ಇವರೆಲ್ಲ ಒಳ್ಳೆಯ ಪದವಿಧರರು , ಆದರೆ ಇವರು ಮಾಡುವ ಕೆಲಸ ಕೇಳಿದ್ರೆ ನೀವೆ ಛೀ..ಥೂ ಅಂತ ಉಗಿತೀರಾ.. ಯೆಸ್ ಮೈಕೈ ತುಂಬಿಕೊಂಡಿರೋ ದುಡಿಯೋದು ಬಿಟ್ಟು, ಈಗ ಮಾಡಬಾರದ್ದು ಮಾಡಿ ಪೊಲೀಸರ ಅತಿಥಿಯಾಗಿದ್ದಾರೆ. ಅಷ್ಟಕ್ಕೂ ಇವರು ಮಾಡಿದ್ದೇನು ಅಂತೀರಾ...
ದೊಡ್ಡ ಕಂಪನಿಗಳಲ್ಲಿ, ಪ್ರತಿಷ್ಠಿತ ಬ್ಯಾಂಕಿನಲ್ಲಿ ಕೆಲಸ ಮಾಡುವುದಾಗಿ ಹೇಳಿ ಶ್ರೀಮಂತರ ಮನೆಯಲ್ಲಿ ಬಾಡಿಗೆಗೆ ಮನೆ ಪಡೆಯುತ್ತಿದ್ದ ಖತರ್ನಾಕ್ ಪದವೀಧರ ಕಳ್ಳರ ಗ್ಯಾಂಗ್, ಅವರ ಮನೆಗೆ ಖನ್ನಾ ಹಾಕಿ ಮನೆ ದೋಚುತ್ತಿದ್ದ ಪ್ರಕರಣ ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ಬೆಳಕಿಗೆ ಬಂದಿದೆ. ಆಂಧ್ರ ಪ್ರದೇಶದಿಂದ ಬಂದು ಕಳ್ಳತನ ಮಾಡುವ ಸಮಯದಲ್ಲಿ ಸಿಕ್ಕಿಬಿದ್ದಿರುವ ಇವರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ರಾಯಚೂರಿನಲ್ಲೂ ಮತದಾರರ ಹೆಸರು ಡಿಲೀಟ್ ಮಾಡಿದ್ದಾರೆ ಎನ್ನಲಾಗ್ತಿದೆ. ಶಾಸಕ ಶಿವರಾಜ್ ಪಾಟೀಲ್ ಷಡ್ಯಂತ್ರದಿಂದ ಒಂದೇ ಕ್ಷೇತ್ರದಲ್ಲಿ 40 ಸಾವಿರ ಮತದಾರರ ಹೆಸರುಗಳು ಡಿಲೀಟ್ ಮಾಡಲಾಗಿದೆ ಎಂದು ಹೈ.ಕ ಹೋರಾಟ ಸಮಿತಿ ಉಪಾಧ್ಯಕ್ಷ ರಜಾಕ್ ಉಸ್ತಾದ್ ಆರೋಪ ಮಾಡಿದ್ದಾರೆ.
ನಗರದ ಅಂಬೇಡ್ಕರ್ ವೃತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ.. ಕನ್ನಡ ಪರ ಹೋರಾಟಗಾರರು ಹಾಗೂ ಪ್ರಗತಿ ಪರ ಸಂಘಟನೆಗಳು ಸಾಥ್ .
ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು.
ರಾಯಚೂರಿನ ಗಬ್ಬೂರು, ಸಿರವಾರ, ಮಂದಕಲ್ ಸೇರಿ ಹಲವೆಡೆ ಅಧಿಕಾರಿಗಳು ರೇಡ್ ಮಾಡಿದ್ದು ಕೆಲಸಕ್ಕೆ ಮಕ್ಕಳ ಸಾಗಾಟ ಮಾಡುತ್ತಿದ್ದ 5 ವಾಹನ ಜಪ್ತಿ ಮಾಡಿದ್ದಾರೆ. ದಾಳಿಯಲ್ಲಿ 8ಕ್ಕೂ ಹೆಚ್ಚು ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.
ರಾಯಚೂರು ನಗರದ ಬಸ್ ನಿಲ್ದಾಣದ ಕೋಟೆಯನ್ನು ಸ್ವಚ್ಛ ಮಾಡಿದ ಯುವ ಬ್ರಿಗೇಡ್ ಕಾರ್ಯಕರ್ತರು. ಕೋಟೆಯನ್ನು ಪುನಶ್ಚೇತನ ಮಾಡುವ ಕಾರ್ಯದಲ್ಲಿ ಯುವ ಬ್ರಿಗೇಡ್ ನ ನೂರಾರು ಕಾರ್ಯಕರ್ತರು ಭಾಗಿ.
ಸ್ಟೇಜ್ ಮೇಲೆ ಅವಕಾಶ ಕೊಡಿ ಎಂದು ನಟಿ ರಮ್ಯ ಕಿರಿಕ್ ಮಾಡಿದ್ದಾರೆ. ರಾಯಚೂರು ನಗರದ ಬಸವೇಶ್ವರ ವೃತ್ತದ ಬಳಿಯ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಟೇಜ್ ಮೇಲೆ ಅವಕಾಶ ನೀಡದ್ದಕ್ಕೆ ರಮ್ಯಾ ಗರಂ ಆಗಿದ್ದರು..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.