CSK Vs GT History : ಐಪಿಎಲ್ ಇತಿಹಾಸದಲ್ಲಿ ಹಾರ್ದಿಕ್ ಮುಂದೆ ಧೋನಿ ಮಂಕಾಗಿದ್ದೇ ಹೆಚ್ಚು!

CSK Vs GT History : ಇನ್ನೇನು ಕೆಲವೇ ಕ್ಷಣಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಮೊದಲ ಪಂದ್ಯ ಆರಂಭವಾಗಲಿದೆ. ಮತ್ತೊಮ್ಮೆ  ಮಹೇಂದ್ರ ಸಿಂಗ್ ಧೋನಿ ಮತ್ತು ಹಾರ್ದಿಕ್ ಪಾಂಡ್ಯ ಎದುರು ಬದುರಾಗಲಿದ್ದಾರೆ.

Written by - Ranjitha R K | Last Updated : Mar 31, 2023, 03:25 PM IST
  • ಐಪಿಎಲ್ ಪಂದ್ಯಾವಳಿಗೆ ಇನ್ನು ಕೆಲವೇ ಕ್ಷಣಗಳು ಬಾಕಿ.
  • ಮೊದಲ ಪಂದ್ಯ ಚೆನ್ನೈ ಸೂಪರ್ ಕಿಂಗ ಮತ್ತು ಗುಜರಾತ್ ಟೈಟನ್ಸ್ ವಿರುದ್ದ
  • ಯಾರಿಗೆ ಒಲಿಯಲಿದೆ ಮೊದಲ ಗೆಲುವು
CSK Vs GT History : ಐಪಿಎಲ್ ಇತಿಹಾಸದಲ್ಲಿ ಹಾರ್ದಿಕ್ ಮುಂದೆ ಧೋನಿ ಮಂಕಾಗಿದ್ದೇ ಹೆಚ್ಚು!  title=

CSK Vs GT History : ಕ್ರಿಕೆಟ್ ಅಭಿಮಾನಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಐಪಿಎಲ್ ಪಂದ್ಯಾವಳಿಗೆ ಇನ್ನು ಕೆಲವೇ ಕ್ಷಣಗಳು ಬಾಕಿ. ಮೊದಲ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ವಿರುದ್ದ ನಡೆಯಲಿದೆ. ಕಳೆದ ಸೀಸನ್​ನ ಲೀಗ್ ಸುತ್ತಿನಲ್ಲಿ ಉಭಯ ತಂಡಗಳು 2 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದವು. ಎರಡೂ ಪಂದ್ಯಗಳಲ್ಲೂ ಹಾರ್ದಿಕ್ ನಾಯಕತ್ವ ಗುಜರಾತ್ ತಂಡ ಮೇಲುಗೈ ಸಾಧಿಸಿತ್ತು. 

ಮೊದಲ ಸಮರ ಈಗ ಶುರು : 
ಇನ್ನೇನು ಕೆಲವೇ ಕ್ಷಣಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಮೊದಲ ಪಂದ್ಯ ಆರಂಭವಾಗಲಿದೆ. ಮತ್ತೊಮ್ಮೆ  ಮಹೇಂದ್ರ ಸಿಂಗ್ ಧೋನಿ ಮತ್ತು ಹಾರ್ದಿಕ್ ಪಾಂಡ್ಯ  ಎದುರು ಬದುರಾಗಲಿದ್ದಾರೆ. ಪ್ರಸ್ತುತ ಲೀಗ್‌ನ ಚಾಂಪಿಯನ್ ಆಗಿರುವ ಗುಜರಾತ್ ಟೈಟಾನ್ಸ್  ಕಳೆದ ಸೀಸನ್​ನಲ್ಲಿ ಆಡಿದ 14 ಪಂದ್ಯಗಳ ಪೈಕಿ  10 ಪಂದ್ಯಗಳಲ್ಲಿ ಗೆಲುವು ದಾಖಲಿಸಿತ್ತು. ಇನ್ನೊಂದೆಡೆ ಚೆನ್ನೈ ತಂಡ  ಆಡಿದ 14 ಪಂದ್ಯಗಳಲ್ಲಿ ಕೇವಲ ನಾಲ್ಕರಲ್ಲಿ ಮಾತ್ರ ಗೆದ್ದಿತ್ತು. 

ಇದನ್ನೂ ಓದಿ : IPL 2023 : ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ ಟಿ 20 ಕ್ರಿಕೆಟ್ ನ ಮಹಾ ಸಂಗ್ರಾಮ ! ಯಾರಿಗೆ ನೆರವಗಾಲಿದೆ ನರೇಂದ್ರ ಮೋದಿ ಸ್ಟೇಡಿಯಂ ಪಿಚ್

ಮಂಡಿಯೂರಿದ್ದ ಧೋನಿ : 
ಕಳೆದ ಸೀಸನ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗುಜರಾತ್ ವಿರುದ್ಧ ಎರಡು ಪಂದ್ಯಗಳನ್ನು ಆಡಿತ್ತು. ಈ ಪೈಕಿ ಒಂದರಲ್ಲಿ ರವೀಂದ್ರ ಜಡೇಜಾ ನಾಯಕತ್ವ ವಹಿಸಿದ್ದರೆ, ಇನ್ನೊಂಡು ಪಂದ್ಯದ ಸಾರಥ್ಯ ಮಹೇಂದ್ರ ಸಿಂಗ್ ಧೋನಿಯದ್ದಾಗಿತ್ತು. ಆದರೆ ಈ ಎರಡೂ ಪಂದ್ಯಗಲ್ಲಿ ಚೆನ್ನೈ ತಂಡ ಸೋಲು ಅನುಭವಿಸಿತ್ತು. 

ಯಾರಿಗೆ ಮೊದಲ ಗೆಲುವು : 
ಈ ಸೀಸನ್ ನ ಮೊದಲ ಪಂದ್ಯ ಈ ಎರಡೂ ತಂಡಗಳ ನಡುವೆ ನಡೆಯುತ್ತಿದ್ದು, ಈ ಬಾರಿ ಗೆಲುವು ಯಾರದ್ದು ಎನ್ನುವ ಕುತೂಹಲ ಅಭಿಮಾನಿಗಳದ್ದಾಗಿದೆ. ಅಂದ ಹಾಗೆ ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ ಇತಿಹಾಸವನ್ನು ಗಮನಿಸಿದರೆ ಇಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಸೋತಿದ್ದೇ ಹೆಚ್ಚು.   

ಇದನ್ನೂ ಓದಿ : Impact Player: ಈ ನಿಯಮದಿಂದ ಸಂಪೂರ್ಣ ಬದಲಾಗುವುದು IPL 2023: ಲಖನೌ ಆಟಗಾರನ ಶಾಕಿಂಗ್ ಹೇಳಿಕೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News