Rishabh pant: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ರಿಷಬ್ ಪಂತ್ ಅವರು ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ದಾಖಲೆ ಬರೆದಿದ್ದಾರೆ. ಬಾರಿ ಮೊತ್ತಕ್ಕೆ ಸೇಲ್ ಆಗುವ ಮೂಲಕ ಸದ್ಯ ಪಂತ್ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.
Mohammed Shami: ಟೀಂ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಶಮಿಗೆ ಗುಜರಾತ್ ಟೈಟಾನ್ಸ್ ಶಾಕ್ ನೀಡಿದಂತಿದೆ. ಐಪಿಎಲ್ 2025 ರ ಮೆಗಾ ಹರಾಜಿನ ಹಿನ್ನೆಲೆಯಲ್ಲಿ ಶಮಿ ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂಬ ವದಂತಿಗಳು ದಟ್ಟವಾಗಿವೆ. ಗಾಯದ ಸಮಸ್ಯೆಯಿಂದ ಶಮಿ ಒಂದು ವರ್ಷದಿಂದ ಹೊರಗುಳಿದ ಹಿನ್ನೆಲೆಯಲ್ಲಿ ಗುಜರಾತ್ ಟೈಟಾನ್ಸ್ ಈ ನಿರ್ಧಾರ ಕೈಗೊಂಡಿದೆ.
MS Dhoni: ಮಹೇಂದ್ರ ಸಿಂಗ್ ಧೋನಿ ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಬೆಸ್ಟ್ ಫಿನಿಶರ್ ಎಂದು ಹೆಸರು ಪಡೆದವರು. ಹಲವು ಪಂದ್ಯಗಳಲ್ಲಿ ಒತ್ತಡವನ್ನು ಶಾಂತವಾಗಿ ಎದುರಿಸಿ ತಂಡಕ್ಕೆ ಜಯ ತಂದುಕೊಟ್ಟು ‘ಮಿಸ್ಟರ್ ಕೂಲ್’ ಎಂದೇ ಗುರುತಿಸಿಕೊಂಡವರು.
sanjay Manjrekar : ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಈಗ ಕಾಮೆಂಟರಿಗೆ ಪ್ರವೇಶಿರಬಹುದು ಆದರೆ ಇವರು ಆಗಿನ ಕಾಲಕ್ಕೆ ಟೀಂ ಇಂಡಿಯಾದ ಸ್ಟಾರ್ ಆಟಗಾರರಲ್ಲಿ ಒಬ್ಬರು. ಮಂಜ್ರೇಕರ್ ತಮ್ಮ ವೃತ್ತಿಜೀವನದಲ್ಲಿ ಒಟ್ಟು 111 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 1992ರಲ್ಲಿ ಒಮ್ಮೆ ಟೀಂ ಇಂಡಿಯಾ ಸೋಲಿನ ಸನಿಹದಲ್ಲಿದ್ದರೂ ಸಂಜಯ್ ಬಲದಿಂದ ಟೀಂ ಇಂಡಿಯಾ ಪಂದ್ಯ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
India vs Sri Lanka: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯ ಬುಧವಾರ ನಡೆಯಲಿದೆ. ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ ಆಟಗಾರರು ಬುಧವಾರ ಫೀಲ್ಡ್ಗೆ ಇಳಿಯಲಿದ್ದಾರೆ, ಎರಡನೇ ಪಂದ್ಯವನ್ನು ಗೆಲ್ಲಲು ಸಾಧ್ಯವಾಗದೆ ಟೀಂ ಇಂಡಿಯಾ ಎದುರಾಲಿ ತಂಡದ ವಿರುದ್ಧ ಎಡವಿದೆ. ಇದೀಗ ಮೂರನೆ ಪಂದ್ಯ ಗೆದ್ದು ಟೈ ಮಾಡಿಕೊಳ್ಳುವ ನಿರಿಕ್ಷೆಯಲ್ಲಿ ಭಾರತ ತಂಡ ತಯಾರಿ ನಡೆಸುತ್ತಿದೆ.
