ಕೇವಲ 43 ಎಸೆತಗಳಲ್ಲಿ 193 ರನ್... ಬರಿ 4,6,6,4,6,6,4,6 ಗಳೇ... ಆಟಗಾರ ಯಾರು ತಿಳಿಯಲು ವಿಡಿಯೋ ನೋಡಿ

Viral Video: ಯುರೋಪಿಯನ್ ಕ್ರಿಕೆಟ್ ಸರಣಿಯಲ್ಲಿ, ಹಮ್ಜಾ ಸಲೀಂ ದಾರ್ ಎಂಬ ಬ್ಯಾಟ್ಸ್‌ಮನ್ 43 ಎಸೆತಗಳಲ್ಲಿ 193 ರನ್ ಗಳಿಸುವ ಮೂಲಕ ಟಿ 10 ಕ್ರಿಕೆಟ್ ಸ್ವರೂಪದಲ್ಲಿ ಅತಿದೊಡ್ಡ ಇನ್ನಿಂಗ್ಸ್ ಆಡಿದ ದಾಖಲೆ ಮಾಡಿದ್ದಾರೆ. (Viral News In Kannada)  

Written by - Nitin Tabib | Last Updated : Dec 6, 2023, 06:40 PM IST
  • ಹಮ್ಜಾ ಅವರ ಇನ್ನಿಂಗ್ಸ್‌ನಲ್ಲಿ 22 ಸಿಕ್ಸರ್ ಮತ್ತು 14 ಬೌಂಡರಿಗಳು ಶಾಮಿಲಾಗಿವೆ.
  • ಇದರೊಂದಿಗೆ ಟಿ10 ಕ್ರಿಕೆಟ್ ಮಾದರಿಯಲ್ಲಿ ಲೂಯಿಸ್ ಡು ಪ್ಲುಯ್ ಅವರ ಅತಿದೊಡ್ಡ ಇನ್ನಿಂಗ್ಸ್‌ ದಾಖಲೆಗಿಂತ ಹಮ್ಜಾ 30 ರನ್ ಹೆಚ್ಚಿಗೆ ಹೊಡೆದಿದ್ದಾರೆ.
  • ಹಂಗೇರಿ ಪರ ಆಡುತ್ತಿದ್ದಾಗ ಈ ವರ್ಷ ಅಕ್ಟೋಬರ್ 5 ರಂದು ಲೂಯಿಸ್ 40 ಎಸೆತಗಳಲ್ಲಿ 163 ರನ್ ಗಳಿಸಿದ್ದರು.
ಕೇವಲ 43 ಎಸೆತಗಳಲ್ಲಿ 193 ರನ್... ಬರಿ 4,6,6,4,6,6,4,6 ಗಳೇ... ಆಟಗಾರ ಯಾರು ತಿಳಿಯಲು ವಿಡಿಯೋ ನೋಡಿ title=

ನವದೆಹಲಿ: ಕ್ರಿಕೆಟ್‌ನಲ್ಲಿ ಒಬ್ಬ ಬ್ಯಾಟ್ಸ್‌ಮನ್ ಅದ್ಭುತ ದಾಖಲೆ ಬರೆದಿದ್ದಾನೆ. ಈ ಬ್ಯಾಟ್ಸ್‌ಮನ್ ಹೆಸರು ಹಮ್ಜಾ ಸಲೀಂ ದಾರ್. ಹಮ್ಜಾ ಕೇವಲ 43 ಎಸೆತಗಳಲ್ಲಿ 193 ರನ್ ಗಳಿಸಿದ್ದಾರೆ. ಇಲ್ಲಿ ಅವರು 449 ರ ಅದ್ಭುತ ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟ್ ಬೇಸಿದ್ದಾರೆ. ಅಂದರೆ ಪ್ರತಿ ಎಸೆತದಲ್ಲಿ 4ಕ್ಕಿಂತ ಹೆಚ್ಚು ರನ್ ಅವರು ಗಳಿಸಿದ್ದಾರೆ. (Viral News In Kannada)

 
 
 
 

 
 
 
 
 
 
 
 
 
 
 

A post shared by European Cricket (@europeancricket)

ಸ್ಪೇನ್‌ನಲ್ಲಿ ನಡೆಯುತ್ತಿರುವ ಯುರೋಪಿಯನ್ ಕ್ರಿಕೆಟ್ ಸರಣಿಯಲ್ಲಿ ಹಮ್ಜಾ ಅವರ ಈ ಬಿರುಸಿನ ಇನ್ನಿಂಗ್ಸ್ ಬಂದಿದೆ. ಇದರಲ್ಲಿ ಅವರು ಟಿ 10 ಕ್ರಿಕೆಟ್ ಸ್ವರೂಪದಲ್ಲಿ ಅತಿದೊಡ್ಡ ಇನ್ನಿಂಗ್ಸ್ ಆಡಿದ ದಾಖಲೆಯನ್ನೂ ಕೂಡ ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ.

