Vodafone Idea 4 ಹೊಸ ಪೋಸ್ಟ್‌ಪೇಯ್ಡ್ ಯೋಜನೆಗಳು, 299 ರೂ.ಗಳಿಗೆ 30GB ಡೇಟಾ

Vi New Postpaid Plans: ವೊಡಾಫೋನ್ ಐಡಿಯಾದ ಅಸ್ತಿತ್ವದಲ್ಲಿರುವ Vi ಬಿಸಿನೆಸ್ (Vi Business) ಕಾರ್ಪೊರೇಟ್ ಗ್ರಾಹಕರು ತಮ್ಮ ಬಿಲ್ಲಿಂಗ್ ಚಕ್ರವನ್ನು ಆಧರಿಸಿ ಹೊಸ ಬಿಸಿನೆಸ್ ಪ್ಲಸ್ ಯೋಜನೆಗೆ ಅಪ್‌ಗ್ರೇಡ್ ಆಗಬಹುದು.

Written by - Yashaswini V | Last Updated : Jul 28, 2021, 10:12 AM IST
  • ವೊಡಾಫೋನ್ ಐಡಿಯಾ ಲಿಮಿಟೆಡ್ (VIL) ನಾಲ್ಕು ಹೊಸ ಪೋಸ್ಟ್‌ಪೇಯ್ಡ್‌ ಯೋಜನೆಗಳನ್ನು ಪರಿಚಯಿಸಿದೆ
  • ಕಂಪನಿಯು 299 ರೂ.ಗಳ ಯೋಜನೆಯಲ್ಲಿ 30 ಜಿಬಿ ಹೈಸ್ಪೀಡ್ ಡೇಟಾವನ್ನು ನೀಡುತ್ತಿದೆ
  • ಯಾವ ಯೋಜನೆಯಲ್ಲಿ ಎಷ್ಟು ಡೇಟಾ ಲಭ್ಯ
Vodafone Idea 4 ಹೊಸ ಪೋಸ್ಟ್‌ಪೇಯ್ಡ್ ಯೋಜನೆಗಳು,  299 ರೂ.ಗಳಿಗೆ 30GB ಡೇಟಾ title=
Vi New Postpaid Plans

Vi New Postpaid Plans: ವೊಡಾಫೋನ್ ಐಡಿಯಾ ಲಿಮಿಟೆಡ್ (VIL) ನಾಲ್ಕು ಹೊಸ ಪೋಸ್ಟ್‌ಪೇಯ್ಡ್‌ ಯೋಜನೆಗಳನ್ನು ಪರಿಚಯಿಸಿದೆ. ಕಾರ್ಪೊರೇಟ್ ಗ್ರಾಹಕರಿಗಾಗಿ ವೊಡಾಫೋನ್ ಐಡಿಯಾ ಕಂಪನಿಯು ಹಲವು ನೂತನ ಯೋಜನೆಗಳನ್ನು ಪ್ರಾರಂಭಿಸಿದೆ. ವೊಡಾಫೋನ್ ಐಡಿಯಾ (Vodafone Idea)ದ ಈ ಹೊಸ ಪೋಸ್ಟ್‌ಪೇಯ್ಡ್ ಯೋಜನೆಗಳು 299 ರೂ., 349 ರೂ., 399 ರೂ. ಮತ್ತು 499 ರೂ.ಗಳಲ್ಲಿ ಲಭ್ಯವಿದೆ. 

ಕಂಪನಿಯು 299 ರೂ.ಗಳ ಯೋಜನೆಯಲ್ಲಿ 30 ಜಿಬಿ ಹೈಸ್ಪೀಡ್ ಡೇಟಾವನ್ನು ನೀಡುತ್ತಿದೆ. ಇದಲ್ಲದೆ, ಗ್ರಾಹಕರು ಈ ಯೋಜನೆಗಳಲ್ಲಿ ಇನ್ನೂ ಅನೇಕ ಪ್ರಯೋಜನಗಳನ್ನು ಪಡೆಯುತ್ತಾರೆ. ವೊಡಾಫೋನ್ ಐಡಿಯಾ ಪ್ರಕಾರ, ಕಾರ್ಪೊರೇಟ್ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು Vi ಬಿಸಿನೆಸ್ ಪ್ಲಸ್ (Vi Business Plus) ಯೋಜನೆಯನ್ನು ಪರಿಚಯಿಸಲಾಗಿದೆ. ಕಾರ್ಪೊರೇಟ್ ಗ್ರಾಹಕರು ತಮ್ಮ ಪೋಸ್ಟ್‌ಪೇಯ್ಡ್ ಯೋಜನೆಯನ್ನು ಅಪ್‌ಗ್ರೇಡ್ ಮಾಡಿದಾಗ ಹಲವಾರು ಕೊಡುಗೆಗಳನ್ನು ಪಡೆಯುತ್ತಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ- Online Shopping Tips: ಆನ್‌ಲೈನ್ ಶಾಪಿಂಗ್ ಮಾಡುವಾಗ ವಂಚನೆ ತಪ್ಪಿಸಲು ಈ ವಿಷಯಗಳನ್ನು ನೆನಪಿನಲ್ಲಿಡಿ

