ಪ್ರವೀಣ್ ಹತ್ಯೆಯಿಂದ ಸರ್ಕಾರ, ನಾಯಕರ ವೈಫಲ್ಯ ಬೀದಿಗೆ ಬಂದಿದ್ದು ಬಿಜೆಪಿ ಮತ್ತು ಸರ್ಕಾರದ ವರ್ಚಸ್ಸಿಗೆ ಕೊಡಲಿ ಪೆಟ್ಟು ಬಿದ್ದಿದೆ. ಈ ಹಿನ್ನೆಲೆಯಲ್ಲಿ ಡ್ಯಾಮೇಜ್ ಕಂಟ್ರೋಲ್ ಮಾಡಲು ಯಡಿಯೂರಪ್ಪ ಪ್ಲಾನ್ ಮಾಡಿದ್ದಾರೆ. ಪಕ್ಷ ಮತ್ತು ಸರ್ಕಾರದ ಬಗ್ಗೆ ತಲೆ ಕೆಡಿಸಿಕೊಂಡಿರುವ ಬಿಎಸ್ವೈ, ಪಕ್ಷ ಸಂಘಟನೆ ಹೆಸರಿನಲ್ಲಿ ರಾಜ್ಯ ಪ್ರವಾಸಕ್ಕೆ ಚಿಂತನೆ ನಡೆಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಆರ್.ಅಶೋಕ್ ಮುಖ್ಯ ಕಾರಣ ಯಡಿಯೂರಪ್ಪ ಸಿಎಂ ಆಗೋವರೆಗೂ ಅಶೋಕ್ ಕೆಲಸ ಬಲೆ ಕಟ್ಟಲಾರದು. ಮುಂದಿನ ಚುನಾವಣೆ ಕೂಡ ಬಿಎಸ್ವೈ, ಬೊಮ್ಮಾಯಿ ನೇತೃತ್ವದಲ್ಲೇ ನಡೆಯಲಿದೆ. ಹೀಗಂತ ಕಂದಾಯ ಸಚಿವ ಅಶೋಕ್ ಎದುರಲ್ಲೇ MTB ನಾಗರಾಜ್ ಹಾಡಿಹೊಗಳಿದ್ದಾರೆ.
ಪ್ರಧಾನಿ ಮೋದಿ ರಾಜ್ಯ ಪ್ರವಾಸ ಅತ್ತ ಬಿಎಸ್ವೈ ಇಂಗ್ಲೆಡ್ಗೆ ಪ್ರಯಾಣ!
ಕುಟುಂಬ ಸಮೇತರಾಗಿ ಎರಡು ವಾರ ವಿದೇಶ ಪ್ರಯಾಣದಲ್ಲಿರುವ ಬಿಎಸ್ವೈ. ವಿದೇಶ ಪ್ರವಾಸದಲ್ಲಿ ರಾಜ್ಯ ರಾಜಕೀಯದ ಬಗ್ಗೆ ಕಣ್ಣಿಟ್ಟಿರುವ ಯಡಿಯೂರಪ್ಪ.
ಇನ್ನೂ 10 ವರ್ಷಗಳ ಕಾಲ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡ್ತೇನೆ.. ಬರುವ ವಿಧಾನಸಭಾ ಚುನಾವಣೆಗಾಗಿ ಈಗಿನಿಂದಲೇ ಕೆಲಸ ಮಾಡುವೆ ಎಂದು ಮಾಜಿ ಸಿಎಂ ಬಿಎಸ್ವೈ ಭಾವುಕರಾಗಿ ಹೇಳಿಕೆ ನೀಡಿದ್ದಾರೆ. ವಿಜಯಪುರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಬಿಎಸ್ವೈ, ಯಡಿಯೂರಪ್ಪಗೆ 79, 80 ವಯಸ್ಸಾಯ್ತು ಅಂತಾ ಯೋಚನೆ ಮಾಡಬೇಡಿ. 90 ವರ್ಷ ದಾಟುವವರೆಗೂ ಇದೇ ರೀತಿ ಚಟುವಟಿಕೆಯಿಂದ ಕೆಲಸ ಮಾಡ್ತೇನೆ ಎಂದಿದ್ದಾರೆ.
