Viral Video: ಮದುವೆಯಲ್ಲಿ ಪತ್ನಿ ರಿತಿಕಾ ಜೊತೆಗೆ ರೋಹಿತ್ ಶರ್ಮಾ ಜಬರ್ದಸ್ತ್ ಡ್ಯಾನ್ಸ್!

Rohit sharma Dance: ಗುರುವಾರ ರಾತ್ರಿ ನಡೆದ ಭಾವನ ವಿವಾಹ ಸಮಾರಂಭದಲ್ಲಿ ರೋಹಿತ್ ಶರ್ಮಾ ಅವರು ಪತ್ನಿ ರಿತಿಕಾ ಜೊತೆ ಸಖತ್ ಆಗಿ​​ ಡ್ಯಾನ್ಸ್ ಮಾಡಿದ್ದಾರೆ. ಹಿಟ್‍ಮ್ಯಾನ್‍ ಡ್ಯಾನ್ಸ್​ಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ.

Written by - Puttaraj K Alur | Last Updated : Mar 17, 2023, 04:47 PM IST
  • ಭಾವನ ಮದುವೆಯಲ್ಲಿ ಪತ್ನಿ ರಿತಿಕಾ ಜೊತೆ ಸಖತ್ ಡ್ಯಾನ್ಸ್ ಮಾಡಿದ ರೋಹಿತ್ ಶರ್ಮಾ
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ ಹಿಟ್‍ಮ್ಯಾನ್ ಡ್ಯಾನ್ಸ್ ವಿಡಿಯೋ
  • ರೋಹಿತ್ ಶರ್ಮಾ ಡ್ಯಾನ್ಸ್ ಕಂಡು ಫಿದಾ ಆದ ಅಭಿಮಾನಿಗಳು ಹೇಳಿದ್ದೇನು..?
Viral Video: ಮದುವೆಯಲ್ಲಿ ಪತ್ನಿ ರಿತಿಕಾ ಜೊತೆಗೆ ರೋಹಿತ್ ಶರ್ಮಾ ಜಬರ್ದಸ್ತ್ ಡ್ಯಾನ್ಸ್!  title=
Rohit sharma Dance

ನವದೆಹಲಿ: ಮದುವೆ ಮನೆಯಲ್ಲಿ ಟೀಂ​ ಇಂಡಿಯಾ ಕ್ಯಾಪ್ಟನ್, ಹಿಟ್‍ಮ್ಯಾನ್ ಖ್ಯಾತಿಯ​​​ ರೋಹಿತ್ ಶರ್ಮಾ ತಮ್ಮ ಪತಿ ರಿತಿಕಾ ಸಜ್ದೇಹ್ ಜೊತೆಗೆ ಜಬರ್ದಸ್ತ್ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯಕ್ಕೆ ಅಲಭ್ಯರಾಗಿರುವ ರೋಹಿತ್ ಶರ್ಮಾ ಸಂಬಂಧಿಕರೊಬ್ಬರ ಮದುವೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ. ಸಂಬಂಧಿಕರ ಮದುವೆಯ ಕಾರಣ ರೋಹಿತ್ ಶರ್ಮಾ ಆಸೀಸ್ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಮಿಸ್​ ಮಾಡಿಕೊಂಡಿದ್ದಾರೆ. ವಿವಾಹ ಸಮಾರಂಭದಲ್ಲಿ ರೋಹಿತ್ ತಮ್ಮ ಪತ್ನಿ ರಿತಿಕಾ ಜೊತೆಗೆ ಭರ್ಜರಿ ನೃತ್ಯ ಮಾಡಿ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: WTC ಫೈನಲ್ ತಂಡ ಪ್ರಕಟಕ್ಕೆ ದಿನಗಣನೆ ಶುರು: ಪ್ಲೇಯಿಂಗ್ 11ರಲ್ಲಿ ಈ ಡ್ಯಾಶಿಂಗ್ ಆಟಗಾರನಿಗೆ ಸಿಗುತ್ತಾ ಸ್ಥಾನ!

ಗುರುವಾರ ರಾತ್ರಿ ನಡೆದ ಭಾವನ ವಿವಾಹ ಸಮಾರಂಭದಲ್ಲಿ ರೋಹಿತ್ ಶರ್ಮಾ ಅವರು ಪತ್ನಿ ರಿತಿಕಾ ಜೊತೆ ಸಖತ್ ಆಗಿ​​ ಡ್ಯಾನ್ಸ್ ಮಾಡಿದ್ದಾರೆ. ಹಿಟ್‍ಮ್ಯಾನ್‍ ಡ್ಯಾನ್ಸ್​ಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಪತ್ನಿ ಜೊತೆಗೆ ಮಸ್ತ್ ಮಸ್ತ್ ಆಗಿ ರೋಹಿತ್ ಸ್ಟೆಪ್ಸ್ ಹಾಕಿದ್ದಾರೆ. ಪತ್ನಿಯ ಡ್ಯಾನ್ಸ್​ ನೋಡಿ ಖುಷಿಪಟ್ಟ ಅವರು ರಿತಿಕಾರ ಮೇಲೆ ಹಣ ಸುರಿಸುವಂತೆ ನೃತ್ಯ ಮಾಡಿದ್ದಾರೆ.

ರೋಹಿತ್ ಶರ್ಮಾರ ಈ ಭರ್ಜರಿ ಡ್ಯಾನ್ಸ್ ಕಂಡು ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಈ ವಿಡಿಯೋವನ್ನು Mufaddal Vohra ಎಂಬುವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಲಕ್ಷಾಂತರ ಜನರು ಈ ವಿಡಿಯೋ ವೀಕ್ಷಿಸಿದ್ದು, ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಶುರುವಾಗಲಿದೆ ಈ ಮಾರಕ ಆಟಗಾರನ ಅಬ್ಬರ: ಮೊದಲ ಪಂದ್ಯದಲ್ಲಿ ಗೆಲುವು ಖಚಿತ!

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯವಿಂದು ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವ ವಹಿಸಿಕೊಂಡಿದ್ದಾರೆ. ಉಳಿದ 2 ಏಕದಿನ ಪಂದ್ಯಗಳಿಗೆ ರೋಹಿತ್ ಶರ್ಮಾ ತಂಡಕ್ಕೆ ವಾಪಸ್ ಆಗಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News