ಯಾವ ಯೋಜನೆಯಲ್ಲಿ ಎಷ್ಟು ಡೇಟಾ ಲಭ್ಯ:
* 299 ರೂ.ಗಳ ಯೋಜನೆಯಲ್ಲಿ ಗ್ರಾಹಕರಿಗೆ 30 ಜಿಬಿ ಡೇಟಾ ಸಿಗಲಿದೆ.
* 349 ರೂ.ಗಳ ಯೋಜನೆಯಲ್ಲಿ ಗ್ರಾಹಕರು 40 ಜಿಬಿ ಡೇಟಾವನ್ನು ಪಡೆಯುತ್ತಿದ್ದಾರೆ.
* 399 ರೂ.ಗಳ ಯೋಜನೆಯಲ್ಲಿ 60 ಜಿಬಿ ಡೇಟಾ ಲಭ್ಯವಾಗಲಿದೆ.
* 499 ರೂ.ಗಳ ಯೋಜನೆಯಲ್ಲಿ ಗ್ರಾಹಕರು 100 ಜಿಬಿ ಡೇಟಾವನ್ನು ಪಡೆಯುತ್ತಿದ್ದಾರೆ.

Vi 'ಬಿಸಿನೆಸ್ ಪ್ಲಸ್' ಯೋಜನೆಗಳ ಇತರ ಪ್ರಯೋಜನಗಳು:
ಕಂಪನಿಯ ಪ್ರಕಾರ, ವೊಡಾಫೋನ್ ಐಡಿಯಾದ (Vodafone Idea) ಅಸ್ತಿತ್ವದಲ್ಲಿರುವ Vi ಬಿಸಿನೆಸ್ ಕಾರ್ಪೊರೇಟ್ ಗ್ರಾಹಕರು ತಮ್ಮ ಬಿಲ್ಲಿಂಗ್ ಚಕ್ರವನ್ನು ಆಧರಿಸಿ ಹೊಸ ಬಿಸಿನೆಸ್ ಪ್ಲಸ್ ಯೋಜನೆಗೆ ಅಪ್‌ಗ್ರೇಡ್ ಮಾಡಲಾಗುವುದು. ಇದರಲ್ಲಿ ಗ್ರಾಹಕರಿಗೆ ಹೈಸ್ಪೀಡ್ ಡೇಟಾದ ಹೊರತಾಗಿ, ಹೊಸ ಬಿಸಿನೆಸ್ ಪ್ಲಸ್ ಯೋಜನೆಯಲ್ಲಿ ಇನ್ನೂ ಅನೇಕ ಪ್ರಯೋಜನಗಳನ್ನು ಪಡೆಯುತ್ತಾರೆ. ಇದರಲ್ಲಿ ಮೊಬೈಲ್ ಸೆಕ್ಯುರಿಟಿ, Vi ಮೂವೀಸ್ & ಟಿವಿ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ವಿಐಪಿ, ವಿಶಿಷ್ಟ ಪ್ರೊಫೈಲ್ ಟ್ಯೂನ್, ಕಾಲರ್ ಟ್ಯೂನ್ ಸೌಲಭ್ಯಗಳೂ ಲಭ್ಯವಾಗಲಿವೆ.

ಇದನ್ನೂ ಓದಿ- Aadhaar Card ಅನ್ನು ಅಸುರಕ್ಷಿತವಾಗಿರಿಸಲು ಈ ರೀತಿ ಲಾಕ್ ಮಾಡಿ

ಕರೋನಾ ಸಾಂಕ್ರಾಮಿಕ ಸಮಯದಲ್ಲಿ ವರ್ಕ್ ಫ್ರಮ್ ಹೋಂ, ಆನ್ಲೈನ್ ಕ್ಲಾಸ್ ಮತ್ತು ಮನರಂಜನೆ ಜೀವನ ಶೈಲಿಯ ಒಂದು ಭಾಗವಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಇಂದಿನ ಕಾಲದಲ್ಲಿ ಅನಿವಾರ್ಯವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಗ್ರಾಹಕರು ತಮ್ಮ ಹಲವು ಅಗತ್ಯತೆಗಳನ್ನು ಪೂರೈಸಲು ಹೆಚ್ಚಾಗಿ ಆನ್ಲೈನ್ ಸೈಟ್ಸ್ ಅನ್ನು ಅವಲಂಬಿಸಿದ್ದಾರೆ.  ಇದಕ್ಕಾಗಿ ಹೆಚ್ಚಿನ ವೇಗದ ಡೇಟಾ ಕೂಡ ಅಗತ್ಯವಾಗಿದೆ.  ಇದರಿಂದಾಗಿ ಗ್ರಾಹಕರು ತಮ್ಮ ಹಲವು ಕೆಲಸಗಳನ್ನು ಅಡೆತಡೆ ಇಲ್ಲದೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News