ಶ್ರೀಲಂಕಾ ಬಳಿಕ ವಿಶ್ವಕಪ್ ನಿಂದ ಹೊರಗಿಳಿಯಲಿದ್ದಾರೆಯೇ ಈ ತಂಡದ ನಾಯಕ ! ಹೊರ ಬಿದ್ದಿದೆ ಶಾಕಿಂಗ್ ಮಾಹಿತಿ

Shocking revelation about Pat Cummins: ಈ ನಡುವೆ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬಗ್ಗೆ ಒಂದು ದೊಡ್ಡ ಸುದ್ದಿ ಹೊರಬಿದ್ದಿದೆ. ತಂಡದ ಮಾಜಿ ಕ್ರಿಕೆಟಿಗ ಈ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. 

Written by - Ranjitha R K | Last Updated : Oct 16, 2023, 01:40 PM IST
  • ವಿಶ್ವಕಪ್ 2023 ರಲ್ಲಿ ಇದುವರೆಗೆ 13 ಪಂದ್ಯಗಳು ನಡೆದಿವೆ.
  • ಈ ತಂಡದ ನಾಯಕನ ಬಗ್ಗೆ ಶಾಕಿಂಗ್ ಮಾಹಿತಿ
  • ವಿಶ್ವಕಪ್ ವೇಳೆ ನಾಯಕ ಸ್ಥಾನದಿಂದ ಕೆಳಗಿಳಿಯುತ್ತಾರಾ?
ಶ್ರೀಲಂಕಾ ಬಳಿಕ ವಿಶ್ವಕಪ್ ನಿಂದ ಹೊರಗಿಳಿಯಲಿದ್ದಾರೆಯೇ ಈ ತಂಡದ ನಾಯಕ !  ಹೊರ ಬಿದ್ದಿದೆ ಶಾಕಿಂಗ್ ಮಾಹಿತಿ  title=

Shocking revelation about Pat Cummins: ವಿಶ್ವಕಪ್ 2023 ರಲ್ಲಿ ಇದುವರೆಗೆ 13 ಪಂದ್ಯಗಳು ನಡೆದಿವೆ. ಇವುಗಳ ಆಧಾರದ ಮೇಲೆ ಭಾರತ ಮತ್ತು ನ್ಯೂಜಿಲೆಂಡ್ 6 ಅಂಕಗಳೊಂದಿಗೆ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿವೆ. ದಕ್ಷಿಣ ಆಫ್ರಿಕಾ ಮೂರನೇ ಸ್ಥಾನದಲ್ಲಿದ್ದರೆ ಪಾಕಿಸ್ತಾನ ನಾಲ್ಕನೇ ಸ್ಥಾನದಲ್ಲಿದೆ. ಇಂಗ್ಲೆಂಡ್, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ 2 ಅಂಕಗಳೊಂದಿಗೆ ಐದು, ಆರು ಮತ್ತು ಏಳನೇ ಸ್ಥಾನಗಳಲ್ಲಿದ್ದು, ಶ್ರೀಲಂಕಾ, ನೆದರ್ಲ್ಯಾಂಡ್ಸ್ ಮತ್ತು ಆಸ್ಟ್ರೇಲಿಯಾ ಇನ್ನೂ ಖಾತೆ ತೆರೆದಿಲ್ಲ. ಈ ನಡುವೆ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬಗ್ಗೆ ಒಂದು ದೊಡ್ಡ ಸುದ್ದಿ ಹೊರಬಿದ್ದಿದೆ. ತಂಡದ ಮಾಜಿ ಕ್ರಿಕೆಟಿಗ ಈ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. 

ನಾಯಕನ ಬಗ್ಗೆ ಶಾಕಿಂಗ್ ಮಾಹಿತಿ : 
ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್ 2023 ರ ಮಧ್ಯೆ, ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಮೈಕೆಲ್ ಕ್ಲಾರ್ಕ್,  ಪ್ಯಾಟ್ ಕಮಿನ್ಸ್ ಬಗ್ಗೆ ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಪ್ಯಾಟ್ ಕಮಿನ್ಸ್ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯನ್ ತಂಡದ  ಸಾರಥ್ಯ ವಹಿಸಿದ್ದಾರೆ. ಮುಂದಿನ ಪಂದ್ಯಕ್ಕೆ ಪ್ಯಾಟ್ ಕಮಿನ್ಸ್ ಅವರನ್ನು ಆಯ್ಕೆ ಮಾಡುವುದಿಲ್ಲ ಎನ್ನುವ ವಿಚಾರ ನಿನ್ನೆ ರಾತ್ರಿ ಗೊತ್ತಾಗಿದೆ ಎಂದು ಸ್ಕೈ ಸ್ಪೋರ್ಟ್ಸ್ ರೇಡಿಯೊದ ಬಿಗ್ ಬ್ರೇಕ್‌ಫಾಸ್ಟ್ ಶೋನಲ್ಲಿ ಕ್ಲಾರ್ಕ್ ಹೇಳಿದ್ದಾರೆ. ನಾವು ನಮ್ಮ ವಿಕೆಟ್‌ಕೀಪರ್‌ನನ್ನು ತೆಗೆದುಹಾಕಿದ್ದೇವೆ ಎಂದಿದ್ದಾರೆ.  ವಿಕೆಟ್‌ಕೀಪರ್‌ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿರುತ್ತಾರೆ. ಅವರಿಗೆ ಒಂದು ಅವಕಾಶ ನೀಡಲಾಗಿತ್ತು. ಆದರೆ ಈಗ ಅವರನ್ನು ಕೈಬಿಡಲಾಗಿದೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ : ವಿಶ್ವ ಚಾಂಪಿಯನ್ನರಿಗೆ ನಾಚಿಗೇಡು ! ಅತ್ಯಂತ ಕಳಪೆ ದಾಖಲೆಯನ್ನು ತನ್ನ ಹೆಸರಿಗೆ ಸೇರಿಸಿಕೊಂಡ ಇಂಗ್ಲೆಂಡ್ !

