ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಭರ್ಜರಿ ಗೆಲುವು ಇನ್ನೂ ಸುದ್ದಿಯಲ್ಲಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ಬಿಜೆಪಿಯನ್ನು ಭ್ರಷ್ಟವೆಂದು ಬಣ್ಣಿಸಿರುವ ಕಾಂಗ್ರೆಸ್ ಸೋಮವಾರ ವಿಧಾನಸೌಧವನ್ನು ಗೋಮೂತ್ರದಿಂದ ಶುದ್ಧೀಕರಿಸಿದೆ.
ರಾಜೇಶ್ ಹಾಗೂ ಪರಶುರಾಮ್ ಒಂದು ಬೈಕಿನಲ್ಲಿದ್ದರೆ, ಗೋವಿಂದರಾಜು ಮತ್ತೊಂದು ಬೈಕಿನಲ್ಲಿದ್ದ.ರಾತ್ರಿ 2 ಗಂಟೆ ಸುಮಾರಿಗೆ ತೆರಳುತ್ತಿರುವಾಗ ಪ್ಯಾಲೇಸ್ ರಸ್ತೆಯ ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್ಸ್ ಬಳಿ ರಸ್ತೆ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಬೈಕ್ ಪಾದಚಾರಿ ಮಾರ್ಗಕ್ಕೆ ಡಿಕ್ಕಿಯಾಗಿದೆ.
ಬಿಜೆಪಿಗೆ ಕಮಿಷನ್ ಸರ್ಕಾರ ಎಂಬ ಬ್ರಾಂಡ್ ಸಿಕ್ಕಿದೆ. ಕಾಂಗ್ರೆಸ್ ಪಕ್ಷದಿಂದ ಪರಿಶುದ್ಧವಾದ ಸರ್ಕಾರ ನೀಡಿದ್ದೀವಿ. ಇವತ್ತು ಪ್ರಧಾನಿಗೆ ಗುತ್ತಿಗೆದಾರರು ಪತ್ರ ಬರೆಯುತ್ತಿದ್ದಾರೆ. ವಿಧಾನಸೌಧದ ಗೋಡೆಗಳು ಕಾಸು ಕಾಸು ಎನ್ನುತ್ತಿವೆ ಎಂದು ಮಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಾಗ್ದಾಳಿ ನಡೆಸಿದ್ರು.
ಎಲ್ಲಾ ಕಾಲದಲ್ಲೂ ಹಣ ಸಿಕ್ಕಿದೆ.. ತನಿಖೆಗೆ ಹೇಳಿದ್ದೀವಿ ಎಂದು ರಾಮನಗರದಲ್ಲಿ ಸಚಿವ ಡಾ.ಅಶ್ವತ್ಥ್ ನಾರಾಯಣ್ ಸಮರ್ಥನೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ವಿಧಾನಸೌಧದಲ್ಲಿ ಹಣ ಸಿಕ್ಕ ವಿಚಾರ ಪ್ರತಿಕ್ರಿಯೆ ನೀಡಿದ ಅವರು, ಯಾವ ದುಡ್ಡನ್ನು ಭ್ರಷ್ಟಾಚಾರ ಮಾಡಲಿಕ್ಕೆ ಬಿಡಲ್ಲ. ಭ್ರಷ್ಟಾಚಾರ ಬಗ್ಗೆ ಮಾತನಾಡಲು ಕಾಂಗ್ರೆಸ್ಗೆ ನೈತಿಕ ಹಕ್ಕಿಲ್ಲ ಎಂದಿದ್ದಾರೆ.
ಕಬ್ಬಿನ ಬಾಕಿ ಮೊತ್ತ ಬಿಡುಗಡೆಗೆ ಆಗ್ರಹಿಸಿ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಬ್ಬು ಬೆಳೆಗಾರರ ಒತ್ತಾಯಕ್ಕೆ ಮಣಿದ ರಾಜ್ಯ ಸರ್ಕಾರ ₹204.47 ಕೋಟಿ ಬಿಡುಗಡೆ ಮಾಡಲು ಒಪ್ಪಿದೆ.
ಇಂದು ಕಬ್ಬು ಬೆಳೆಗಾರರ ಹಾಗೂ ರೈತ ಹೋರಾಟಗಾರ ಕುರುಬೂರು ಶಾಂತಕುಮಾರ್, ಸಿದ್ದಗೌಡ ಮೋದಗಿ ಮತ್ತಿತರರ ಜೊತೆ ಸಭೆ ನಡೆಸಿದ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ, ಕಬ್ಬು ಬೆಳೆಗಾರರಿಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡರು.
ಪ್ರಧಾನಿ ಮೋದಿಯವರು ಇಂದು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ನಿರ್ಮಿಸಲಾಗಿರುವ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಉದ್ಘಾಟಿಸಲಿದ್ದಾರೆ.
ಪಂಚಮಸಾಲಿ 2ಎ ಮೀಸಲಾತಿಗೆ ಆಗ್ರಹಿಸಿ ಹೋರಾಟ ತೀವ್ರಗೊಳ್ಳಲಿದೆ.. ಮೀಸಲಾತಿಗಾಗಿ ಬೆಳಗಾವಿ ಜಿಲ್ಲೆ ಹುಕ್ಕೇರಿಯಲ್ಲಿ ಅಕ್ಟೋಬರ್ 21ರಂದು ಬೃಹತ್ ಸಮಾವೇಶ ನಡೆಯಲಿದೆ. 25 ಲಕ್ಷ ಜನ ಸೇರಿಸಿ ವಿಧಾನಸೌಧಕ್ಕೆ ಮುತ್ತಿಗೆಗೆ ಚಿಂತನೆ ನಡೆಸಲಾಗಿದೆ..
ದರ್ಶನ್ ಗೌಡ ಮೊದಲ ಪೇಪರ್ ನಲ್ಲಿ 50 ಕ್ಕೆ 19 ಅಂಕಗಳು ಬಂದಿದೆ. ಎರಡನೆ ಪೇಪರ್ ನಲ್ಲಿ 150 ಕ್ಕೆ 141 ಅಂಕಗಳು ಬಂದಿವೆ. ಬರೆಯುವುದರಲ್ಲಿ ದಡ್ಡ, ಬಹು ಆಯ್ಕೆಯಲ್ಲಿ ಜಾಣ ಆಗಿದ್ದೇಗೆ? ನಾಗೇಶ್ ಗೌಡ 150 ಅಂಕಕ್ಕೆ 137.87 ಗಳಿಸಿದ್ದಾನೆ ಎಂದು ತಿಳಿಸಿದರು.
ನಾಳೆ ನಂದಿ ಹಿಲ್ಸ್ ಗೆ ಕರ್ಕೊಂಡು ಹೋಗ್ತಾ ಇದಿವಿ. ಅವರಿಗೆ ಹೊರ ಪ್ರಪಂಚ ತಿಳಿಬೇಕು ಅಂತ ಹೀಗೆ ಮಾಡ್ತಾ ಇದ್ದೀವಿ. ಶಕ್ತಿದಾಮಕ್ಕೆ ಅಪ್ಪಾಜಿ ಬೆಳಕು ಕೊಟ್ರು, ಅಮ್ಮ ಶಕ್ತಿಕೊಟ್ಟಿದ್ದಾರೆ ಎಂದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.