ಬಿಎಸ್ವೈ ಪುತ್ರ ವಿಜಯೇಂದ್ರ ಮುಂದೊಂದು ದಿನ ಸಿಎಂ ಆಗ್ತಾರೆ. ವಿಜಯೇಂದ್ರ ಶಕ್ತಿ, ತಾಕತ್ತು ಏನು ಅನ್ನೋದು ನಾನು ನೋಡಿದ್ದೇನೆ. ನಾನು ಬಿ.ವೈ.ವಿಜಯೇಂದ್ರ ಜೊತೆ ಪಕ್ಷ ಸಂಘಟನೆ ಮಾಡಿದ್ದೇನೆ. ಬಿಜೆಪಿ ಗೆಲ್ಲದ ಕ್ಷೇತ್ರದಲ್ಲಿ ವಿಜಯೇಂದ್ರ ಹೂವು ಅರಳಿಸಿದ್ದಾರೆ. ಬಿ.ವೈ.ವಿಜಯೇಂದ್ರನನ್ನು ತುಳಿಯುವ ಶಕ್ತಿ ಯಾರಿಗೂ ಇಲ್ಲ. ಮುಂದೊಂದು ದಿನ ವಿಜಯೇಂದ್ರಗೆ ಸಿಎಂ ಆಗುವ ಶಕ್ತಿಯಿದೆ. ಕೊಪ್ಪಳದಲ್ಲಿ ಕುರಿ ಉಣ್ಣೆ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ ಹೇಳಿಕೆ.
ದೇವನಹಳ್ಳಿಯ ಐವಿಸಿ ರಸ್ತೆಯಲ್ಲಿರುವ ಖಾಸಗಿ ಶಾಲೆಯಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವೂ 150ಕ್ಕೂ ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ನಡೆಯುತ್ತಿರುವ ಪ್ರಸಕ್ತ ವಿದ್ಯಮಾನಗಳ ವಿಚಾರ
ಬಿಎಸ್ವೈ ಸಿಎಂ ಆಗಿದ್ರೇ ಈ ರೀತಿ ನಡೆಯುತ್ತಿರಲಿಲ್ಲ ಅಂತಾ ಚರ್ಚೆ.
ಹಾಗೇನೂ ಇಲ್ಲ ಈಗಿರುವ ಸಿಎಂ ಬೊಮ್ಮಾಯಿ ಒಳ್ಳೆ ಕೆಲಸ ಮಾಡ್ತಿದ್ದಾರೆ
ಬೆಳಗಾವಿಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯೆ.
ಧರ್ಮ ಮತ್ತು ಅದರ ನಂಬಿಕೆಗಳಿಗಿಂತ ಸಂವಿಧಾನವು ಸರ್ವೋಚ್ಚವಾಗಿದೆ ಎಂದು ಹೈಕೋರ್ಟ್ನ ತೀರ್ಪು ಸಾಬೀತುಪಡಿಸಿದೆ. ನ್ಯಾಯಾಲಯದ ತೀರ್ಪನ್ನು ಗೌರವಿಸುವಂತೆ ಮತ್ತು ಇನ್ನು ಮುಂದೆ ಈ ವಿಷಯವನ್ನು ಅನಗತ್ಯವಾಗಿ ವಿವಾದ ಮಾಡದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿನಂತಿಸಿದರು.
BS Yadiyurappa Resignation - ರಾಜ್ಯದ ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಅವರ 4ನೇ ಕಾರ್ಯಕಾಲ ಕೂಡ ಬೇಗನೆ ಮುಕ್ತಾಯಗೊಂಡಿದೆ. ಇಂತಹ ಪ್ರಬಲ ನಾಯಕ 'ರಾಜಾಹುಲಿ' ಎಂದೇ ಖ್ಯಾತ BSY ಕೇವಲ ಎರಡು ವರ್ಷಗಳಲ್ಲಿ ಕರ್ನಾಟಕದ ಮುಖ್ಯಮಂತ್ರಿ ಹುದ್ದೆಗೆ ಏಕೆ ರಾಜೀನಾಮೆ ನೀಡಿದರು? ಆ ವಿಶೇಷ ಕಾರಣಗಳು ಯಾವುವು? ಯಾವ ಕಾರಣದಿಂದ ಹೈ ಕಮಾಂಡ್ಅವರಿಗೆ ರಾಜೀನಾಮೆಯನ್ನು ನೀಡಲು ಸೂಚಿಸಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಇಲ್ಲಿಯವರೆಗೆ ನನ್ನನ್ನು ರಾಜೀನಾಮೆ ನೀಡುವಂತೆ ಕೇಳಿಲ್ಲ. ಜುಲೈ 25 ರ ನಂತರವೇ ನಾನು ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ಬಿಜೆಪಿ ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಮತ್ತು ಪಕ್ಷವನ್ನು ಬಲಪಡಿಸಲು ಮತ್ತು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ನಾಯಕತ್ವ ಬದಲಾಗಲಿದೆ ಎಂಬ ಕುರಿತು ಕೆಲವು ಸಚಿವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ (BS Yediyurappa) , ನಾನು ಯಾರ ಬಗ್ಗೆಯೂ ಟೀಕೆ ಟಿಪ್ಪಣಿ ಮಾಡುವುದಿಲ್ಲ. ಹೈಕಮಾಂಡ್ ವಿಶ್ವಾಸ ಇರುವ ತನಕ ಮುಖ್ಯಮಂತ್ರಿಯಾಗಿ (Karnataka CM) ಮುಂದುವರಿಯುತ್ತೇನೆ ಎಂದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.