ODI ಕ್ರಿಕೆಟ್ ಪಂದ್ಯದಲ್ಲಿ ಒಂದೇ ಒಂದು ಬಾರಿಯೂ ಸೋಲು ಕಾಣದ ಮೂವರು ನಾಯಕರು ಯಾರು ಗೊತ್ತಾ?

Captains Never Lost a Single match in ODI cricket: ಈ ಲೇಖನದಲ್ಲಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಒಂದೇ ಒಂದು ಬಾರಿಯೂ ಸೋಲು ಕಾಣದ ಮೂವರು ನಾಯಕರ ಬಗ್ಗೆ ಮಾಹಿತಿ ನೀಡಲಿದ್ದೇವೆ.

Written by - Bhavishya Shetty | Last Updated : Sep 6, 2023, 10:26 AM IST
    • ಭಾರತ ಎಂಎಸ್ ಧೋನಿಯಂತಹ ವರ್ಚಸ್ವಿ ನಾಯಕತ್ವವನ್ನು ಕಂಡಿದೆ
    • 100 ಪರ್ಸೆಂಟ್ ವಿನ್ನಿಂಗ್ ಪರ್ಸಂಟೇಜ್ ಹೊಂದಿರುವ ಮೂವರು ಕ್ರಿಕೆಟಿಗರು ಯಾರು?
    • ಒಂದು ಬಾರಿಯೂ ಸೋಲು ಕಾಣದ ಮೂವರು ನಾಯಕರ ಬಗ್ಗೆ ಇಲ್ಲಿದೆ ಮಾಹಿತಿ
ODI ಕ್ರಿಕೆಟ್ ಪಂದ್ಯದಲ್ಲಿ ಒಂದೇ ಒಂದು ಬಾರಿಯೂ ಸೋಲು ಕಾಣದ ಮೂವರು ನಾಯಕರು ಯಾರು ಗೊತ್ತಾ?  title=
captains who have never lost a single match

Captains Never Lost a Single match in ODI cricket: ಭಾರತದಲ್ಲಿ ಕ್ರಿಕೆಟ್ ಕೇವಲ ಕ್ರೀಡೆಯಾಗಿ ಉಳಿದಿಲ್ಲ. ಬದಲಿಗೆ ಅದೊಂದು ಭಾವನೆ, ಗೌರವ, ಹೆಮ್ಮೆಯ ಪ್ರತೀಕವಾಗಿದೆ. ಇನ್ನು ಈ ಕ್ರಿಕೆಟ್ ಲೋಕ ಕಪಿಲ್ ದೇವ್’ರಿಂದ ಹಿಡಿದು ಎಂಎಸ್ ಧೋನಿಯಂತಹ ಆಟಗಾರರ ವರ್ಚಸ್ವಿ ನಾಯಕತ್ವವನ್ನು ಕಂಡಿದೆ. ಆದರೆ ಈ ನಾಯಕರ ನಡುವೆ, ಒಂದೇ ಒಂದು ಕ್ರಿಕೆಟ್ ಪಂದ್ಯವನ್ನು ಸೋಲದೆ, 100 ಪರ್ಸೆಂಟ್ ವಿನ್ನಿಂಗ್ ಪರ್ಸಂಟೇಜ್ ಹೊಂದಿರುವ ಮೂವರು ಕ್ರಿಕೆಟಿಗರು ಯಾರೆಂದು ನಿಮಗೆ ತಿಳಿದಿದೆಯೇ?

ನಾವಿಂದು ಈ ಲೇಖನದಲ್ಲಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಒಂದೇ ಒಂದು ಬಾರಿಯೂ ಸೋಲು ಕಾಣದ ಮೂವರು ನಾಯಕರ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಇದನ್ನೂ ಓದಿ: ಕ್ರಿಕೆಟ್ ಆಡುತ್ತಿದ್ದಂತೆ ಮಗಳ ಸಾವಿನ ಸುದ್ದಿ ಕೇಳಿದ ಏಷ್ಯಾದ ಶ್ರೇಷ್ಠ ಬ್ಯಾಟ್ಸ್ಮನ್!

