ದ್ರಾವಿಡ್‌ಗಾಗಿ ಪೋಸ್ಟ್‌ ಹಾಕಿದ ನಾಯಕ, ರಾಹುಲ್‌ ನೆನೆದು ರೋಹಿತ್‌ ಭಾವುಕ..?

Rohit Sharma: ಟೀಮ್ ಇಂಡಿಯಾ ಕೋಚ್ ಹುದ್ದೆಗೆ ವಿದಾಯ ಹೇಳಿದ ರಾಹುಲ್ ದ್ರಾವಿಡ್ ಕುರಿತಂತೆ ನಾಯಕ ರೋಹಿತ್ ಶರ್ಮಾ ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾre̤ ಬರ್ಬಾಡೋಸ್‌ನ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ, ಟೀಮ್ ಇಂಡಿಯಾ ಚಾಂಪಿಯನ್ ಆಗಿದ್ದು, ರೋಹಿತ್ ಶರ್ಮಾ ನಾಯಕನಾಗಿ ಮತ್ತು ದ್ರಾವಿಡ್ ಕೋಚ್ ಆಗಿ ಪ್ರಮುಖ ಪಾತ್ರ ವಹಿಸಿದ್ದಾರೆ.  

Written by - Zee Kannada News Desk | Last Updated : Jul 10, 2024, 08:57 AM IST
  • ಈ ಮೆಗಾ ಟೂರ್ನಮೆಂಟ್ ಮುಗಿದ ನಂತರ, ದ್ರಾವಿಡ್ ಕೋಚ್ ಸ್ಥಾನಕ್ಕೆ ವಿದಾಯ ಹೇಳಿದ್ದಾರೆ.
  • ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಅವರ ಉಲ್ಲೇಖನೀಯ ಶ್ರಮದ ಫಲಿತಾಂಶ.
  • ಪತ್ನಿ ರಿತಿಕಾ ಸಜ್ದೇ ಜೀವದಲ್ಲಿ ಪಾಲುದಾರರಾದಂತೆ, ದ್ರಾವಿಡ್‌ ಕೆಲಸದ ಪಾಲುದಾರ ಎಂದೆನಿಸುತ್ತದೆ ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.
ದ್ರಾವಿಡ್‌ಗಾಗಿ ಪೋಸ್ಟ್‌ ಹಾಕಿದ ನಾಯಕ, ರಾಹುಲ್‌ ನೆನೆದು ರೋಹಿತ್‌ ಭಾವುಕ..?  title=

Rohit Sharma: ಟೀಮ್ ಇಂಡಿಯಾ ಕೋಚ್ ಹುದ್ದೆಗೆ ವಿದಾಯ ಹೇಳಿದ ರಾಹುಲ್ ದ್ರಾವಿಡ್ ಕುರಿತಂತೆ ನಾಯಕ ರೋಹಿತ್ ಶರ್ಮಾ ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾre̤ ಬರ್ಬಾಡೋಸ್‌ನ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ, ಟೀಮ್ ಇಂಡಿಯಾ ಚಾಂಪಿಯನ್ ಆಗಿದ್ದು, ರೋಹಿತ್ ಶರ್ಮಾ ನಾಯಕನಾಗಿ ಮತ್ತು ದ್ರಾವಿಡ್ ಕೋಚ್ ಆಗಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಆದರೆ, ಈ ಮೆಗಾ ಟೂರ್ನಮೆಂಟ್ ಮುಗಿದ ನಂತರ, ದ್ರಾವಿಡ್ ಕೋಚ್ ಸ್ಥಾನಕ್ಕೆ ವಿದಾಯ ಹೇಳಿದ್ದಾರೆ. 2021ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ವಿಫಲವಾದ ನಂತರ, ದ್ರಾವಿಡ್ ಕೋಚ್ ಆಗಿ ಅಧಿಕಾರ ವಹಿಸಿದ್ದರು. ಆ ಸಮಯದಲ್ಲಿ, ರೋಹಿತ್ ಶರ್ಮಾ ಮತ್ತು ದ್ರಾವಿಡ್ ಅವರ ಒಟ್ಟಿಗೆ ಟೀಮ್ ಇಂಡಿಯಾ ಹಲವು ಸಾಧನೆಗಳನ್ನು ಮಾಡಿತು.

