡೆಯುತ್ತೀರಿ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಇಂದು ಆದಾಯದ ಮೂಲಗಳು ಹೆಚ್ಚಾಗಲಿದ್ದು ನಿಮಗೆ ಸೌಕರ್ಯಗಳನ್ನು ಹೆಚ್ಚಿಸಲಿದೆ. ಆದರೆ, ದುಂದು ವೆಚ್ಚಕ್ಕೆ ಕಡಿವಾಣ ಹಾಕದಿದ್ದರೆ ಆರ್ಥಿಕ ಮುಗ್ಗಟ್ಟು ಎದುರಾಗಬಹುದು. ಪ್ರೀತಿಯ ಜೀವನದಲ್ಲಿ, ಕೆಲವು ಅಪಸ್ವರಗಳನ್ನು ಕಾಣಬಹುದು. ಈ ಬಗ್ಗೆ ನೀವು ಜಾಗರೂಕರಾಗಿರಬೇಕು. ಕೋಪದ ಕೈಗೆ ಬುದ್ದಿ ಕೊಡುವ ತಪ್ಪನ್ನು ಮಾಡಬೇಡಿ. 

ಇದನ್ನೂ ಓದಿ- ಶತಭಿಷಾ ನಕ್ಷತ್ರಕ್ಕೆ ಶನಿಯ ಪ್ರವೇಶ: ಈ ರಾಶಿಗೆ ಹೆಜ್ಜೆ ಹೆಜ್ಜೆಗೂ ಸಂಕಷ್ಟ, ಆರ್ಥಿಕ ಬಿಕ್ಕಟ್ಟು

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಇಂದು ನೀವು ಬಹಳ ಚಿಂತನಶೀಲವಾಗಿ ನಿರ್ಧಾರ ತೆಗೆದುಕೊಳ್ಳುವ ದಿನವಾಗಿರುತ್ತದೆ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕೈಗೊಳ್ಳುವ ನಿಮ್ಮ ನಿರ್ಧಾರವನ್ನು ಸಲಹೆಗಳನ್ನು ಸ್ವಾಗತಿಸಲಾಗುತ್ತದೆ. ಕೌಟುಂಬಿಕ ಜೀವನದಲ್ಲಿ ಮೂಡಿದ್ದ ಭಿನ್ನಾಭಿಪ್ರಾಯಗಳು ಕಡಿಮೆಯಾಗಿ ಸಂತೋಷ ಇರುತ್ತದೆ. ಬೇರೆಡೆ ಸಿಲುಕಿರುವ ನಿಮ್ಮ ಹಣ ಕೈ ಸೇರಲಿದೆ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಇಂದು ಈ ರಾಶಿಯವರಿಗೆ ಮಧ್ಯಮ ಫಲಪ್ರದವಾಗಿರಲಿದೆ.  ಕೆಲಸದ ಸ್ಥಳದಲ್ಲಿ ನಿಮ್ಮ ಶತ್ರುಗಳನ್ನು ಸುಲಭವಾಗಿ ಸೋಲಿಸಲು ನಿಮಗೆ ಸಾಧ್ಯವಾಗುತ್ತದೆ. ಅನಗತ್ಯ ವೆಚ್ಚಗಳನ್ನು ತಪ್ಪಿಸಬೇಕು. ಇಲ್ಲದಿದ್ದರೆ,  ನಷ್ಟವನ್ನು ಅನುಭವಿಸಬಹುದು. ಕುಟುಂಬದಲ್ಲಿ ಯಾವುದೇ ಸಮಸ್ಯೆ ಇದ್ದರೆ ಕುಳಿತು ಮಾತನಾಡುವ ಮೂಲಕ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ಇಂದು ನಿಮ್ಮ ಪ್ರಭಾವ ಹೆಚ್ಚಾಗಲಿದ್ದು, ಆದಾಯದಿಂದ ವೈಭವವೂ ಹೆಚ್ಚಾಗಲಿದೆ. ಆದಾಗ್ಯೂ, ಯಾವುದೇ ಪ್ರಮುಖ ವ್ಯವಹಾರ ಸಂಬಂಧಿತ ವಿಷಯದಲ್ಲಿ ನೀವು ಒಪ್ಪಂದಗಳನ್ನು ನೀಡುವುದನ್ನು ತಪ್ಪಿಸಬೇಕು. ನಿಮ್ಮ ಎದುರಾಳಿಗಳು ನಿಮಗೆ ಕಿರುಕುಳ ನೀಡಲು ಪ್ರಯತ್ನಿಸುತ್ತಾರೆ, ನಿಮ್ಮ ಬುದ್ಧಿವಂತಿಕೆಯಿಂದ ನೀವು ಸುಲಭವಾಗಿ ಇದರಿಂದ ಹೊರಬರಲು ಸಾಧ್ಯವಾಗುತ್ತದೆ.  