ಮಂಗಳವಾರ ಯುರೋಪಿಯನ್ ಕ್ರಿಕೆಟ್ ಸರಣಿಯಲ್ಲಿ ಕ್ಯಾಟಲುನ್ಯಾ ಜಾಗ್ವಾರ್ ಮತ್ತು ಸೋಹಲ್ ಆಸ್ಪತ್ರೆ ನಡುವೆ ಪಂದ್ಯವಿತ್ತು. ಇಲ್ಲಿ ಕ್ಯಾಟಲೋನಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಬಳಿಕ ಆ ತಂಡದ ಬ್ಯಾಟ್ಸ್‌ಮನ್ ಹಮ್ಜಾ ಅವರ ಈ ವಿಧ್ವಂಸಕ ಬ್ಯಾಟಿಂಗ್ ಗೆ ಇನ್ನಿಂಗ್ಸ್ ಸಾಕ್ಷಿಯಾಗಿದೆ, ತಂಡ ಕೇವಲ 10 ಓವರ್‌ಗಳಲ್ಲಿ 257 ರನ್ ಗಳಿಸಿದೆ. ಇಲ್ಲಿನ ವಿಶೇಷತೆ ಎಂದರೆ ಇಡೀ ತಂಡದ ಒಟ್ಟು ಸ್ಕೋರ್‌ನಲ್ಲಿ ಹಮ್ಜಾ ಶೇ.75ರಷ್ಟು ಅಂಕ ಗಳಿಸಿದ್ದಾರೆ.

ಇದನ್ನೂ ಓದಿ-ಸ್ಕೂಟರ್ ಮೇಲೆ ಯುವತಿಯ ಈ ಸ್ಟಂಟ್ ನೋಡಿ ನೆಟ್ಟಿಗರು ಎನನ್ನುತ್ತಿದ್ದಾರೆ ಗೊತ್ತಾ?

ಹಮ್ಜಾ ಅವರ ಇನ್ನಿಂಗ್ಸ್‌ನಲ್ಲಿ 22 ಸಿಕ್ಸರ್ ಮತ್ತು 14 ಬೌಂಡರಿಗಳು ಶಾಮಿಲಾಗಿವೆ. ಇದರೊಂದಿಗೆ ಟಿ10 ಕ್ರಿಕೆಟ್ ಮಾದರಿಯಲ್ಲಿ ಲೂಯಿಸ್ ಡು ಪ್ಲುಯ್ ಅವರ ಅತಿದೊಡ್ಡ ಇನ್ನಿಂಗ್ಸ್‌ ದಾಖಲೆಗಿಂತ ಹಮ್ಜಾ 30 ರನ್ ಹೆಚ್ಚಿಗೆ ಹೊಡೆದಿದ್ದಾರೆ. ಹಂಗೇರಿ ಪರ ಆಡುತ್ತಿದ್ದಾಗ ಈ ವರ್ಷ ಅಕ್ಟೋಬರ್ 5 ರಂದು ಲೂಯಿಸ್ 40 ಎಸೆತಗಳಲ್ಲಿ 163 ರನ್ ಗಳಿಸಿದ್ದರು.

ಇದನ್ನೂ ಓದಿ-ಇಂಥಾ ರೆಸ್ಟೋರೆಂಟ್‌ ನೀವು ಲೈಫಲ್ಲೆ ನೋಡಿರಲಿಕ್ಕಿಲ್ಲ, ಒಳಹೊದ್ರೆ ವೇಟ್ರೆಸ್ ಏನ್ ಮಾಡ್ತಾಳೆ ಗೊತ್ತಾ!

ಇಲ್ಲಿದೆ ಹಮ್ಜಾ ಸಲೀಂ ದರ್ ಆಟದ ವಿಡಿಯೋ 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News