2022ರ ಟಿ20 ವಿಶ್ವಕಪ್, 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್, 2023ರ ಏಕದಿನ ವಿಶ್ವಕಪ್‌ನ ಫೈನಲ್ ಮತ್ತು 2024ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ಗಳಲ್ಲಿ, ಟೀಮ್ ಇಂಡಿಯಾದ ಯಶಸ್ಸು ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಅವರ ಉಲ್ಲೇಖನೀಯ ಶ್ರಮದ ಫಲಿತಾಂಶ.

ಇದನ್ನೂ ಓದಿ: ಟೀಂ ಇಂಡಿಯಾದ ಹೊಸ ಕೋಚ್‌ ಗೌತಮ್‌ ಗಂಭೀರ್‌ ಸಂಭಾವನೆ ಎಷ್ಟು ಗೊತ್ತಾ..?

ಈ ಹಿನ್ನಲೆಯಲ್ಲಿ, ರೋಹಿತ್ ಶರ್ಮಾ ಇನ್ಸ್ಟಾಗ್ರಾಮ್‌ನಲ್ಲಿ ದ್ರಾವಿಡ್ ಜೊತೆಗಿನ ಸಂಬಂಧವನ್ನು ಹಂಚಿಕೊಂಡಿದ್ದಾರೆ. ದ್ರಾವಿಡ್ ಅವರನ್ನು ತಮ್ಮ ಪತ್ನಿ ರಿತಿಕಾ ಸಜ್ದೇ ಜೀವದಲ್ಲಿ ಪಾಲುದಾರರಾದಂತೆ, ದ್ರಾವಿಡ್‌ ಕೆಲಸದ ಪಾಲುದಾರ ಎಂದೆನಿಸುತ್ತದೆ ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ. 

"ಆತ್ಮೀಯ ರಾಹುಲ್ ದ್ರಾವಿಡ್, ನಾನು ನನ್ನ ಭಾವನೆಗಳನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ ಅದರೂ ಇದು ಸಣ್ಣ ಪ್ರಯತ್ನವಷ್ಟೆ, ನಾನು ಬಾಲ್ಯದದಿಂದಲೂ ನಿಮ್ಮ ಅಭಿಮಾನಿ. ನಿಮ್ಮೊಂದಿಗೆ ಕೆಲಸ ಮಾಡುವುದು ನನಗೆ ಸೌಭಾಗ್ಯ. ನೀವು ಆಟದಲ್ಲಿ ಉತ್ತಮರು ಆದರೆ, ನೀವು ನಿಮಗೆ  ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದೀರಿ. ನಿಮ್ಮೊಂದಿಗೆ ತುಂಬಾ ಹತ್ತಿರವಾದ ಅನುಭವ ಹಂಚಿಕೊಂಡಿದ್ದೇವೆ. 

"ನಿಮ್ಮ ಸತ್ಯವಾದ ಶ್ರದ್ಧೆ ಮತ್ತು ಆಟದ ಮೇಲಿನ ಪ್ರೀತಿ ನಿಜವಾಗಿಯೂ ಗಮನಾರ್ಹ. ನಾನು ನಿಮ್ಮಿಂದ ಬಹಳಷ್ಟು ಕಲಿತಿದ್ದೇನೆ. ಪ್ರತಿಯೊಂದು ನೆನಪೂ ಅಮೂಲ್ಯ. ನನ್ನ ಪತ್ನಿ ನಿಮ್ಮನ್ನು ನನ್ನ ಕೆಲಸದ ಪತ್ನಿ ಎಂದು ಕರೆಯುತ್ತಾಳೆ. ನೀವು ನನ್ನ ಆಪ್ತ, ನನ್ನ ಕೋಚ್ ಮತ್ತು ನನ್ನ ಸ್ನೇಹಿತ ಎಂದು ಕರೆಯಲು ನಾನು ತುಂಬಾ ಧನ್ಯನಾಗಿದ್ದೇನೆ,” ಎಂದು ರೋಹಿತ್ ಶರ್ಮಾ ಪೋಸ್ಟ್‌ ಹಾಕುವ ಮೂಲಕ ಭಾವುಕರಾಗಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News