IPL 2021: Playoff ಗೆ ಎಂಟ್ರಿ ಕೊಡಲು ಮುಂಬೈ ಇಂಡಿಯನ್ಸ್ ತಂಡವು ಮಾಡಬೇಕಾಗಿರುವುದೇನು ಗೊತ್ತೇ?

ಗುರುವಾರದಂದು ನಡೆದ ಐಪಿಎಲ್ 2021 ರ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವು ಸಾಧಿಸಿದ್ದರಿಂದಾಗಿ ಈಗ ಅದು ಪ್ಲೇ ಆಫ್ ನಲ್ಲಿ ಸ್ಥಾನ ಪಡೆಯುವ ಭರವಸೆಯನ್ನು ಹೊಂದಿದೆ.

Written by - Zee Kannada News Desk | Last Updated : Oct 8, 2021, 03:39 PM IST
  • ಗುರುವಾರದಂದು ನಡೆದ ಐಪಿಎಲ್ 2021 ರ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವು ಸಾಧಿಸಿದ್ದರಿಂದಾಗಿ ಈಗ ಅದು ಪ್ಲೇ ಆಫ್ ನಲ್ಲಿ ಸ್ಥಾನ ಪಡೆಯುವ ಭರವಸೆಯನ್ನು ಹೊಂದಿದೆ.
IPL 2021: Playoff ಗೆ ಎಂಟ್ರಿ ಕೊಡಲು ಮುಂಬೈ ಇಂಡಿಯನ್ಸ್ ತಂಡವು ಮಾಡಬೇಕಾಗಿರುವುದೇನು ಗೊತ್ತೇ? title=
file photo

ನವದೆಹಲಿ: ಗುರುವಾರದಂದು ನಡೆದ ಐಪಿಎಲ್ 2021 ರ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವು ಸಾಧಿಸಿದ್ದರಿಂದಾಗಿ ಈಗ ಅದು ಪ್ಲೇ ಆಫ್ ನಲ್ಲಿ ಸ್ಥಾನ ಪಡೆಯುವ ಭರವಸೆಯನ್ನು ಹೊಂದಿದೆ.

ಇದನ್ನೂ ಓದಿ: Rajasthan vs Mumbai: ನಾಥನ್ ಕೌಲ್ಟರ್-ನೈಲ್, ನೀಶಂ ದಾಳಿಗೆ ತತ್ತರಿಸಿದ ರಾಜಸ್ಥಾನ ರಾಯಲ್ಸ್

ಇಯೊನ್ ಮಾರ್ಗನ್ ಅವರ ಕೆಕೆಆರ್ ರಾಯಲ್ಸ್ ತಂಡವನ್ನು 86 ರನ್ ಗಳಿಂದ  ರಾಜಸ್ಥಾನವನ್ನು ಬಗ್ಗು ಬಡೆದದ್ದರಿಂದಾಗಿ ಈಗ ಉತ್ತಮ ಸರಾಸರಿಯನ್ನು ಕಾಯ್ದುಕೊಂಡಿದೆ.

ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪ್ರಸ್ತುತ 13 ಪಂದ್ಯಗಳಲ್ಲಿ 6 ಗೆಲುವುಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ ಮತ್ತು ಶುಕ್ರವಾರ (ಅಕ್ಟೋಬರ್ 8) ಸಂಜೆ ತಮ್ಮ ಅಂತಿಮ ಲೀಗ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ: IPL 2021: KKRಗೊಂದು ಸಂತಸದ ಸುದ್ದಿ, PlayOffನಲ್ಲಿ ಕಣಕ್ಕಿಳಿಯಲಿದ್ದಾರೆ ಈ ಆಟಗಾರ

ಆದರೆ ಈಗ ಮುಂಬೈ (Mumbai Indians) ತಂಡವು ಪ್ಲೇ ಆಫ್ ಗೆ ಪ್ರವೇಶಿಸಬೇಕೆಂದರೆ ಅದು ಹೈದರಾಬಾದ್ ತಂಡವು 171 ರನ್ ಗಳ ಅಂತರದಿಂದ ಸೋಲಿಸಬೇಕು, ಒಂದು ವೇಳೆ ಎರಡನೇ ಬ್ಯಾಟಿಂಗ್ ಆದಲ್ಲಿ ಅವರಿಗೂ ತಮ್ಮ ಸರಾಸರಿಯನ್ನು ಉತ್ತಮಪಡಿಸಿಕೊಳ್ಳಲು ಯಾವುದೇ ದಾರಿ ಇರುವುದಿಲ್ಲ, ಹಾಗಾಗಿ ಈಗ ಮುಂಬೈ ತಂಡವು ಪ್ಲೇ ಆಫ್ ಗೆ ಪ್ರವೇಶಿಸುವುದು ಬಹುತೇಕ ಅಸಾಧ್ಯದ ಸಂಗತಿ ಎಂದು ಕ್ರಿಕೆಟ್ ಪಂಡಿತರು ಹೇಳುತ್ತಿದ್ದಾರೆ.

ಮುಂಬೈ ಇಂಡಿಯನ್ಸ್ ಪ್ಲೇಆಫ್‌ಗೆ ಅರ್ಹತೆ ಪಡೆಯಬಹುದೇ?

ಎರಡು ತಂಡಗಳು ಅಂಕಗಳ ಪಟ್ಟಿಯಲ್ಲಿ ಸಮಾನ ಸ್ಥಾನವನ್ನು ಪಡೆದಾಗ ಆಗ ಸರಾಸರಿ ಲೆಕ್ಕಾಚಾರದಲ್ಲಿ ತಂಡವನ್ನು ಪ್ಲೇ ಆಫ್ ಕಳಿಸಲಾಗುತ್ತದೆ. ಒಂದು ವೇಳೆ ಮುಂಬೈ ಇಂಡಿಯನ್ಸ್ ತಂಡವು ಹೈದರಾಬಾದ್ ವಿರುದ್ಧ ಗೆದ್ದರೂ ಸಹಿತ ಸರಾಸರಿ ಲೆಕ್ಕಾಚಾರದಲ್ಲಿ ಅದಕ್ಕೆ ಹಿನ್ನಡೆಯಾಗಲಿದೆ.ಈ ಸೀಸನ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡವು ಆರಂಭದಿಂದಲೂ ಅಷ್ಟು ಪರಿಣಾಮಕಾರಿ ಆಟವನ್ನು ಆಡಿಲ್ಲ, ಇದರಿಂದಾಗಿಯೇ ಈಗ ಅದಕ್ಕೆ ಪ್ಲೇ ಆಫ್ ನಲ್ಲಿ ಸ್ಥಾನ ಪಡೆಯುವುದು ಒಂದು ರೀತಿ ದುಸ್ತರವಾಗಿದೆ.

ಇದನ್ನೂ ಓದಿ-"ರಾಹುಲ್ ದ್ರಾವಿಡ್ ಭಾರತ ಕ್ರಿಕೆಟ್ ತಂಡಕ್ಕೆ ಪೂರ್ಣಾವಧಿ ಕೋಚ್ ಆಗಬಾರದು"

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News