ವಿಶ್ವಕಪ್ ವೇಳೆ ನಾಯಕ ಸ್ಥಾನದಿಂದ ಕೆಳಗಿಳಿಯುತ್ತಾರಾ? : 
ತಂಡದ ನಾಯಕನನ್ನು ಬದಲು ಮಾಡುವ ಬಗ್ಗೆ ಚರ್ಚೆಯಾಗುತ್ತಿದೆ. ಅಲೆಕ್ಸ್ ಕ್ಯಾರಿಗೆ ಕೇವಲ ಒಂದು ಪಂದ್ಯದಲ್ಲಿ ಅವಕಾಶ ನೀಡುವುದಾದರೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬಾರದಿತ್ತು. ಪ್ಯಾಟ್ ಕಮಿನ್ಸ್ ಅವರನ್ನು ಕೈಬಿಡಲಾಗುತ್ತಿದ್ದು, ಅವರು ಮುಂದಿನ  ಪಂದ್ಯಗಳಲ್ಲಿ ತಂಡದ ನಾಯಕತ್ವವನ್ನು ವಹಿಸದಿದ್ದರೆ, ನಾಯಕನ ಆಯ್ಕೆಯೇ ಸರಿಯಿಲ್ಲ ಎಂದಾಯಿತು ಎಂದು ಮೈಕೆಲ್ ಕ್ಲಾರ್ಕ್ ಅಭಿಪ್ರಾಯ ಪಟ್ಟಿದ್ದಾರೆ. 

ಅವಕಾಶಗಳನ್ನು ಕಳೆದುಕೊಂಡ ಆಸ್ಟ್ರೇಲಿಯಾ: 
ಆಟಗಾರರು  'ನಾವು ತಯಾರಿರಲಿಲ್ಲ ಎಂದು ಹೇಳುವುದನ್ನು ಕೇಳಿದ್ದೇನೆ. ನಿಮ್ಮ ಬಳಿ ಬಹಳಷ್ಟು ಅವಕಾಶಗಳಿತ್ತು ಆದರೆ ಅದ್ಯಾವುದನ್ನೂ ನೀವು ಬಳಸಿಕೊಳ್ಳಲಿಲ್ಲ. ಉತ್ತಮ ಆಟಗಾರರನ್ನು ಆಯ್ಕೆ ಮಾಡಿಲ್ಲ. ನಾವು ಮೊದಲು ಬ್ಯಾಟ್ ಮಾಡುತ್ತೇವೆಯೇ ಅಥವಾ ಮೊದಲು ಬೌಲಿಂಗ್ ಮಾಡುತ್ತೇವೆ ಎನ್ನುವ ನಿರ್ಧಾರ ಕೂಡಾ ಸರಿಯಾಗಿ ತೆಗೆದುಕೊಳ್ಳಲಿಲ್ಲ. ಇನ್ನು 'ಯಾರು ಯಾವ ಕ್ರಮಾಂಕದಲ್ಲಿ ಆಡಬೇಕು ಎನ್ನುವ ನಿರ್ಧಾರವೂ ತಪ್ಪಾಗಿತ್ತು ಎಂದು  ಮೈಕೆಲ್ ಕ್ಲಾರ್ಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೀವು ನಿಮ್ಮ ನಾಯಕನನ್ನು ಆಯ್ಕೆ ಮಾಡಲಿಲ್ಲ.ನಾಯಕನಿಗೆ ಕೆಲವು ಪಂದ್ಯಗಳಲ್ಲಿ ನಾಯಕತ್ವ ವಹಿಸುವ ಅವಕಾಶ ನೀಡಬೇಕು. ಪ್ಯಾಟ್ ಕಮ್ಮಿನ್ಸ್  ಭಾರತದಲ್ಲಿ ಆಡುವ ಸಾಮರ್ಥ್ಯ ಹೊಂದಿದ್ದಾರೆ ಆದರೆ ಮ್ಯಾನೇಜ್‌ಮೆಂಟ್ ಅವರಿಗೆ ಒಂದು ಪಂದ್ಯದಿಂದ ವಿಶ್ರಾಂತಿ ನೀಡಿದೆ. 

ಇದನ್ನೂ ಓದಿ : ವಿಶ್ವಕಪ್ 2023: ಭಾರತದ ಮುಂದಿನ ಪಂದ್ಯ ಯಾವಾಗ? ಪಾಕ್‌ ಬಳಿಕ ಈಗ ಯಾರ ಸರದಿ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News