Viral Video: ಬ್ಯೂಟಿ ಹೆಚ್ಚಿಸಿಕೊಳ್ಳಲು ತನ್ನ ಮೂತ್ರವನ್ನೇ ಮುಖಕ್ಕೆ ಹಚ್ಚಿಕೊಂಡ ಖ್ಯಾತ ಮಾಡೆಲ್!‌ ದೇವ್ರೆ ಇನ್ನು ಈ ಕಣ್ಣಲ್ಲಿ ಏನೇನ್ ನೋಡ್ಬೇಕೋ!!

poop face mask: ಸದ್ಯದ ಜಮಾನದಲ್ಲಿ ಸೋಷಿಯಲ್‌ ಮಿಡಿಯಾದ ಲೈಕ್ಸ್‌ ವೀವ್ಸ್‌ಗಾಗಿ ಏನೇನೋ ಹರಸಾಹಸಗಳನ್ನು ಮಾಡುವವರನ್ನು ನಾವು ಕಾಣುತ್ತಿದ್ದೇವೆ.. ಅಂತವರ ಪಟ್ಟಿಗೆ ಖ್ಯಾತ ಮಾಡೆಲ್‌ ಒಬ್ಬರು ಸೇರ್ಪಡೆಯಾಗಿದ್ದಾರೆ.. ಹಾಗಾದ್ರೆ ಆಕೆ ಮಾಡಿದ್ದೇನು ಅಂತೀರಾ ಈ ಸ್ಟೋರಿ ಓದಿ.. 

Written by - Savita M B | Last Updated : Aug 14, 2024, 08:09 PM IST
  • ಗ್ಲೋಯಿಂಗ್ ಸ್ಕಿನ್ ಪಡೆಯಲು ದುಬಾರಿ ಬೆಲೆಯ ಕ್ರೀಮ್, ಫೇಶಿಯಲ್, ಫೇಸ್ ಪ್ಯಾಕ್ ಇತ್ಯಾದಿಗಳನ್ನು ಮುಖಕ್ಕೆ ಹಚ್ಚಿಕೊಳ್ಳುತ್ತಾರೆ
  • ಆಕೆಯ ವಿಚಿತ್ರ ಚರ್ಮದ ಆರೈಕೆಯಿಂದ ವೈದ್ಯರು ಸಹ ಬೆಚ್ಚಿಬಿದ್ದಿದ್ದಾರೆ
Viral Video: ಬ್ಯೂಟಿ ಹೆಚ್ಚಿಸಿಕೊಳ್ಳಲು ತನ್ನ ಮೂತ್ರವನ್ನೇ ಮುಖಕ್ಕೆ ಹಚ್ಚಿಕೊಂಡ ಖ್ಯಾತ ಮಾಡೆಲ್!‌ ದೇವ್ರೆ ಇನ್ನು ಈ ಕಣ್ಣಲ್ಲಿ ಏನೇನ್ ನೋಡ್ಬೇಕೋ!!  title=

Brazilian influencer: ಗ್ಲೋಯಿಂಗ್ ಸ್ಕಿನ್ ಪಡೆಯಲು ದುಬಾರಿ ಬೆಲೆಯ ಕ್ರೀಮ್, ಫೇಶಿಯಲ್, ಫೇಸ್ ಪ್ಯಾಕ್ ಇತ್ಯಾದಿಗಳನ್ನು ಮುಖಕ್ಕೆ ಹಚ್ಚಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ರೂಪದರ್ಶಿಯೊಬ್ಬರು ತ್ವಚೆಯ ಅಂದವನ್ನು ಹೆಚ್ಚಿಸಿಕೊಳ್ಳಲು ಮುಖಕ್ಕೆ ಮಲವನ್ನು ಹಚ್ಚಿಕೊಂಡಿದ್ದಾರೆ. ಈ ಕುರಿತು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಆಕೆಯ ವಿಚಿತ್ರ ಚರ್ಮದ ಆರೈಕೆಯಿಂದ ವೈದ್ಯರು ಸಹ ಬೆಚ್ಚಿಬಿದ್ದು ಪ್ರತಿಕ್ರಿಯಿಸಿದ್ದಾರೆ.. 

