Team India : ಶ್ರೇಯಸ್ ಅಯ್ಯರ್ ಗೆ ಬಿಗ್ ಶಾಕ್ ನೀಡಲು ಬಂದ ಈ ಇಬ್ಬರು ಆಟಗಾರರು!

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಏಕದಿನ ಸರಣಿಯಲ್ಲಿ ಫ್ಲಾಪ್ ಆಗಿದ್ದರೂ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಗೆ ಅವಕಾಶ ನೀಡಲಾಗಿತ್ತು. ಒಂದು ವೇಳೆ ಈ ಸರಣಿಯಲ್ಲೂ ಶ್ರೇಯಸ್ ಅಯ್ಯರ್ ಸೋಲನುಭವಿಸಿದರೆ ಅವರ ಸ್ಥಾನದಲ್ಲಿ ಇಬ್ಬರು ಬಲಿಷ್ಠ ಆಟಗಾರರು ಟೀಂ ಇಂಡಿಯಾಕ್ಕೆ ಎಂಟ್ರಿ ಪಡೆಯಬಹುದು.

Written by - Channabasava A Kashinakunti | Last Updated : Jan 27, 2022, 04:25 PM IST
  • ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3 ಪಂದ್ಯಗಳ ಏಕದಿನ ಸರಣಿ ಫೆಬ್ರವರಿ 6 ರಿಂದ ಪ್ರಾರಂಭ
  • ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಏಕದಿನ ಸರಣಿಯಲ್ಲಿ ಫ್ಲಾಪ್
  • ಶೀಘ್ರದಲ್ಲೇ ಅವರು ಮತ್ತೊಮ್ಮೆ ಟೀಮ್ ಇಂಡಿಯಾ ಸೇರಬಹುದು
Team India : ಶ್ರೇಯಸ್ ಅಯ್ಯರ್ ಗೆ ಬಿಗ್ ಶಾಕ್ ನೀಡಲು ಬಂದ ಈ ಇಬ್ಬರು ಆಟಗಾರರು! title=

ನವದೆಹಲಿ : ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3 ಪಂದ್ಯಗಳ ಏಕದಿನ ಸರಣಿ ಫೆಬ್ರವರಿ 6 ರಿಂದ ಪ್ರಾರಂಭವಾಗಲಿದೆ. ಏಕದಿನ ಸರಣಿಯ ಬಳಿಕ 3 ಪಂದ್ಯಗಳ ಟಿ20 ಸರಣಿಯೂ ನಡೆಯಲಿದೆ. ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಏಕದಿನ ಮತ್ತು ಟಿ20 ಸರಣಿಗೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಏಕದಿನ ಸರಣಿಯಲ್ಲಿ ಫ್ಲಾಪ್ ಆಗಿದ್ದರೂ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಗೆ ಅವಕಾಶ ನೀಡಲಾಗಿತ್ತು. ಒಂದು ವೇಳೆ ಈ ಸರಣಿಯಲ್ಲೂ ಶ್ರೇಯಸ್ ಅಯ್ಯರ್ ಸೋಲನುಭವಿಸಿದರೆ ಅವರ ಸ್ಥಾನದಲ್ಲಿ ಇಬ್ಬರು ಬಲಿಷ್ಠ ಆಟಗಾರರು ಟೀಂ ಇಂಡಿಯಾಕ್ಕೆ ಎಂಟ್ರಿ ಪಡೆಯಬಹುದು.

