ಐಪಿಎಲ್ 2024ರಲ್ಲಿ ಈ ತಂಡದ ಮಾರ್ಗದರ್ಶಕರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ರಾಹುಲ್ ದ್ರಾವಿಡ್!

Rahul Dravid in IPL-2024: ಅನುಭವಿ ರಾಹುಲ್ ದ್ರಾವಿಡ್ ಐಪಿಎಲ್ 2024ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ. ವರದಿಗಳ ಪ್ರಕಾರ ದ್ರಾವಿಡ್ ಈ ತಂಡದೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.

Written by - Bhavishya Shetty | Last Updated : Nov 25, 2023, 07:41 PM IST
    • ರಾಹುಲ್ ದ್ರಾವಿಡ್ ಅವರ ಮುಖ್ಯ ಕೋಚ್ ಒಪ್ಪಂದದ ಅವಧಿ ಅಂತ್ಯ
    • IPL-2024ರಲ್ಲಿ ದ್ರಾವಿಡ್ ಅವರು ಈ ತಂಡಕ್ಕೆ ಮಾರ್ಗದರ್ಶಕರಾಗಿ ಸೇರಿಕೊಳ್ಳಲಿದ್ದಾರೆ
    • ಒಪ್ಪಿಗೆ ಸಿಕ್ಕರೆ ಮಾತ್ರ ಲಕ್ನೋ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ
ಐಪಿಎಲ್ 2024ರಲ್ಲಿ ಈ ತಂಡದ ಮಾರ್ಗದರ್ಶಕರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ರಾಹುಲ್ ದ್ರಾವಿಡ್!  title=
Rahul Dravid

Rahul Dravid in IPL-2024: ವಿಶ್ವಕಪ್’ನಲ್ಲಿ ಟೀಂ ಇಂಡಿಯಾದ ಸೋಲಿನೊಂದಿಗೆ ರಾಹುಲ್ ದ್ರಾವಿಡ್ ಅವರ ಮುಖ್ಯ ಕೋಚ್ ಒಪ್ಪಂದದ ಅವಧಿಯೂ ಅಂತ್ಯಗೊಂಡಿದೆ. ಇದೀಗ ಮುಂದಿನ ಹಂತದಲ್ಲಿ ತಂಡಕ್ಕೆ ಇವರೇ ಕೋಚ್ ಆಗಲಿದ್ದಾರಾ? ಅಥವಾ ಬೇರೆ ದಿಗ್ಗಜರನ್ನು ಆ ಸ್ಥಾನಕ್ಕೇರಿಸಲು ಸಿದ್ಧತೆಗಳು ನಡೆಯುತ್ತಿವೆಯೋ ಎಂಬುದನ್ನು ಕಾದುನೋಡಬೇಕಿದೆ. ಈ ಎಲ್ಲದರ ಮಧ್ಯೆ IPL-2024ರಲ್ಲಿ ದ್ರಾವಿಡ್ ಅವರು ಈ ತಂಡಕ್ಕೆ ಮಾರ್ಗದರ್ಶಕರಾಗಿ ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಟೈಟಾನ್ಸ್ ತೊರೆಯುವುದು ಖಚಿತ! ಈ ಪ್ಲೇಯರ್’ಗೆ ಸಿಗಲಿದೆ ಗುಜರಾತ್ ತಂಡದ ನಾಯಕತ್ವ

ಅನುಭವಿ ರಾಹುಲ್ ದ್ರಾವಿಡ್ ಐಪಿಎಲ್ 2024ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ. ವರದಿಗಳ ಪ್ರಕಾರ ದ್ರಾವಿಡ್ ಈ ತಂಡದೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಆದರೆ, ಟೀಂ ಇಂಡಿಯಾ ಜೊತೆಗಿನ ಕೋಚ್ ಅವಧಿ ಮುಂದುವರಿಕೆಯ ಬಗ್ಗೆ ದ್ರಾವಿಡ್ ಮತ್ತು ಬಿಸಿಸಿಐ ನಡುವೆ ಯಾವುದೇ ಚರ್ಚೆ ನಡೆದಿಲ್ಲ ಎನ್ನಲಾಗಿದೆ. ಹೀಗಿರುವಾಗ ಒಪ್ಪಿಗೆ ಸಿಕ್ಕರೆ ಮಾತ್ರ ಲಕ್ನೋ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.