ಅನಿಲ್ ಕುಂಬ್ಳೆ:

2002 ರಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ODI ಸರಣಿಯಲ್ಲಿ ಭಾರತವನ್ನು ಮುನ್ನಡೆಸುವ ಅವಕಾಶವನ್ನು ಅನಿಲ್ ಕುಂಬ್ಳೆ ಪಡೆದಿದ್ದರು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಕೂಡ ಸಾಧಿಸಿತ್ತು. ಭಾರತ ಗುರಿ ಬೆನ್ನತ್ತಲು ನೆರವಾದ ಸಚಿನ್ ತೆಂಡೂಲ್ಕರ್ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು, ಇನ್ನು ಅನಿಲ್ ಕುಂಬ್ಳೆ ಈ ಏಕದಿನ ಪಂದ್ಯವನ್ನಷ್ಟೇ ನಾಯಕನಾಗಿ ಮುನ್ನಡೆಸಿದ್ದು, ಅದರಲ್ಲಿ ಗೆಲುವು ಕಂಡಿದ್ದಾರೆ.

ಅಜಿಂಕ್ಯಾ ರಹಾನೆ:

 2015 ರಲ್ಲಿ ಭಾರತದ ಜಿಂಬಾಬ್ವೆ ಪ್ರವಾಸದ ಸಮಯದಲ್ಲಿ, ಎಂ ಎಸ್ ಧೋನಿ ವಿಶ್ರಾಂತಿ ಪಡೆದಿದ್ದರಿಂದ ಅಜಿಂಕ್ಯಾ ರಹಾನೆ ಅವರಿಗೆ ನಾಯಕತ್ವವನ್ನು ನೀಡಲಾಯಿತು. ಈ ಪಂದ್ಯದಲ್ಲಿ ಭಾರತ ತಂಡವು ಸಂಪೂರ್ಣ ಪ್ರಾಬಲ್ಯವನ್ನು ಪ್ರದರ್ಶಿಸಿತು. ಅಷ್ಟೇ ಅಲ್ಲದೆ, ಸರಣಿಯನ್ನು 3-0 ರಿಂದ ಕ್ಲೀನ್ ಸ್ವೀಪ್ ಮಾಡಿತ್ತು. ರಹಾನೆ ಸ್ವತಃ ಬ್ಯಾಟಿಂಗ್’ನಲ್ಲಿ ಘನ ಪ್ರದರ್ಶನ ನೀಡಿದ್ದರು.  

ಗೌತಮ್ ಗಂಭೀರ್:

ಟೀಂ ಇಂಡಿಯಾದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್’ಗೆ ಹೆಸರುವಾಸಿಯಾಗಿರುವ ಗೌತಮ್ ಗಂಭೀರ್ ODIಗೆ ಅಲ್ಪಾವಧಿಯ ನಾಯಕತ್ವ ವಹಿಸಿದ್ದರು. 2010 ಮತ್ತು 2011 ರಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ವಹಿಸಲಾಗಿತ್ತು. ಧೋನಿ ಅನುಪಸ್ಥಿತಿಯ ಕಾರಣ, ಗಂಭೀರ್ ಈ ಅವಕಾಶವನ್ನು ಪಡೆದಿದ್ದರು. ಈ ಸಂದರ್ಭದಲ್ಲಿ ನ್ಯೂಜಿಲೆಂಡ್ ತಂಡವನ್ನು 5-0 ಮುನ್ನಡೆಯೊಂದಿಗೆ ವೈಟ್‌ ವಾಶ್ ಮಾಡಿದ್ದರು. ಹೀಗೆ ಗೌತಮ್ ಗಂಭೀರ್ ಭಾರತೀಯ ನಾಯಕನಾಗಿ 100% ವಿನ್ನಿಂಗ್ ಪರ್ಸಂಟೇಜ್ ದಾಖಲೆಯನ್ನು ಹೊಂದಿದ್ದಾರೆ.

ಇದನ್ನೂ ಓದಿ: ‘ಇಂಡಿಯಾ’ ಹೆಸರು ಬದಲಾಯಿಸಲು ಸೂಚಿಸಿದ್ದೇ ಈ ಕ್ರಿಕೆಟಿಗನ ಮಡದಿ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News