Ishan Kishan: ಭಾರತ ಕ್ರಿಕೆಟ್ ತಂಡದ ಯುವ ವಿಕೆಟ್ಕೀಪರ್ ಹಾಗೂ ಬ್ಯಾಟ್ಸ್ಮನ್ ಇಶಾನ್ ಕಿಶನ್ಗೆ ಈ ವರ್ಷ ಉತ್ತಮವಾಗಿಲ್ಲ. ಟೀಂ ಇಂಡಿಯಾದಿಂದ ರಜೆ ತೆಗೆದುಕೊಂಡು ಬಿಸಿಸಿಐ ಅಧಿಕಾರಿಗಳ ಮಾತಿಗೆ ಕಿವಿಗೊಡದ ಅವರ ನಿರ್ಧಾರ ಅವರಿಗೆ ಒಳ್ಳೆಯದಲ್ಲ. ಇದರಿಂದಾಗಿ ಕಳೆದ 7 ತಿಂಗಳಿಂದ ಟೀಂ ಇಂಡಿಯಾದಿಂದ ಹೊರಗುಳಿದಿರುವ ಅವರು ಇದೀಗ, ಮಂಡಳಿಯ ಕಟ್ಟುನಿಟ್ಟಿನ ನಿರ್ಧಾರಗಳಿಗೆ ಬಲಿ ಪಶುವಾಗಿದ್ದಾರೆ. ಟೀಂ ಇಂಡಿಯಾಗೆ ಮರಳುವ ಸಾಧ್ಯತೆಗಳು ಹೆಚ್ಚು ಕಷ್ಟಕರವಾಗುತ್ತಿವೆ ಇಂತಹ ಪರಿಸ್ಥಿತಿಯಲ್ಲಿ, ಮುಂದಿನ ತಿಂಗಳು ಆರಂಭವಾಗಲಿರುವ ದೇಶೀಯ ಋತುವಿನಲ್ಲಿ ಇಶಾನ್ ಜಾರ್ಖಂಡ್ ತಂಡದ ಪರ ಆಡಲಿದ್ದಾರೆ.
Virat Kohli & Gautam Gambhir: ಭಾರತ ಕ್ರಿಕೆಟ್ ತಂಡದ ಹೊಸ ಕೋಚ್ ಆಗಿ ಅಧಿಕಾರ ಸ್ವೀಕರಿಸಿದ ನಂತರ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಮೊದಲ ಭಾರಿಗೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಸಮಯದಲ್ಲಿ ಕೊಹ್ಲಿ ಹಾಗೂ ಗಂಭೀರ್ ನಡುವಿನ ಜಗಳದ ನಂತರ ದೂರಾಗಿದ್ದ ಕೊಹ್ಲಿ ಹಾಗೂ ನೂತನ ಕೋಚ್ ಗೌತಮ್ ಗಂಭೀರ್ ಅವರ ಸಮ್ಮಿಲವನ್ನು ನೋಡಲು ಅನೇಕರು ಕಾತುರದಿಂದ ಕಾಯುತ್ತಿದ್ದರು.
Shreyas Iyer: ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಭಾರತ ತಂಡದ ಸ್ಟಾರ್ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಮೋಜು ಮಸ್ತಿ ಮಾಡಿದ್ದಾರೆ. ಆಗಸ್ಟ್ 2ರಿಂದ ಆರಂಭವಾಗಲಿರುವ ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಗೆ ತಂಡದಲ್ಲಿರುವ ಅಯ್ಯರ್ ತಮ್ಮ ಗೆಳೆಯನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಂಡದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಫುಲ್ ವೈರಲ್ ಆಗಿದೆ. ಈ ಸಮಯದಲ್ಲಿ ಅನೇಕ ಹುಡುಗಿಯರಿಂದ ಸುತ್ತುವರೆದಿರುವುದನ್ನು ನಾವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಫೋಟೊಗಳಲ್ಲಿ ನೋಡಬಹುದು.ಈ ಕಾರಣದಿಂದಾಗಿ ಈ ಬಲಗೈ ಬ್ಯಾಟ್ಸ್ಮನ್ ಎಲ್ಲರ ಗಮನ ಸೆಳೆದಿದ್ದಾರೆ.
Krishnamachari Srikkanth on Hardik Pandya: ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕತ್ವದಿಂದ ವಜಾಗೊಳಿಸಿರುವುದರ ಹಿಂದೆ ಬಹುದೊಡ್ಡ ಷಡ್ಯಂತ್ರವಿದೆ ಎಂದು ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಆರೋಪಿಸಿದ್ದಾರೆ. ನಾಯಕತ್ವ ಕಳೆದುಕೊಂಡಿರುವ ಬಗ್ಗೆ ಆಯ್ಕೆಗಾರರು ನೀಡಿರುವ ಕಾರಣಗಳು ಸಮಂಜಸವಲ್ಲ, ಡ್ರೆಸ್ಸಿಂಗ್ ರೂಮ್ನಿಂದ ಬಂದ ಪ್ರತಿಕ್ರಿಯೆ ಮತ್ತು ಆಟಗಾರರ ದೂರಿನಿಂದಾಗಿ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕತ್ವದಿಂದ ಮುಕ್ತಗೊಳಿಸಿರಬಹುದು ಎಂದು ಮಾಜಿ ಕ್ರಿಕೆಟಿಗ ಶಾಕಿಂಗ್ ಸುದ್ದಿ ಹೊರಹಾಕಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.