ವಿಶ್ವಕಪ್’ನಲ್ಲಿ ಟೀಂ ಇಂಡಿಯಾದ ದೊಡ್ಡ ದೌರ್ಬಲ್ಯ ಈ ಆಟಗಾರ…!- ಪಾಕ್ ಆಟಗಾರನ ಬಹಿರಂಗ ಹೇಳಿಕೆ ವೈರಲ್

Misbah Ul Haq on Shreyas Iyer, Cricket News In Kannada: “ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾದ ದೊಡ್ಡ ದೌರ್ಬಲ್ಯವಾಗಿದ್ದಾರೆ. ಇದೇ ಕಾರಣದಿಂದ ಹಾರ್ದಿಕ್ ಪಾಂಡ್ಯ ಬಂದ ಕೂಡಲೇ ಅಯ್ಯರ್ ಅವರನ್ನು ತಂಡದಿಂದ ಕೆಳಗಿಳಿಸಿ” ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ.

Written by - Bhavishya Shetty | Last Updated : Nov 1, 2023, 01:55 PM IST
    • ಟೀಮ್ ಇಂಡಿಯಾದ ದೌರ್ಬಲ್ಯದ ಬಗ್ಗೆ ಮಾತನಾಡಿದ ಮಿಸ್ಬಾ-ಉಲ್-ಹಕ್
    • ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮತ್ತು ನಾಯಕ ಮಿಸ್ಬಾ-ಉಲ್-ಹಕ್
    • ಭಾರತ ಕ್ರಿಕೆಟ್ ತಂಡ ಸತತವಾಗಿ 6 ಗೆಲುವು ಸಾಧಿಸಿದೆ
ವಿಶ್ವಕಪ್’ನಲ್ಲಿ ಟೀಂ ಇಂಡಿಯಾದ ದೊಡ್ಡ ದೌರ್ಬಲ್ಯ ಈ ಆಟಗಾರ…!- ಪಾಕ್ ಆಟಗಾರನ ಬಹಿರಂಗ ಹೇಳಿಕೆ ವೈರಲ್ title=
Misbah-ul-Haq Statement on Shreyas Iyer

Misbah Ul Haq on Shreyas Iyer: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮತ್ತು ನಾಯಕ ಮಿಸ್ಬಾ-ಉಲ್-ಹಕ್ ಟೀಮ್ ಇಂಡಿಯಾದ ದೌರ್ಬಲ್ಯದ ಬಗ್ಗೆ ಮಾತನಾಡಿದ್ದಾರೆ. ಭಾರತ ಕ್ರಿಕೆಟ್ ತಂಡ ಸತತವಾಗಿ 6 ಗೆಲುವು ಸಾಧಿಸಿದೆ. ಇದರ ಹೊರತಾಗಿಯೂ ಮಿಸ್ಬಾ-ಉಲ್-ಹಕ್ ಇಂಥಾ ಹೇಳಿಕೆಯನ್ನು ನೀಡಿದ್ದಾರೆ.

“ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾದ ದೊಡ್ಡ ದೌರ್ಬಲ್ಯವಾಗಿದ್ದಾರೆ. ಇದೇ ಕಾರಣದಿಂದ ಹಾರ್ದಿಕ್ ಪಾಂಡ್ಯ ಬಂದ ಕೂಡಲೇ ಅಯ್ಯರ್ ಅವರನ್ನು ತಂಡದಿಂದ ಕೆಳಗಿಳಿಸಿ” ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಪಾಕ್ ನಾಯಕ ಬಾಬರ್ ಅಜಮ್ ವಾಟ್ಸಾಪ್ ಚಾಟ್ ಲೀಕ್ ಪ್ರಕರಣ: ಬಾಬರ್ ಬೆಂಬಲಕ್ಕೆ ನಿಂತ ವಕಾರ್ ಯೂನಿಸ್

ಅಯ್ಯರ್ ಜಾಗದಲ್ಲಿ ಯಾರಿಗೆ ಅವಕಾಶ ನೀಡಬೇಕು?

