ಬಹು ದಿನಗಳ ನಂತರ ಬಾಲಿವುಡ್ ಕಿಂಗ್ ಖಾನ್ ಶಾರುಖ್ ʼಪಠಾಣ್ʼ ಮೂಲಕ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಈಗಾಗಲೇ ಬಾದ್ ಶಾ ಸಿನಿಮಾದ ಆನ್ಲೈನ್ ಟಿಕೆಟ್ಗಳ ಖರೀದಿ ಜೋರಾಗಿದೆ. ಕರ್ನಾಟಕದಲ್ಲಿಯೂ ಶಾರುಖ್ ಖಾನ್ಗೆ ಪ್ಯಾನ್ಸ್ ಪಾಲೋಯಿಂಗ್ ಇದೆ. ಇದರ ಬೆನ್ನಲ್ಲೆ ಬಾಕ್ಸ್ ಆಫೀಸ್ ಸುಲ್ತಾನ ನಟ ದರ್ಶನ್ ಅವರ ಕ್ರಾಂತಿ ಸಿನಿಮಾ 26 ರಂದು ಬಿಡುಗಡೆಯಾಗಲಿದ್ದು, ಒಂದು ದಿನದ ಮುಂಚೆ ಅಂದ್ರೆ 25 ರಂದು ಬಿಡುಗಡೆಯಾಗುವ ಪಠಾಣ್ ಸಿನಿಮಾಗೆ ನೇರ ಪೈಪೋಟಿ ನೀಡುತ್ತಾ ಎನ್ನುವ ಕುತೂಹಲ ಮೂಡಿಸಿದೆ.
Shah Rukh Khan Himanta Biswa Sarma : ಕಳೆದ ಕೆಲವು ದಿನಗಳ ಹಿಂದೆ ಶಾರುಖ್ ಖಾನ್ ಯಾರು..? ಎಂದು ಪ್ರಶ್ನೆ ಮಾಡಿದ್ದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಇಂದು ಏಕಾಎಕಿ ತಮ್ಮ ಟ್ಟಿಟರ್ ಖಾತೆಯಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಕರೆ ಮಾಡಿ ಮಾತನಾಡಿದ್ದಾರೆ. ಪಠಾಣ್ ಸಿನಿಮಾ ಬಿಡುಗಡೆಯಾಗುವ ಥಿಯೇಟರ್ಗಳಲ್ಲಿ ನಡೆದ ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ನಾನು ಯಾವುದೇ ಅಹಿತಕರ ಘಟನೆಗಳು ಜರುಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾಗಿ ತಿಳಿಸಿದ್ದಾರೆ.
ಬಾಲಿವುಡ್ ನಟ ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರದ ಬೇಷರಂ ರಂಗ್ ಸಾಂಗ್ ವಿವಾದಕ್ಕೆ ಕಾರಣವಾಗಿದ್ದು ಎಲ್ಲರಿಗೂ ತಿಳಿದ ವಿಚಾರ. ಇದೀಗ ದಿಪೀಕಾ ಕೇಸರಿ ಬಿಕಿನಿ ವಿಚಾರವಾಗಿ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರು ಪ್ರತಿಕ್ರಿಯೇ ನೀಡುವ ಮೂಲಕ ಪಠಾಣ್ ಪರ ಬ್ಯಾಟ್ ಬೀಸಿದ್ದಾರೆ. ಅಲ್ಲದೆ, ಕೇಸರಿ ಹಿಂದುತ್ವದ ಬಣ್ಣ ಅಲ್ಲದೆ ಎಂದಿದ್ದಾರೆ.
Modi message to BJP leaders : ಪ್ರಧಾನಿ ನರೇಂದ್ರ ಮೋದಿ ಕೂಡ ಬಾಲಿವುಡ್ ಚಿತ್ರಗಳ ಬಹಿಷ್ಕಾರದ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಕೊನೆಯ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ನಾಯಕರಿಗೆ ಹಲವು ಮಹತ್ವದ ಸಲಹೆ, ಸೂಚನೆಗಳನ್ನು ನೀಡಿದ್ದಾರೆ.
ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಅವರು ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅವರ ಮುಂಬರುವ ಚಿತ್ರ ಪಠಾನ್ನೊಂದಿಗೆ ಮತ್ತೊಮ್ಮೆ ಆನ್-ಸ್ಕ್ರೀನ್ ಮ್ಯಾಜಿಕ್ ಮಾಡಲು ಸಿದ್ಧರಾಗಿದ್ದಾರೆ. ಶಾರುಖ್ ಖಾನ್ ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಫ್ಯಾನ್ಗಳಿಂದ ಕಿಂಗ್ ಖಾನ್ ಅಂತ ಶಾರುಖ್ ಕರೆಸಿಕೊಳ್ಳುತ್ತಾರೆ. ಇದೀಗ ಬಾದ್ ಶಾಗೆ ಪ್ಯಾನ್ ಒಬ್ಬ ಕಿಸ್ ಮಾಡಿರುವ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಸಾಕಷ್ಟು ಸಮಯದ ನಂತರ ಭರ್ಜರಿಯಾಗಿ ತೆರೆ ಮೇಲೆ ಮಿಂಚಲು ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಸಿದ್ಧರಾಗಿದ್ದಾರೆ. ಈಗಾಗಲೇ ʼಪಠಾಣ್ʼ ಚಿತ್ರದ ಎರಡು ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ಇದೀಗ ಬಹುನಿರೀಕ್ಷಿತ ಟ್ರೇಲರ್ ಬಿಡುಗಡೆಗೆ ದಿನಾಂಕ್ ಫಿಕ್ಸ್ ಆಗಿದ್ದು, ನಾಳೆ ಅಂದ್ರೆ ಜ.10 ರಂದು ಪಠಾಣ್ ಟ್ರೇಲರ್ ರಿಲೀಸ್ ಆಗಲಿದೆ. ಇದರ ಬೆನ್ನಲ್ಲೆ, ಎಸ್ಆರ್ಕೆ ಸಿನಿಮಾಗೆ ಬಾಯ್ಕಾಟ್, ಬ್ಯಾನ್ ಬಿಸಿ ಶುರುವಾಗಿದೆ.
ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಮುಂಬರುವ ʼಪಠಾಣ್ʼ ಚಿತ್ರದ ಹಾಡುಗಳು ಸೇರಿದಂತೆ ಸಿನಿಮಾದಲ್ಲಿ ಕೆಲವು ಬದಲಾವಣೆಗಳನ್ನು ಅಳವಡಿಸಲು ಮತ್ತು ಪರಿಷ್ಕೃತ ಆವೃತ್ತಿಯನ್ನು ಸಲ್ಲಿಸುವಂತೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್ಸಿ) ನಿರ್ಮಾಪಕರಿಗೆ ಸಲಹೆ ನೀಡಿದೆ ಎಂದು ಸಿಬಿಎಫ್ಸಿ ಅಧ್ಯಕ್ಷ ಪ್ರಸೂನ್ ಜೋಶಿ ಹೇಳಿದ್ದಾರೆ.
ಬಾಲಿವುಡ್ ನಟ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾದ ಬೇಷರಂ ರಂಗ್ ಹಾಡಿನ ವಿವಾದ ಮುಗಿಯುವಂತೆ ಕಾಣುತ್ತಿಲ್ಲ. ಹಾಡಿನ ಕುರಿತು ಪರ ಮತ್ತು ವಿರೋಧ ಪ್ರತಿಕ್ರಿಯೆಗಳು ಕೇಳಿ ಬರುತ್ತಿವೆ. ಇದೀಗ ಖ್ಯಾತ ಗಾಯಕ, ರ್ಯಾಪರ್ ಹನಿಸಿಂಗ್ ದೀಪಿಕಾ ಕೇಸರಿ ಬಿಕಿನಿ ವಿವಾದದ ಕುರಿತು ಧ್ವನಿ ಎತ್ತಿದ್ದು, ಆ ಸಮಯದಲ್ಲಿ ಜನರು ಅನಕ್ಷರಸ್ಥರಾಗಿದ್ದರೂ ಸಹ ಬುದ್ದಿವಂತರಿದ್ದರು ಎಂದು ಹೇಳುವ ಮೂಲಕ ಸಮರ್ಥನೆ ಮಾಡಿಕೊಂಡಿದ್ದಾರೆ.
