T20 World Cup 2024 Team India: ಪ್ರಸ್ತುತ, IPL 2024 ರ ಕ್ರೇಜ್ ಕ್ರಿಕೆಟ್ ಜಗತ್ತಿನಲ್ಲಿ ಮುಗಿಲುಮುಟ್ಟಿದೆ. ಇಂಡಿಯನ್ ಪ್ರೀಮಿಯರ್ ಲೀಗ್ನ 17 ನೇ ಸೀಸನ್ ಮೇ 26 ರಂದು ಮುಕ್ತಾಯಗೊಳ್ಳಲಿದೆ, ಆದರೆ IPL 2024 ರ ಕೇವಲ ಐದು ದಿನಗಳ ಬಳಿಕ T20 ವಿಶ್ವಕಪ್ 2024 ಆರಂಭಗೊಳ್ಳಲಿದೆ. ಈ ಮುಂಬರುವ ವಿಶ್ವಕಪ್ ಪಂದ್ಯಾವಳಿಯು ಜೂನ್ 1 ರಿಂದ ಜೂನ್ 29 ರವರೆಗೆ ನಡೆಯಲಿದ್ದು (t20 world cup schedule), ಇದರಲ್ಲಿ ವಿಶ್ವದ 20 ದೇಶಗಳ ತಂಡಗಳು ಭಾಗವಹಿಸಲಿವೆ (icc gives ultimaitum to announce teams for t20 wc). ಟಿ20 ಮಾದರಿಯಲ್ಲಿ ವಿಶ್ವದ ನಂಬರ್-1 ತಂಡವಾಗಿರುವ ಭಾರತ ತಂಡದ ಸ್ಥಿತಿ ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಇದೀಗ ಈ ಕುರಿತು ವರಡಿಯೊಂದು ಬಹಿರಂಗಗೊಂಡಿದ್ದು, ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ನೇತೃತ್ವದಲ್ಲಿ ಬಿಸಿಸಿಐನ ಆಯ್ಕೆ ಸಮಿತಿಯು 15 ಆಟಗಾರರನ್ನು ಆಯ್ಕೆ ಮಾಡಲಿದೆ. ಏಪ್ರಿಲ್ ಕೊನೆಯ ವಾರ. ತಂಡ ಪ್ರಕಟಣೆಯಾಗುವ ಸಾಧ್ಯತೆ ಇದೆ. (Sports News In Kananda).
ಟಿ20 ವಿಶ್ವಕಪ್ ತಂಡಗಳ (t20 world cup 2024 teams) ಘೋಷಣೆಗೆ ಐಸಿಸಿ ಅಲ್ಟಿಮೈಟಮ್ ನೀಡಿದೆ. ಅದರ ಪ್ರಕಾರ ಎಲ್ಲಾ 20 ತಂಡಗಳು ಮೇ 1 ರ ಮೊದಲು ತಮ್ಮ ವಿಶ್ವಕಪ್ ತಂಡವನ್ನು ಪ್ರಕಟಿಸಬೇಕಾಗಲಿದೆ (t20 world cup 2024 groups). ಇದಲ್ಲದೆ ಮೇ 25 ರವರೆಗೆ, ಪ್ರತಿ ತಂಡವು ತನ್ನ ತಂಡದಲ್ಲಿ ಕೇವಲ ಒಂದು ಬದಲಾವಣೆಯನ್ನು ಮಾಡಲು ಅವಕಾಶ ನೀಡಲಾಗಿದೆ.
ಇದನ್ನೂ ಓದಿ-IPL 2024: ಐತಿಹಾಸಿಕ ದಾಖಲೆ ಬರೆದು ಈ ವಿಶಿಷ್ಟ ಕ್ಲಬ್ ಸೇರಿದ Sunil Narine
ಭಾರತ ತಂಡದ ಘೋಷಣೆ ಯಾವಾಗ? (t20 world cup team india announcement)
ಪಿಟಿಐ ಪ್ರಕಾರ, ಐಪಿಎಲ್ 2024 ರ ಮೊದಲ ಹಂತದ ಅಂತ್ಯದ ನಂತರ ಆಯ್ಕೆ ಸಮಿತಿಯು 15 ಆಟಗಾರರ ತಂಡವನ್ನು ಪ್ರಕಟಿಸಲಿದೆ. ಆಗ ಆಟಗಾರರ ಫಾರ್ಮ್ ಬಗ್ಗೆ ಆಯ್ಕೆದಾರರಿಗೆ ಒಂದು ಕಲ್ಪನೆ ಸಿಕ್ಕಿತ್ತು. ಐಪಿಎಲ್ 2024 ರ ಪ್ಲೇಆಫ್ ತಲುಪಲು ಸಾಧ್ಯವಾಗದ ತಂಡದಿಂದ ಆಯ್ಕೆಯಾದ ಆಟಗಾರರು ಶೀಘ್ರದಲ್ಲೇ ಅಮೆರಿಕಕ್ಕೆ ಹೋಗಲಿದ್ದು, ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ. ಕಳೆದ ವರ್ಷ WTC ಫೈನಲ್ಗೆ (WTC Final) ಇದೇ ರೀತಿ ಮಾಡಲಾಗಿತ್ತು.
ಇದನ್ನೂ ಓದಿ-IPL 2024: ಅಸಲಿ ಪಂದ್ಯ RCB vs KKR ಮಧ್ಯೆ ಅಲ್ಲ, ಈ ಇಬ್ಬರ ನಡುವೆ ಎಂದು Dinesh Kathik ಹೇಳಿದ್ಯಾಕೆ?
2024 ರ T20 ವಿಶ್ವಕಪ್ನಲ್ಲಿ ಭಾಗವಹಿಸುವ ಇತರ ತಂಡಗಳಂತೆ, 15 ಆಟಗಾರರ ಮುಖ್ಯ ತಂಡವನ್ನು ಹೊರತುಪಡಿಸಿ, ಭಾರತ ತಂಡವು ಕೆಲವು ಮೀಸಲು ಆಟಗಾರರನ್ನು ತನ್ನೊಂದಿಗೆ ಇರಿಸಿಕೊಳ್ಳುತ್ತದೆ, ಇದರಿಂದ ಯಾರಾದರೂ ಗಾಯಗೊಂಡರೆ ಯಾವುದೇ ತೊಂದರೆಯಾಗುವುದಿಲ್ಲ. ಪಿಟಿಐ ಪ್ರಕಾರ, 4 ಸದಸ್ಯರ ಆಯ್ಕೆ ಸಮಿತಿಯು ಐಪಿಎಲ್ 2024 ರ ಪಂದ್ಯಗಳ ಮೇಲೆ ನಿರಂತರವಾಗಿ ನಿಗಾ ಇರಿಸಿವೆ. ಪಂದ್ಯಗಳನ್ನು ನೇರಪ್ರಸಾರ ವೀಕ್ಷಿಸಲು ಮೈದಾನಕ್ಕೆ ತಲುಪಲಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