ಭಾರತ-ಪಾಕ್ ಪಂದ್ಯದ ಬಗ್ಗೆ ದೊಡ್ಡ ಭವಿಷ್ಯ! ಈ ತಂಡ 2021ರ ಟಿ-20 ವಿಶ್ವಕಪ್ ಗೆಲ್ಲುತ್ತದಂತೆ..!

2021ನೇ ಸಾಲಿನ ಟಿ-20 ವಿಶ್ವಕಪ್ ನಲ್ಲಿ ಭಾರತ ಮತ್ತು ಸಂಪ್ರದಾಯಿಕ ಎದುರಾಳಿ ಪಾಕಿಸ್ತಾನ ನಡುವಿನ ಪಂದ್ಯವು ಭಾರೀ ಕುತೂಹಲವನ್ನು ಮೂಡಿಸಿದೆ.

Written by - Puttaraj K Alur | Last Updated : Oct 17, 2021, 11:56 AM IST
  • 2021ನೇ ಸಾಲಿನ ಟಿ-20 ವಿಶ್ವಕಪ್ ಟೂರ್ನಿಗೆ ಇಂದಿನಿಂದ ಅದ್ದೂರಿ ಚಾಲನೆ
  • ಅ.24 ರಂದು ಸಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯ ಆಡಲಿರುವ ಟೀಂ ಇಂಡಿಯಾ
  • ಭಾರತ-ಪಾಕ್ ನಡುವೆ ಪಂದ್ಯದಲ್ಲಿ ಯಾರಿಗೆ ಗೆಲುವು ಸಿಗುತ್ತದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ
ಭಾರತ-ಪಾಕ್ ಪಂದ್ಯದ ಬಗ್ಗೆ ದೊಡ್ಡ ಭವಿಷ್ಯ! ಈ ತಂಡ 2021ರ ಟಿ-20 ವಿಶ್ವಕಪ್ ಗೆಲ್ಲುತ್ತದಂತೆ..! title=
2021ನೇ ಸಾಲಿನ ಟಿ-20 ವಿಶ್ವಕಪ್ ಟೂರ್ನಿ

ನವದೆಹಲಿ: ಐಪಿಎಲ್ ಟೂರ್ನಿ ಮುಕ್ತಾಯದ ಬಳಿಕ ಇದೀಗ ಟಿ-20 ವಿಶ್ವಕಪ್(ICC Men's T20 World Cup) ಹವಾ ಜೋರಾಗುತ್ತಿದೆ. 5 ವರ್ಷಗಳ ನಂತರ ಟಿ-20 ವಿಶ್ವಕಪ್ ಮತ್ತೆ ನಡೆಯುತ್ತಿದೆ. ಅಕ್ಟೋಬರ್ 17 ಅಂದರೆ ಇಂದಿನಿಂದ ಯುಎಇಯಲ್ಲಿ ಚುಟುಕು ಕ್ರಿಕೆಟ್ ಕಲರವ ಶುರುವಾಗುತ್ತಿದೆ. ಇಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಒಮನ್ ಮತ್ತು ಪಪುವಾ ನ್ಯೂಗಿನಿ ಮುಖಾಮುಖಿಯಾಗುತ್ತಿವೆ. ಮತ್ತೊಂದು ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸ್ಕಾಟ್ಲೆಂಡ್ ಸೆಣಸಾಡಲಿವೆ.

