ಭಾರತ vs ಜಿಂಬಾಬ್ವೆ ODI ಸರಣಿ: ಭಾರತ ತಂಡವು ಆಗಸ್ಟ್ 18 ರಿಂದ ಜಿಂಬಾಬ್ವೆ ಪ್ರವಾಸದಲ್ಲಿ ಮೂರು ಪಂದ್ಯಗಳ ODI ಸರಣಿಯನ್ನು ಆಡಬೇಕಾಗಿದೆ. ಇದಕ್ಕಾಗಿ ಕೆಎಲ್ ರಾಹುಲ್ ನಾಯಕತ್ವದಲ್ಲಿ ಟೀಂ ಇಂಡಿಯಾ ಜಿಂಬಾಬ್ವೆ ತಲುಪಿದೆ. ಭಾರತ ತಂಡದಲ್ಲಿ ಹಲವು ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಇವರಲ್ಲಿ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಮತ್ತು ನಿಯಮಿತ ನಾಯಕ ರೋಹಿತ್ ಶರ್ಮಾ ಸೇರಿದ್ದಾರೆ. ಆದರೆ ಜಿಂಬಾಬ್ವೆ ಪ್ರವಾಸದಲ್ಲಿ ಟೀಂ ಇಂಡಿಯಾದ ಕೆಲ ಮಾರಕ ಆಲ್‌ರೌಂಡರ್ ಗಳಿದ್ದಾರೆ.
ಇದನ್ನೂ ಓದಿ: Asia Cup: ಏಷ್ಯಾಕಪ್ ಆಡಲು ಈ ಇಬ್ಬರು ಆಟಗಾರರ ನಡುವೆ ಪೈಪೋಟಿ: ಯಾರಾಗ್ತಾರೆ ಇನ್?
ಸ್ಟಾರ್ ಆಟಗಾರ ಶಾರ್ದೂಲ್ ಠಾಕೂರ್ ಜಿಂಬಾಬ್ವೆ ಪ್ರವಾಸದ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಶಾರ್ದೂಲ್ ಠಾಕೂರ್ ಉತ್ತಮ ಫಾರ್ಮ್‌ನಲ್ಲಿ ಆಟವಾಡುತ್ತಿದ್ದಾರೆ. ಅವರ ಆಟವು ಟೀಂ ಇಂಡಿಯಾವನ್ನು ಸೋಲಿನ ಸುಳಿಯಿಂದ ಹೊರತರುವಲ್ಲಿ ಅನೇಕ ಬಾರಿ ಸಫಲವಾಗಿದೆ. ಶಾರ್ದೂಲ್ ಯಾವುದೇ ಬ್ಯಾಟಿಂಗ್ ಕ್ರಮಾಂಕವನ್ನು ಕೆಡವಬಲ್ಲ ಕಲೆಯನ್ನು ಹೊಂದಿದ್ದಾರೆ. ಶಾರ್ದೂಲ್ ಏಕದಿನ ಕ್ರಿಕೆಟ್‌ನ ಶ್ರೇಷ್ಠ ಮಾಸ್ಟರ್ ಎಂದೇ ಪರಿಗಣಿಸಲ್ಪಟ್ಟಿದ್ದಾರೆ.
ಸ್ಫೋಟಕ ಬ್ಯಾಟಿಂಗ್ ನಲ್ಲಿ ನಿಪುಣ: ಶಾರ್ದೂಲ್ ಠಾಕೂರ್ ಸ್ಫೋಟಕ ಬ್ಯಾಟಿಂಗ್‌ನಲ್ಲಿ ಪರಿಣಿತ ಆಟಗಾರ. ಕೆಳ ಕ್ರಮಾಂಕಕ್ಕೆ ಇಳಿದ ಅವರು ತ್ವರಿತ ರೀತಿಯಲ್ಲಿ ರನ್ ಗಳಿಸುವಲ್ಲಿ ಪರಿಣಿತಿ ಹೊಂದಿದ್ದಾರೆ. ಶಾರ್ದೂಲ್ ಟೀಂ ಇಂಡಿಯಾದ ಮೂರೂ ವಿಭಾಗಗಳಲ್ಲಿ ಫಿಟ್ ಆಗಿದ್ದಾರೆ. ಹೀಗಿರುವಾಗ ಜಿಂಬಾಬ್ವೆ ಪ್ರವಾಸದಲ್ಲಿರುವ ಟೀಂ ಇಂಡಿಯಾದ ಕೊರತೆಯನ್ನು ಅವರು ನೀಗಿಸಬಹುದು. ಶಾರ್ದೂಲ್ ಠಾಕೂರ್ ಬ್ಯಾಟಿಂಗ್ ಪಾರ್ಟನರ್ ಶಿಪ್ ನಲ್ಲಿಯೂ ಪರಿಣಿತರಾಗಿದ್ದಾರೆ.
ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ಟೀಂ ಇಂಡಿಯಾದ ಏಕದಿನ ತಂಡದಲ್ಲಿ ಶಾರ್ದೂಲ್ ಠಾಕೂರ್ ಅವರನ್ನು ಸೇರಿಸಿಕೊಳ್ಳಲಾಗಿತ್ತು. ಅಲ್ಲಿ ಅವರಿಗೆ ಮೊದಲ ಎರಡು ಪಂದ್ಯಗಳನ್ನು ಆಡಲು ಅವಕಾಶ ಸಿಕ್ಕಿತ್ತು. ಆದರೆ ನಂತರ ಅವರನ್ನು ಪ್ಲೇಯಿಂಗ್ XI ನಿಂದ ಕೈಬಿಡಲಾಯಿತು. ಸದ್ಯ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯಲು ಶಾರ್ದೂಲ್ ಠಾಕೂರ್ ಜಿಂಬಾಬ್ವೆ ಪ್ರವಾಸದಲ್ಲಿ ತಮ್ಮ ಶಕ್ತಿ ಪ್ರದರ್ಶಿಸಬೇಕಾಗಿದೆ.
ಇದನ್ನೂ ಓದಿ: ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಅಮಾನತುಗೊಳಿಸಿದ ಫಿಫಾ: ಕಾರಣ ಇದುವೇ!
ಶಾರ್ದೂಲ್ ಠಾಕೂರ್ ಅವರು ಭಾರತಕ್ಕಾಗಿ ಎಲ್ಲಾ ಮೂರು ಸ್ವರೂಪಗಳನ್ನು ಆಡಿದ್ದಾರೆ. ಆದರೆ ಗಾಯದ ಕಾರಣ, ಅವರು ಯಾವುದೇ ಸ್ವರೂಪದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಭಾರತ ತಂಡದ ಪರ 8 ಟೆಸ್ಟ್ ಪಂದ್ಯಗಳಲ್ಲಿ 27 ವಿಕೆಟ್, 22 ODIಗಳಲ್ಲಿ 32 ವಿಕೆಟ್ ಮತ್ತು 25 T20 ಪಂದ್ಯಗಳಲ್ಲಿ 33 ವಿಕೆಟ್ ಪಡೆದಿದ್ದಾರೆ. ಜೊತೆಗೆ ಒಟ್ಟಾರೆಯಾಗಿ ಎಲ್ಲಾ ಮೂರು ಸ್ವರೂಪಗಳಲ್ಲಿ 400 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.