Mumbai Indians : ಐಪಿಎಲ್‌ಗೆ ಗುಡ್ ಬೈ : Mi ಟೀಂಗೆ ಬ್ಯಾಟಿಂಗ್ ಕೋಚ್ ಆಗಿ ಪೊಲಾರ್ಡ್ ನೇಮಕ! 

ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಕೋಚ್ ಮತ್ತು ಎಂಐ ಎಮಿರೇಟ್ಸ್ ತಂಡದ ಆಟಗಾರನಾಗುವ ಮೂಲಕ ಪೊಲಾರ್ಡ್ ಮುಂಬೈ ಇಂಡಿಯನ್ಸ್ ಕುಟುಂಬದ ಸದಸ್ಯರಾಗಿ ಮುಂದುವರಿಯಲಿದ್ದಾರೆ.

Written by - Zee Kannada News Desk | Last Updated : Nov 15, 2022, 04:31 PM IST
  • ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರ ಕೀರಾನ್ ಪೊಲಾರ್ಡ್
  • ಐಪಿಎಲ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದಾರೆ
  • ಬ್ಯಾಟಿಂಗ್ ಕೋಚ್ ಆಗಿ ಹೊಸ ಪಾತ್ರದ ಮೂಲಕ ಮುಂದುವರಿಯಲಿದ್ದಾರೆ.
Mumbai Indians : ಐಪಿಎಲ್‌ಗೆ ಗುಡ್ ಬೈ : Mi ಟೀಂಗೆ ಬ್ಯಾಟಿಂಗ್ ಕೋಚ್ ಆಗಿ ಪೊಲಾರ್ಡ್ ನೇಮಕ!  title=

ಮುಂಬೈ : ಕಳೆದ 13 ಆವೃತ್ತಿಗಳಿಂದ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದ ಕೀರಾನ್ ಪೊಲಾರ್ಡ್, ಐಪಿಎಲ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದಾರೆ. ಆದರೆ, ಬ್ಯಾಟಿಂಗ್ ಕೋಚ್ ಆಗಿ ಹೊಸ ಪಾತ್ರದ ಮೂಲಕ ಅವರು ಮುಂಬೈ ಇಂಡಿಯನ್ಸ್ ಕುಟುಂಬದಲ್ಲಿ ಮುಂದುವರಿಯಲಿದ್ದಾರೆ. 

ನೀಲಿ, ಸ್ವರ್ಣ ಬಣ್ಣದ ಜೆರ್ಸಿಯ ಮುಂಬೈ ಇಂಡಿಯನ್ಸ್ ತಂಡದ ಜತೆಗೆ 2010ರಲ್ಲಿ ಮೊದಲ ಬಾರಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದ ಪೊಲಾರ್ಡ್, ಅನಂತರದಲ್ಲಿ ಈ ತಲೆಮಾರಿನ ಶ್ರೇಷ್ಠ ಟಿ20 ಆಟಗಾರರಲ್ಲಿ ಒಬ್ಬರಾಗಿ ಬೆಳೆದಿದ್ದಾರೆ. ಮುಂಬೈ ಇಂಡಿಯನ್ಸ್ ಪರ ಅವರು 5 ಐಪಿಎಲ್ ಮತ್ತು 2 ಚಾಂಪಿಯನ್ಸ್ ಲೀಗ್ ಟ್ರೋಫಿ ಗೆಲುವು ಕಂಡಿದ್ದಾರೆ. ಎಂದಿನಂತೆ #MIForever ಆಗಿ ಮುಂದುವರಿಯಲಿರುವ ಅವರ, ದಶಕಗಳ ಅನುಭವ ಮತ್ತು ಕೌಶಲವನ್ನು ಮುಂಬೈ ಇಂಡಿಯನ್ಸ್ ತಂಡ ಬ್ಯಾಟಿಂಗ್ ಕೋಚ್ ಮತ್ತು ಎಂಐ ಎಮಿರೇಟ್ಸ್ ತಂಡ ಆಟಗಾರರಾಗಿ ಬಳಸಿಕೊಳ್ಳಲಿದೆ. 