2021ನೇ ಸಾಲಿನ ಟಿ-20 ವಿಶ್ವಕಪ್ ನಲ್ಲಿ ಭಾರತ ಮತ್ತು ಸಂಪ್ರದಾಯಿಕ ಎದುರಾಳಿ ಪಾಕಿಸ್ತಾನ(India-Pakistan Match) ನಡುವಿನ ಪಂದ್ಯವು ಭಾರೀ ಕುತೂಹಲವನ್ನು ಮೂಡಿಸಿದೆ. ಅ.24ರಂದು ನಡೆಯಲಿರುವ ಈ ಪಂದ್ಯವನ್ನು ವೀಕ್ಷಿಸಲು ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಎರಡು ತಂಡಗಳು ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತವೆ. ಉಭಯ ತಂಡಗಳ ನಡುವಿನ ಸೆಣಸಾಟವನ್ನುಇಡೀ ವಿಶ್ವವೇ ನೋಡುತ್ತದೆ. ವಿಶ್ವಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ಪ್ರತಿಬಾರಿಯೂ ಭಾರತವೇ ಗೆಲುವು ಸಾಧಿಸಿದ ದಾಖಲೆ ಹೊಂದಿದೆ. ಆದರೆ ಈ ಬಾರಿ ಯಾವ ತಂಡ ಗೆಲ್ಲಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಈ ಮಧ್ಯೆ ಈ ಪಂದ್ಯವನ್ನು ಯಾವ ತಂಡ ಗೆಲ್ಲಲಿದೆ ಎಂಬುದರ ಬಗ್ಗೆ ದೊಡ್ಡ ಮುನ್ಸೂಚನೆಯೊಂದು ಸಿಕ್ಕಿದೆ.

ಇದನ್ನೂ ಓದಿ: 8ನೇ ಬಾರಿ ಸ್ಯಾಫ್ ಕಪ್‌ ಫುಟ್ಬಾಲ್ ಚಾಂಪಿಯನ್ ಆದ ಭಾರತ: ಮೆಸ್ಸಿ ದಾಖಲೆ ಸರಿಗಟ್ಟಿದ ಛೆಟ್ರಿ

ಯಾರಿಗೆ ಸಿಗಲಿದೆ ಗೆಲುವು..?

ಭಾರತ ಮತ್ತು ಪಾಕಿಸ್ತಾನದ ತಂಡಗಳು(IND vs Pak) ವಿಶ್ವಕಪ್‌ನಲ್ಲಿ ಮುಖಾಮುಖಿಯಾದಾಗಲೆಲ್ಲಾ ಯಾರು ಗೆಲ್ಲುತ್ತಾರೆಂಬುದರ ಬಗ್ಗೆಯೇ ಬಹುತೇಕರ ಚಿತ್ತ ನೆಟ್ಟಿರುತ್ತದೆ. ಈ ಬಗ್ಗೆ ಮಾತನಾಡಿರುವ ಭಾರತೀಯ ತಂಡದ ಮಾಜಿ ಆಲ್‌ರೌಂಡರ್ ಅಜಿತ್ ಅಗರ್ಕರ್(Ajit Agarkar), ‘ಟೀಂ ಇಂಡಿಯಾದ ಫಾರ್ಮ್ ಮತ್ತು ಕಾರ್ಯತಂತ್ರವನ್ನು ಪರಿಗಣಿಸಿ ಪಾಕಿಸ್ತಾನ ತಂಡಕ್ಕೆ ಆ ಮಟ್ಟದ ಸವಾಲು ನೀಡಲು ಸಾಧ್ಯವಾಗದಿರಬಹುದು. ಯುವ ಆಟಗಾರರನ್ನು ಹೊಂದಿರುವ ಭಾರತ ತಂಡ ಈ ಬಾರಿ ವಿಶ್ವಕಪ್ ಗೆಲ್ಲುವ ಫೆವರಿಟ್ ತಂಡವಾಗಿದೆ’ ಎಂದು ಹೇಳಿದ್ದಾರೆ.

