ಮನೆಯ ಕಂಬವೇರಿ ಕುಳಿತ 20 ಅಡಿ ಉದ್ದದ ಹೆಬ್ಬಾವು .! ಇಲ್ಲಿದೆ ಮೈ ನವಿರೇಳಿಸುವ ವಿಡಿಯೋ

20 ಅಡಿ ಉದ್ದದ  ಹೆಬ್ಬಾವು ಸರಸರನೆ ಕಂಬವನ್ನೇರಿ ಕುಳಿತಿದೆ. ಎಷ್ಟು ಸುಲಭವಾಗಿ ಕಂಬವೇರಿ ಸುರುಳಿ ಹಾಕಿ ಕುಳಿತಿದೆ ಎನ್ನುವುದನ್ನು  ಇಲ್ಲಿ ನೀಡಲಾಗಿರುವ ವಿಡಿಯೋ ಮೂಲಕ ತಿಳಿದುಕೊಳ್ಳಬಹುದು.  

Written by - Ranjitha R K | Last Updated : Dec 27, 2022, 04:25 PM IST
  • ಕಂಬವೆರಿದ ಅತಿ ಉದ್ದದ ಹೆಬ್ಬಾವು
  • ಇಲ್ಲಿದೆ ಮೈ ನವಿರೇಳಿಸುವ ವಿಡಿಯೋ
  • ವೈರಲ್ ಆಯಿತು ವಿಡಿಯೋ
ಮನೆಯ ಕಂಬವೇರಿ ಕುಳಿತ 20 ಅಡಿ ಉದ್ದದ ಹೆಬ್ಬಾವು .! ಇಲ್ಲಿದೆ ಮೈ ನವಿರೇಳಿಸುವ ವಿಡಿಯೋ  title=
Pythin Viral video (poto instagram)

Python Vioral Video : ಸಾಮಾಜಿಕ ಮಾಧ್ಯಮವನ್ನು  ಒಂದು ರೀತಿಯಲ್ಲಿ  ಆಶ್ಚರ್ಯಗಳ ಬುತ್ತಿ ಎಂದೇ ಹೇಳಬಹುದು. ಯಾಕೆಂದರೆ ಇಲ್ಲಿ ನಮ್ಮ ಊಹೆಗೆ ನಿಲುಕದ ಅದೆಷ್ಟೋ ವಿಚಾರಗಳನ್ನು ತಿಳಿದುಕೊಳ್ಳುತ್ತೇವೆ. ಬಹು ಆಶ್ಚರ್ಯಕರ ವಿಡಿಯೋಗಳು ಕೂಡಾ ಕಾಣ ಸಿಗುತ್ತವೆ.  ಹೆಚ್ಚಾಗಿ ಪ್ರಾಣಿ, ಪಕ್ಷಿಗಳಿಗೆ ಸಂಬಂಧ ಪಟ್ಟ ಕೆಲವು ವಿಡಿಯೋ ಗಳನ್ನು ನೋಡುವಾಗ ಒಮ್ಮೊಮ್ಮೆ ಹೃದಯವೇ ಬಾಯಿಗೆ ಬಂದಂತಾಗುತ್ತದೆ. ಇನ್ನು ಕೆಲವೊಮ್ಮೆ ನಗು ತಡೆಯುವುದಕ್ಕೆ ಆಗುವುದಿಲ್ಲ. ಕೆಲವು ಬಾರಿ ಇದು ಪರಮಾಶ್ಚರ್ಯ ಎನಿಸಿ ಬಿಡುತ್ತವೆ. ಆದರೆ ಈ ಎಲ್ಲಾ ವಿಡಿಯೋಗಳು ನಿಜ ಎಂದು ತಿಳಿದಾಗ ನಾವದಕ್ಕೆ ಪ್ರಕೃತಿ ವೈಚಿತ್ರ್ಯ ಎನ್ನುವ ಹೆಸರು ಕೊಡುತ್ತೇವೆ. ಈಗಂತೂ ಕುತೂಹಲಕಾರಿ ವಿಡಿಯೋವೊಂದು  ಇಂಟರ್ ನೆಟ್ ನಲ್ಲಿ ವೈರಲ್ ಆಗುತ್ತಿದೆ. 

