ಕೇವಲ 750 ರೂಪಾಯಿಗೆ ಖರೀದಿಸಿ Redmiಯ ಸ್ಮಾರ್ಟ್ ಫೋನ್ ..!

ರೆಡ್ಮಿಯ 10 ಸಾವಿರ ರೂಪಾಯಿ ಫೋನ್ ಅನ್ನು 749 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.  Redmi 9i Sport ಮೇಲೆ  ಭಾರೀ ರಿಯಾಯಿತಿ ನೀಡಲಾಗುತ್ತಿದೆ.

Written by - Ranjitha R K | Last Updated : Jul 22, 2022, 10:34 AM IST
  • Redmi 9i ಸ್ಪೋರ್ಟ್ ಕೊಡುಗೆಗಳು ಮತ್ತು ರಿಯಾಯಿತಿಗಳು
  • Redmi 9i ಸ್ಪೋರ್ಟ್ ಎಕ್ಸ್ಚೇಂಜ್ ಆಫರ್
  • Redmi 9i ಸ್ಪೋರ್ಟ್ ಬ್ಯಾಂಕ್ ಆಫರ್
ಕೇವಲ 750 ರೂಪಾಯಿಗೆ ಖರೀದಿಸಿ Redmiಯ ಸ್ಮಾರ್ಟ್ ಫೋನ್ ..! title=
flipkart sale (file photo)

ಬೆಂಗಳೂರು : ಫ್ಲಿಪ್‌ಕಾರ್ಟ್‌ನಲ್ಲಿ ಸೇಲ್ ನಡೆಯುತ್ತಿದೆ. ಈ ಸೇಲ್ ನಲ್ಲಿ  ಸ್ಮಾರ್ಟ್‌ಫೋನ್‌ಗಳ ಮೇಲೆ ಉತ್ತಮ ಕೊಡುಗೆಗಳನ್ನು ನೀಡಲಾಗುತ್ತಿದೆ. ಅದರಲ್ಲಿಯೂ ರೆಡ್ಮಿಯ 10 ಸಾವಿರ ರೂಪಾಯಿ ಫೋನ್ ಅನ್ನು 749 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.  Redmi 9i Sport ಮೇಲೆ  ಭಾರೀ ರಿಯಾಯಿತಿ ನೀಡಲಾಗುತ್ತಿದೆ.

Redmi 9i ಸ್ಪೋರ್ಟ್ ಕೊಡುಗೆಗಳು ಮತ್ತು ರಿಯಾಯಿತಿಗಳು :
Redmi 9i ಸ್ಪೋರ್ಟ್‌ನ  ಲಾಂಚಿಂಗ್ ಪ್ರೈಸ್ 9,999 ರೂಪಾಯಿ  ಆಗಿದ್ದರೂ, ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್ 8,999 ರುಪಾಯಿಗೆ  ಲಭ್ಯವಿದೆ. ಅಂದರೆ ಈ ಫೋನ್ ಮೇಲೆ ಸಾವಿರ ರೂಪಾಯಿ ರಿಯಾಯಿತಿ ನೀಡಲಾಗುತ್ತಿದೆ. ಇದಲ್ಲದೇ ಎಕ್ಸ್ ಚೇಂಜ್ ಮತ್ತು ಬ್ಯಾಂಕ್ ಆಫರ್ ಗಳು ಕೂಡಾ ಈ ಫೋನ್ ಮೇಲೆ ನೀಡಲಾಗುತ್ತಿದೆ. 

ಇದನ್ನೂ ಓದಿ : ಬಳಕೆದಾರರ ದೊಡ್ಡ ಸಮಸ್ಯೆಗೆ ಪರಿಹಾರ ನೀಡಿದ ವಾಟ್ಸಾಪ್

Redmi 9i ಸ್ಪೋರ್ಟ್ ಎಕ್ಸ್ಚೇಂಜ್ ಆಫರ್ :
Redmi 9i Sport ನಲ್ಲಿ 8,250 ರೂಪಾಯಿಗಳ ಎಕ್ಸ್‌ಚೇಂಜ್ ಆಫರ್ ಇದೆ. ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ನೀವು ವಿನಿಮಯ ಮಾಡಿಕೊಂಡರೆ ಇಷ್ಟು ದೊಡ್ಡ ಮಟ್ಟದ ರಿಯಾಯಿತಿ ಸಿಗುತ್ತದೆ. ಈ ರಿಯಾಯಿತಿ ಪಡೆಯುವುದು ಸಾಧ್ಯವಾದರೆ ಫೋನ್‌ನ ಬೆಲೆ 749 ರೂ.ಗೆ ಇಳಿಯುತ್ತದೆ. ಆದರೆ ನೆನಪಿರಲಿ ಎಕ್ಸ್ಚೇಂಜ್ ಮಾಡುತ್ತಿರುವ ಫೋನ್ ಉತ್ತಮ ಸ್ಥಿತಿಯಲ್ಲಿದ್ದು, ಮಾದರಿ ಇತ್ತೀಚಿನದ್ದಾಗಿದ್ದರೆ ಮಾತ್ರ ಸಪೂರ್ಣ ರಿಯಾಯಿತಿ ಸಿಗಲಿದೆ. 

Redmi 9i ಸ್ಪೋರ್ಟ್ ಬ್ಯಾಂಕ್ ಆಫರ್ : 
ಇನ್ನು ಹಳೆಯ ಫೋನ್ ಅನ್ನು ವಿನಿಮಯ ಮಾಡಿಕೊಳ್ಳದೆ, ಫೋನ್ ಖರೀದಿಸುವುದಾದರೆ ಬ್ಯಾಂಕ್ ಆಫರ್ ಕೂಡ ಇದೆ. ಯಾವುದೇ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ  700 ರೂಪಾಯಿಗಳ ರಿಯಾಯಿತಿ ಸಿಗಲಿದೆ.  Axis ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ 415 ರೂಪಾಯಿಗಳ ರಿಯಾಯಿತಿ ಸಿಗಲಿದೆ. 

ಇದನ್ನೂ ಓದಿ : Amazon Prime Day 2022: ಜುಲೈ 23 ರಿಂದ ಗೃಹ ಬಳಕೆ ವಸ್ತುಗಳ ಮೇಲೆ ಆಫರ್ ಗಳ ಸುರಿಮಳೆ, ಈ ವಸ್ತುಗಳ ಮೇಲೆ ಬಂಪರ್ ಡಿಸ್ಕೌಂಟ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News