Maned Wolf spotted: ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ನರಿಯೂ ಅಲ್ಲದ ತೋಳವೂ ಅಲ್ಲದ ಪ್ರಾಣಿಯೊಂದು ಕಾಣಿಸಿಕೊಂಡಿದೆ. ತೀರಾ ವಿಚಿತ್ರವಾಗಿರುವ ಈ ಪ್ರಾಣಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ದಕ್ಷಿಣ ಅಮೆರಿಕಾದಲ್ಲಿ ಈ ಅಸಾಮಾನ್ಯ ಪ್ರಾಣಿ ಆಕಸ್ಮಿಕವಾಗಿ ರಸ್ತೆ ದಾಟುತ್ತಿರುವುದನ್ನು ಕಂಡುಬಂದಿದೆ ಎನ್ನಲಾಗಿದೆ.
ಇನ್ನು ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ವ್ಯಕ್ತಿ, "ಯಾರಿಗಾದರೂ ಗೊತ್ತಾ ಇದು ಏನು ಅಂತಾ?!" ಎಂದು ಟ್ವಿಟ್ಟರ್ ಬಳಕೆದಾರರಿಗೆ ಪ್ರಶ್ನೆ ಮಾಡಿ, ಶೀರ್ಷಿಕೆ ಬರೆದಿದ್ದಾರೆ.
ಇದನ್ನೂ ಓದಿ: Javed Akhtar: 'ಪತ್ನಿಯರಿಗೂ ಕೂಡ ಒಂದಕ್ಕಿಂತ ಹೆಚ್ಚು ಪತಿಯರನ್ನು ಹೊಂದುವ ಹಕ್ಕು ಕೊಡಿ'
ಕೆಲವರು ಇದನ್ನು ತೋಳ ಎಂದರೆ, ಇನ್ನೂ ಕೆಲವರು ಇದು ನರಿಯ ಒಂದು ಜಾತಿ ಇರಬಹುದು ಎನ್ನುತ್ತಿದ್ದಾರೆ. ಇನ್ನೂ ಕೆಲವರು ಉದ್ದವಾದ ಕೆಂಪು-ಕಂದು ಬಣ್ಣದ ತುಪ್ಪಳ, ಅತ್ಯಂತ ಉದ್ದವಾದ ಕಪ್ಪು ಕಾಲುಗಳು ಮತ್ತು ನರಿಯಂತಹ ತಲೆಯನ್ನು ಹೊಂದಿರುವ ಮ್ಯಾನ್ಡ್ ತೋಳ ಆಗಿರಬಹುದು ಎಂದು ಹೇಳುತ್ತಿದ್ದಾರೆ. ಇದು ರಾತ್ರಿಯ ಸಮಯದಲ್ಲಿ ಓಡಾಡುವ ಜೀವಿ. ಅಷ್ಟೇ ಅಲ್ಲದೆ, ಇದು ಒಂಟಿಯಾಗಿ ಓಡಾಡುವ ಪ್ರಾಣಿಯಾಗಿದ್ದು, ಸಣ್ಣ ಪ್ರಾಣಿಗಳು, ಕೀಟ ಮತ್ತು ಸಸ್ಯ ಪದಾರ್ಥಗಳನ್ನು ತಿಂದು ಬದುಕುತ್ತವೆ ಎಂದು ಹೇಳಲಾಗುತ್ತಿದೆ.
'ಮೇನ್ಡ್ ವುಲ್ಫ್' ವಿಡಿಯೋವೊಂದು ಸದ್ಯ ವೈರಲ್ ಆಗಿದ್ದು, ಇಂಟರ್ನೆಟ್ ತುಂಬಾ ಸದ್ದು ಮಾಡುತ್ತಿದೆ. ಟ್ವಿಟರ್‌ನಲ್ಲಿ ಇಂಟರ್ನೆಟ್ ಬಳಕೆದಾರ ರೆಗ್ ಸ್ಯಾಡ್ಲರ್ ಎಂಬವರು ಹಂಚಿಕೊಂಡ ವೀಡಿಯೊದಲ್ಲಿ, ಪ್ರಾಣಿ ಶಾಂತವಾಗಿ ರಸ್ತೆ ದಾಟುತ್ತಿರುವುದನ್ನು ಕಾಣಬಹುದು. ವಿಚಿತ್ರವೆಂದರೆ ಪ್ರಾಣಿಯು ಮೊದಲ ನೋಟದಲ್ಲಿ ತೋಳದಂತೆ ಕಂಡರೂ ಸಹ, ಬಳಿಕ ಹತ್ತಿರದಿಂದ ನೋಡಿದರೆ ಅದು ನರಿ ಥರ ಕಾಣಿಸುತ್ತದೆ. ಇದು ಯಾವ ವರ್ಗಕ್ಕೆ ಸೇರಿದೆ ಎಂಬುದು ಇನ್ನೂ ಖಚಿತವಾಗಿಲ್ಲ.
