“ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿ ಆಘಾತಕಾರಿ”: ಪ್ರಧಾನಿ ಮೋದಿ

PM Narendra Modi Statement: “ಹಳೆಯ ಸಂಸತ್ ಭವನವನ್ನು ವಿದೇಶಿ ದೊರೆಗಳು ನಿರ್ಮಿಸಿದ್ದರೂ ಭಾರತೀಯರು ಅದರಲ್ಲಿ ಬೆವರು, ಹಣ ಹೂಡಿದ್ದಾರೆ” ಎಂದು ಶ್ರಮಿಕರಿಗೆ ಅಭಿನಂದನೆ ಸಲ್ಲಿಸಿದರು.

Written by - Bhavishya Shetty | Last Updated : Sep 18, 2023, 01:23 PM IST
    • ದೇಶದ 75 ವರ್ಷಗಳ ಸಂಸದೀಯ ಪಯಣವನ್ನು ಮತ್ತೊಮ್ಮೆ ನೆನಪಿಸಿಕೊಳ್ಳಬೇಕು
    • ಸಂಸತ್ತಿನ ಹಳೆಯ ಕಟ್ಟಡವು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡಲಿದೆ
    • ಪಿಎಂ ಮೋದಿ ಭಾಷಣದೊಂದಿಗೆ ಆರಂಭವಾದ ಸಂಸತ್ತಿನ ವಿಶೇಷ ಅಧಿವೇಶನ
“ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿ ಆಘಾತಕಾರಿ”: ಪ್ರಧಾನಿ ಮೋದಿ  title=
Prime Minister Narendra Modi

PM Narendra Modi Statement: ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದೊಂದಿಗೆ ಸಂಸತ್ತಿನ ವಿಶೇಷ ಅಧಿವೇಶನ ಆರಂಭವಾಗಿದೆ. ಈ ಸಂದರ್ಭದಲ್ಲಿ “ಸಂಸತ್ತಿನ ಹಳೆಯ ಕಟ್ಟಡವು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡಲಿದೆ” ಎಂದು ಪ್ರಧಾನಿ ಮೋದಿ ಹೇಳಿದರು.

“ಹಳೆಯ ಸಂಸತ್ ಭವನವನ್ನು ವಿದೇಶಿ ದೊರೆಗಳು ನಿರ್ಮಿಸಿದ್ದರೂ ಭಾರತೀಯರು ಅದರಲ್ಲಿ ಬೆವರು, ಹಣ ಹೂಡಿದ್ದಾರೆ” ಎಂದು ಶ್ರಮಿಕರಿಗೆ ಅಭಿನಂದನೆ ಸಲ್ಲಿಸಿದರು.

ಇದನ್ನೂ ಓದಿ: ಇನ್ನು ಈ ರಾಶಿಯವರ ಜೀವನದಲ್ಲಿ ಎಲ್ಲವೂ ಮಂಗಳವೇ! ಹೆಜ್ಜೆ ಇಟ್ಟರೆ ಜಯ, ಕೈ ಇಟ್ಟರೆ ಧನ ! 

“ದೇಶದ 75 ವರ್ಷಗಳ ಸಂಸದೀಯ ಪಯಣವನ್ನು ಮತ್ತೊಮ್ಮೆ ನೆನಪಿಸಿಕೊಳ್ಳಬೇಕು. ಹೊಸ ಸದನಕ್ಕೆ ತೆರಳುವ ಮೊದಲು ಆ ಸ್ಪೂರ್ತಿದಾಯಕ ಕ್ಷಣಗಳು, ಇತಿಹಾಸದ ಪ್ರಮುಖ ಕ್ಷಣಗಳನ್ನು ಮುನ್ನಡೆಸಬೇಕು. ಈ ಐತಿಹಾಸಿಕ ಕಟ್ಟಡಕ್ಕೆ ನಾವೆಲ್ಲರೂ ವಿದಾಯ ಹೇಳುತ್ತಿದ್ದೇವೆ. ಸ್ವಾತಂತ್ರ್ಯದ ಮೊದಲು, ಈ ಭವನವು ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್‌’ನ ಸ್ಥಾನವಾಗಿತ್ತು. ಸ್ವಾತಂತ್ರ್ಯದ ನಂತರ, ಇದು ಸಂಸತ್ ಭವನ ಎಂದು ಮಾನ್ಯತೆ ಪಡೆಯಿತು” ಎಂದು ಹೇಳಿದರು.

“ಈ ಕಟ್ಟಡವನ್ನು ನಿರ್ಮಿಸುವ ನಿರ್ಧಾರ ವಿದೇಶಿ ಆಡಳಿತಗಾರರದ್ದು ನಿಜ. ಆದರೆ ಇದನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ ಮತ್ತು ಈ ಕಟ್ಟಡದ ನಿರ್ಮಾಣಕ್ಕೆ ನನ್ನ ದೇಶವಾಸಿಗಳ ಬೆವರು ಸವೆಸಿದ್ದಾರೆ ಎಂದು ನಾವು ಹೆಮ್ಮೆಯಿಂದ ಹೇಳಬಹುದು” ಎಂದು ಪ್ರಧಾನಿ ಮೋದಿ ಹೇಳಿದರು.

