Cauvery water dispute: ಕಾವೇರಿ ವಿವಾದದ ಬಗ್ಗೆ ಎಂ.ಎಸ್.ಧೋನಿ ಹೇಳಿದ್ದೇನು..?

Cauvery Water Sharing Dispute: ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಕಾವೇರಿ ನದಿ ನೀರಿನ ವಿವಾದ ತಾರಕಕ್ಕೇರಿರುವ ನಡುವೆ ಈ ಹಿಂದೆ ಟೀಂ ಇಂಡಿಯಾದ ಮಾಜಿ ನಾಯಕ, ಕೂಲ್ ಕ್ಯಾ‍ಪ್ಟನ್ ಖ್ಯಾತಿಯ ಎಂ.ಎಸ್.ಧೋನಿ ನೀಡಿದ್ದ ಹೇಳಿಕೆ ಸಖತ್ ಸೌಂಡ್ ಮಾಡುತ್ತಿದೆ. ​

Written by - Puttaraj K Alur | Last Updated : Sep 27, 2023, 07:57 PM IST
  • ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಕಾವೇರಿ ನದಿ ನೀರಿನ ವಿವಾದ ತಾರಕಕ್ಕೇರಿದೆ
  • ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡದಂತೆ ಆಗ್ರಹಿಸಿ ಸೆ.29ರಂದು ಕರ್ನಾಟಕ ಬಂದ್‍ಗೆ ಕರೆ
  • ಕಾವೇರಿ ವಿವಾದ ವಿಚಾರವಾಗಿ ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ ಹೇಳಿದ್ದೇನು..?
Cauvery water dispute: ಕಾವೇರಿ ವಿವಾದದ ಬಗ್ಗೆ ಎಂ.ಎಸ್.ಧೋನಿ ಹೇಳಿದ್ದೇನು..?  title=
ಎಂ.ಎಸ್.ಧೋನಿ ಹೇಳಿದ್ದೇನು..?

ಬೆಂಗಳೂರು: ತಮಿಳುನಾಡು ಮತ್ತು ಕರ್ನಾಟಕದ ನಡುವಿನ ಕಾವೇರಿ ನದಿ ನೀರಿನ ಹಂಚಿಕೆ ವಿವಾದವು ದಶಕಗಳಿಂದಲೂ ಬಗೆಹರಿದಿಲ್ಲ. ಉಭಯ ರಾಜಗಳ ನಡುವಿನ ಈ ವಿವಾದ ಹಲವಾರು ವರ್ಷಗಳಿಂದ ಜೀವಂತವಾಗಿದೆ. ಕಾವೇರಿ ನೀರು ಬಿಡುವಂತೆ ಸದಾ ಕ್ಯಾತೆ ತೆಗೆಯುವ ತಮಿಳುನಾಡು ಕರ್ನಾಟಕಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸೆ.28ರಿಂದ ಅಕ್ಟೋಬರ್‌ 15ರವರೆಗೆ ಪ್ರತಿದಿನವೂ ತಮಿಳುನಾಡಿಗೆ 3000 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಬೇಕೆಂದು ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ನೀಡಿದೆ.

ಹೀಗಾಗಿ ಪ್ರತಿಬಾರಿಯೂ ಹಿನ್ನೆಡೆ ಅನುಭವಿಸುವ ಕರ್ನಾಟಕಕ್ಕೆ ನೀರು ಬಿಡುವ ಅನಿವಾರ್ಯತೆ ಎದುರಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡದಂತೆ ರೈತರು ಮತ್ತು ವಿವಿಧ ಕನ್ನಡಪರ ಸಂಘಟನೆಗಳು ಬೆಂಗಳೂರು ಬಂದ್ ಆಚರಿಸಿದ್ದು, ಸೆ.29ರಂದು ಕರ್ನಾಟಕ ಬಂದ್‍ಗೆ ಕರೆ ನೀಡಿವೆ. ಕಾವೇರಿ ನದಿ ನೀರಿಗಾಗಿ ಉಗ್ರ ಹೋರಾಟ ನಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ: ಏಷ್ಯನ್ ಗೇಮ್ಸ್‌ನಲ್ಲಿ ವಿಶ್ವ ದಾಖಲೆಯೊಂದಿಗೆ ಶೂಟಿಂಗ್‌ನಲ್ಲಿ ಮೊದಲ ಚಿನ್ನದ ಪದಕ

ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಕಾವೇರಿ ನದಿ ನೀರಿನ ವಿವಾದ ತಾರಕಕ್ಕೇರಿರುವ ನಡುವೆ ಈ ಹಿಂದೆ ಟೀಂ ಇಂಡಿಯಾದ ಮಾಜಿ ನಾಯಕ, ಕೂಲ್ ಕ್ಯಾ‍ಪ್ಟನ್ ಖ್ಯಾತಿಯ ಎಂ.ಎಸ್.ಧೋನಿ ನೀಡಿದ್ದ ಹೇಳಿಕೆ ಸಖತ್ ಸೌಂಡ್ ಮಾಡುತ್ತಿದೆ. ಕಾವೇರಿ ಜಲ ವಿವಾದ ವಿಚಾರದಲ್ಲಿ ಧೋನಿ ನಡೆ ಪ್ರಸಂಶನೀಯ ಎನಿಸಿಕೊಂಡಿದೆ. 2018ರಲ್ಲಿ ಕಾವೇರಿ ಹೋರಾಟ ಬೆಂಬಲಿಸಿ ತಮಿಳುನಾಡು ಪರ ಕಪ್ಪು ಪಟ್ಟಿ ಧರಿಸಿ ಆಡುವಂತೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿಗೆ ಒತ್ತಾಯಿಸಲಾಗಿತ್ತು.

ಉಭಯ ರಾಜ್ಯಗಳ ಜಲವಿವಾದದ ವಿಚಾರವಾಗಿ ಧೋನಿ ನೀಡಿದ ಹೇಳಿಕೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ‘ನಾನು ಇಲ್ಲಿ ಆಟ ಆಡುವುದಕ್ಕೆ ಬಂದವನು. ಹೀಗಾಗಿ ನಾನು ಯಾವುದೇ ಕಾರಣಕ್ಕೂ ಕರ್ನಾಟಕದ ವಿರೋಧಿಯಾಗುವುದಿಲ್ಲ. ನಾನು ಇಡೀ ದೇಶದ ಸ್ವತ್ತು’ ಅಂತಾ ಹೇಳುವ ಮೂಲಕ ಧೋನಿ ಪ್ರಬುದ್ಧತೆ ತೋರಿದ್ದರು. ಧೋನಿ ಅವರ ಅಂದಿನ ಹೇಳಿಕೆ  ಇಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ: 12 ವರ್ಷಗಳ ನಂತರ ವಿಶ್ವಕಪ್ ನಲ್ಲಿ ವಿಜಯ ಪತಾಕೆ ಹಾರಿಸಲಿದೆಯಂತೆ ಭಾರತ ! ಯಾವ ಲೆಕ್ಕಾಚಾರದಲ್ಲಿ ಅನ್ನುವ ಮಾಹಿತಿ ಇಲ್ಲಿದೆ !

ಕಾವೇರಿ ನೀರಿಗಾಗಿ ಹೋರಾಟ ನಡೆಸುತ್ತಿರುವ ರೈತರಿಗೆ ಕನ್ನಡಪರ ಸಂಘಟನೆಗಳು ಮತ್ತು ಸ್ಯಾಂಡಲ್​ವುಡ್​ ನಟರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇದಲ್ಲದೆ ಭಾರತ ತಂಡದ ಆಟಗಾರ ಕೆ.ಎಲ್.ರಾಹುಲ್​ ಸಹ ಅನ್ನದಾತರಿಗೆ ಬೆಂಬಲ ಸೂಚಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News