Does anyone know what the heck this is?!
🎥 via Imgur pic.twitter.com/FwBBJCfgb6— Reg Saddler (@zaibatsu) December 3, 2022
ಈ ಪೋಸ್ಟ್ ಅನ್ನು ಈಗಾಗಲೇ ಎರಡು ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಅನೇಕ ಟ್ವಿಟರ್ ಬಳಕೆದಾರರು ಇಂತಹ ಪ್ರಾಣಿಯನ್ನು ವೀಕ್ಷಿಸಿ ದಿಗ್ಭ್ರಮೆಗೊಂಡಿದ್ದಾರೆ. ಕೆಲವರು ಇದು ಕತ್ತೆಕಿರುಬ ಎಂದು ಭಾವಿಸಿದರೆ, ಇತರರು ವೀಡಿಯೊವನ್ನು ನಕಲಿ ಎಂದು ಕರೆದಿದ್ದಾರೆ.
ಒಬ್ಬ ಬಳಕೆದಾರ "ನಕಲಿ ಎಂದನಿಸುತ್ತಿದೆ. ಏಕೆಂದರೆ ಕುತ್ತಿಗೆಯ ಮೇಲಿನ ಕಪ್ಪು ತುಪ್ಪಳವು ಒಮ್ಮೆ ಕಾಣಿಸಿಕೊಳ್ಳುತ್ತದೆ. ಮತ್ತೆ ಕಣ್ಮರೆಯಾಗುತ್ತಿದೆ" ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, "ಇದು ನರಿತ ಹೈಬ್ರಿಡ್ ಜಾತಿಯಾಗಿರಬಹುದು. ಬಹುಶಃ ಹೈನಾ ಅಥವಾ ಕೊಯೊಟೆಯಂತೆ ಕಾಣಿಸುತ್ತಿದೆ" ಎಂದು ಹೇಳಿದ್ದಾರೆ.
ವೀಡಿಯೋವನ್ನು ಟ್ವಿಟರ್ ಪೇಜ್ ಫೇಸಿನೇಟಿಂಗ್ ರಿಟ್ವೀಟ್ ಮಾಡಿದೆ. ಅಲ್ಲಿ ಈ ಪ್ರಾಣಿಯನ್ನು 'ಮೇನ್ಡ್ ವುಲ್ಫ್' ಎಂದು ಹೇಳಿದ್ದಾರೆ. ಬ್ರಿಟಾನಿಕಾ ಪ್ರಕಾರ, ಈ ಜಾತಿಯು ಮಧ್ಯ ದಕ್ಷಿಣ ಅಮೆರಿಕಾದ ದೂರದ ಬಯಲು ಪ್ರದೇಶಗಳಲ್ಲಿ ಕಂಡುಬರುತ್ತದೆ. ಅಷ್ಟೇ ಅಲ್ಲದೆ, ಈ ಪ್ರಾಣಿಯು ನಾಯಿ ಕುಟುಂಬಕ್ಕೆ ಸೇರಿದ ಅಪರೂಪದ ದೊಡ್ಡ-ಇಯರ್ಡ್ ಪ್ರಾಣಿಯಾಗಿದೆ.
ಇದನ್ನೂ ಓದಿ: Viral Video : ಆನೆಗೆ ಕೋಲಿನಿಂದ ಹೊಡೆದ ಯುವಕ, ಕೆಣಕಿದವರನ್ನು ಸುಮ್ಮನೆ ಬಿಟ್ಟೀತಾ?
'ಮೇನ್ಡ್ ವುಲ್ಫ್' ಉದ್ದವಾದ ಕೆಂಪು-ಕಂದು ಬಣ್ಣದ ತುಪ್ಪಳ, ಅತ್ಯಂತ ಉದ್ದವಾದ ಕಪ್ಪು ಕಾಲುಗಳು ಮತ್ತು ನರಿಯಂತಹ ತಲೆಯನ್ನು ಹೊಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.