ಪ್ರಜಾಪ್ರಭುತ್ವದ 75 ವರ್ಷಗಳ ಪಯಣ…

ನಮ್ಮ 75 ವರ್ಷಗಳ ಪಯಣವು ಅನೇಕ ಪ್ರಜಾಪ್ರಭುತ್ವ ಸಂಪ್ರದಾಯಗಳು ಮತ್ತು ಪ್ರಕ್ರಿಯೆಗಳಲ್ಲಿ ಅತ್ಯುತ್ತಮವಾದುದನ್ನು ಸೃಷ್ಟಿಸಿದೆ ಮತ್ತು ಈ ಸದನದಲ್ಲಿದ್ದ ಪ್ರತಿಯೊಬ್ಬ ವ್ಯಕ್ತಿಯೂ ಸಕ್ರಿಯವಾಗಿ ಕೊಡುಗೆ ನೀಡಿದ್ದಾರೆ. ನಾವು ಹೊಸ ಕಟ್ಟಡಕ್ಕೆ ಹೋಗಬಹುದು ಆದರೆ ಹಳೆಯ ಕಟ್ಟಡ ಅಂದರೆ ಈ ಕಟ್ಟಡವು ಮುಂದಿನ ಪೀಳಿಗೆಗೆ ಯಾವಾಗಲೂ ಸ್ಫೂರ್ತಿ ನೀಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

G-20 ಯಶಸ್ಸಿಗೆ ಶ್ಲಾಘನೆ:

ಸಂಸತ್ತಿನ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಇಂದು ನೀವು ಜಿ-20 ಯಶಸ್ಸನ್ನು ಸರ್ವಾನುಮತದಿಂದ ಹೊಗಳಿದ್ದೀರಿ. ನಿಮಗೆಲ್ಲರಿಗೂ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಜಿ-20ಯ ಯಶಸ್ಸು ದೇಶದ 140 ಕೋಟಿ ನಾಗರಿಕರ ಯಶಸ್ಸು. ಇದು ಭಾರತದ ಯಶಸ್ಸು, ಯಾವುದೇ ವ್ಯಕ್ತಿ ಅಥವಾ ಪಕ್ಷದ್ದಲ್ಲ. ಇದು ನಮ್ಮೆಲ್ಲರ ಸಂಭ್ರಮಕ್ಕೆ ಕಾರಣವಾಗಿದೆ” ಎಂದರು.

“ಈ ಸದನಕ್ಕೆ ವಿದಾಯ ಹೇಳುವುದು ಅತ್ಯಂತ ಭಾವನಾತ್ಮಕ ಕ್ಷಣವಾಗಿದೆ” ಎಂದು ಹೇಳಿದ ಪ್ರಧಾನಿ ಮೋದಿ, “ಒಂದು ಕುಟುಂಬವು ಹಳೆಯ ಮನೆಯನ್ನು ತೊರೆದು ಹೊಸ ಮನೆಗೆ ಹೋದರೂ ಸಹ, ಹಲವಾರು ನೆನಪುಗಳು ಅದನ್ನು ಕೆಲವು ಕ್ಷಣಗಳವರೆಗೆ ಹಿಡಿದಿಟ್ಟುಕೊಳ್ಳುತ್ತವೆ. ನಾವು ಈ ಸದನವನ್ನು ತೊರೆಯುತ್ತಿದ್ದರೂ ಸಹ ನಮ್ಮ ಮನಸ್ಸು ಭಾವನೆಗಳಿಂದ ಮತ್ತು ಅನೇಕ ನೆನಪುಗಳಿಂದ ತುಂಬಿದೆ” ಎಂದು ಭಾವುಕ ನುಡಿಗಳನ್ನಾಡಿದರು.

“ನಾನು ಮೊದಲ ಬಾರಿಗೆ ಸಂಸತ್ ಸದಸ್ಯನಾದಾಗ ಮತ್ತು ಸಂಸದನಾಗಿ ಮೊದಲ ಬಾರಿಗೆ ಈ ಕಟ್ಟಡವನ್ನು ಪ್ರವೇಶಿಸಿದಾಗ ಸಹಜವಾಗಿಯೇ ತಲೆಬಾಗಿ ಈ ಸದನದ ಬಾಗಿಲಲ್ಲಿ ಮೊದಲ ಹೆಜ್ಜೆ ಇಟ್ಟೆ. ಆ ಸಂದರ್ಭದಲ್ಲಿ ನನ್ನ ಭಾವನೆಗಳು ತುಂಬಿದ್ದವು” ಎಂದರು.

ಇದನ್ನೂ ಓದಿ: ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಖ್ಯಾತ ಯೂಟ್ಯೂಬರ್‌..! ʼಮೆಗಾ ಲೋ ಡಾನ್‌ʼ ಟೀಸರ್‌ ಔಟ್‌

ಸಂಸತ್ ದಾಳಿಯ ಪ್ರಸ್ತಾಪ:

ಪ್ರಧಾನಿ ಮೋದಿ ಅವರು ಸಂಸತ್ ದಾಳಿಯ ಬಗ್ಗೆ ಪ್ರಸ್ತಾಪಿಸಿದ್ದು, “ಆ ಭಯೋತ್ಪಾದಕ ದಾಳಿಯು ಒಂದು ರೀತಿಯಲ್ಲಿ ಪ್ರಜಾಪ್ರಭುತ್ವದ ಜೀವಂತ ಆತ್ಮದ ಮೇಲಿನ ದಾಳಿ. ಆ ಘಟನೆಯನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ. ಭಯೋತ್ಪಾದಕರ ವಿರುದ್ಧ ಹೋರಾಡುತ್ತಾ, ಸಂಸತ್ತು ಮತ್ತು ಸದಸ್ಯರನ್ನು ರಕ್ಷಿಸಲೆಂದು ಗುಂಡಿಗೆ ಎದೆಯೊಡ್ಡಿ ನಿಂತು ವೀರ ಮರಣ ಹೊಂದಿದ ಪ್ರತಿಯೊಬ್ಬರಿಗೂ ನಮನ ಸಲ್ಲಿಸುತ್ತೇನೆ” ಎಂದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Trending News