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಇಂದು ಈ ರಾಶಿಯವರಿಗೆ ಮಿಶ್ರ ಫಲಿತಾಂಶಗಳು ಬರಲಿವೆ. ಉದ್ಯೋಗಸ್ತರಿಗೆ ಹೊಸ ಜವಾಬ್ದಾರಿಗಳು ಹೆಗಲೇರುವ ಸಾಧ್ಯತೆ ಇದೆ. ಇದು ನಿಮ್ಮ ಮನಸ್ಸಿನ ಸಂತೋಷವನ್ನು ಹೆಚ್ಚಿಸಲಿದೆ. ನಿಮ್ಮ ಮಕ್ಕಳ ಕಡೆಯಿಂದ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ದೊರೆಯುವುದು.  

ಇದನ್ನೂ ಓದಿ- ಪೂಜೆ ವೇಳೆ ಗಂಟೆಯನ್ನ ಏಕೆ ಬಾರಿಸುತ್ತಾರೆ ಗೊತ್ತೆ..? ತಿಳಿಯದೇ ಬಾರಿಸುವವರು ಹೆಚ್ಚು...

ಧನು ರಾಶಿಯವರ ಭವಿಷ್ಯ (Sagittarius Horoscope):  
ಇಂದು ನಿಮಗೆ ಸಾಮಾನ್ಯ ದಿನವಾಗಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ವಿರೋಧಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ವ್ಯವಹಾರದಲ್ಲಿ ಉತ್ತಮ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಸ್ನೇಹಿತರೊಡನೆ ಮುಕ್ತವಾಗಿ ಮಾತನಾಡಬೇಕಾಗುತ್ತದೆ. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಈ ರಾಶಿಯವರಿಗೆ ಇಂದು ವೃತ್ತಿಯಲ್ಲಿ, ವೈಯಕ್ತಿಕ ಬದುಕಿನಲ್ಲಿ ಕೆಲವು ತೊಂದರೆಗಳು ಎದುರಾಗಬಹುದು. ಆದರೂ, ವ್ಯವಹಾರದಲ್ಲಿ ನೀವು ಆರ್ಥಿಕ ಲಾಭವನ್ನು ಪಡೆಯುತ್ತಿರುವಂತೆ ತೋರುತ್ತಿದೆ. ಇತರ ಕೆಲಸಗಳಲ್ಲಿ ಉತ್ತಮ ಹೆಸರು ಗಳಿಸುವಿರಿ. ಇಂದು ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ಕ್ಷೀಣತೆ ಉಂಟಾಗಬಹುದು, ಅದು ನಿಮಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಆರ್ಥಿಕ ದೃಷ್ಟಿಯಿಂದ ಇಂದು ನಿಮಗೆ ಉತ್ತಮ ದಿನವಾಗಲಿದೆ. ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರ ಖ್ಯಾತಿಯು ಎಲ್ಲೆಡೆ ಹರಡುತ್ತದೆ. ಕುಟುಂಬದಲ್ಲಿ ಕೆಲವು ಶುಭ ಮತ್ತು ಮಂಗಳಕರ ಕಾರ್ಯಕ್ರಮಗಳನ್ನು ಆಯೋಜಿಸುವ ಸಾಧ್ಯತೆಯಿದೆ. ಯಾವುದೇ ಅನಾವಶ್ಯಕ ವಾದ-ವಿವಾದಗಳಲ್ಲಿ ಸಿಲುಕುವುದನ್ನು ತಪ್ಪಿಸಿ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಈ ರಾಶಿಯವರು ಇಂದು ತುಂಬಾ ಎಚ್ಚರಿಕೆಯಿಂದ ಇರಬೇಕಾದ ದಿನ.  ಸುಖಾಸುಮ್ಮನೆ ಬೇರೆಯವರ ವಿಷಯದಲ್ಲಿ ಮೂಗು ತೂರಿಸುವ ಬುದ್ದಿಯನ್ನು ಬಿಡಿ. ವೃತ್ತಿ ರಂಗದಲ್ಲಿ  ಕೆಲಸಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇದ್ದಲ್ಲಿ, ನಿಮ್ಮ ಅನುಭವದಿಂದ ನೀವು ಅದನ್ನು ಪೂರ್ಣಗೊಳಿಸುತ್ತೀರಿ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News