Motorola: ಈಗ ಗಾಳಿಯಲ್ಲಿ ಫುಲ್ ಚಾರ್ಜ್ ಆಗುತ್ತೆ ಸ್ಮಾರ್ಟ್‌ಫೋನ್‌, ಹೇಗೆ ಗೊತ್ತಾ!

Wireless Charging Technology : ಮೊಟೊರೊಲಾ 'ಮೊಟೊರೊಲಾ ಏರ್ ಚಾರ್ಜಿಂಗ್' ತಂತ್ರಜ್ಞಾನವನ್ನು ಪರಿಚಯಿಸಿದೆ. ಕಂಪನಿಯು ಇದನ್ನು ಈ ಮೊದಲು 'ಮೊಟೊರೊಲಾ ಒನ್ ಹೈಪರ್' ಎಂದು ಹೆಸರಿಸಿತ್ತು. ಈ ತಂತ್ರಜ್ಞಾನವು ಒಂದೇ ಸಮಯದಲ್ಲಿ 4 ಸಾಧನಗಳನ್ನು ಚಾರ್ಜ್ ಮಾಡಬಹುದು ಎಂದು ಹೇಳಲಾಗುತ್ತಿದೆ. ಅದರ ಬಗ್ಗೆ ತಿಳಿದುಕೊಳ್ಳೋಣ ...

Written by - Yashaswini V | Last Updated : Sep 9, 2021, 08:37 AM IST
  • ಮೊಟೊರೊಲಾ 'ಮೊಟೊರೊಲಾ ಏರ್ ಚಾರ್ಜಿಂಗ್' ತಂತ್ರಜ್ಞಾನವನ್ನು ಪರಿಚಯಿಸಲಿದೆ
  • ಕಂಪನಿಯು ಈ ಮೊದಲು ಇದಕ್ಕೆ 'ಮೊಟೊರೊಲಾ ಒನ್ ಹೈಪರ್' ಎಂದು ಹೆಸರಿಸಿತ್ತು
  • ತಂತ್ರಜ್ಞಾನವು ಒಂದೇ ಸಮಯದಲ್ಲಿ 4 ಸಾಧನಗಳನ್ನು ಚಾರ್ಜ್ ಮಾಡಬಹುದು ಎಂದು ಹೇಳಲಾಗುತ್ತಿದೆ
Motorola: ಈಗ ಗಾಳಿಯಲ್ಲಿ ಫುಲ್ ಚಾರ್ಜ್ ಆಗುತ್ತೆ ಸ್ಮಾರ್ಟ್‌ಫೋನ್‌, ಹೇಗೆ ಗೊತ್ತಾ! title=
Know how to use Air Charging Technology

ನವದೆಹಲಿ: ಮೊಟೊರೊಲಾ (Motorola) 2021 ರ ಆರಂಭದಲ್ಲಿ ನಿಜವಾದ ವೈರ್‌ಲೆಸ್ ಚಾರ್ಜಿಂಗ್ ತಂತ್ರಜ್ಞಾನವನ್ನು (Wireless Charging Technology) ಪರಿಚಯಿಸಿತು, ಇದಕ್ಕೆ ಸಾಧನ ಮತ್ತು ಚಾರ್ಜರ್ ನಡುವೆ ಯಾವುದೇ ದೈಹಿಕ ಸಂಪರ್ಕದ ಅಗತ್ಯವಿಲ್ಲ. ಈಗ ಮೊಟೊರೊಲಾ ತನ್ನ ನವೀಕರಿಸಿದ ಆವೃತ್ತಿಯನ್ನು ಪರಿಚಯಿಸಿದೆ. ಮೊಟೊರೊಲಾ ಈ ತಂತ್ರಜ್ಞಾನಕ್ಕೆ 'ಮೊಟೊರೊಲಾ ಒನ್ ಹೈಪರ್' (Motorola One Hyper) ಎಂದು ಹೆಸರಿಸಿತ್ತು. 2019 ರಿಂದ ಬ್ರಾಂಡ್ ತನ್ನ ಯಾವುದೇ ಬಜೆಟ್ ಸ್ಮಾರ್ಟ್‌ಫೋನ್‌ಗಳಿಗೆ ಸಂಬಂಧಿಸಿದ ಹೆಸರನ್ನು ಬಳಸುವುದು ವಿಚಿತ್ರವಾಗಿತ್ತು, ಆದ್ದರಿಂದ, ಕಂಪನಿಯು 'ಮೊಟೊರೊಲಾ ಏರ್ ಚಾರ್ಜಿಂಗ್' (Motorola Air Charging) ಎಂದು ಹೆಸರನ್ನು ಬದಲಾಯಿಸಿದೆ.

