ನವದೆಹಲಿ: ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ದ ಪಾಕ್ ತಂಡವು 10 ವಿಕೆಟ್ ಗಳ ಐತಿಹಾಸಿಕ ಗೆಲುವನ್ನು ಸಾಧಿಸಿದೆ.
ಇದನ್ನೂ ಓದಿ: ICC T20 World Cup 2021: ಭಾರತ-ಪಾಕ್ ಪಂದ್ಯಕ್ಕೂ ಮುನ್ನ ಪ್ರಕಟಗೊಂಡಿದೆ ಈ ಭವಿಷ್ಯವಾಣಿ, ಈ ತಂಡದ ಗೆಲುವು ನಿಶ್ಚಿತ!
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಪಾಕಿಸ್ತಾನ್ ತಂಡವು ತನ್ನ ಮಾರಕ ಬೌಲಿಂಗ್ ದಾಳಿಯಿಂದಾಗಿ ಭಾರತಕ್ಕೆ ಆಘಾತ ನೀಡಿದೆ.ಪಾಕಿಸ್ತಾನದ ಪರವಾಗಿ ಪರಿಣಾಮಕಾರಿ ಬೌಲಿಂಗ್ ದಾಳಿ ನಡೆಸಿದ ಶಾಹಿನ್ ಆಫ್ರಿದಿ ಭಾರತದ ಆರಂಭಿಕ ಆಟಗಾರರಾದ ಕೆ.ಎಲ್ ರಾಹುಲ್ (3) ರೋಹಿತ್ ಶರ್ಮಾ(0) ಅವರ ವಿಕೆಟ್ ಕಬಳಿಸುವ ಮೂಲಕ ಪಾಕಿಸ್ತಾನವು ಮೇಲುಗೈ ಸಾಧಿಸುವಂತೆ ಮಾಡಿದರು.
ಇದನ್ನೂ ಓದಿ: India vs Pakistan T20 World Cup Live Score: ಆರಂಭಿಕ ಬ್ಯಾಟ್ಸ್ಮನ್ ಗಳ ವೈಫಲ್ಯ, ಸಂಕಷ್ಟದಲ್ಲಿ ಭಾರತ ತಂಡ
ಇನ್ನೊಂದೆಡೆಗೆ ತಳ ಊರುವ ಸೂಚನೆ ತೋರಿಸುತ್ತಿದ್ದ ಸೂರ್ಯ ಕುಮಾರ್ 11 ರನ್ ಗಳಾಗಿದ್ದಾಗ ಹಸನ್ ಅಲಿ ಅವರಿಗೆ ವಿಕೆಟ್ ಒಪ್ಪಿಸಿದರು.ನಂತರ ವಿರಾಟ್ ಕೊಹ್ಲಿ ಹಾಗೂ ರಿಶಬ್ ಪಂತ್ ಅವರ ಬ್ಯಾಟಿಂಗ್ ನಿಂದಾಗಿ ಭಾರತ ಚೇತರಿಸಿಕೊಂಡಿತು.
𝐖𝐇𝐀𝐓. 𝐀. 𝐏𝐄𝐑𝐅𝐎𝐑𝐌𝐀𝐍𝐂𝐄 🔥#T20WorldCup | #INDvPAK | https://t.co/74tB9RjNUH pic.twitter.com/DHagg9XqtN
— ICC (@ICC) October 24, 2021
ಭಾರತದ ಪರವಾಗಿ ವಿರಾಟ್ ಕೊಹ್ಲಿ 49 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದಾಗಿ 57 ರನ್ ಗಳಿಸಿದರೆ, ರಿಶಬ್ ಪಂತ್ 30 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದಾಗಿ 39 ರನ್ ಗಳಿಸಿದರು. ಆ ಮೂಲಕ ಭಾರತ ತಂಡವು 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿತು.
INNINGS BREAK!
Captain @imVkohli's fine 5⃣7⃣ & @RishabhPant17's 3⃣9⃣ guide #TeamIndia to 1⃣5⃣1⃣/7⃣. 👍 👍#T20WorldCup #INDvPAK
Scorecard ▶️ https://t.co/eNq46RHDCQ pic.twitter.com/in0w8qSrir
— BCCI (@BCCI) October 24, 2021
ಪಾಕಿಸ್ತಾನದ ಪರವಾಗಿ ಶಾಹಿನ್ ಆಫ್ರಿದಿ ಮೂರು ಹಾಗೂ ಹಸನ್ ಅಲಿ ಎರಡು ವಿಕೆಟ್ ಗಳನ್ನು ಕಬಳಿಸುವ ಮೂಲಕ ಭಾರತದ ರನ್ ವೇಗಕ್ಕೆ ಕಡಿವಾಣ ಹಾಕಿದರು.ಭಾರತ ತಂಡವು ನೀಡಿದ 152 ರನ್ ಗಳ ಗುರಿಯನ್ನು ಬೆನ್ನತ್ತಿದ ಪಾಕ್ ತಂಡವು ಮೊಹಮ್ಮದ್ ರಿಜ್ವಾನ್ (79) ಹಾಗೂ ಬಾಬರ್ ಅಜಮ್ (68) ರನ್ ಗಳ ಮೂಲಕ 17.5 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗೆಲುವಿನ ಗುರಿಯನ್ನು ತಲುಪಿತು.
ಇದನ್ನೂ ಓದಿ-Team Babar ವಿರುದ್ಧ Virat ಸಮರ, ಪಂದ್ಯದ ಮೇಲೆ ವಿಶ್ವದ ಕಣ್ಣು, ಯಾರ ವರಸೆ ಯಾರ ಮೇಲೆ?
ಭಾರತದ ಬೌಲರ್ ಗಳು ಇಂದಿನ ಪಂದ್ಯದಲ್ಲಿ ವಿಕೆಟ್ ಕಬಳಿಸಲು ಹೆಣಗಾಡಿದರು.ಇನ್ನೊಂದೆಡೆಗೆ ಪಾಕ್ ಪರವಾಗಿ ಶಾಹಿನ್ ಮೂರು ವಿಕೆಟ್ ಗಳನ್ನು ಪಡೆಯುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.