ಮಿಂಚಿದ ಸೂರ್ಯಕುಮಾರ್ ಯಾದವ್, ಬುಮ್ರಾ: ರಾಜಸ್ತಾನ ವಿರುದ್ಧ ಮುಂಬೈಗೆ ಸುಲಭ ಗೆಲುವು

ಅಬುದಾಭಿ ಶೇಕ್ ಜಾಯೆದ್ ಸ್ಟೇಡಿಯಂ ನಲ್ಲಿ ನಡೆದ 20 ನೇ ಐಪಿಎಲ್ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡವು 57 ರನ್ ಗಳ ಸುಲಭ ಜಯವನ್ನು ದಾಖಲಿಸಿದೆ.

Last Updated : Oct 6, 2020, 11:50 PM IST
ಮಿಂಚಿದ ಸೂರ್ಯಕುಮಾರ್ ಯಾದವ್, ಬುಮ್ರಾ: ರಾಜಸ್ತಾನ ವಿರುದ್ಧ ಮುಂಬೈಗೆ ಸುಲಭ ಗೆಲುವು  title=
Photo Courtsey : Twitter

ನವದೆಹಲಿ: ಅಬುದಾಭಿ ಶೇಕ್ ಜಾಯೆದ್ ಸ್ಟೇಡಿಯಂ ನಲ್ಲಿ ನಡೆದ 20 ನೇ ಐಪಿಎಲ್ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡವು 57 ರನ್ ಗಳ ಸುಲಭ ಜಯವನ್ನು ದಾಖಲಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ತಂಡವು 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 193 ಗಳಿಸಿತು. ಮುಂಬೈ ಪರವಾಗಿ ಭರ್ಜರಿ ಬ್ಯಾಟಿಂಗ್ ಬೀಸಿದ ಸೂರ್ಯಕುಮಾರ್ ಯಾದವ್ ಕೇವಲ 47 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್ ಗಳ ನೆರವಿನಿಂದ 79 ರನ್ ಗಳಿಸಿದರು. ಇನ್ನು ನಾಯಕ ರೋಹಿತ್ ಶರ್ಮಾ 35, ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ 30 ರನ್ ಗಳಿಸಿ ತಂಡಕ್ಕೆ ಆಸರೆಯಾದರು.

Watch video: ಅಶ್ವಿನ್ ಆರನ್ ಫಿಂಚ್‌ಗೆ ಬೆದರಿಕೆ ಹಾಕಿದ್ದನ್ನು ಕಂಡು ರಿಂಕಿ ಪಾಂಟಿಂಗ್‌ಗೂ ನಗು ತಡೆಯಲಾಗಲಿಲ್ಲ!

194 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡವು ತಂಡದ ಮೊತ್ತ 12 ಆಗುವಷ್ಟರಲ್ಲಿ 3 ಮಹತ್ವದ ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಒಂದೆಡೆ ವಿಕೆಟ್ ಗಳು ಉರುಳುತ್ತಿದ್ದರು ಭರ್ಜರಿ ಬ್ಯಾಟ್ ಬೀಸಿದ ಜೋಸ್ ಬಟ್ಲರ್ 70 ರನ್ ಗಳಿಸಿ ಔಟಾಗುವ ಮೂಲಕ ರಾಜಸ್ಥಾನ ತಂಡದ ಗೆಲುವಿನ ಕನಸು ನುಚ್ಚುನೂರಾಯಿತು.

IPL 2020: ಐಸಿಸಿ ನಿಯಮಗಳನ್ನು ಉಲ್ಲಂಘಿಸಿದ ವಿರಾಟ್ ಕೊಹ್ಲಿ ಬಗ್ಗೆ ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯಿಸಿದ್ದು ಹೀಗೆ

ಮುಂಬೈ ಪರವಾಗಿ  ಭರ್ಜರಿ ಬೌಲಿಂಗ್ ಮಾಡಿದ ಬುಮ್ರಾ 4, ಟ್ರೆಂಟ್ ಬೌಲ್ಟ್ 2, ಜೇಮ್ಸ್ ಪ್ಯಾಟಿಸನ್,2 ವಿಕೆಟ್ ಗಳನ್ನು ಕಬಳಿಸುವ ಮೂಲಕ ರಾಜಸ್ಥಾನ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

Trending News