Besharam Rang Controversy: 'ಪಠಾಣ್' ಚಿತ್ರದ 'ಬೇಷರಂ ರಂಗ್' ಹಾಡಿಗೆ ಸಂಬಂಧಿಸಿದಂತೆ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆದರೆ, ಇದೆಲ್ಲದರ ನಡುವೆ, ದೀಪಿಕಾ ಪಡುಕೋಣೆಯ ಹಳೆಯ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅದರಲ್ಲಿ ಆಕೆ ಬಣ್ಣ ಮತ್ತು ಧರ್ಮದ ಬಗ್ಗೆ ಮಾತನಾಡುತ್ತಿದ್ದಾಳೆ.
Kartik Aaryan on Kantara : ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರವು ಓಟಿಟಿಯಲ್ಲಿ ಪ್ರಸಾರವಾಗಿ ಹಳೆಯ ಮಾತಾದರೂ ಸಹ ಜನರ ಮೈಂಡ್ನಿಂದ ಇನ್ನೂ ದೂರವಾಗಿಲ್ಲ. ಏಕೆಂದ್ರೆ ಕನ್ನಡಿನ ಅಬ್ಬರ ಹಾಗಿದೆ. ಭಾರತೀಯ ಸಿನಿ ಸ್ಟಾರ್ಗಳು ಸಹ ಕಾಂತಾರ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದು, ಮೊನ್ನೆ ಹೃತಿಕ್ ರೋಷನ್ ರಿಷಬ್ ಶೆಟ್ಟಿಯವರನ್ನು ಹಾಡಿ ಹೊಗಳಿದ್ದರು. ಇದೀಗ ಬಿಟೌನ್ ಬಾಯ್ ಕಾರ್ತಿಕ್ ಆರ್ಯನ್ ಕಾಂತಾರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Besharam Rang Song out : ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅಭಿನಿಯದ ಪಠಾಣ್ ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಪಠಾಣ್ ಟೀಸರ್ ಸಿನಿಮಾದ ಮೇಲಿನ ನಿರೀಕ್ಷೆಗೆ ಕಾರಣವಾಗಿದೆ. ಇದೀಗ ಶಾರುಖ್ ಮತ್ತು ದೀಪಿಕಾ ಜೋಡಿಯ ಬೇಷರಾಮ್ ರಂಗ್ ವಿಡಿಯೋ ಸಾಂಗ್ ಬಿಡುಗಡೆಯಾಗಿದ್ದು, ಯೂಟ್ಯೂಬ್ನಲ್ಲಿ ಟ್ರೇಂಡ್ ಕ್ರಿಯೆಟ್ ಮಾಡುತ್ತಿದೆ.
Deepika Padukone : ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಸಿನಿಮಾದ ಪಾರ್ಟಿ ಸಾಂಗ್ ಬೇಷರಾಮ್ ರಂಗ್ ಅನ್ನು ವೀಕ್ಷಿಸಲು ಅಭಿಮಾನಿಗಳು ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ. ಶಾರುಖ್ ಖಾನ್ ಅವರು ಪಠಾಣ್ ಮೊದಲ ಪಾರ್ಟಿ ಸಾಂಗ್ನಿಂದ ದೀಪಿಕಾ ಪಡುಕೋಣೆ ಅವರ ಸಿಜ್ಲಿಂಗ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.