Lockdown ಅವಧಿಯಲ್ಲಿ ಬದಲಾದ Kapil Dev ಲುಕ್

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ತಮ್ಮ ಸಂಪೂರ್ಣ ಲುಕ್ ಬದಲಾಯಿಸಿಕೊಂಡಿದ್ದಾರೆ.

Last Updated : Apr 20, 2020, 09:49 PM IST
Lockdown ಅವಧಿಯಲ್ಲಿ ಬದಲಾದ Kapil Dev ಲುಕ್ title=

ನವದೆಹಲಿ: ಕೊರೊನಾ ವೈರಸ್ ಕಾರಣ ಭಾರತದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದು, ಕ್ರಿಕೆಟ್ ಜಗತ್ತಿನ ಎಲ್ಲ ದಿಗ್ಗಜರು ಹಾಗೂ ಕ್ರಿಕೆಟ್ ಆಟಗಾರರು ತಮ್ಮ ತಮ್ಮ ಮನೆಯಲ್ಲಿ ಕುಟುಂಬ ಸದಸ್ಯರ ಜೊತೆಗೆ ಕಾಲ ಕಳೆಯುತ್ತಿದ್ದಾರೆ. ಈ ಲಾಕ್ ಡೌನ್ ಅವಧಿಯಲ್ಲಿ ಪಾರ್ಲರ್ ಹಾಗೂ ಸಲೂನ್ ಗಳೂ ಕೂಡ ಬಂದ್ ಆಗಿದ್ದು, ಈ ನಡುವೆ ಕೇಶವಿನ್ಯಾಸ ಕಿರಿಕಿರಿಯುಂಟು ಮಾಡುತ್ತಿದೆ

ಒಂದೆಡೆ ಭಾರತೀಯ ಕ್ರಿಕೆಟ್ ಜಗತ್ತಿನ ಕೆಲ ಆಟಗಾರರು ಲಾಕ್ ಡೌನ್ ಅವಧಿಯಲ್ಲಿ ತಮ್ಮ ಮನೆಯಲ್ಲಿ ಕುಳಿತು ಹೊಸ ಹೊಸ ಕೇಶವಿನ್ಯಾಸಗಳನ್ನು ಟ್ರೈ ಮಾಡುತ್ತಿದ್ದರೆ, ಇನ್ನೊಂದೆಡೆ ವಿಶ್ವಕಪ್ ವಿಜೇತ ತಂಡದ ನಾಯಕ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಕೂಡ ನಾನೂ ಕೂಡ ಎಂದು ಕಮ್ಮಿ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಕಪಿಲ್ ದೇವ್ ಕೂಡ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಸಂಪೂರ್ಣವಾಗಿ ತಮ್ಮ ತಲೆ ಕೂದಲನ್ನು ಬೋಳಿಸಿದ್ದಾರೆ. ಹೌದು, ಆದರೆ ಅವರು ಕೇವಲ ತಮ್ಮ ತಲೆ ಕೂದಲನ್ನು ಮಾತ್ರ ತೆಗೆದುಹಾಕಿದ್ದು, ಗ್ರೇ ಕಲರ್ ಗಡ್ಡದಲ್ಲಿ ತುಂಬಾ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಖ್ಯಾತ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ಡೇವಿಡ್ ವಾರ್ನರ್ ಕೂಡ ತಾವು ತಮ್ಮ ತಲೆಕೂದಲುಗಳನ್ನು ತೆಗೆದುಹಾಕುವುದಾಗಿ  ಹೇಳಿಕೆ ನೀಡಿದ್ದರು. ಅಷ್ಟೇ ಅಲ್ಲ ಇದು ತಾವು ಕೊರೊನಾ ವೈರಸ್ ವಾರಿಯರ್ಸ್ ಹಾಗೂ ವೈದ್ಯಕೀಯ ಸಿಬ್ಬಂದಿಗಳಿಗೆ ಟ್ರಿಬ್ಯೂಟ್ ನೀಡುವ ಉದ್ದೇಶದಿಂದ ಮಾಡುತ್ತಿರುವುದಾಗಿ ಹೇಳಿದ್ದರು.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಸುರೇಶ ರೈನಾ ಹಾಗೂ ಕ್ರಿಕೆಟ್ ದೇವರು ಎಂದೇ ಕರೆಯಲಾಗುವ ಮಾಷ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರುಗಳು ಕೂಡ ಇತ್ತೀಚೆಗಷ್ಟೇ ತಮ್ಮ ಲುಕ್ ಬದಲಾವಣೆ ಹಾಗೂ ಹೇರ್ ಕಟ್ ಕುರಿತಾದ ಭಾವಚಿತ್ರಗಳನ್ನು ತಮ್ಮ ಅಭಿಮಾನಿಗಳಿಗೋಸ್ಕರ ಹಂಚಿಕೊಂಡಿದ್ದರು.

Trending News