ಇದನ್ನೂ ಓದಿ-ಗಂಡನಿಂದಲೇ ಮೋಸ ಹೋಗಿ.. ಸಿನಿರಂಗಕ್ಕೆ ಗುಡ್‌ ಬೈ ಹೇಳಿದ ನಟಿ ಸಾಕ್ಷಿ ಶಿವಾನಂದ್‌ ಈಗ ಹೇಗಿದ್ದಾರೆ? ಇವರ ಪತಿ ಯಾರು ಗೊತ್ತೇ?

ಡೆಬೊರಾ ಪೀಕ್ಸೊಟೊ (31) ಬ್ರೆಜಿಲ್‌ನ ವೃತ್ತಿಪರ ರೂಪದರ್ಶಿ. ಸುಂದರವಾಗಿ ಕಾಣಲು, ಆಕೆಯ ಚರ್ಮದ ಹೊಳಪನ್ನು ಹೆಚ್ಚಿಸಲು ಮುಖದ ಮೇಲೆ ಮಲವನ್ನು ಆಕೆ ಹಚ್ಚಿಕೊಳ್ಳುತ್ತಾಳಂತೆ.. ಈ ಸಂಬಂಧ ವಿಡಿಯೋ ಶೇರ್‌ ಮಾಡಿ "ನಾನು ಇಂಟರ್ನೆಟ್ನಲ್ಲಿ ಈ ಬಗ್ಗೆ ಲೇಖನವನ್ನು ಓದಿದ್ದೇನೆ. ಮುಖಕ್ಕೆ ಮಲವನ್ನು ಹಚ್ಚುವುದರಿಂದ ಮುಖವು ಸುಂದರವಾಗಿ ಕಾಣುವುದಲ್ಲದೆ ವಯಸ್ಸಾದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ" ಎಂದು ಬರೆದುಕೊಂಡಿದ್ದಾರೆ... ಅಲ್ಲದೇ ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ (deborapeixoto.ofc) ವಿಡಿಯೋ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಅವರು ಫೇಸ್ ಪ್ಯಾಕ್‌ನಂತೆ ಮುಖಕ್ಕೆ ಮಲವನ್ನು ಹಚ್ಚಿಕೊಳ್ಳುತ್ತಿದ್ದಾರೆ. ಈಕೆ ಮಾಡಿದ ಈ ವಿಚಿತ್ರ ಕೆಲಸಕ್ಕೆ ನೆಟ್ಟಿಗರು ಕೂಡ ಶಾಕ್‌ ಆಗಿದ್ದಾರೆ.. 

ಇದನ್ನೂ ಓದಿ-ಮಗುವಿನ ನಿರೀಕ್ಷೆಯಲ್ಲಿ ಖ್ಯಾತ ನಟಿ... ಇಷ್ಟು ಬೇಗ ಫ್ಯಾನ್ಸ್‌ಗೆ ಸಿಕ್ತಾ ಗುಡ್‌ ನ್ಯೂಸ್‌ !

ಈ ವೈರಲ್ ವೀಡಿಯೊ ಕುರಿತು ಹೇಳಿಕೆ ನೀಡಿದ ಲಂಡನ್‌ನ ಕ್ಯಾಡೋಗನ್ ಕ್ಲಿನಿಕ್‌ನ ಕನ್ಸಲ್ಟೆಂಟ್ ಡರ್ಮಟಾಲಜಿಸ್ಟ್ ಡಾ. ಸೋಫಿ ಮೊಮೆನ್.. “ಇದು ಅತ್ಯಂತ ಕೆಟ್ಟ ಚರ್ಮದ ಆರೈಕೆ ವಿಧಾನವಾಗಿದೆ. ಹೀಗೆ ಮಾಡುವುದರಿಂದ ಮುಖಕ್ಕೆ ಒಳ್ಳೆಯದಾಗುವುದಿಲ್ಲ. ಬದಲಾಗಿ ಹಲವು ಬಗೆಯ ಬ್ಯಾಕ್ಟೀರಿಯಾ, ವೈರಸ್ ಗಳು ಮುಖಕ್ಕೆ ಬರುತ್ತವೆ" ಎಂದು ಎಚ್ಚರಿಸಿದ್ದಾರೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News