Rohit Sharma T20 WC 2024: ನಿನ್ನೆ (05 ಜೂನ್, ಬುಧವಾರ) ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಕ್ರಿಕೆಟ್ ಮೈದಾನದಲ್ಲಿ ಐರ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್ 2024 (T20 Worldcup 2024) ರ ಆರಂಭಿಕ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಎಂ.ಎಸ್. ಧೋನಿ ಅವರನ್ನೂ ಹಿಂದಿಕ್ಕುವ ಮೂಲಕ ಭಾರತದ ಅತ್ಯಂತ ಯಶಸ್ವಿ ಕ್ಯಾಪ್ಟನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನಿನ್ನೆ ನಡೆದ ಇಂಡಿಯಾ vs ಐರ್ಲೆಂಡ್ (India vs Ireland) ನಡುವಿನ ಪಂದ್ಯದಲ್ಲಿ 37 ಎಸೆತಗಳಲ್ಲಿ ಅಜೇಯ 52* ರನ್ ಗಳಿಸಿದ ರೋಹಿತ್ ಶರ್ಮಾ ಗಾಯಗೊಂಡು ಮೈದಾನದಿಂದ ನಿರ್ಗಮಿಸಿದರು. ಆದಾಗ್ಯೂ, ಅವರು ನಿನ್ನೆಯ ಪಂದ್ಯದಲ್ಲಿ ರೋಹಿತ್ ಶರ್ಮಾ ಹಲವು ದಾಖಲೆಗಳನ್ನು (Rohit Sharma Records) ಮುರಿದರು.
ಎಂ.ಎಸ್. ಧೋನಿಯನ್ನೂ ಹಿಂದಿಕ್ಕಿದ ರೋಹಿತ್ ಶರ್ಮಾ:
ವಾವಸ್ತವಾಗಿ, ರೋಹಿತ್ ಶರ್ಮಾ ತಾವು ಟೀಮ್ ಇಂಡಿಯಾ ನಾಯಕರಾಗಿ ಆಯ್ಕೆಯಾದ ಬಳಿಕ ಒಟ್ಟು 55 ಟಿ20ಐ ಪಂದ್ಯಗಳನ್ನು ಆಡಿದ್ದು ಅವುಗಳಲ್ಲಿ 42 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದಾರೆ. ಎಂ.ಎಸ್. ಧೋನಿ (MS Dhoni) ತಮ್ಮ ನಾಯಕತ್ವದ ಅವಧಿಯಲ್ಲಿ 73 ಪಂದ್ಯಗಳಲ್ಲಿ 41 (ಸೂಪರ್ ಓವರ್ ಗೆಲುವುಗಳನ್ನು ಎಣಿಕೆ ಮಾಡಲಾಗಿಲ್ಲ) ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ- ಐರ್ಲೆಂಡ್ ವಿರುದ್ದ ಕೇವಲ 16 ಓವರ್‌ಗಳಲ್ಲಿ 97 ರನ್ ಪಡೆದು ಗೆದ್ದು ಬೀಗಿದ ಟೀಂ ಇಂಡಿಯಾ..!
ಟಿ20ಐ ನಲ್ಲಿ 600 ಸಿಕ್ಸರ್‌ಗಳ ದಾಖಲೆ:
37 ಎಸೆತಗಳಲ್ಲಿ 52* ರನ್ ಗಳಿಸಿದ ರೋಹಿತ್ ಶರ್ಮಾ ಅವರ ಬಿರುಸಿನ ನಾಕ್ ಸಮಯದಲ್ಲಿ ಟಿ20ಐ ಪಂದ್ಯಗಳಲ್ಲಿ 600 ಬಿರುಸಿನ ನಾಕ್ ಸಮಯದಲ್ಲಿ 600 ಸಿಕ್ಸರ್‌ಗಳನ್ನು ಹೊಡೆದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
4000 ರನ್‌ಗಳ ಗಡಿ ದಾಟಿದ ರೋಹಿತ್:
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma is the captain of Team India) ನಿನ್ನೆಯ ಟಿ30ಯಲ್ಲಿ 4000 ರನ್‌ಗಳನ್ನು ಪೂರೈಸಿದ್ದು, ಈ ಸಾಧನೆ ಮಾಡಿದ ಎರಡನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಆಟದ ಎಲ್ಲಾ ಮೂರು ಸ್ವರೂಪಗಳಲ್ಲಿ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದು, ಪ್ರಥಮ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ- ತಮ್ಮವರಿಂದಲೇ 25 ಡಾಲರ್ ಪಡೆದು ಅಭಿಮಾನಿಗಳಿಗೆ ಔತಣಕೂಟ ಆಯೋಜನೆ: PCB ಕೃತ್ಯಕ್ಕೆ ಮಾಜಿ ನಾಯಕ ಕಿಡಿ
ಟಿ 20 ವಿಶ್ವಕಪ್‌ನಲ್ಲಿ 1000 ರನ್:
ನಿನ್ನೆಯ ಪಂದ್ಯದಲ್ಲಿ ಭುಜಕ್ಕೆ ನೋವಾದ ಕಾರಣ 37 ಎಸೆತಗಳಲ್ಲಿ ಅಜೇಯ 52* ರನ್ ಗಳಿಸಿ ಮೈದಾನದಿಂದ ನಿರ್ಗಮಿಸಿದ ರೋಹಿತ್ ಶರ್ಮಾ ಟಿ 20 ವಿಶ್ವಕಪ್‌ನಲ್ಲಿ 1000 ರನ್‌ಗಳನ್ನು ಪೂರೈಸಿದ್ದಾರೆ. ಈ ದಾಖಲೆಯಲ್ಲಿ ಮಾಡಿದವರಲ್ಲಿ ರೋಹಿತ್ ಶರ್ಮಾ ಎರಡನೇ ಭಾರತೀಯರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.