ಸಾಮಾನ್ಯವಾಗಿ ಹಾವಿಗೆ ಸಂಬಂಧಿಸಿದ ವಿಡಿಯೋಗಳನ್ನು ಶೇರ್ ಮಾಡಲಾಗುತ್ತದೆ. ಉದ್ದನೆಯ ಹಾವು, ಹಾವುಗಳ ಜಗಳ, ಹಾವು ಮುಂಗುಸಿ ಕಾಳಗ, ಮತ್ತೊಂದು ಪ್ರಾಣಿಯನ್ನು ನುಂಗಲು ಯತ್ನಿಸುವ ಹೆಬ್ಬಾವು, ಮರಿ ಹಾಕುವ ಹಾವು ಹೀಗೆ ನಾನಾ ರೀತಿಯ ಹಾವಿನ ವಿಡಿಯೋಗಳನ್ನು ನೀವು ಕೂಡಾ ನೋಡಿರಬಹುದು. ಆದರೆ ಈಗ ಹೊರಬಿದ್ದಿರುವ ವೀಡಿಯೋ ಸಂಪೂರ್ಣ ಭಿನ್ನವಾಗಿದ್ದು, ಮೈ ನವಿರೇಳಿಸುತ್ತದೆ. ಈ ವೀಡಿಯೋ ಹೆಬ್ಬಾವಿಗೆ ಸಂಬಂಧಿಸಿದ್ದಾಗಿದೆ. ಇದರಲ್ಲಿ ಉದ್ದನೆಯ ಹೆಬ್ಬಾವು ಕಂಬ ಏರುತ್ತಿರುವುದನ್ನು ನೋಡಬಹುದು. 
 
ಇದನ್ನೂ ಓದಿ :  Viral Video: ಶಾಲೆಯಲ್ಲಿಯೇ ಜುಟ್ಟು ಹಿಡಿದು ಕಿತ್ತಾಡಿಕೊಂಡ ಪ್ರಿನ್ಸಿಪಾಲ್-ಟೀಚರ್: ಶಿಕ್ಷಕರ ಜಡೆಜಗಳ ಕಂಡ ಮಕ್ಕಳು ಮಾಡಿದ್ದೇನು?

ವೈರಲ್ ವಿಡಿಯೋದಲ್ಲಿ ಹೆಬ್ಬಾವು ಕಂಬವನ್ನು ಏರುತ್ತಿರುವುದನ್ನು ಕಾಣಬಹುದು. ಇದು ಸುಮಾರು 20 ಅಡಿ ಉದ್ದದ ಹೆಬ್ಬಾವು ಎನ್ನಲಾಗಿದೆ. 

ಪೈಥಾನ್ ವೀಡಿಯೊವನ್ನು ಇಲ್ಲಿ ವೀಕ್ಷಿಸಿ: 

 

ಇದನ್ನೂ ಓದಿ : Corona ಭೀತಿಯೇ? ಫುಡ್‌ ಎಂಜಾಯ್‌ ಮಾಡಲು ಈತನ ಮಾಸ್ಟರ್‌ ಪ್ಲ್ಯಾನ್‌ ನೋಡಿ! ನೀವೂ ಬೇಕಿದ್ರೆ ಟ್ರೈ ಮಾಡಿ

ಈ ವೀಡಿಯೊವನ್ನು Instagram  ಪೇಜ್  @snake._.world ನಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನು ಈಗಾಗಲೇ  ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಮಾತ್ರವಲ್ಲ ಇದನ್ನು ಲೈಕ್‌ ಕೂಡಾ ಮಾಡುತ್ತಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News