Xiaomi Mi Air Charge ನಂತೆ ಕೆಲಸ ಮಾಡುತ್ತದೆ
ಮೊಟೊರೊಲಾದ ಟ್ರೂ ವೈರ್‌ಲೆಸ್ ಚಾರ್ಜಿಂಗ್ (Wireless Charging) ಹೊಸ ಹೆಸರನ್ನು ಪಡೆಯುವುದು ಮಾತ್ರವಲ್ಲ, ಇದು 'Xiaomi Mi Air Charge' ನಂತೆಯೇ ಇದೆ. ಅಷ್ಟೇ ಅಲ್ಲ ಅದರಂತೆಯೇ ಕೆಲಸವನ್ನು ಮಾಡುತ್ತದೆ ಎಂದು ತಿಳಿದುಬಂದಿದೆ. Xiaomi ಪರಿಹಾರವು ಕೇವಲ ಒಂದು ಪರಿಕಲ್ಪನೆಯಾಗಿದೆ.

ಇದನ್ನೂ ಓದಿ- Red Magic 6S Pro: ಬರಲಿದೆ ನಿಮಿಷಗಳಲ್ಲಿ ಫುಲ್ ಚಾರ್ಜ್ ಆಗುವ ಸ್ಮಾರ್ಟ್‌ಫೋನ್‌, ಇದರ ವೈಶಿಷ್ಟ್ಯಗಳನ್ನು ತಿಳಿಯಿರಿ

ಏಕಕಾಲದಲ್ಲಿ 4 ಸಾಧನಗಳನ್ನು ಚಾರ್ಜ್ ಮಾಡಬಹುದು:
ವೀಬೊದಲ್ಲಿ ಅಧಿಕೃತ ಘೋಷಣೆಯ ಪ್ರಕಾರ, ಮೊಟೊರೊಲಾ ಏರ್ ಚಾರ್ಜಿಂಗ್ ತಂತ್ರಜ್ಞಾನವು (Air Charging Technology) ಒಂದೇ ಸಮಯದಲ್ಲಿ 4 ಸಾಧನಗಳನ್ನು ಚಾರ್ಜ್ ಮಾಡಬಹುದು. ಇದು 3 ಮೀ ಮತ್ತು 100 ° ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತದೆ. ಕಂಪನಿ ತನ್ನ ಪರಿಹಾರವು ಸಾಧನಗಳಿಗಾಗಿ ನಿಯಮಿತವಾಗಿ ಸ್ಕ್ಯಾನ್ ಮಾಡುವ 1600 ಆಂಟೆನಾಗಳನ್ನು ಬಳಸುತ್ತದೆ ಎಂದು ಹೇಳುತ್ತದೆ. ಇದು ನೆಟ್‌ವರ್ಕ್ ಸೆಟಪ್, ಸ್ವತಂತ್ರ ಚಿಪ್‌ಸೆಟ್ ಮತ್ತು ಅಲ್ಗಾರಿದಮ್ ಸಹಾಯದಿಂದ ಸ್ಥಿರ ಚಾರ್ಜಿಂಗ್ ಅನ್ನು ಖಚಿತ ಪಡಿಸುವುದಾಗಿ ಸಂಸ್ಥೆಯು ಹೇಳಿಕೊಂಡಿದೆ.

ಇದನ್ನೂ ಓದಿ- Tecno Pova 2: 7,000mAh ಬ್ಯಾಟರಿಯೊಂದಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ಫೋನ್ ಖರೀದಿಸಲು ಉತ್ತಮ ಅವಕಾಶ

ಯಾವಾಗ ಆರಂಭಿಸಬಹುದು?
ಮೊಟೊರೊಲಾ (Motorola) ಕೂಡ ಇದು ಕಾಗದ, ಲೆದರ್ ಮತ್ತು ಅಂತಹುದೇ ವಸ್ತುಗಳ ಮೂಲಕ ಕಾರ್ಯನಿರ್ವಹಿಸುತ್ತದೆ ಎಂದು ಹೇಳುತ್ತದೆ. ಆದಾಗ್ಯೂ, ಸುರಕ್ಷತೆಗಾಗಿ, ಜೈವಿಕ ಮೇಲ್ವಿಚಾರಣಾ ತಂತ್ರಜ್ಞಾನದ ಮೂಲಕ ಮಾನವ ಇರುವಿಕೆಯನ್ನು ಪತ್ತೆಹಚ್ಚಿದಾಗ ಚಾರ್ಜಿಂಗ್ ನಿಲ್ಲುತ್ತದೆ. ಆದರೆ ಇದು ಯಾವಾಗ ಅಧಿಕೃತವಾಗಿ ಬಿಡುಗಡೆಯಾಗಲಿದೆ ಎಂಬ ಬಗ್ಗೆ ಮೊಟೊರೊಲಾ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಕುತೂಹಲಕಾರಿಯಾಗಿ, ಈ ತಂತ್ರಜ್ಞಾನದ ಜವಾಬ್ದಾರಿಯನ್ನು ಹೊಂದಿರುವ ಕಂಪನಿ ಗುರು ವೈರ್‌ಲೆಸ್ (GuRu Wireless), ಇಂಕ್. (Inc.) ಕೂಡ ಉಲ್ಲೇಖಿಸಿಲ್ಲ. ಆದರೆ ತಜ್ಞರ ಪ್ರಕಾರ, ಮೊಟೊರೊಲಾ ಅದನ್ನು ಶೀಘ್ರದಲ್ಲೇ ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News