1. ರಿಷಿ ಧವನ್

ಹಿಮಾಚಲ ಪ್ರದೇಶ ತಂಡವು ವಿಜಯ್ ಹಜಾರೆ ಟ್ರೋಫಿಯನ್ನು ಮೊದಲ ಬಾರಿಗೆ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರೆ, ಅದಕ್ಕೆ ಕಾರಣ ತಂಡದ ನಾಯಕ ರಿಷಿ ಧವನ್. ರಿಷಿ ಧವನ್(Rishi Dhawan) ಉತ್ತಮ ಪ್ರದರ್ಶನದ ಉದಾಹರಣೆಯನ್ನು ಪ್ರಸ್ತುತಪಡಿಸಿದರು. ರಿಷಿ ಧವನ್ ತಮ್ಮ ವೇಗದ ಬ್ಯಾಟಿಂಗ್ ಮತ್ತು ಮಾರಕ ಬೌಲಿಂಗ್‌ನಿಂದ ಎಲ್ಲರ ಮನ ಗೆದ್ದರು. 2020-21ರ ಋತುವಿನ 8 ಪಂದ್ಯಗಳಲ್ಲಿ, ಅವರು ಒಟ್ಟು 458 ರನ್ ಗಳಿಸಿದರು ಮತ್ತು 17 ವಿಕೆಟ್‌ಗಳನ್ನು ಪಡೆದರು. ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತಂಡದ ಆಯ್ಕೆ ವೇಳೆ ಆಯ್ಕೆಗಾರರು ರಿಷಿ ಧವನ್ ಹೆಸರನ್ನು ಪ್ರಸ್ತಾಪಿಸಿ ತಮ್ಮ ಕಣ್ಣು ಈ ಆಟಗಾರನ ಮೇಲಿದೆ ಎಂದು ಹೇಳಿದ್ದರು. ಈ ಆಟಗಾರನಿಗೆ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಅವಕಾಶ ಸಿಗದಿದ್ದರೂ, ಶೀಘ್ರದಲ್ಲೇ ಅವರು ಮತ್ತೊಮ್ಮೆ ಟೀಮ್ ಇಂಡಿಯಾ ಸೇರಬಹುದು. ರಿಷಿ ಧವನ್ 2016 ರಲ್ಲಿ ಟೀಮ್ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದಾರೆ, ಆದರೆ ಮೂರು ODIಗಳನ್ನು ಆಡಿದ ನಂತರ ಅವರಿಗೆ ಅವಕಾಶ ಸಿಗಲಿಲ್ಲ.

ಇದನ್ನೂ ಓದಿ : India vs West Indies : ಟೀಂ ಇಂಡಿಯಾಗೆ ಮೊದಲ ಭಾರೀ ಸ್ಫೋಟಕ ಆಲ್‌ರೌಂಡರ್ ಎಂಟ್ರಿ

2. ಶಾರುಖ್ ಖಾನ್

ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದ ಶಾರುಖ್ ಖಾನ್(Shahrukh Khan) ತಮ್ಮ ಉತ್ತಮ ಪ್ರದರ್ಶನದಿಂದ ಎಲ್ಲರ ಮನ ಗೆದ್ದಿದ್ದರು. ಕೆಲ ದಿನಗಳಿಂದ ದೇಶಿ ಕ್ರಿಕೆಟ್ ನಲ್ಲೂ ಸದ್ದು ಮಾಡುತ್ತಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ತಮಿಳುನಾಡು ಪರ ಆಡುತ್ತಿರುವ ಶಾರುಖ್ ಖಾನ್ 39 ಎಸೆತಗಳಲ್ಲಿ 7 ಬೌಂಡರಿ ಮತ್ತು 6 ಸಿಕ್ಸರ್ ಒಳಗೊಂಡ 79 ರನ್ ಗಳಿಸಿದರು. ಇದರೊಂದಿಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2021ರ ಫೈನಲ್‌ನಲ್ಲಿ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ತಮಿಳುನಾಡು ಗೆದ್ದಿದ್ದರು. ಇಂತಹ ಪರಿಸ್ಥಿತಿಯಲ್ಲಿ ಅವಕಾಶ ಸಿಕ್ಕರೆ ತಂಡದಲ್ಲಿ ಫಿನಿಶರ್ ಪಾತ್ರ ಮಾಡಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News