ಭಾರತದ ಮಾಜಿ ನಾಯಕ, 2021ರ ಟಿ 20 ವಿಶ್ವಕಪ್ ನಂತರ ಪುರುಷರ ತಂಡದ ಮುಖ್ಯ ಕೋಚ್ ಜವಾಬ್ದಾರಿಯನ್ನು ವಹಿಸಿಕೊಂಡರು. ಅಲ್ಲಿಂದ ಈ ವರ್ಷದ ವಿಶ್ವಕಪ್‌’ವರೆಗೆ 2 ವರ್ಷಗಳ ಒಪ್ಪಂದ ಮುಂದುವರೆದಿತ್ತು. ರವಿಶಾಸ್ತ್ರಿ ಅಧಿಕಾರದ ನಂತರ, ಆಗಿನ ಬಿಸಿಸಿಐ ಅಧಿಕಾರಿಗಳಾದ ಸೌರವ್ ಗಂಗೂಲಿ ಮತ್ತು ಜಯ್ ಶಾ, ದ್ರಾವಿಡ್ ಅವರನ್ನು ಓಲೈಸಿ ಅಧಿಕಾರ ನೀಡಿದ್ದರು. ದ್ರಾವಿಡ್ ಮಾರ್ಗದರ್ಶನದಲ್ಲಿ ಭಾರತ ಯಾವುದೇ ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗದಿದ್ದರೂ, ದ್ವಿಪಕ್ಷೀಯ ಸರಣಿಯಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿದೆ.

ಇದನ್ನೂ ಓದಿ: ಏಕದಿನ, ಟಿ20, ಟೆಸ್ಟ್… ಮೂರು ಸ್ವರೂಪಕ್ಕೂ ಇನ್ಮುಂದೆ 24 ವರ್ಷದ ಈ ಪ್ಲೇಯರ್ ಕ್ಯಾಪ್ಟನ್

ಇನ್ನೊಂದೆಡೆ, ಬಿಸಿಸಿಐ ದ್ರಾವಿಡ್ ಅವರನ್ನು ಭೇಟಿಯಾಗಿ ಮುಂದಿನ ಯೋಜನೆಗಳ ಬಗ್ಗೆ ಚರ್ಚಿಸಲು ಯೋಜಿಸಿದೆ. ಆದರೆ ಅವರು ತಮ್ಮ ಒಪ್ಪಂದವನ್ನು ವಿಸ್ತರಿಸುವುದು ಕೊಂಚ ಕಷ್ಟವೇ… ಟೀಮ್ ಇಂಡಿಯಾದ ಕಠಿಣ ವೇಳಾಪಟ್ಟಿ ಮತ್ತು ಮುಖ್ಯ ಕೋಚ್ ಆಗಿ ಆಗಾಗ್ಗೆ ಪ್ರಯಾಣಿಸುವುದರಿಂದ ಕುಟುಂಬದ ಜೊತೆ ಕಾಲ ಕಳೆಯಲು ಸಾಧ್ಯವಾಗುತ್ತಿಲ್ಲವಂತೆ. ಇದೇ ಕಾರಣದಿಂದ ಮತ್ತೆ ಕೋಚ್ ಆಗಿ ತಂಡ ಸೇರುವುದಿಲ್ಲ ಎಂದು ಅವರು ಹೇಳಿರುವುದಾಗಿ ಕೆಲ ವರದಿಗಳು ಬಹಿರಂಗಪಡಿಸಿವೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/-l9UZYUp33o?si=_K0khSS1BDeQ7ypt

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News