‘ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾದಾಗ ನಿರೀಕ್ಷೆಗಳು ಯಾವಾಗಲೂ ಅಧಿಕವಾಗಿರುತ್ತದೆ. ಆದರೆ ಟೀಂ ಇಂಡಿಯಾ(Team India)ದ ಪ್ರಸ್ತುತ ಪ್ರದರ್ಶನ ನೋಡಿದರೆ ಪಾಕಿಸ್ತಾನಕ್ಕೆ ಹೆಚ್ಚಿನ ಸವಾಲು ನೀಡಲು ಸಾಧ್ಯವಾಗುವುದಿಲ್ಲವೆಂದು ನಾನು ಭಾವಿಸುತ್ತೇನೆ. ಆದಾಗ್ಯೂ ನಾವು ಪಾಕ್ ತಂಡವನ್ನು ಲಘುವಾಗಿ ಪರಿಗಣಿಸಬಾರದು. ಏಕೆಂದರೆ ಕ್ರಿಕೆಟ್ ಒಂದು ಮೋಜಿನ ಆಟವಾಗಿದೆ ಮತ್ತು ಯಾವುದೇ ಕ್ಷಣದಲ್ಲಿ ಇಲ್ಲಿ ನಮ್ಮ ನಿರೀಕ್ಷೆಗಳು ಉಲ್ಟಾಪಲ್ಟಾ ಆಗುತ್ತವೆ. ವಿಶೇಷವಾಗಿ ಟಿ-20 ಮಾದರಿಯಲ್ಲಿ ಗೆಲುವು ಯಾರಿಗೆ ಸಿಗುತ್ತದೆ ಎಂದು ಹೇಳುವುದು ತುಸು ಕಷ್ಟವೇ’ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: ರಾಹುಲ್ ದ್ರಾವಿಡ್ ಭಾರತ ತಂಡದ ಕೋಚ್ ಆಗಿದ್ದಕ್ಕೆ ಗರಂ ಆದ್ರಾ ವಿರಾಟ್ ಕೊಹ್ಲಿ...!

2007ರ ಚೊಚ್ಚಲ ವಿಶ್ವಕಪ್ ನೆನಪು

2007ರ ಟಿ-20 ವಿಶ್ವಕಪ್‌(ICC Men's T20 World Cup)ನಲ್ಲಿ ಭಾರತವು ಪಾಕಿಸ್ತಾನವನ್ನು ಫೈನಲ್‌ನಲ್ಲಿ ಸೋಲಿಸುವ ಮೂಲಕ ಚೊಚ್ಚಲ ಪ್ರಶಸ್ತಿಯನ್ನು ಎತ್ತಿಹಿಡಿದಿತ್ತು. ‘2007ರ ಟಿ-20 ವಿಶ್ವಕಪ್‌ನ ಸಂಪೂರ್ಣ ಪಂದ್ಯಾವಳಿಯು ನಮ್ಮ ಕನಸಿನ ಪ್ರವಾಸವಾಗಿತ್ತು. ಯುವ ಭಾರತ ತಂಡವು ಪಾಕಿಸ್ತಾನದ ವಿರುದ್ಧವೂ ಸಾಧನೆ ಮಾಡಬಹುದೆಂದು ನಾವು ಭಾವಿಸಿರಲಿಲ್ಲ. ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯವು ಯಾವಾಗಲೂ ಭಾವನೆಗಳ ಏರಿಳಿತವನ್ನು ತರುತ್ತದೆ. ಇದು ವಿಶ್ವಕಪ್‌ನಲ್ಲಿ ಬಹು ನಿರೀಕ್ಷಿತ ಪಂದ್ಯಗಳಲ್ಲಿ ಒಂದಾಗಿದೆ’ ಅಂತಾ ಅಗರ್ಕರ್ ಹೇಳಿದ್ದಾರೆ.  

ಅಕ್ಟೋಬರ್ 24ರಂದು ಗೆಲುವಿಗಾಗಿ ಹೋರಾಟ

ಟೀಂ ಇಂಡಿಯಾ ಅಕ್ಟೋಬರ್ 24 ರಂದು ಟಿ-20 ವಿಶ್ವಕಪ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನ್(IND vs Pak T20 World Cup) ವಿರುದ್ಧ ಆಡಲಿದೆ. ಪಾಕ್ ತಂಡಕ್ಕೆ ಮತ್ತೊಮ್ಮೆ ಸೋಲಿನ ರುಚಿ ತೋರಿಸಲು ಟೀಂ ಇಂಡಿಯಾ ಕಾತುರವಾಗಿದೆ. ಇಲ್ಲಿಯವರೆಗೆ ನಡೆದ ವಿಶ್ವಕಪ್ ಪಂದ್ಯಗಳಲ್ಲಿ ಪಾಕಿಸ್ತಾನದ ತಂಡವು ಭಾರತವನ್ನು ಸೋಲಿಸಲು ಸಾಧ್ಯವಾಗಿಲ್ಲ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News