ನವದೆಹಲಿ: ಅಹಮದಾಬಾದ್ ನಲ್ಲಿನ ಮೋಟೆರಾ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2021 ಟೂರ್ನಿಯ 22 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಂಡವು ದೆಹಲಿ ಕ್ಯಾಪಿಟಲ್ಸ್ ವಿರುದ್ಧ ರೋಚಕ ಗೆಲುವನ್ನು ಸಾಧಿಸಿದೆ.
ಇದನ್ನೂ ಓದಿ: Covid 19 ಸೋಂಕಿನಿಂದ ಬಳಲುತ್ತಿರುವ R Ashwin ಕುಟುಂಬ, ಐಪಿಎಲ್ನಿಂದ ವಿರಾಮ ಪಡೆದ ಕ್ರಿಕೆಟಿಗ
You cannot miss this bonhomie 💙❤️#VIVOIPL 🤗 @DelhiCapitals 🤜🏽🤛🏽 @RCBTweets #DCvRCB pic.twitter.com/QjUYZAWBOM
— IndianPremierLeague (@IPL) April 27, 2021
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ದೆಹಲಿ ತಂಡವು ಆರಂಭದಲ್ಲಿ ಬೆಂಗಳೂರಿನ ಮೂರು ವಿಕೆಟ್ ಗಳನ್ನು ಕಬಳಿಸುವ ಮೂಲಕ ತನ್ನ ನಿರ್ಧಾರ ಸರಿ ಎನ್ನುವಂತೆ ಮಾಡಿತ್ತು, ಆದರೆ ಎಬಿಡಿ ವಿಲಿಯರ್ಸ್ ಕೇವಲ 42 ಎಸೆತಗಳಲ್ಲಿ ಭರ್ಜರಿ ಐದು ಸಿಕ್ಸರ್ ಹಾಗೂ ಮೂರು ಬೌಂಡರಿ ಗಳಿಸುವ ಮೂಲಕ ಪಂದ್ಯದ ಚಿತ್ರವನ್ನೇ ಬದಲಿಸಿದರು. ಕೊನೆಗೆ ಆರ್ಸಿಬಿ ತಂಡವು 20 ಓವರ್ ಗಳಲ್ಲಿ ಐದು ವಿಕೆಟ್ ಗಳ ನಷ್ಟಕ್ಕೆ 171 ರನ್ ಗಳನ್ನು ಗಳಿಸಿತು.
ಇದನ್ನೂ ಓದಿ: IPL RCB vs CSK: ಮೈದಾನದಲ್ಲಿ ರವೀಂದ್ರ ಜಡೇಜಾರನ್ನು ಹೆದರಿಸಿದ Mohammed Siraj, ವಿಡಿಯೋ ವೈರಲ್
Winning by 1 run, we must talk about how this was an equally poised contest. But we’re glad we came on top. Cricket won again tonight! 🙌🏻
We move on to the next Challenge. 👊🏻#PlayBold #WeAreChallengers #IPL2021 #DCvRCB #DareToDream pic.twitter.com/71q396R8EE
— Royal Challengers Bangalore (@RCBTweets) April 27, 2021
ಬೆಂಗಳೂರು ತಂಡವು ನೀಡಿದ 172 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ದೆಹಲಿ ತಂಡವು ಆರಂಭದಲ್ಲಿ ಶಿಖರ್ ಧವನ್, ಸ್ಟೀವ್ ಸ್ಮಿತ್, ಪೃಥ್ವಿ ಷಾ ರ ವಿಕೆಟ್ ಗಳ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ರಿಶಬ್ ಪಂತ್ ಹಾಗೂ ಶಿಮೊರಾನ್ ಹೆತ್ಮಾರ್ ಅವರು ಕ್ರಮವಾಗಿ 58 ಹಾಗೂ 53 ರನ್ ಗಳ ನೆರವಿನಿಂದಾಗಿ ಗೆಲುವಿನ ದಡಕ್ಕೆ ತಂದು ನಿಲ್ಲಿಸಿದ್ದರು, ಆದರೆ ಕೊನೆಗೆ ನಾಲ್ಕು ವಿಕೆಟ್ ನಷ್ಟಕ್ಕೆ 170 ರನ್ ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಆ ಮೂಲಕ ಬೆಂಗಳೂರು ತಂಡವು ಮತ್ತೆ ಚೆನ್ನೈ ವಿರುದ್ಧದ ಸೋಲಿನ ನಂತರ ಗೆಲುವಿನ ಹಾದಿಗೆ ಮರಳಿದೆ.
ಇದನ್ನೂ ಓದಿ: Chennai vs Bangalore: ಮಿಂಚಿದ ರವೀಂದ್ರ ಜಡೇಜಾ, ಚೆನ್ನೈಗೆ ಭರ್ಜರಿ ಗೆಲುವು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.