ಇತ್ತ ಶುಕ್ರವಾರ ಸಂಜೆ ಐಎಎಫ್ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ತಾಮಾನ್ ಅವರನ್ನು ಪಾಕಿಸ್ತಾನ ಬಿಡುಗಡೆಗೊಳಿಸುತ್ತಿದ್ದರೆ, ಇನ್ನೊಂದೆಡೆಗೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ತಮ್ಮ ಮಗುವಿಗೆ ಅಭಿನಂದನ್ ವರ್ತಾಮಾನ್ ಹೆಸರನ್ನು ನಾಮಕರಣ ಮಾಡಲಾಗಿದೆ.
ಬರುವ ಶೈಕ್ಷಣಿಕ ವರ್ಷದಿಂದ ರಾಜಸ್ತಾನ ಸರ್ಕಾರ ಹೆಣ್ಣುಮಕ್ಕಳಿಗೆ ಉಚಿತ ಉನ್ನತ ಶಿಕ್ಷಣವನ್ನು ನೀಡಲಿದೆ ಎನ್ನಲಾಗಿದೆ.ಈ ವಿಚಾರವನ್ನು ಈಗ ಉನ್ನತ ಶಿಕ್ಷಣ ಸಚಿವ ಭಾನ್ವರ್ ಸಿಂಗ್ ಭಾಟಿ ಬುಧವಾರದಂದು ತಿಳಿಸಿದ್ದಾರೆ.
ಘಟನೆ ಸಂಬಂಧ ಐಪಿಸಿ ಸೆಕ್ಷನ್ 304ಅ ಮತ್ತು 336 ಅಡಿಯಲ್ಲಿ ಆಸ್ಪತ್ರೆ ಸಿಬ್ಬಂದಿಗಳಾದ ಜುಜ್ಹಾರ್ ಸಿಂಗ್ ಮತ್ತು ಅಮ್ರಿತ್ ಲಾಲ್ ವಿರುದ್ಧ ರಾಮಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲಗಳ ಪ್ರಕಾರ, ಅಶೋಕ್ ಗೆಹ್ಲೋಟ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡಲು ಸಚಿನ್ ಪೈಲಟ್ ಸಹಮತವಿಲ್ಲ ಎಂದು ತಿಳಿದುಬಂದಿದ್ದು, ಸಚಿನ್ ಪಕ್ಷದ ಮುಖಂಡರೊಂದಿಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜಸ್ತಾನದಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಇದುವರೆಗೆ ರಾಜ್ಯದ ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ವಿಚಾರ ಇನ್ನು ಕಗ್ಗಂಟಾಗಿ ಉಳಿದಿದೆ. ಈ ಹಿನ್ನಲೆಯಲ್ಲಿ ಈ ವಿಚಾರವಾಗಿ ನಾಳೆ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಅಂತಿಮ ನಿರ್ಧಾರ ತಗೆದುಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಈ ಬಾರಿ ರಾಜಸ್ಥಾನದ ಮತದಾರರು ಕಾಂಗ್ರೆಸ್ ಪರವಾಗಿ ನಿಲ್ಲಲಿದ್ದಾರೆಯೇ ಅಥವಾ ವಸುಂಧರಾ ಅವರ ಮೇಲೆ ಭರವಸೆಯಿಟ್ಟು ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಬೆಂಬಲ ನೀಡಿದ್ದಾರೆಯೇ ಎಂಬುದು ಡಿಸೆಂಬರ್ 11 ರಂದು ನಡೆಯಲಿರುವ ಮತ ಎಣಿಕೆ ಬಳಿಕ ಸ್ಪಷ್ಟವಾಗಲಿದೆ.
ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ತಾನು ಜನಿಯುಧಾರಿ ಬ್ರಾಹ್ಮಣ ಎಂದು ಹೇಳಿದ್ದಕ್ಕೆ ಆಗಾಗ ಕುಲಗೊತ್ರವನ್ನು ಪ್ರಶ್ನಿಸಿ ಅವರನ್ನು ಗೊಂದಲಕ್ಕೆ ಒಳಪಡಿಸಿದ್ದ ಬಿಜೆಪಿ ಪ್ರಶ್ನೆಗೆ ಕೊನೆಗೂ ಈಗ ಅವರು ಉತ್ತರಿಸಿದ್ದಾರೆ.
ನವೆಂಬರ್ 8 ರಂದು ಸೆಂಟರ್ ಫಾರ್ ಡೆವಲಪಿಂಗ್ ಸೊಸೈಟೀಸ್ (ಸಿಎಸ್ಡಿಎಸ್) ಮತ್ತು ಎಬಿಪಿ ನ್ಯೂಸ್ ಬಿಡುಗಡೆ ಮಾಡಿದ ಚುನಾವಣೆ ಸಮೀಕ್ಷೆಯಲ್ಲಿ ಈ ಬಾರಿ ಬಿಜೆಪಿ ಛತ್ತೀಸ್ ಗಡ್ ದಲ್ಲಿ ನಾಲ್ಕನೇ ಬಾರಿ ಗೆಲ್ಲಲಿದೆ ಎಂದು ವರದಿ ತಿಳಿಸಿದೆ. ಇನ್ನು ರಾಜಸ್ಥಾನದಲ್ಲಿ ವಸುಂಧರಾ ರಾಜೇ ಸರ್ಕಾರವನ್ನು ಹಿನ್ನಡೆ ಅನುಭವಿಸಲಿದ್ದು ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎನ್ನಲಾಗಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡುವ ಕಠಿಣ ಸ್ಪರ್ಧೆ ನಡೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ.
ರಾಜಸ್ಥಾನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಆರೋಗ್ಯ) ವೀಣಾ ಗುಪ್ತಾ ಮಂಗಳವಾರ ಒಟ್ಟು 29 ಜೀಕಾ ವೈರಸ್ ಪ್ರಕರಣಗಳನ್ನು ದೃಢಪಡಿಸಿದ್ದಾರೆ.ಜೀಕಾ ವೈರಸ್ ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಈಗಾಗಾಗಲೇ 150ರಿಂದ 200 ತಂಡಗಳು ಜೈಪುರದಲ್ಲಿ ಸಮೀಕ್ಷೆ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು
By accepting cookies, you agree to the storing of cookies on your device to enhance site navigation, analyze site usage, and assist in our marketing efforts.