ನವದೆಹಲಿ: ಕಪಿಲ್ ದೇವ್, ಅನ್ಶುಮಾನ್ ಗೇಕ್ವಾಡ್ ಮತ್ತು ಶಾಂತಾ ರಂಗಸ್ವಾಮಿ ಅವರನ್ನು ಒಳಗೊಂಡ ಮೂವರು ಸದಸ್ಯರ ಸಲಹಾ ಸಮಿತಿ ಇಂದು ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ನ್ನು ಹೆಸರಿಸುವ ಸಾಧ್ಯತೆ ಇದೆ ಎಂದು ಎನ್ನಲಾಗಿದೆ.
ಅಂತಿಮ ಪಟ್ಟಿಗೆ ಆಯ್ಕೆ ಮಾಡಿದ ರಾಬಿನ್ ಸಿಂಗ್, ಲಾಲ್ ಚಂದ್ ರಜಪೂತ್ ಮತ್ತು ಮೈಕ್ ಹೆಸ್ಸನ್ ಅವರು ಹೊಸ ಮುಖ್ಯ ತರಬೇತುದಾರ ಸ್ಥಾನಕ್ಕಾಗಿ ಸಂದರ್ಶನಕ್ಕಾಗಿ ಆಗಮಿಸಿದ್ದರು. ಈ ಎಲ್ಲಾ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಸಂದರ್ಶನವು ತರಬೇತುದಾರರ ನೇಮಕಕ್ಕಾಗಿ ಮುಂಬೈನಲ್ಲಿ ನಡೆಯಲಿದ್ದು, ಸಂಜೆ 7ಗಂಟೆಗೆ ಅಂತಿಮ ಪ್ರಕಟಣೆ ಹೊರಬಿಳಲಿದೆ ಎನ್ನಲಾಗಿದೆ.
ಆಗಸ್ಟ್ 12 ರಂದು ಬಿಸಿಸಿಐ ಪುರುಷರ ತಂಡದ ಮುಖ್ಯ ಕೋಚ್‌ಗೆ ಆರು ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿದ್ದು, ಪ್ರಸ್ತುತ ಭಾರತೀಯ ಕ್ರಿಕೆಟ್ ತಂಡದ ತರಬೇತುದಾರ ರವಿಶಾಸ್ತ್ರಿ ಸೇರಿದಂತೆ ಇನ್ನೂ ಇಬ್ಬರು ಭಾರತೀಯರು ಈ ಹುದ್ದೆಗೆ ಶಾರ್ಟ್‌ಲಿಸ್ಟ್ ಆಗಿದ್ದಾರೆ. ಅದರಲ್ಲಿ ಪ್ರಮುಖವಾಗಿ ಮಾಜಿ ಕ್ರಿಕೆಟಿಗರಾದ ಲಾಲ್‌ಚಂದ್ ರಜಪೂತ್ ಮತ್ತು ರಾಬಿನ್ ಸಿಂಗ್ ಸೇರಿದ್ದಾರೆ. ಇತರ ಮೂವರು ಅಭ್ಯರ್ಥಿಗಳೆಂದರೆ ಮೈಕ್ ಹೆಸ್ಸನ್, ಟಾಮ್ ಮೂಡಿ ಮತ್ತು ಫಿಲ್ ಸಿಮ್ಮನ್ಸ್ ಎಂದು ತಿಳಿದುಬಂದಿದೆ.