ವಾಸಿಂ ಅಕ್ರಂ ಕೂಡ ಮಿಸ್ಬಾ ಹೇಳಿಕೆಯನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ಅಯ್ಯರ್ ಸ್ಥಾನದಲ್ಲಿ ಇಶಾನ್ ಕಿಶನ್’ಗೆ ಸ್ಥಾನ ನೀಡಿ ಎಂದು ಹೇಳಿದ್ದಾರೆ.

“ಯುವರಾಜ್ ಸಿಂಗ್ ನಿವೃತ್ತಿ ಬಳಿಕ ಟೀಂ ಇಂಡಿಯಾದ 4ನೇ ಕ್ರಮಾಂಕದಲ್ಲಿ ಪ್ರಭಾವಶಾಲಿ ಆಟಗಾರ ಯಾರೂ ಇರಲಿಲ್ಲ. ಆದರೆ ಆ ಬಳಿಕ ಶ್ರೇಯಸ್ ಅಯ್ಯರ್ ಅವರನ್ನು ಸೇರ್ಪಡೆಗೊಳಿಸಲಾಯಿತು. ಇದೀಗ ಅವರೂ ಸಹ ಕಳಪೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ಹೀಗಾಗಿ ಅಯ್ಯರ್ ಅವರನ್ನು ಕೈಬಿಟ್ಟು ಕೆಎಲ್ ರಾಹುಲ್ ಅವರನ್ನು ನಂಬರ್ ಒನ್ ಸ್ಥಾನದಲ್ಲಿ ನಿಲ್ಲಿಸಿ” ಎಂದು ಮಿಸ್ಬಾ ಒತ್ತಾಯಿಸಿದ್ದಾರೆ. ಮತ್ತೊಂದೆಡೆ ಎಡಗೈ ಬ್ಯಾಟ್ಸ್‌ಮನ್ ಇಶಾನ್ ಕಿಶನ್‌’ಗೆ ಅವಕಾಶ ನೀಡುವಂತೆ ಅಕ್ರಂ ಹೇಳಿದ್ದಾರೆ.

ಇದನ್ನೂ ಓದಿ: ಲೈವ್ ಟಿವಿಯಲ್ಲೇ ಪಾಕ್ ನಾಯಕ ಬಾಬರ್ ಅಜಂ ವಾಟ್ಸಪ್ ಚಾಟ್ ಲೀಕ್ ಮಾಡಿದ ಪಿಸಿಬಿ ಅಧ್ಯಕ್ಷ! ಏನಿತ್ತು ಅದರಲ್ಲಿ?

2023ರ ವಿಶ್ವಕಪ್‌’ನಲ್ಲಿ ಶ್ರೇಯಸ್ ಅಯ್ಯರ್ ಸಾಧನೆ:

ಶ್ರೇಯಸ್ ಅಯ್ಯರ್ ಈ ಬಾರಿಯ ವಿಶ್ವಕಪ್’ನಲ್ಲಿ ವಿಶೇಷ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಅಯ್ಯರ್ ಇದುವರೆಗೆ ಒಟ್ಟು 6 ಪಂದ್ಯಗಳನ್ನಾಡಿದ್ದು, ಕೇವಲ 134 ರನ್ ಗಳಿಸಿದ್ದಾರೆ. ಒಂದು ಅರ್ಧಶತಕದ ಇನ್ನಿಂಗ್ಸ್ ಆಡಿದ್ದಾರೆ. ಹೀಗಿರುವಾಗ ಮುಂದಿನ ಪಂದ್ಯಗಳಲ್ಲಿ ಸೂರ್ಯ ಕುಮಾರ್ ಯಾದವ್ ಅವರನ್ನು ಆ ಸ್ಥಾನಕ್ಕೆ ಇಳಿಸುವ ಯೋಜನೆ ಇದೆ. ಒನ್ನೊಂದೆಡೆ ಪಾಂಡ್ಯ ವಾಪಸಾದ ಬಳಿಕ ಶ್ರೇಯಸ್ ಅಯ್ಯರ್ ಔಟ್ ಆಗಬೇಕಾಗಬಹುದು ಎಂಬ ಸುದ್ದಿ ಎಲ್ಲೆಡೆ ಕೇಳಿ ಬರುತ್ತಿವೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News