ಇದನ್ನೂ ಓದಿ : ಐಪಿಎಲ್​ಗೆ ಗುಡ್ ಬೈ ಹೇಳಿದ ಈ ಸ್ಟಾರ್ ಆಟಗಾರ!

'ನನ್ನ ಪ್ರಕಾರ, ಖೇಲೇಂಗೆ ದಿಲ್ ಖೋಲ್ ಕೇ (ಹೃದಯ ಬಿಚ್ಚಿ ಆಡುತ್ತೇವೆ)ಎಂಬ ಮುಂಬೈ ಇಂಡಿಯನ್ಸ್ ನಿಲುವಿಗೆ ಪೊಲಾರ್ಡ್ ಉತ್ತಮ ದೃಷ್ಟಾಂತವಾಗಿದ್ದಾರೆ. ಐಪಿಎಲ್ನ 3ನೇ ಆವೃತ್ತಿಯಿಂದಲೂ ನಾವು ಶಕ್ತಿಶಾಲಿ ಭಾವನೆಗಳಾದ ಆನಂದ, ಬೆವರು ಮತ್ತು ಕಣ್ಣೀರನ್ನು ಹಂಚಿಕೊಂಡಿದ್ದೇವೆ. ಇದು ಮೈದಾನದ ಒಳಗೆ ಮತ್ತು ಹೊರಗೆ ನಮ್ಮನ್ನು ಇಡೀ ಜೀವನದ ಅನುಬಂಧವನ್ನು ಬೆಸೆದಿದೆ. ಮುಂಬೈ ಇಂಡಿಯನ್ಸ್ ಯಶಸ್ಸಿನಲ್ಲಿ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ನಮ್ಮ ಎಲ್ಲ 5 ಐಪಿಎಲ್ ಮತ್ತು 2 ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಗೆಲುವಿನ ವೇಳೆ ಅವರು ತಂಡದ ಭಾಗವಾಗಿದ್ದರು. ಎಂಐ ಪರ ಮೈದಾನದಲ್ಲಿ ಅವರ ಮ್ಯಾಜಿಕ್ ಅನ್ನು ನಾವು ಮಿಸ್ ಮಾಡಿಕೊಳ್ಳಲಿದ್ದೇವೆ. ಆದರೆ ಎಂಐ ಎಮಿರೇಟ್ಸ್ ಪರ ಅವರು ಆಟಗಾರರಾಗಿ ಮುಂದುವರಿಯಲಿರುವುದು ಮತ್ತು ಎಂಐ ಪರ ಬ್ಯಾಟಿಂಗ್ ಕೋಚ್ ಆಗಿ ಯುವ ಆಟಗಾರರಿಗೆ ಮಾರ್ಗದರ್ಶನ ನೀಡಲಿರುವುದು ಖುಷಿ ತಂದಿದೆ. ಎಂಐ ಮತ್ತು ಎಂಐ ಎಮಿರೇಟ್ಸ್ನ ಹೊಸ ಪಯಣದಲ್ಲಿ ಅವರು ಇನ್ನಷ್ಟು ಶ್ರೇಷ್ಠವಾದ ಯಶಸ್ಸು, ಗೆಲುವು ಮತ್ತು ಪರಿಪೂರ್ಣತೆ ಕಾಣುವಂತಾಗಲಿ. ನಾನು ಅವರಿಗೆ ಶುಭ ಹಾರೈಸುತ್ತೇನೆ ಎಂದು ಶ್ರೀಮತಿ ನೀತಾ ಎಂ. ಅಂಬಾನಿ ಹೇಳಿದ್ದಾರೆ. 

'ಪೊಲಿ (ಪೊಲಾರ್ಡ್) ಮುಂಬೈ ಇಂಡಿಯನ್ಸ್ ಆಟಗಾರನಾಗಿ ಶ್ರೇಷ್ಠ ಪರಂಪರೆಯನ್ನು ಬಿಟ್ಟುಹೋಗುತ್ತಿದ್ದಾರೆ. ಅವರು ಪ್ರತಿಬಾರಿ ಮೈದಾನದಲ್ಲಿ ಕಾಣಿಸಿಕೊಂಡಾಗ ಅಭಿಮಾನಿಗಳು ಹರ್ಷೋದ್ಗಾರ ಮಾಡುತ್ತಿದ್ದರು. ಅವರು ಮುಂಬೈ ಇಂಡಿಯನ್ಸ್ ಕುಟುಂಬದ ಅಮೂಲ್ಯ ಸದಸ್ಯರು ಮತ್ತು ಓರ್ವ ಶ್ರೇಷ್ಠ ಗೆಳೆಯರು. ನಮ್ಮ ಜತೆಗೆ ಐಪಿಎಲ್ ವೃತ್ತಿಜೀವನದುದ್ದಕ್ಕೂ ಅವರು ಅಪಾರ ಬದ್ಧತೆ ಮತ್ತು ಉತ್ಸಾಹದಿಂದ, ಕ್ರಿಕೆಟ್ ಎಂಬ ಈ ಸುಂದರ ಆಟವನ್ನು ಆಡಿದ್ದಾರೆ. ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಕೋಚ್ ಮತ್ತು ಎಂಐ ಎಮಿರೇಟ್ಸ್ ಆಟಗಾರನಾಗಿ ಅವರು ಎಂಐ ಕುಟುಂಬದ ಭಾಗವಾಗಿ ಮುಂದುವರಿಯಲಿರುವುದು ಸಂತಸ ತಂದಿದೆ. ಪೊಲಿ ಕೋಚ್ ಆಗಿಯೂ ಅತ್ಯಂತ ಪರಿಣಾಮಕಾರಿ ಎನಿಸುವ ನಂಬಿಕೆ ಇದೆ. ಅವರ ಒಳನೋಟಗಳು ತಂಡಕ್ಕೆ ಅಮೂಲ್ಯವಾದುದು. ಆದರೆ ಮುಂಬೈ ಇಂಡಿಯನ್ಸ್ ತಂಡ, ವಾಂಖೆಡೆ ಸ್ಟೇಡಿಯಂ ಮತ್ತು ಅಭಿಮಾನಿಗಳು ಮೈದಾನದಲ್ಲಿ ಅವರ ಆಟವನ್ನು ಮಿಸ್ ಮಾಡಿಕೊಳ್ಳಲಿದ್ದಾರೆ' ಎಂದು ಶ್ರೀ ಆಕಾಶ್ ಅಂಬಾನಿ ಅವರು ಹೇಳಿದ್ದಾರೆ. 

'ಇನ್ನೂ ಕೆಲ ವರ್ಷಗಳ ಕಾಲ ಆಡಬೇಕೆಂಬ ಆಸೆಯ ನಡುವೆ ಇದೊಂದು ಸುಲಭದ ನಿರ್ಧಾರವಲ್ಲ. ಆದರೆ ನಮ್ಮ ಈ ಅಮೋಘವಾದ ಫ್ರಾಂಚೈಸಿ ಸ್ಥಿತ್ಯಂತರ ಕಾಣಬೇಕಾದ ಅಗತ್ಯವನ್ನು ನಾನು ಅರಿತಿರುವೆ. ನಾನು ಮುಂಬೈ ಇಂಡಿಯನ್ಸ್ ಪರ ಆಡಲಾರೆ ಎಂದಾದರೆ, ಮುಂಬೈ ಇಂಡಿಯನ್ಸ್ ವಿರುದ್ಧ ಆಡುವುದನ್ನೂ ಕಲ್ಪಿಸಿಕೊಳ್ಳಲಾರೆ. ಒಮ್ಮೆ ಎಂಐ ಆದರೆ ಯಾವಾಗಲೂ ಎಂಐ. ಕಳೆದ 13 ಆವೃತ್ತಿಗಳಿಂದ ಐಪಿಎಲ್ನ ಅತ್ಯಂತ ಯಶಸ್ವಿ ಎನಿಸಿದ ತಂಡದ ಭಾಗವಾಗಿರುವ ಬಗ್ಗೆ ಹೆಮ್ಮೆ, ಗೌರವ ಇದೆ. ಇದು ನನ್ನ ಭಾಗ್ಯ. ಅಪಾರ ಪ್ರೀತಿ, ಬೆಂಬಲ, ವಿಶ್ವಾಸ ಮತ್ತು ಗೌರವ ನೀಡಿದ ಮುಕೇಶ್, ನೀತಾ ಮತ್ತು ಆಕಾಶ್ ಅಂಬಾನಿ ಅವರಿಗೆ ನನ್ನ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ.  ನಾವೆಲ್ಲರೂ ಕುಟುಂಬ ಎಂಬ ಮಾತಿನೊಂದಿಗೆ ನನ್ನನ್ನು ಮೊದಲ ಬಾರಿ ಸ್ವಾಗತಿಸಿದ್ದನ್ನು ಇನ್ನೂ ನೆನಪಿಟ್ಟುಕೊಂಡಿರುವೆ. ಇದು ಬರೀ ಪದಗಳಿಗೆ ಸೀಮಿತವಲ್ಲ. ಮುಂಬೈ ಇಂಡಿಯನ್ಸ್ ಜತೆಗಿರುವ ಪ್ರತಿ ಸಮಯದಲ್ಲೂ ನನ್ನ ವರ್ತನೆಗಳೂ ಇದನ್ನೇ ಪ್ರತಿಬಿಂಬಿಸುತ್ತವೆ' ಎಂದು ಕೀರಾನ್ ಪೊಲಾರ್ಡ್ ಹೇಳಿದ್ದಾರೆ. 

ಇದನ್ನೂ ಓದಿ : Kieron Pollard : ಐಪಿಎಲ್‌ಗೆ ನಿವೃತ್ತಿ ಘೋಷಿಸಿದ ಕೀರನ್ ಪೊಲಾರ್ಡ್!

ಪೊಲಾರ್ಡ್ ಐಪಿಎಲ್ ವೃತ್ತಿಜೀವನದ ಪ್ರಮುಖಾಂಶಗಳು 

- ಮುಂಬೈ ಇಂಡಿಯನ್ಸ್ ಪರ 2ನೇ ಗರಿಷ್ಠ ರನ್ ಗಳಿಕೆ: 3915.
-ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಗರಿಷ್ಠ ಸಿಕ್ಸರ್: 223.
-ಐಪಿಎಲ್ನಲ್ಲಿ ವಿಕೆಟ್ ಕೀಪರ್ ಹೊರತಾಗಿ 3ನೇ ಗರಿಷ್ಠ ಕ್ಯಾಚ್: 103.
-5ನೇ ಗರಿಷ್ಠ ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಪಡೆದ ವಿದೇಶಿ ಆಟಗಾರ: 14.
-ಮುಂಬೈ ಇಂಡಿಯನ್ಸ್ ಪರ ಜಂಟಿ 2ನೇ ಅತಿವೇಗದ ಅರ್ಧಶತಕ: 17 ಎಸೆತ.
- ಮುಂಬೈ ಇಂಡಿಯನ್ಸ್ ಪರ (ಕನಿಷ್ಠ 300 ರನ್) 2ನೇ ಗರಿಷ್ಠ ಬ್ಯಾಟಿಂಗ್ ಸ್ಟ್ರೈಕ್ ರೇಟ್: 147.32.
-6 ಐಪಿಎಲ್ ಫೈನಲ್ಗಳಲ್ಲಿ 195.65 ಸ್ಟ್ರೈಕ್ ರೇಟ್ನಲ್ಲಿ 180 ರನ್.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News